Suvvali

ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನ ಸುವ್ವಿll ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll


ಶ್ರೀ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ ll ಹರುಷದಿಂದ ಭಾರತೀಶರನು ಭಜಿಸುವೆ ll 1 ll


ಅಮರವರ್ಯರೆಲ್ಲ ಕ್ಷೀರಾಬ್ದಿಯಲ್ಲಿ ಮನೆಯಮಾಡಿ ll ಕಮಲೆಯೊಡನೆ ರಮಿಸುವ ಘನನ ಕಂಡರೋ ll2ll


ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ ll ರಕ್ಷಿಸೆಂದು ಪೊಗಳಿದರೆ ಕುಕ್ಷಿಲೋಲನ ll3ll


ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು ll ದಾನ ಮಾಡಿದೆಯೋ ವೇದಾದಿ ವೇದವ ll4ll


ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪ ll ದಿಂದ ಹೋಗಿ ಅಮೃತ ವನ್ನೇ ತಂದು ನೀಡಿದೆ ll5ll


ವರಾಹನಾಗಿ ಹಿರಣ್ಯಾಕ್ಷನ ವಧೆಯಮಾಡಿ ಗೆಲಿದು ಬಂದೆ ll ಧರಣಿಯೆತ್ತಿ ನಮ್ಮ ಸಲಹಿದಾತನಲ್ಲವೇ ll6ll


ಮಗನ ಹಗೆಯ ಬಗೆದು ದೈತ್ಯ ಮತ್ಸರವ ಮಾಡುತಿರಲು ll ನರಮೃಗ ರೂಪನಾಗಿ ಮಗನ ಸಲಹಿದೆ ll7ll


ಇಂದ್ರಲೋಕವೆಲ್ಲ ಬಲೀಂದ್ರನಪಹರಿಸುತಲಿರಲು ಉಪೇಂದ್ರನಾಗಿ ತಂದ ಮಧುಸೂದನನಲ್ಲವೇ ll8ll


ಎರಡು ಹತ್ತು ಒಂದು ಬಾರಿ ಧರಣಿ ನಾಯಕರ ಗೆಲಿದೆ ll ಪರಶುರಾಮನಾಗಿ ನೀ ಪ್ರಕಟವಾದೆಲೊ ll9ll


ಈಗ ಮತ್ತೆ ಕುಂಭಕರ್ಣ ರಾವಣಾದಿ ಅಸುರರೆಲ್ಲ ll ಆಗ ಭೋಗದಿಂದ ಮತ್ತ ರಾಗುತ್ತಿದ್ದರು ll10ll


ಅಂದು ಮಥುರಾಪಟ್ಟಣ ಹೊಕ್ಕು ಮಾವ ಕಂಸನ ಕೊಂದ ll ತಂದೆತಾಯೆರ ಬಂಧನವ ಬಿಡಿಸಿದೆ ll11ll


ತ್ರಿಪುರರ ಸತಿಯರ ಅಪಹರಿಸಿ ವೃತಗಳನ್ನು ll ನಿಪುಣನಾಗಿ ಬಂದು ಗೆಲಿದ ಚಪಲನಲ್ಲವೇ ll12ll


ಕಲ್ಕ್ಯಾವತಾರನಾಗಿ ಅತ್ಯದ್ಭುತ ವಾಜಿಯನೇರಿ ll ಲೆಕ್ಕವಿಲ್ಲದ ದುಷ್ಟರ ಗೆಲಿದ ದಿಟ್ಟನಲ್ಲವೇ ll13ll


ಸುರರ ಮೊರೆಯ ಕೇಳಿದ ಗರುಡಗಮನ ರಾಮನಾದ ll ಹರುಷದಿಂದ ಭಾರತೀಶ ಹನುಮಂತನಾದನು ll14ll


ಮಿತ್ರ ತನವ ಕೂಡಿ ಸೌಮಿತ್ರಿ ಪೂರ್ವ ಭೋಗ ಬಹಳ ll ಮಿತ್ರತನವ ನಡೆಸದನ ಪುತ್ರ ಹನುಮನು ll15ll


ಮುದ್ರೆ ತೆಗೆದುಕೊಂಡು ಸಮುದ್ರದಾಟಿ ಹನುಮಂತ ll ನಿರ್ಭಯದಿಂದ ಲಂಕೆ ಹೊಕ್ಕು ನೋಡಿದ ll16ll


ಅಂಥಹಪುರದ ಮನೆಯಹೊಕ್ಕು ನಿಂತು ನೋಡಿದ ಹನುಮಂತ ll ಮಂಚದಲ್ಲಿ ಮಂಡೋದರಿಯು ಮಲಗಿದ್ದಳು ll17ll


ತಾಯಿಯೆಂದು ಬಗೆದು ಹನುಮ ಬಹಳ ಕೋಪವನ್ನೇ ತಾಳಿ ll ವಾಯಸರೇಖೆ ಕೋರೆದಾಡೆ ಕಂಡ ಹನುಮನು ll18ll


ತಾಯಿ ಜಾನಕಿಗೆ ಪಾದದಲ್ಲಿ ಪದ್ಮರೇಖೆ ll ತ್ರಾಹಿ ತ್ರಾಹಿ ಎಂದು ಗಲ್ಲ ಮುಟ್ಟಿಕೊಂಡನು ll19ll


ಆಡಿದ ಮಾತಿಗೆ ಆರು ಕೋಟಿ ಗೋ ದಾನ ಬೇಗ ll ಮಾಡಿದ ಹನುಮ ಅಶೋಕವನಕೆ ಬಂದನು ll20ll


ಮರದ ಕೆಳಗೆ ಸೀತೆ ಇರುವುದನ್ನು ಕಂಡು ll ಸೂಕ್ಷ್ಮ ರೂಪನಾಗಿ ಹನುಮ ಮರವನೇರಿದ ll21ll


ಹತ್ತು ತಲೆಗೆ ಹತ್ತು ಮುತ್ತಿನ ಮುಕುಟವಿಟ್ಟು ll ರತ್ನ ಪ್ರಭೆಯಿಂದ ಅಸುರ ಇಳಿದು ಬಂದನು ll22ll


ಎತ್ತರಾದ ಮುತ್ತಿನ ಛತ್ರವ ಹಿಡಿಸಿಕೊಂಡು ll ಸೀತೆ ಇದ್ದ ವನಕ್ಕೆ ಬಂದು ಕಾಡುತಿದ್ದನು ll23ll


ಇತ್ತ ನೋಡೇ ಸೀತೆ ನಿನಗೆ ಬಹಳ ಸೌಭಾಗ್ಯವನೀವೆ ll ಪಟ್ಟದ ಲಕ್ಷ್ಮಿ ಲಂಕೆ ನಿನಗೆ ಈವೇನೆಂದನು ll24ll


ಹೀಗೆ ನೋಡೇ ಸೀತೆ ನಿನಗೆ ಬಹಳ ಸೌಭಾಗ್ಯವನೀವೆ ll ಭಂಡಾರದ ಲಕ್ಷ್ಮಿ ಲಂಕೆ ನಿನಗೆ ಈವೇನೆಂದನು ll25ll


ಮಂಡೋದರಿಯ ಕೈಯಿಂದ ಮಂಡೆ ಹಿಕ್ಕಿಸುವೆ ll ದುಂಡು ಮಲ್ಲಿಗೆ ಮುಡಿಸಿ ಮುಡಿದೆಲೆಯ ಕೊಡಿಸುವೆ ll26ll


ಹತ್ತು ಕಾಲಿನ ಮಂಚಕ್ಕೆ ಮುತ್ತಿನ ತಲೆ ದಿಂಬು ll ಒಪ್ಪು ಬಾರೆ ಸೀತೆ ಎನ್ನ ತೊಳಿಲೆಂದನು ll27ll


ಆರು ಕಾಲಿನ ಮಂಚಕ್ಕೆ ಹೂವಿನ ತಲೆ ದಿಂಬುll ಮಲಗುಬಾರೆ ಎನ್ನ ತೋಳಿಲೆಂದನು ll28ll


ಹತ್ತು ಕಾಲಿನ ಮಂಚಕ್ಕೆ ಇಚ್ಚು ಕೆಂಡವನ್ನೇ ಹಚ್ಚಿll ಒಪ್ಪುವೆ ಶ್ರೀ ರಾಮರ ತೊಳಿಲೆಂದಳು ll29ll


ಆರು ಕಾಲಿನ ಮಂಚಕ್ಕೆ ಉರಿವ ಕೆಂಡವನ್ನೇ ಹಚ್ಚಿ ll ಮಲಗುವೆ ಶ್ರೀ ರಾಮನ ತೋಳಿಲೆಂದಳು ll30ll


ಹತ್ತಲಿದ್ದಾ ತ್ರಿಜಟೆ ಮಿತ್ರರೆಲ್ಲ ಒಂದಾಗಿ ll ಸೀತೆಯ ಒಂದು ಮಾಡಿಕೊಡಿರೆಂದನು ll31ll


ಸೀತೆ ಒಂದಾಗಳೋ ಪಾಪಿ ರಾವಣನೇ ಕೇಳು ll ಲಂಕೆಗೆ ಅಳಲು ನೀನು ತಂದುಕೊಂಡೆಯll32ll


ಸಿಡಿಲು ಪಟ್ಟಣ ಕಟ್ಟಿ ಕೆಡಬೇಡ ರಾವಣ ll ಸಿಡಿದು ಹೋಗೋ ಕಾಲ ನಿನಗೆ ಬಂದಿತೆಂದರು ll33ll


ನಾಳೆ ಇಷ್ಟೊತ್ತಿಗೆ ಶ್ರೀ ರಾಮರು ಸೇತುವೆಯ ಕಟ್ಟಿ ll ನಿನ್ನ ಶಿರವ ನೆಲಕೆ ಹರಿಯ ಬೀಳಕಂಡೆವು ll34ll


ಕಂಡ ಕನಸು ಹುಸಿಯಲ್ಲ ಮಂದಮತಿ ಮನೆಗೆ ಹೋಗು ll ಸೀತೆಯ ಬಿಟ್ಟು ಸುಖಿ ಯಾಗು ಯೆಂದರು ll35ll


ಅತ್ತಲಿಂದ ರಾವಣೇಶ ಕೋಟೆಯೊಳಗೆ ಹೋಗುತ್ತಿರಲು ll ಇತ್ತಲಿಂದ ಹನುಮಂತ ಮರವನಿಳಿದನು ll36ll


ಅಂದು ಒಂದು ಮೃಗವು ಬಂದು ರಾಮರ ಅಗಲಿಸಿತು ll ಇಂದು ಅಸುರ ಕಪಿಯೇ ನಿನ್ನ ಕಳುಹಿಕೊಟ್ಟನೇ ll37ll


ಆಂಜನೇಕಂದ ನಾ ವಾಯುಕುಮಾರನು ll ರಾಮರ ಮುದ್ರಿಕೆ ಇಟ್ಟು ಎರಗಿ ನಿಂತನು ll38ll


ಉಂಗುರವ ಕಂಡು ಸೀತೆ ಕಂಗಳಿಗೆ ಒತ್ತಿಕೊಂಡು ll ಉರದಲಪ್ಪಿ ಶಿರದಲ್ಲಿಟ್ಟುಕೊಳುತಿದ್ದಳು ll39ll


ಏನಯ್ಯ ಹನುಮಂತ ರಾಮರು ಕ್ಷೇಮವೇ ll ಶ್ರೀ ರಾಮ ಒಮ್ಮೆಗಾದರು ಎನ್ನ ನೆನೆವನೆ ll40ll


ನಿಮ್ಮ ಧ್ಯಾನವೇ ತಾಯಿ ಕಂಗಳಿಗೆ ನಿದ್ರೆ ಇಲ್ಲ ll ನಿಮ್ಮ ಹೊರತಾಗಿ ಅನ್ಯಥಾ ಇಲ್ಲವೇ ಇಲ್ಲ ll41ll


ಹವಳದ ಕುಡಿಯಂತೆ ತೊಳವುತಿಪ್ಪ ರಾಮರು ll ಅಯೋಧ್ಯ ಪಟ್ಟಣ ತಮಗೆ ಅಡವಿಯೆಂದರು ll42ll


ತಾಯಿ ನಿಮ್ಮ ಹೆಗಲಲಿಟ್ಟು ವಾರಿಧಿಯ ಧಾಟಿಸುವೆ ll ತಾಯಿ ಚಿತ್ತೈಸು ಎಂದು ನುಡಿದ ಹನುಮನು ll43ll


ರಕ್ಕಸರ ಪಡೆಗಳ ಸುತ್ತಕಟ್ಟಿ ಬಾಹರು ll ಮತ್ತೆ ನನ್ನ ಕೊಂಡು ಹೇಗೆ ಧಾಟುವೆ ll44ll


ಬಾಲದಿಂದ ರಕ್ಕಸರ ಲೀಲೆಯಿಂದ ಕೊಳ್ಳುವೆ ll ತಾಯಿ ಚಿತ್ತೈಸು ಎಂದು ನುಡಿದ ಹನುಮನು ll45ll


ಸಾಲದು ಧೈರ್ಯ ವು ನೀ ಹೋಗಿ ಬೇಗನೆ ll ರಾಮರ ಒಡಗೂಡಿ ಬಾರೋ ಎಂದು ಹೇಳುತ್ತಿದ್ದಳು ll46ll


ಮನದಿ ಹರ್ಷವನ್ನೇ ತಾಳಿ ಮಣಿಯ ಕೊಟ್ಟಳಾಗಲೇ ll ಮಣಿಯ ಕಂಡು ಹನುಮಂತ ಎರಗಿ ನಡೆದನು ll47ll


ಅಮ್ಮ ಹಸಿದನೆಂದರೆ ಬಿದ್ದ ಹಣ್ಣು ಮೆಲ್ಲೆನಲು ll ಹೆಮ್ಮರವ ಕಿತ್ತು ಬಿಸುಟು ಹಣ್ಣು ಮೆದ್ದನು ll48ll


ಅಕ್ಷನಂದನಾದಿ ಘೋರರಾಕ್ಷಸರ ಕೊಂದು ಬಿಸಟುll ದಕ್ಷವೃಕ್ಷಗಳನು ಕಿತ್ತಿದ ರಾಕ್ಷಸ ರೌದ್ರನು ll49ll


ಕಾವಲಿದ್ದ ದೂತರು ರಾವಣಗೆ ಹೇಳಲು ll ಹಿಡಿದು ತನ್ನಿರೆನುತ ಭೃತ್ಯ ನೊಡನೆ ನುಡಿದನು ll50ll


ಹನುಮ ಸಿಕ್ಕದನೆಂದು ಬ್ರಹ್ಮಾಸ್ತ್ರ ತರಲು ll ಹಲ್ಲು ಕಿರಿದು ಬೀದಿಯೊಳಗೆ ನಗುತ ನಿಂತನು ll51ll


ಇಂದ್ರ ಜಿತು ಬಂದು ಬ್ರಹ್ಮಾಸ್ತ್ರ ದಿಂದ ಕಟ್ಟಿ ಒಯ್ದು ll ಮುಂದಿಡಲು ರಾವಣೇಶ ನಸುನಕ್ಕನು ll52ll


ದಾವಾ ದೇಶದಿಂದ ಬಂದೆ ದಾರ ಕಂದನೆನುತಲಿ ll ರಾವಣ ಕೇಳಿದನೇ ವಾನರೇಶಗೆ ll53ll


ನಮ್ಮ ಒಡೆಯ ರಾಮ ಜನರು ಎನಗೆ ಹನುಮನೆಂಬುವರು ll ಹೆಮ್ಮೆ ನಿನಗೆ ಬೇಡ ಶರಣೆನ್ನು ರಾವಣ ll54ll


ಅಲ್ಪ ನೀನು ಸತ್ಯಸಂಕಲ್ಪನೊಳು ವೈರ ಬೆಳಸಿ ll ಅಲ್ಪ ಭಾಗ್ಯವಾಯ್ತು ನಿನಗೆ ತಪ್ಪದೆಂದನು ll55ll


ನುಡಿಗಳೆಲ್ಲ ಏಕೋಭಾವ ಒಡೆಯ ಕೇಳಿ ಕುಪಿತನಾಗಿ ll ಹಿಡಿಯಿರೆನುತ ಭೃತ್ಯರೊಡನೆ ನುಡಿದನು ll56ll


ದೂತನ ಕೊಲ್ಲುವುದು ನೀತಿ ಯಲ್ಲವೆಂದರೆ ll ಮಾತನಾಡದೆ ಮರವ ಯಾತಕ್ಕೆ ಮುರಿದೆಯೆಂದರು ll57ll


ನಾನು ಮುರಿಯಲಿಲ್ಲ ಈ ಬಾಲ ಮುರಿಯಿತು ಎನುತಲಿ ll ಲೀಲೆಯಿಂದ ಹನುಮ ತನ್ನ ಬಾಲ ತೋರಿದ ll58ll


ಬಾಲಕ್ಕೆ ಶಿಕ್ಷೆಯ ಮಾಡುತೇನೋ ಕೇಳೆನುತ ll ಆಳು ಬಂಟರನು ಕರೆಸಿ ಹೇಳುತ್ತಿದ್ದನು ll59ll


ಚಂದ್ರ ಶಾಲೆಯ ಪೊಕ್ಕು ಪೆಂಡೆಗಳ ತೆಗೆದು ll ತಂದು ಸುತ್ತಿದರು ಹನುಮಂತನ ಬಾಲಕೆಲ್ಲವ ll60ll


ಕುಂಭಕರ್ಣನ ಮನೆಯ ಹೊಕ್ಕು ಪೆಂಡೆಗಳ ತೆಗೆದುಕೊಂಡು ll ಸುತ್ತಿದರು ಹನುಮಂತನ ಬಾಲಕೆಲ್ಲವ ll61ll


ಇಂದ್ರ ಜಿತನ್ ಮನೆಯ ಹೊಕ್ಕು ಪೆಂಡೆಗಳ ತೆಗೆದುಕೊಂಡು ll ಸುತ್ತಿದರು ಹನುಮಂತನ ಬಾಲಕೆಲ್ಲವ ll62ll


ಎಷ್ಟು ಸೀರೆ ಸುತ್ತಿದರು ಮತ್ತೆ ಬಾಲ ಬೆಳೆಯುತಿರೆ ll ವನದ ಸೀತಾದೇವಿ ಸೀರೆ ತನ್ನಿರೆಂದನು ll63ll


ಆಡಿದ ಮಾತು ಕೇಳಿದನೇ ಬೇಗನೆll ಲೀಲೆಯಿಂದ ಹನುಮ ತನ್ನ ಬಾಲ ಮುದುರಿದ ll64ll


ಅತಿಕಾಯ ಇಂದ್ರಜಿತು ಶಿಲಾ ಮೊದಲಾದವರು ll ಅದ್ದಿ ತೈಲ ದೊಳಗೆ ದೀಪ ಮುಟ್ಟಿಸಿದರು ll65ll


ಮುಟ್ಟಿಸಿದ ಮಾತ್ರದಿಂದ ಉಪ್ಪರಿಗೆ ಏರಿದನು ll ಉಪ್ಪರಿಗೆ ಸಾಲು ಉರಿದು ಕುಪ್ಪೆ ಬಿದ್ದವು ll66ll


ತೈಲ ಜ್ವಾಲದಿಂದಲಿ ಪುರವ ಸುಟ್ಟು ಬೂದಿ ಮಾಡಿ ll ಸಾರೆ ಬಂಟೆ ನೆನ್ನುತಾ ವಿಶ್ವಕರ್ಮ ಕೇಳಿದ ll67ll


ಸರ್ಪಕಾಳಿಂಗನ ತುಳಿದ ಗೋವುಗಳನ್ನೇ ಕಾಯ್ದು ll ತಾಟಕೆಯ ಮೂಗು ಕೊಯ್ದು ಶ್ರೀ ರಾಮರ ಬಂಟನು ll68ll


ಮರಳಿ ಜಲಧಿ ದಾಟಿ ರಾಮರ ಚರಣ ಕಮಲಗಳಿಗೆ ಬಾಗಿ ll ಮಣಿಯ ಕೊಟ್ಟು ಭರಿತನಾಗಿ ಎರಗಿ ನಿಂತನು ll69ll


ಪ್ರೀತಿಯಿಂದ ರಾಮಚಂದ್ರ ವಾತಾತನಯನಪ್ಪಿಕೊಂಡು ll ಯಾತುಧಾನ ಕಥೆಯ ಸಂವಾದ ಮಾಡಿದ ll70ll


ರಣಕೆ ಬಂದ ರಕ್ಕಸರ ಘನತೆಯಿಂದ ಕೊಂದು ಬಿಸುಟು ll ಮನವ ನಿಲ್ಲಿಸಿದ ನಮ್ಮ ಘನ ಹನುಮನು ll71ll


ಶರಧಿ ಸೇತುವೆಯ ಕಟ್ಟಿ ದುರುಳ ರಾವಣನ ಕೊಂದು ll ಪುರವ ಅನುಜಗಿತ್ತರೆ ರಾಮಚಂದ್ರರು ll72ll


ಜಾನಕಿ ಸಮೇತನಾಗಿ ಜಗವ ಪಾಲಿಸುವ ರಾಮರ ll ತಾನೇ ಭಜಿಸಿ ಸುಖದಲಿದ್ದ ವಾನರೇಶನು ll73ll


ರಘುಕುಲೇಶ ರಾಮನಾದ ಯದುಕುಲೇಶ ಕೃಷ್ಣನ ll ಹನುಮ ಸೇವಾರ್ಥ ಕುಂತಿ ತನಯನಾದನು ll74ll


         (ಹನುಮ ಸುವ್ವಾಲಿ ಮುಗಿದುದು )


                           ***


                      ಭೀಮ ಸುವ್ವಾಲಿ


llಸುವ್ವಿ ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನಾ ಸುವ್ವಿ ಸುವ್ವಿ ಮಧ್ವ ರಾಯರಿಗೆ ಸುವ್ವಾಲಿll


ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿ ಸುಡುತಿರಲುll ಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತುll1ll


ಭೀಮಸೇನ ನೆಂಬೋ ದಿವ್ಯ ನಾಮವನ್ನೇ ಇಟ್ಟುಕೊಂಡುll ಸೋಮ ಕುಲದಲ್ಲಿ ಉದಿಸಿದಾರೆ ಸಾರ್ವಭೌಮರು ll2ll


ಹಾರು ಗುಬ್ಬಿ ಮುಷ್ಟಿಯುದ್ಧ ನೀರು ಚೆಲ್ಲಾಟದಿಂದ ಶೌರ್ಯದಿಂದ ರಾಜ ನಂದನರ ಗೆಲಿದರು ll3ll


ತುರುಗಳೆಲ್ಲ ವನಗಳೇರಿ ಚಲುವ ಪಾದದಲ್ಲಿ ಉರಿಯ ಹಣ್ಣಿ ದಣಿಯ ಮೆದ್ದರು ll4ll


ಪಾದ ಕರಗಳಿಂದ ಲೋಹ ಪಾಶದಲ್ಲಿ ಬಿಗಿದು ಕಟ್ಟಿ ಪ್ರಾಸಾದ ವೇರಿ ಕೆಡವಲು ಅಮರll5ll


ರಾಷ್ಟ್ರಕ್ಕೆ ಶಕುನಿ ಮುಖ್ಯ ದೂತರೆಲ್ಲ ವಿಷವು ಇಡಲು ll ಕೋಷ್ಟದಲ್ಲಿ ಜೀರ್ಣವಾಯ್ತು ಪವನತನಯಗೆ ll6ll


ಅರಗಿನ ಮನೆಯೊಳಗೆ ಹಾನಿ ಬಗೆಯ ಬಂದವರ ll ಹುರಿದು ದಹಿಸಿ ಸಲಹಿದ ಭೀಮ ಹರಿಸಿ ಭಕ್ತರ ll7ll


ಸೊಕ್ಕಿದ ಹಿಡಿಂಬನೆಂಬ ರಕ್ಕಸನ ಕೊಂದು ಬಿಸುಟು ll ಮೆಚ್ಚಿ ಬಂಯಿಂದ ದ ರಾಕ್ಷಸಿಯ ರಕ್ಷಿಸಿದನು ll8ll


ಹಿಡಿಂಬನ ಕೊಂದು ಹಿಡಿಂಬೆಯ ಮದುವೆಯಾದ ll ವ್ಯಾಸರಾಜ್ಞೇಯಿಂದ ಭೀಮ ಮಗನ ಪಡೆದನು ll9ll


ಆ ಕ್ಷಣ ವೇದವ್ಯಾಸ ಮುನಿಯು ಬಂದು ಹೇಳುತ್ತಿರಲು ll ರಾಕ್ಷಸಿಯಲಿ ಪುತ್ರನ ಪಡೆದ ಭೀಮನು ll10ll


ಏಕಾಂತದಲ್ಲಿ ಏಕಚಕ್ರ ನಗರಖೋಗಿ ll ಶ್ರೀ ಕಾಂತನ ಆಜ್ಞೆಯಿಂದ ವಾಸವಾದರೂ ll11ll


ಬಕನ ಕೊಂದು ವಿಪ್ರವೇಷ ನಿಗಮವೇದ


ಚರಿಸುತಿರಲು ll ಸುಖವ ಮಾಡಿಕೊಟ್ಟ ವಾಯುಸುತ ಭೀಮನು ll12ll


ಭೀಮ ಸಲಹುತಿರಲು ವಿಭೀತರಾಗಿ ಜನರು ಎಲ್ಲ ll ಕಾಮಪೂರ್ಣವಾದ ರೇಕಾಂತ ಭಕ್ತರು ll13ll


ಅರಸು ಮಕ್ಕಳು ಸ್ವಯಂವರಕೆ ಬರಲು ವಿಪ್ರವೇಷ ll ಧರಸಿಕೊಂಡು ಪಾಂಚಾಲಾಪುರಕೆ ಬಂದರು ll14ll


ಭೂಪರೆಲ್ಲ ನೋಡುತಿರಲು ದ್ರೌಪದಿಯ ಜಯಸಿ ಪಾಂಡು ಭೂಪನಂದನೈವರು ಯುದ್ಧಕ್ಕೆ ನಡೆದರು ll15ll


ಚಿತ್ರ ಭೂಷಣ ನೃಪನು ಪುತ್ರಿ ಗಿತ್ತ ಕುಂತಿದೇವಿಯ ಪುತ್ರರು ತಂದರೆ ಮಿತ್ರೆ ಕೃಷ್ಣೆಯ ll16ll


ತಂದ ಫಲಂಗಳು ಆನಂದದಿಂದ ಹಂಚಿಕೊಂಡು ll ಕಂದರು ನೀವ್ ಸುಖಿಯಾಗಿರೆಂದು ಹರಿಸಿದಳು ll17ll


ದ್ವಾರಕಾಪುರದ ಅರಸು ಮುರಾರಿ ಕೃಷ್ಣರಾಯನು ll ವಿಚಿತ್ರ ಉಡುಗೊರೆ ಪಾಂಡವರಿಗೆ ಕೊಟ್ಟನು ll1


8ll


ಮುತ್ತಿನ ಗೊಂಬೆಯನ್ನು ದ್ರೌಪದಿ ದೇವಿ ಪಿಡುದು ll ಹಸ್ತಿನಾ ವತಿಯ ಪಟ್ಟಣಕ್ಕೆ ಬಂದಳು ll19ll


ಅಂದು ಗಾಂಧಾರಿ ತನ್ನ ಮನದೊಳಾಗ ಯೋಚಿಸಿ ll ಮೃತ್ತ್ಯು ಬಂದೀತು ತನ್ನ ಪುತ್ರರ್ಗೆ ಎಂದಳು ll20ll


ರಾಜಛತ್ರ ವಾರಿಧಿ ರಾಜಸೂತರು ಎಲ್ಲರೂ ಕೂಡಿ ll ರಾಜಸೂಯ ಯಜ್ಞಕೆಂದು ಕೃಷ್ಣನ ಪೂಜೆ ಮಾಡಿದರು ll21ll


ಶೌರ್ಯವೆಲ್ಲ ವಿಚಿತ್ರ ವೀರ್ಯಸುತರು ಕೇಳಿ ವಿಹಿತ ll ಕಪಟದಿಂದ ಜೂಜುಯೆಂಬೋ ಕಾರ್ಯ ಹೂಡಿದರು ll22ll


ಕಪಟದಿಂದ ಶಕುನಿ ಖಳರ ಶಕ್ತಿ ಮಾಡಿ ಗೆಲಲು ll ನಿಪುಣ ವನವಾಸವಾಯ್ತು ಪಾಂಡು ವೀರತನಯರಿಗೆ ll23ll


ನೀಚಬುದ್ದಿಯುಳ್ಳ ದುಷ್ಟ ಕೀಚಕನ ಸಂಹರಿಸಿ ll ತಾವು ಸೌಖ್ಯದಿಂದ ವಿರಾಟನ ಮನೆಯಲ್ಲಿದ್ದರು ll24ll


ಕಳದು ಶಬ್ದ ಧ್ವನಿಗಳ ಗೋವುಗಳನೆ ಕಾಯ್ದು ll ಬೆರಗುತಿದ್ದ ಅಖಿಳ ಜನರ ಬೆರಗು ನೋಡುತ್ತಾ ll25ll


ಹಾರ ಮುಕುಟ ದಿವ್ಯ ಕೇಯೂರ ಕುಂಡಲಾಭರಣ ll ಧಾರಾರಾಷ್ಟ್ರ ರಾಜ್ಯ ಭೂಮಿಪಾಲರಾದರು ll26ll


ಆದಿಯಲ್ಲಿ ಬೇಡಲಿಲ್ಲ ಸೂಜಿ ಎಳ್ಳಷ್ಟೂ ಭೂಮಿ ll ರಾಜತನಯರಾದರೆ ರಂಗ ಮಾಡಲಿ ll27ll


ಚಾಂದ್ರಮಾನದಿಂದ ದಿನವೂ ಸಂದು ಹೋಯಿತೆನುತಲಿ ll ಕೌರವಗೆ ಹೇಳೀರೆನೆ ದ್ರೋಣಭೀಷ್ಮರು ll28ll


ಸೌರಮಾನದಿಂದ ದಿನವು ಸಂದು ಹೋಯಿತೆನುತಲಿ ll ಕೌರವ ಹೇಳಿದನೆ ದ್ರೋಣ ಭೀಷ್ಮರಿಗೆ ll29ll


ಕುರುಕ್ಷೇತ್ರಕೆ ಹೋಗಿ ರಣಕಂಬ ಹೂಡಿದರು ll ಕೌರವರಾಯನ ಯುದ್ಧಕ್ಕೆ ನಡೆದರು ll30ll


ನೀರಡಿಸಿದ್ದ ಗದೆಗೆ ಗಾಂಧಾರಿ ಸುತನ ಕೊಂದು ll ರಕ್ತವನ್ನು ಪಾರಣೆಯ ಮಾಡಿಸಿದ ಪವನ ತನಯನು ll31ll


ಸಿಂಹನಾದದಿಂದ ವೈರಿ ಸಂಹರವ ಮಾಡುತ್ತಾ ll ನಾರಸಿಂಹಗೆ ಅರ್ಪಿಸಿದ ಭೀಮಸೇನರಾಯನು ll32ll


ಧರ್ಮದಿಂದ ಭೀಮಸೇನ ಧರ್ಮರಾಜ್ಯವಾಳುತಿರಲಿ ll ಚರಣ ಭಜಿಸುತ್ತಿದ್ದರು ಕೃಷ್ಣನ ಶರಣು ಭಕ್ತರು ll33ll


         (ಭೀಮ ಸುವ್ವಾಲಿ ಮುಗಿದುದು )


                     


                           **


                       ಮಧ್ವ ಸುವ್ವಾಲಿ


ಸುವ್ವಿ ಸುವ್ವಿ ಹನುಮಂತll ಸುವ್ವಿ ಸುವ್ವಿ ಭೀಮಸೇನಾ ll ಸುವ್ವಿ ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll


ಜ್ಞಾನ ಕಲಿಗಾಲದಲ್ಲಿ ಹೀನರ ಗೆಲಿದು ಶ್ರೀರಮಣll ಆಜ್ಞೆಯಿಂದ ವಾಯು ಮಧ್ವರಾದರು ll1ll


ಜಗದೀಶ್ವರನ ಪಾದಕಮಲ ತಮ್ಮ ಹೃದಯದಲ್ಲಿ ಇಟ್ಟುll ತಮ್ಮ ಕೀರ್ತಿ ಮೂರು ಲೋಕದಲ್ಲಿ ಇಟ್ಟರುll2ll


ಅಸುರರ ಹೃದಯದಲ್ಲಿ ಬಹಳ ಸಂತಾಪ ವಿಟ್ಟುll ಸುರಮುನೀಶ್ವರರಿಗೆಲ್ಲ ಸುಖವ ಇಟ್ಟರುll3ll


ಗರುಡ ಕಂಬದ ಮೇಲೆ ಒಬ್ಬ ಮರುಳು ಪುರುಷ ಕುಣಿದು ಕುಣಿದುll ಸರ್ವಜ್ಞರು ಜನಿಸುತ್ತಾರೆ ಎಂದು ಹೇಳಿದ ll4ll


ಉರ್ವಿಯ ಮೇಲೆ ಇದ್ದ ಶುದ್ಧ ಸಾಧು ಜನರಿಗೆll ಬುದ್ದಿ ಪ್ರಕಾಶವನ್ನೇ ಮಾಡಿ ಕೊಡುವರುll5ll


ಭೂಮಿಯ ಮೇಲೆ ಇದ್ದ ಶುದ್ಧ ಸಾಧು ಸಜ್ಜನರಿಗೆ ಜ್ಞಾನ ಪ್ರಕಾಶವನ್ನೇ ಮಾಡಿಕೊಡುವರುll6ll


ಮಧ್ಯಗೇಹ ಭಟ್ಟರು ತಪಸ್ಸು ಮಾಡುತ್ತಿರಲು ಲಕ್ಷ್ಮಿ ಲೋಲಾll ಉದ್ದರಿಪ ಮಗನ ಕೊಟ್ಟು ಮಧ್ವರಾಯರ ll 7ll


ನಾಲ್ಕು ತಿಂಗಳಾಗಿರಲು ಆ ಶಿಶುನೆತ್ತಿಕೊಂಡುll ತೀವ್ರ ದಿಂದ ಬಂದಿರೆ ಅನಂತಶಯನಕೆll 8ll


ಎಲ್ಲಿಗೆ ಹೋದರೆಂದು ಎಲ್ಲರೂ ಕೇಳುತಿರಲಿ ಒಡೆದು ಬ್ರಹ್ಮ ಶಿಶುವಿನ ಮಹಿಮೆ ಹೇಳಿತುll9ll


ಹೊರಗೆ ಮಗನ ಬಿಟ್ಟು ತಾಯಿ ಒಳಗೆ ಕೆಲಸಕ್ ಹೋಗುತ್ತಿರಲುll ತಡೆದಳೆಂದು ಬಿಕ್ಕಿ ಬಿಕ್ಕಿ ಅಳುತಲಿದ್ದರು ll10ll


ಎತ್ತಿಕೊಂಡರಲ್ಲದೆ ಬಿಕ್ಕಿ ಬಿಕ್ಕಿ ಅಳುತಲಿರಲು ಕುಟ್ಟಿದ ಹುರುಳಿಯನ್ನು ತಿಳಿಸುತ್ತಿದ್ದಳುll11ll


ಎತ್ತಿ ಗಿಟ್ಟ ಹುರುಳಿಯ ಚಿಕ್ಕವಗೆ ತಿನ್ನಿಸಲು ll ಸಿಟ್ಟಿನಿಂದ ಮಗಳನ ಜಬರ್ಸಿ ರ್ಕೊಂಡಳುll12ll


ಮರಳುತಿಪ್ಪ ಕೆಲುಗಳಲಿ ಹುರುಳಿ ತಿನಿಸಿ ತಾಯಿ-ತಂದೆ ll ಶ್ರೀಹರಿಗೆ ಮಗನಾ ರಕ್ಷಿಸೆಂದು ಬೇಡಿಕೊಂಡರು ll13ll


ತಾಯಿ ಆ ಗುಡಿಯ ದೇವರಿಗೆ ಕೈಯ್ಯಮುಗಿದುl ತೀವ್ರ ದಿಂದ ಬಂದಾರ ಅನಂತಶಯನ ಕೆ ll14ll


ಎಲ್ಲಿಗೆ ಹೋದರೆಂದು ಎಲ್ಲರೂ ಕೇಳುತ್ತಿರಲು ll ನಮ್ಮ ಸ್ವಾಮಿ ದರ್ಶನಕ್ಕೆ ಬಂದೇವೆಂದರುll15ll


ಇಂದಿರೇಶನ ಪಾದವ ನೆನೆದು ಆನಂದಭರಿತರಾದರು ll ವಂದನೆಯ ಮಾಡಿ ಕೈಯ ಮುಗಿದು ನಿಂತರುll16ll


ತವರು ಮನೆಯ ಒಳಗೆ ಬಹಳ ಉತ್ಸಾಹದಿಂದ ಮಗನ ಮೇಲಿನ ಹಂಬಲವ ಮರೆತು ಬಿಟ್ಟಳುll17ll


ಚಿಕ್ಕವನ ಕಾಣದೆ ದಿಕ್ಕು ದಿಕ್ಕು ಹುಡುಕುತ್ತಾl ಚಚ್ಚ ರದಿ ಬಂದರೆ ಅನಂತಶಯನಕೆ ll18ll


ಬಾಲಕನ ಕಾಣದೆ ಗ್ರಾಮ ಗ್ರಾಮ ಹುಡುಕುತll ತೀವ್ರದಿಂದ ಬಂದರೆ ಅನಂತಶಯನಕೆ ll19ll


ಚಿಕ್ಕವನಎತ್ತಿಕೊಂಡು ಭಾಹೋದನ್ನೇ ಕಂಡರುll ಬಿಟ್ಟ ನಿಧಿಯೆನ್ನ ಕೈಗೆ ಸಿಕ್ಕಿತೆಂದರುll20ll


ಬಾಲಕನ ಎತ್ತಿಕೊಂಡು ಬಾಹೋದನ್ನೇ ಕಂಡರುl ಹೋದ ನಿಧಿ ಕೈಗೆ ಸೇರಿತೆಂದರು ll21ll


ಬಾಲಕರ ಕೂಡಿ ವಿಮಾನ ಗಿರಿಯಲಾಡುತಿರಲುll ಬಾರೋ ವಾಸುದೇವನೆಂದು ಮಗನ ಕರೆದಳುll22ll


ತಾಯಿ ಕರೆದಳೆನುತ ವಿಮಾನ ಗಿರಿಯಲಿಂದ ಇಳಿದು ll ಪಾದ ಊರಿ ಜನರ ಪಾವನ್ನ ಮಾಡಿದರು ll23ll


ಮಣಿಮಂತನೆಂಬೋ ದೈತ್ಯ ಮೈಯ ಸುತ್ತಿ ಕಚ್ಚುತ್ತಿರಲು ll ಎಡದ ಪಾದದಿಂದಲವನ ವರಿಸಿ ಬಿಟ್ಟರುll24ll


ಶಿವ ಭಟ್ಟನ ಪುರಾಣ ಶಿಶುವು ಕೇಳಿ ದೂಷಿಸಿ ll ಸಕಲ ಜನರ ಮನಸ್ಸಿಗೆ ಸುಖಕರ ಮಾಡಿದರುll25ll


ಕವುಲದ ವೃಕ್ಷವನ್ನು ತಲೆಕೆಳಗೆ ಮಾಡಿಬಿಟ್ಟುll ಕೊನೆಯ ಕೊಂಬಿನಿಂದ ಫಲಪುಷ್ಪ ವಾಯಿತುll26ll


ಋಣವಾ ಪಿತನ ಬೇಡಿದವಗೆ ಹುಣಿಸೆ ಬಿತ್ತಎಣಿ ಸುತಿರಲು ll ಎಣಿಸಿಕೊಡಲು ಮುಕ್ತಿ ಹೇತುವಾಯಿತಾತಗೆ ll27ll


ಮನೆಯೊಳಗೆ ಪಶುವು ಕರೆದು ವನದೊಳಗೆ ಆ ಡುತಿರಲು ll ಕಿವಿಯ ಓದಿ ತಲೆಯ ಬೇನೆ ಬಿಡಿಸಿದ ಗುರುವಿಗೆll28ll


ಜಗದಗುರು ನೋಡಿರೋ ಹಳೆವಲ್ಲಿ ಹೋದ್ದವರll ಸುರಮುನೀಶ್ವರರು ಆಶ್ಚರ್ಯಪಟ್ಟರು ll29ll


ಯೋಗ ಪಟ್ಟ ಧರಿಸಿದ ಜಡೆಗಳ ಮಸ್ತಕವು ll ಯೋಗದಿಂದ ಸನ್ಯಾಸಿ ಆಗುವೆ ನೆಂದರು ll30ll


ವರುಷ ನೋಡು ಬಾಲ ನೀನೆ ಬಯಸಬೇಡ ಸನ್ಯಾಸ ll ಬಹಳ ತಪಸ್ಸಿನಿಂದ ನಿನ್ನ ಪಡೆದೇ ನೆಂದಳು ll31ll


ಹತ್ತು ಎಂಟು ಸಾವಿರ ವರ್ಷ ಕಷ್ಟ ಪಟ್ಟು ತಪಸ್ಸು ಮಾಡಿ llಚಿಕ್ಕವಗೆ ಸನ್ಯಾಸ ಬೇಡವೆಂದಳುll32ll


ಉಟ್ಟ ಧೋತ್ರ ವನ್ನೇ ಬಿಚ್ಚಿ ಕಟ್ಟಿಕೊಂಡ ಕೌಪೀನl ಆನಂದತೀರ್ಥ ರೆಂಬ ಸನ್ಯಾಸಿಯಾದರುll33ll


ಬಿಕ್ಷುತನವ ಕೊಂಬುವ ಅಪೇಕ್ಷೆಯುಳ್ಳ ಮಗನ ಕೊಟ್ಟು ನಮ್ಮ llರಕ್ಷಣೆಯ ಮಾಡುವರ ಕಾಣೆನೆಂದಳು ll34ll


ವಿಷ್ಣು ತೀರ್ಥರೆಂಬ ಮಗನ ಕೊಟ್ಟು ತಾಯ ಸಂತೈಸಿll ಅಪ್ಪಣೆಯ ಕೊಂಡು ಆಶ್ರಮಕ್ಕೆ ಬಂದರುll35ll


ಮರಳಿ ಬದರಿಕಾಶ್ರಮಕ್ಕೆ ತಿರುಗಿ ಹೋಗಿ ಮಧ್ವರಾಯರು l ಪರ್ವತವ ಕಂಡು ಆಶ್ಚರ್ಯ ಪಟ್ಟರುll 36ll


ಪರ್ವತದ ಮಹಿಮೆಯನ್ನು ವರ್ಣಿಸಲಳವಲ್ಲ ಗರುಡಶೇಷ ರುದ್ರ ರಿಂದ ಲಾದರೂ ll37ll


ಯೋಗ ಪಟ್ಟ ಧರಿಸಿದ ಜಡೆಗಳು ಮಸ್ತಕವು ಮೈಯ ಬಣ್ಣll ತಂದು ತೋರಿದರೆ ಆನಂದತೀರ್ಥರುll38ll


ಸರಸಿಜೇಕ್ಷಣ ಹೊಳೆವ ಹಸ್ತ ಮಸ್ತಕವು ಮೈಯ್ಯ ಬಣ್ಣll ಇದು ತೋರಿದರೆ ಆನಂದತೀರ್ಥರುll39ll


ಭಕ್ತಿ-ಭಾವದಿಂದ ಮಧ್ವರ ಬಗ್ಗಿ ಮುನಿಗಳೆಲ್ಲ ನೋಡಿll ವಿಷ್ಣುದಾಸ ಗೆರೆಗಿ ಕೈಯ ಮುಗಿದು ನಿಂತರುll40ll


ಈ ತೀರ್ಥಕ್ಕೆ ಸರಿಯಲ್ಲ ಈ ಕ್ಷೇತ್ರಕ್ಕೆ ಸಮಾನ ವಿಲ್ಲll ಶಾಸ್ತ್ರ ಅರ್ಥದಿಂದ ನಿರ್ಣಯವ ಮಾಡಿದರುll41ll


ಭರತಖಂಡವನ್ನೇ ಚರಿಸಿ ಮಧ್ವರಾಯರುll lಉಡುಪಿಎಂಬೋ ಕ್ಷೇತ್ರದಲ್ಲಿ ತಪಸ್ಸು ಮಾಡಿದರುll 42ll


ಕಡಲ ಮಧ್ಯದಲ್ಲಿ ಒಂದು ಹಡಗು ಬಂದು ನಿಂತಿರಲು ll ಕಂಡ ಮದ್ವರಾಯರು ಕೈಯ ಬೀಸಿದರುll43ll


ಪ್ರೇಮದಿಂದ ತಡಿಗೆ ಬರಲು ಶ್ರೀಮದಾಚಾರ್ಯರಿಗೆ ಏನು ಬೇಡಿದ್ದು ಬೇಡಿ ಕೊಡುವೆನೆಂದರು ll 44 ll


ಶ್ರೀಮದಾಚಾರ್ಯರು ಬಹಳ ಸಂತೋಷದಿಂದll ಮೂರು ಗೋಪೀಚಂದನದ ಗಡ್ಡ ತೆಗೆದುಕೊಂಡರುll45ll


ವಾರಿಧಿಯೊಳಗೆ ಇದ್ದ ದ್ವಾರಕೆಯ ಕೃಷ್ಣನll ದ್ವಾದಶಸ್ತೋತ್ರ ಹೇಳುತ್ತಾ ಕರಕೊಂಡು ಬಂದರುll46ll


ರಜತಪೀಠ ಪುರದೊಳಗೆ ರಾಜ ಮಂದಿರವ ಮಾಡಿll ರಮ್ಯ ಮೂರ್ತಿ ಕೃಷ್ಣನ ಪ್ರತಿಷ್ಠಿಸಿದರುll47ll


ಕೃಷ್ಣ ವೇದವ್ಯಾಸರ ಮೂರ್ತಿಯ ಪ್ರತಿಷ್ಠೆ ಮಾಡಿll ತ್ರಿಕಾಲದಲ್ಲಿ ಪೂಜೆ ಮಾಡುತ್ತಿದ್ದರುll48ll


ಎಂಟು ಮಠದವರೆಗೆ ಎಂಟು ಮೂರುತಿಯ ಕೊಟ್ಟುll ಸರಸಿಜಾಕ್ಷ ನ ಪೂಜೆ ಸಾಂಗವನೇ ಮಾಡಿದರುll 49 ll


ಉಷಃಕಾಲದಲ್ಲಿ ಶ್ರೀಕೃಷ್ಣನ ಪೂಜೆ ಮಾಡಿll ಸಾಯಂಕಾಲಕ್ಕೆ ಸುಬ್ರಹ್ಮಣ್ಯಕ್ಕೆ ಬಂದರು ll50ll


ಮಧ್ಯಾಹ್ನ ಕಾಲದಲ್ಲಿ ಮಧ್ಯ ತಾಳ ಮಠಕ್ಕೆ ಬಂದ ಮಧ್ವರಾಯರ ಕೀರ್ತಿ ಮೂರು ಜಗವ ತುಂಬಿತು ll51ll


ಅಂದು ಆದೇಶದಲ್ಲಿ ಅನಾವೃಷ್ಟಿ ಆಗಿರಲುll ದಂಡ ಕೋಲು ತಿರುಗಿಸಿ ತೀರ್ಥವನೇ ಮಾಡಿದರುll52ll


ಸುತ್ತಮುತ್ತ ಭೂಮಿಯನ್ನು ಒತ್ತಿ ಕಾಲುವೆಯ ತೆಗೆಸಿll ಭತ್ತವನ್ನೇ ಬೆಳೆಸಿದರು ವಿಚಿತ್ರ ಮಹಿಮರುll53ll


ಅಚ್ಯುತನ ಪಟ್ಟದೊಳಗೆ ಚಿತ್ರ ಭೂಸುರರುಯೆಲ್ಲ ll ಪರಿಪರಿ ಕ್ರೀಡೆಗಳ ಆಡುತ್ತಿದ್ದರುll54ll


ಕೋಟಿ ಸೂರ್ಯರ ಬೆಳಕು ಗೋಪುರ ಸೂರ್ಯರ ಕಾಂತಿll ಅಚ್ಯುತನ ಪಟ್ಟಣಕ್ಕೆ ಕನಕಗೋಪುರll55ll


ಅಚ್ಯುತಪ್ರೇಕ್ಷಾಚಾರ್ಯರ ಚಿತ್ತ ನಿರ್ಮಲವ ಮಾಡಿll ವಿಷ್ಣು ಸರ್ವೋತ್ತಮನೆಂಬ ಜ್ಞಾನ ತಿಳಿಸಿಕೊಟ್ಟರುll56ll


ಗುರುಗಳ ಮನಸ್ಸಿನ ಕಲ್ಮಶಗಳನ್ನು ಕಳೆದುll ಗೀತಾತಾತ್ಪರ್ಯ ಭಾಷ್ಯ ಮಾಡಿಕೊಟ್ಟರುll57ll


ಭಕ್ತಿಯುಳ್ಳ ಶಿಷ್ಯನ ಮನೆಗೋಗಿ ಲೆಕ್ಕವಿಲ್ಲದೆ ಹಣ್ಣುll ಅಕ್ಷಯ ಮಾಡಿಕೊಟ್ಟು ಭಿಕ್ಷವ ಮಾಡಿದರು ll58ll


ಮೂವತ್ತು ಕೊಡದ ಹಾಲು ಮುನ್ನೂರು ಹಣ್ಣು ಮೆದ್ದು llಆತ್ಮದಲ್ಲಿ ಜೀರ್ಣ ವಾಯ್ತು ನಿಗಮ ಸಿದ್ಧರಿಗೆ ll59ll


ಶ್ರೀಮದಾಚಾರ್ಯರು ಸ್ನಾನವನ್ನೇ ಮಾಡುವಾಗll ಬೇಗ ಗಂಗೆ ನೆಲೆಸಿ ಪವಿತ್ರಳಾದll60ll


ಶ್ರೀಮದಾಚಾರ್ಯರು ಸ್ಥಾನವನ್ನೇ ಮಾಡುವಾಗll ಬೇಗ ಶಿಷ್ಯರೆಲ್ಲ ಸೇವೆ ಮಾಡುತ್ತಿದ್ದರುll61ll


ದ್ವಾದಶಾದಿತ್ಯರು ಏಕಕಾಲದಲ್ಲಿ ಉದಿಸಿದಂತೆll ಶ್ರೀಮದಾಚಾರ್ಯರ ದ್ವಾದಶನಾಮ ಹೊಳೆದವು ll62ll


ಶ್ರೀಮದಾಚಾರ್ಯರ ದ್ವಾದಶನಾಮ ಒಣಗಲಿಕ್ಕೆ ಬೇಗ ಶಿಷ್ಯ ತುಳಸಿವನ ಮಾಲೆ ಹಾಕಿದll63ll


ಶ್ರೀಮದಾಚಾರ್ಯರ ವ್ಯಾಖ್ಯಾನವ ಕೇಳಲಿಕ್ಕೆ ಆದಿಶೇಷ ತಾನು ಬಂದು ಕೇಳುತ್ತಿದ್ದನು ll64ll


ವ್ಯಾಖ್ಯಾನ ಕಾಲದಲ್ಲಿ ದೀಪ ಶಾಂತವಾಗುತಿರಲು ll ಜ್ಯೋತಿರ್ಮಯ ಮಾಡಿದರು ಅಂಗುಷ್ಠದಿಂದ ll65ll


ಕೇರಳದೇಶಕ್ಕೆ ಹೋಗಿ ಮಧ್ವರಾಯರು ll ಮಾಯಾವಾದಿಗಳ ಕಾಲು ಸೆಳದು ತಂದರುll66ll


ಕೇರಳ ಭೂಮಿಯನ್ನು ತೋಡು ಅಗಳು ಎಂದರೆ ll ನೀ ತೋರಿಸಿಕೊಟ್ಟರೆ ನಾ ತೊಡುವೆನೆಂದರು ll67ll


ತೋರಿಸಿಕೊಡುವೆನೆನುತ ಆಗ ಗುದ್ದಲಿಯ ಹಾಕಿll ನೋಡಲಿಕ್ಕೆ ನೆಟ್ಟಗಾಗ ಲಾಗಳ್ ಹೋದಿತು ll68ll


ಕಳ್ಳರೆಲ್ಲ ಬಿಟ್ಟು ಬರಲು ಕಲ್ಲಾಗಿ ನಿಂತಿರಲುll ಕಲ್ಲು ಎಂದು ಕಳ್ಳರು ತಿರುಗಿ ಹೋದರು ll69ll


ಕಾವಿಯ ವಲ್ಲಿಯನ್ನು ಗಂಟುಕಟ್ಟಿ ಬಿಸಟು ll ತಮ್ಮ ತಮ್ಮೊಳು ಕಡೆದಾಡಿ ಮಡಿದರೆಲ್ಲರು ll70ll


ನಾವೆಯಿಲ್ಲದ ನದಿಯ ಹೇಗೆ ದಾಟಿದಿರಿ ಎಂದು ll ಕಾವಲಿದ್ದ ದೂತರು ಕೇಳುತ್ತಿದ್ದರುll 71 ll


ಜಗವೆಲ್ಲ ರಕ್ಷಿಸುವ ಶ್ರೀ ಹರಿಯು ನಮ್ಮ ರಕ್ಷಿಸುವll ಅವರಿಗೆ ತಕ್ಕ ಮಾತನಾಡಿ ತಿರುಗಿ ಬಂದರುll72ll


ಶೋಭನ ಭಟ್ಟರು ಶ್ರೀಮದ್ ಆಚಾರ್ಯರಿಗೆll ಪಾದದ ಮೇಲೆ ಬಿದ್ದು ಶಿಷ್ಯರಾದರು ll73ll


ಶೋಭನ ಭಟ್ಟರು ಶ್ರೀ ಮದಾಚಾರ್ಯರಿಗೆ llಪಾದ ತೊಳೆದು ಚಾಮರವ ಹಾಕುತ್ತಿದ್ದರು ll74ll


ಶೋಭನ ಭಟ್ಟರು ಶ್ರೀ ಮದಾಚಾರ್ಯರಿಗೆ ರಾಜ ಸಭೆಯೊಳಗೆ ಪುಸ್ತಕ ಕೊಡಿಸಿದರು ll75ll


ಅಣು ಮಹತ್ತುಗಳು ಎಲ್ಲಾ ನಿಮಿಷದೊಳಗೆ ಮಾಡಿಕೊಟ್ಟll ಹುಡುಗನ ಹೆಗಲೇರಿ ದೇವಾಲಯಕ್ಕೆ ಬಂದರು ll76ll


ವಾಯುದೇವರ ಮೂರವತಾರ ಮಹಿಮೆ ಕೇಳಿದವರಿಗೆ ll ಸಾಯುಜ್ಯ ಮುಕ್ತಿ ಕೊಡುವ ಶ್ರೀ ಹಯವದನನುll77ll


llಮೂರನೆಯ ಅವತಾರದ ಕಥೆ ಮಧ್ವ ಸುವ್ವಾಲಿ ಮುಗುದುll


ll ಶ್ರೀ ಕೃಷ್ಣಾರ್ಪಣಮಸ್ತು ll

Comments

Popular posts from this blog

Kaksha Taratamya