UPAKARMA Upakarma, means “Beginning” and it is historically, the day was considered auspicious for beginning the Vedic studies. This is on this day one has to start study of Vedas after doing samarpana of what he has studied in the earlier years. Without doing Utsarjana and Upakarma, one will not get punya even if he does veda parayana, japa, etc. When is the day for upakarma? Rigveda – Shravana Hunnime with Shravana nakshatra Yajurveda – Shravana Hunnime Samaveda – Shravana Masa when Hasta Nakshatra falls Rugveda Upakarma is done normally on Shravana Hunnime with Shravana Nakshatra. But Yajurveda Upakarma is done normally on Shravana Hunnime itself. Who are all to do Upakarma and Utsarjana – a. All Brahmacharis, Gruhastas, Vanaprasthas to do upakarma and utsarjana. b. All Vedaas Rugvedees, Yajurvedees, Samavedees and Atharvana Vedees to do upakarma and utsarjana. Necessity of Upakarma –...
Posts
Showing posts with the label Habbagalu
- Get link
- X
- Other Apps
By
Paripoorna chincholi
-
NAGARA PANCHAMI ಸರ್ವರಿಗೂ ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು ಹೇಮಂತ್ ಚಿನ್ನು ವಿಶೇಷತೆ : ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಾ ಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ. ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ. ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ. ಕುಶ ಸಮಿದೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗ...
- Get link
- X
- Other Apps
By
Suparna Chincholi
-
Ayudha Pooja ಪರಮಾತ್ಮನ ಆಯುಧಗಳಾದ ಚಕ್ರ, ಶಂಖ, ಗದಾ, ಪದ್ಮ , ಕತ್ತಿ, ಖಡ್ಗ, ಕವಚ, ಧನುಸ್ಸು, ಇವುಗಳಿಗೆ ನಿತ್ಯ ನಮ್ಮ ಪೂಜಾ ಸಮಯದಲ್ಲಿ ಪೂಜಿಸುತ್ತೇವೆ. ಚಕ್ರಾಭಿಮಾನಿನ್ಯೈ ದುರ್ಗಾಯೈನಮ:, ಶಂಖಾಭಿಮಾನಿನೈ ಶ್ರಿಯೈ ನಮ:, ಗದಾಭಿಮಾನಿನೈ ಮುಖ್ಯಪ್ರಾಣಾಯ ನಮ:, ಪದ್ಮಾಭಿಮಾನಿನೈ ಭೂಮೈ ನಮ:”. ಈ ರೀತಿ ಭಗವಂತನ ಆಯುಧಗಳಿಗಿ ಮತ್ತು ತದಂತರ್ಯಾಮಿ ದೇವತೆಗಳಿಗೆ ಪೂಜಿಸಬೇಕು. ಸಾಮಾನ್ಯವಾಗಿ ಆಯುಧಪೂಜೆ ಎಂದರೆ ವಾಹನ ಪೂಜೆ ಎಂದು ಭಾವಿಸಿ ನಮ್ಮ ವಾಹನವನ್ನು ಶುದ್ಧೀಕರಿಸಿ ಪೂಜಿಸುತ್ತೇವೆ. ಆದರೆ ನಾವು ನಿತ್ಯ ಬಳಸುವ ಹಲವಾರು ಆಯುಧಗಳು – ಚಾಕು, ಕತ್ತರಿ , ಇಳಿಗೆ ಮಣಿ, ಮೊದಲಾದವುಗಳಿಗೂ ಪೂಜಿಸಬೇಕು ಸಂಕ್ಷಿಪ್ತ ಆಯುಧಪೂಜಾ ವಿಧಾನ : ಆಚಮನ, ಪ್ರಾಣಾಯಾಮ, ಸಂಕಲ್ಪ ……. ದೇಶ ಕಾಲಗಳನ್ನುಚ್ಚರಿಸಬೇಕು. ಏವಂಗುಣವಿಶೇಷಣವಿಶಿಷ್ಟಾಯಾಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಸಿದ್ದ್ಯರ್ಥಂ, ಸಮಸ್ತ ಸನ್ಮಂಗಳಾರ್ಥಂ, ಅಪಘಾತಾದಿ ಅನಿಷ್ಟ ಪರಿಹಾರಾರ್ಥಂ, ಆಯುಧ ಆಘಾತ ಪರಿಹಾರಾರ್ಥಂ, ಸಮಸ್ತ ವಿಘ್ನ ಪರಿಹಾರಾರ್ಥಂ ವಾಹನಾಭಿಮಾನಿ ಗರುಡಾಂತರ್ಗತ ಶ್ರೀ ದುರ್ಗಾಸಮೇಕ ಶ್ರೀ ಹರಿಂ ಪೂಜಾಂ ಕರಿಷ್ಯೇ. ಆದೌ ನಿರ್ವಿಘ್ನತಾರ್ಥಂ ಸಿದ್ಧಿವಿನಾಯಕ ಪೂಜಾಂ ಕರಿಷ್ಯೇ. ಗಣಪತಿಯ ವಿಗ್ರಹವನ್ನಾಗಲಿ, ಅಥವಾ ಬಟ್ಟಲು ಅಡಿಕೆಯಲ್ಲಿ ಗಣಪತಿಯನ್ನು ಚಿಂತನೆ ಮ...
- Get link
- X
- Other Apps
By
Suparna Chincholi
-
Nagara Panchami Vishesha ನಾಗರ ಪಂಚಮಿ 🌺🌺🌺🌺🌺🌺 ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ. ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಂದರ್ಥದಲ್ಲಿ ಪ್ರಕೃತಿಯ ಆರಾಧನೆ. ನಾಗಾರಾಧನೆ ಇದೊಂದು ಪ್ರಾಚೀನ ಆರಾಧನೆ . ವೇದದ ಸೊಲ್ಲುಗಳು ನಾಗಪೂಜೆಯ ಪ್ರಾಚೀನತೆಯನ್ನು ತಿಳಿಯ ಪಡಿಸುತ್ತವೆ . ನಾಗ ದೇವರು ಅಗಣಿತ ಮಹಿಮೆಯ ಶಕ್ತಿಯೆಂದು ಸರ್ಪ ಸೂಕ್ತಗಳ ವರ್ಣನೆಯಿದೆ. ' "ಅನಂತಶ್ಚಾಸ್ಮಿ ನಾಗಾನಾಂ ” – ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದ ಈ ಮಾತು ಸದಾ ಸ್ಮರಣೀಯವಾದುದು . ನಮ್ಮ ಭಾರತದ ಹರಪ್ಪ - ಮೊಹೆಂಜೊದಾರೋಗಳಲ್ಲಿ ಲಭ್ಯವಾದ ನಾಗ ಮುದ್ರೆಗಳು , ಗೋಕರ್ಣದ...