Ayudha Pooja
ಪರಮಾತ್ಮನ ಆಯುಧಗಳಾದ ಚಕ್ರ, ಶಂಖ, ಗದಾ, ಪದ್ಮ , ಕತ್ತಿ, ಖಡ್ಗ, ಕವಚ, ಧನುಸ್ಸು, ಇವುಗಳಿಗೆ ನಿತ್ಯ ನಮ್ಮ ಪೂಜಾ ಸಮಯದಲ್ಲಿ ಪೂಜಿಸುತ್ತೇವೆ. ಚಕ್ರಾಭಿಮಾನಿನ್ಯೈ ದುರ್ಗಾಯೈನಮ:, ಶಂಖಾಭಿಮಾನಿನೈ ಶ್ರಿಯೈ ನಮ:, ಗದಾಭಿಮಾನಿನೈ ಮುಖ್ಯಪ್ರಾಣಾಯ ನಮ:, ಪದ್ಮಾಭಿಮಾನಿನೈ ಭೂಮೈ ನಮ:”. ಈ ರೀತಿ ಭಗವಂತನ ಆಯುಧಗಳಿಗಿ ಮತ್ತು ತದಂತರ್ಯಾಮಿ ದೇವತೆಗಳಿಗೆ ಪೂಜಿಸಬೇಕು.
ಸಾಮಾನ್ಯವಾಗಿ ಆಯುಧಪೂಜೆ ಎಂದರೆ ವಾಹನ ಪೂಜೆ ಎಂದು ಭಾವಿಸಿ ನಮ್ಮ ವಾಹನವನ್ನು ಶುದ್ಧೀಕರಿಸಿ ಪೂಜಿಸುತ್ತೇವೆ. ಆದರೆ ನಾವು ನಿತ್ಯ ಬಳಸುವ ಹಲವಾರು ಆಯುಧಗಳು – ಚಾಕು, ಕತ್ತರಿ , ಇಳಿಗೆ ಮಣಿ, ಮೊದಲಾದವುಗಳಿಗೂ ಪೂಜಿಸಬೇಕು
ಸಂಕ್ಷಿಪ್ತ ಆಯುಧಪೂಜಾ ವಿಧಾನ :
ಆಚಮನ, ಪ್ರಾಣಾಯಾಮ, ಸಂಕಲ್ಪ ……. ದೇಶ ಕಾಲಗಳನ್ನುಚ್ಚರಿಸಬೇಕು.
ಏವಂಗುಣವಿಶೇಷಣವಿಶಿಷ್ಟಾಯಾಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಸಿದ್ದ್ಯರ್ಥಂ, ಸಮಸ್ತ ಸನ್ಮಂಗಳಾರ್ಥಂ, ಅಪಘಾತಾದಿ ಅನಿಷ್ಟ ಪರಿಹಾರಾರ್ಥಂ, ಆಯುಧ ಆಘಾತ ಪರಿಹಾರಾರ್ಥಂ, ಸಮಸ್ತ ವಿಘ್ನ ಪರಿಹಾರಾರ್ಥಂ ವಾಹನಾಭಿಮಾನಿ ಗರುಡಾಂತರ್ಗತ ಶ್ರೀ ದುರ್ಗಾಸಮೇಕ ಶ್ರೀ ಹರಿಂ ಪೂಜಾಂ ಕರಿಷ್ಯೇ.
ಆದೌ ನಿರ್ವಿಘ್ನತಾರ್ಥಂ ಸಿದ್ಧಿವಿನಾಯಕ ಪೂಜಾಂ ಕರಿಷ್ಯೇ. ಗಣಪತಿಯ ವಿಗ್ರಹವನ್ನಾಗಲಿ, ಅಥವಾ ಬಟ್ಟಲು ಅಡಿಕೆಯಲ್ಲಿ ಗಣಪತಿಯನ್ನು ಚಿಂತನೆ ಮಾಡಬೇಕು. ಶ್ರೀ ಮಹಾಗಣಪತಿಯೇ ನಮ: | ಓಂ ಭೂ ಗಣಪತಿಂ ಆವಾಹಯಾಮಿ | ಓಂ ಭುವ: ಗಣಪತಿಂ ಆವಾಹಯಾಮಿ | ಓಂ ಸ್ವ: ಗಣಪತಿಂ ಆವಾಹಯಾಮಿ | ಓಂ ಭೂರ್ಭುವ: ಸ್ವ: ಗಣಪತಿಂ ಆವಾಹಯಾಮಿ | ಶ್ರೀ ಮಹಗಣಪತಯೇ ನಮ: | ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ | ಆವಾಹಯಾಮಿ ಆವಾಹನಂ ಸಮರ್ಪಯಾಮಿ | ಸ್ವಾಗತಂ | ಆಸನಂ ಸಮರ್ಪಯಾಮಿ (ಈ ಎಲ್ಲಾ ಮಂತ್ರಗಳನ್ನು ಹೇಳುವಾಗ ಮಂತ್ರಾಕ್ಷತೆಯನ್ನು ಹಾಕಬೇಕು)
ಪಾದಯೋ: ಪಾದ್ಯಂ ಸಮರ್ಪಯಾಮಿ | ಅರ್ಘ್ಯಂ ಸಮರ್ಪಯಾಮಿ | ಆಚಮನಂ ಸಮರ್ಪಯಾಮಿ | ಮಧುಪರ್ಕಂ ಸಮರ್ಪಯಾಮಿ | ಪುನರಾಚಮನಂ ಸಮರ್ಪಯಾಮಿ | ಸ್ನಾನಂ ಸಮರ್ಪಯಾಮಿ | (ನೀರನ್ನು ಅರ್ಘ್ಯಪಾತ್ರೆಯಲ್ಲಿ ಹಾಕಬೇಕು)
ವಸ್ತ್ರಂ ಸಮರ್ಪಯಾಮಿ | ಉಪವೀತಂ ಸಮರ್ಪಯಾಮಿ | ಆಭರಣಂ ಸಮರ್ಪಯಾಮಿ | ಗಂಧಂ ಸಮರ್ಪಯಾಮಿ | ಪುಷ್ಪಾಣಿ ಸಮರ್ಪಯಾಮಿ | ಧೂಪಮಾಘ್ರಾಪಯಾಮಿ | ದೀಪಂ ದರ್ಶಯಾಮಿ |
ನಂತರ ಯಾವುದಾದರೂ ಹಣ್ಣನ್ನು ನೈವೇದ್ಯ ಮಾಡಬೇಕು –
ನಂತರ ಪ್ರಾರ್ಥನ ಮಾಡಬೇಕು –
ವಕ್ರತುಂಡ ಮಹಾಕಾಯ ಬಾಲಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ |
ಶುದ್ಧೀಕರಣ :
ಓಂ ಆಪೂ ಹಿ ಷ್ಠಾ ಮಯೋ ಭುವ: | ತಾನ ಊರ್ಜೇ ದಧಾತನ | ಮಹರಣಾಯ ಚಕ್ಷಸೇ | ಯೋ ವ: ಶಿವತಮೋ ರಸ: | ತಸ್ಯಭಾಜಯತೇಹ ನ: | ಉಶತೀರಿವ ಮಾತರ: | ತಸ್ಮಾ ಅರಂಗಮಾಮವ: | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಾಥಾ ಚ ನ: |
ಶಂಖೋದಕದಿಂದ ವಾಹನ/ ಆಯುಧಕ್ಕೆ ಪ್ರೋಕ್ಷಣಿ ಮಾಡಬೇಕು.
ಆವಾಹನ – ಓಂ ನಮೋ ನಾರಾಯಣಾಯ ಓಂ ಎಂದು ದ್ವಾದಶ ಬಾರಿ ವಾಹನ/ಆಯುಧ ಸ್ಪರ್ಶಿಸಿ ಜಪಿಸಬೇಕು | ಸರ್ವೇಭ್ಯೋ ದೇವೇಭ್ಯೋ ನಮ: | ಸರ್ವೇಭ್ಯೋ ತತ್ವಾಭಿಮಾನಿನೈ ದೇವೇಭ್ಯೋ ನಮ: | ತತ್ವನಾಸಿಕಾದೇವತಾಭ್ಯೋ ನಮ: | ಮಾತೃಕಾನ್ಯಾಸ ದೇವತಾಭ್ಯೋ ನಮ: | ಎಂದು ತತ್ವಾಭಿಮಾನಿ, ದೇವತೆಗಳನ್ನೂ, ಧ್ಯಾನಿಸಬೇಕು.
ಆಯುಧ ಪ್ರಾರ್ಥನ –
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |
(ದೇವರಪೂಜೆ ಸಂದರ್ಭದಲ್ಲಿ ಉಪಯೋಗಿಸಿದ ಕಲಶದ ನೀರನ್ನೇ ಉಪಯೋಗಿಸಬಹುದು ಅಥವಾ ನೂತನ ಕಲಶವನ್ನು ಪೂಜೆ ಮಾಡಬಹುದು)
ಕಲಶ ಪ್ರಾರ್ಥನ –
ದೇವದಾನವಸಂವಾದೇ ಮಧ್ಯಮಾನಾಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣು ಸ್ವಯಂ |
ತ್ವಯಿ ತಿಷ್ಟಂತಿ ಭೂತಾನಿ ತ್ವಯಿ ಪ್ರಾಣಾ: ಪ್ರತಿಷ್ಟಿತಾ: |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮಿಹೇ ಜಲೋದ್ಭವ|
आयुध प्रार्थन –
सर्वायुधानां प्रथमं निर्मितासि पिनाकिना ।
शूलायुधान् विनिष्कृत्य कृत्वा मुष्ठिग्रहं शुभं ।
छुरिकॆ रक्षमां नित्यं शांतिं यच्च नमोस्तु ते ।
कलश प्रार्थन –
देवदानवसंवादे मध्यमानां महोदधौ ।
उत्पन्नोसि तदा कुंभ विधृतो विष्णु स्वयं ।
त्वयि तिष्टंति भूतानि त्वयि प्राणा: प्रतिष्टिता: ।
त्वत्प्रसादात् इमं यज्ञं कर्तुमिहे जलोद्भव।
ಷೋಡಚೋಪಚಾರ ಪೂಜೆ :
ಧ್ಯಾನ, ಆವಾಹನ , ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕಂ, ಪುನರಾಚಮನಂ, ಸ್ನಾನಂ, ವಸ್ತ್ರಂ, ಉಪವೀತಂ, ಗಂಧಂ, ಆಭರಣಾನಿ, ಅಕ್ಷತ, ಧೂಪಂ, ದೀಪಂ, ನೈವೇದ್ಯಂ, ಸಮರ್ಪಯಾಮಿ |
ನಂತರ ಹಣ್ಣು ಕಾಯಿ ನೈವೇದ್ಯ ಮಾಡಬೇಕು. ನಂತರ ಬೂದಗುಂಬಳಕಾಯಿ ಅಥವಾ ನಿಂಬೆಹಣ್ಣಿಗೆ ಕುಂಕುಮ ನೀರನ್ನು ಹಾಕಿ ಎಲ್ಲಾ ದಿಕ್ಕುಗಳಲ್ಲೂ ಬಲಿಯನ್ನು ನೀಡತಕ್ಕದ್ದು.
ಅನೇನ ವಾಹನಪೂಜಾಕರಣೇನ ಅಸ್ಮದ್ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ದುರ್ಗಾಸಹಿತ ಶ್ರೀ ಲಕ್ಷ್ಮೀನಾರಾಯಣ ಪ್ರೀಯತಾಂ |
ಕೃಷ್ಣಾರ್ಪಣಮಸ್ತು
Comments
Post a Comment