Posts

Showing posts with the label Suvvalis
  Suvvali ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನ ಸುವ್ವಿll ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll ಶ್ರೀ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ ll ಹರುಷದಿಂದ ಭಾರತೀಶರನು ಭಜಿಸುವೆ ll 1 ll ಅಮರವರ್ಯರೆಲ್ಲ ಕ್ಷೀರಾಬ್ದಿಯಲ್ಲಿ ಮನೆಯಮಾಡಿ ll ಕಮಲೆಯೊಡನೆ ರಮಿಸುವ ಘನನ ಕಂಡರೋ ll2ll ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ ll ರಕ್ಷಿಸೆಂದು ಪೊಗಳಿದರೆ ಕುಕ್ಷಿಲೋಲನ ll3ll ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು ll ದಾನ ಮಾಡಿದೆಯೋ ವೇದಾದಿ ವೇದವ ll4ll ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪ ll ದಿಂದ ಹೋಗಿ ಅಮೃತ ವನ್ನೇ ತಂದು ನೀಡಿದೆ ll5ll ವರಾಹನಾಗಿ ಹಿರಣ್ಯಾಕ್ಷನ ವಧೆಯಮಾಡಿ ಗೆಲಿದು ಬಂದೆ ll ಧರಣಿಯೆತ್ತಿ ನಮ್ಮ ಸಲಹಿದಾತನಲ್ಲವೇ ll6ll ಮಗನ ಹಗೆಯ ಬಗೆದು ದೈತ್ಯ ಮತ್ಸರವ ಮಾಡುತಿರಲು ll ನರಮೃಗ ರೂಪನಾಗಿ ಮಗನ ಸಲಹಿದೆ ll7ll ಇಂದ್ರಲೋಕವೆಲ್ಲ ಬಲೀಂದ್ರನಪಹರಿಸುತಲಿರಲು ಉಪೇಂದ್ರನಾಗಿ ತಂದ ಮಧುಸೂದನನಲ್ಲವೇ ll8ll ಎರಡು ಹತ್ತು ಒಂದು ಬಾರಿ ಧರಣಿ ನಾಯಕರ ಗೆಲಿದೆ ll ಪರಶುರಾಮನಾಗಿ ನೀ ಪ್ರಕಟವಾದೆಲೊ ll9ll ಈಗ ಮತ್ತೆ ಕುಂಭಕರ್ಣ ರಾವಣಾದಿ ಅಸುರರೆಲ್ಲ ll ಆಗ ಭೋಗದಿಂದ ಮತ್ತ ರಾಗುತ್ತಿದ್ದರು ll10ll ಅಂದು ಮಥುರಾಪಟ್ಟಣ ಹೊಕ್ಕು ಮಾವ ಕಂಸನ ಕೊಂದ ll ತಂದೆತಾಯೆರ ಬಂಧನವ ಬಿಡಿಸಿದೆ ll11ll ತ್ರಿಪುರರ ಸತಿಯರ ಅಪಹರಿಸಿ ವೃತಗಳನ್ನು ll ನಿಪುಣನಾಗಿ ಬಂದು ಗೆಲಿದ ಚಪಲನಲ್ಲವೇ ll12ll ಕಲ್ಕ್ಯಾವತಾ...