Posts

Showing posts with the label Great Personalities
 HELEVANA KATTE GIRIYAMMA CHARITRE ಶ್ರೇಷ್ಟ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮ ಚರಿತ್ರೆ:-  🌸🌸🌸🌸🌸🌸🌸🌸🌸  ಹರಿದಾಸ ಸಾಹಿತ್ಯದಲ್ಲಿ ಹರಿದಾಸರ ಜೊತೆ ಹರಿದಾಸಿಯರ ಕೊಡುಗೆಯು ಬಹಳ ಅಪಾರವಿದೆ. ಮೊದಲಿಗೆ ಎಲ್ಲರ ಮನದಲ್ಲಿ ನೆನಪಾಗುವುದೇ "ಹೆಳವನಕಟ್ಟೆ ಗಿರಿಯಮ್ಮ". ಕರ್ನಾಟಕದ "ಮೀರಾ" ಎಂದೇ ಪ್ರಖ್ಯಾತವಿದೆ. ಹರಿಭಕ್ತಿಯ ಸ್ವರೂಪವಾಗಿದ್ದಾಳೆ; ಎಂದು ವಿದ್ವಾಂಸರು ಹೇಳುತ್ತಾರೆಹೆಣ್ಣು ಕುಲದ ಅಭಿಮಾನ ಹೆಮ್ಮೆಯವರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲೂ ಇವಳ ಸಾಹಿತ್ಯ ಮನೆಮಾತಾಗಿದೆ.  ಗಿರಿಯಮ್ಮನ ಜನನ ಕ್ರಿ.ಶ.೧೭೫೦ ಸುಮಾರಿಗೆ ಜೀವಿಸಿದ್ದರು ಅಥವಾ ೧೮ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದರು;ಎಂಬ ಊಹೆ ಇದೆ.ಇವಳ ಜನನದ ಮಾಹಿತಿ ನಿಖರವಾಗಿ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತಂದೆ ಭೀಷ್ಟಪ್ಪ , ತಾಯಿ ತುಂಗವ್ವರಿಗೆ ಬಹಳ ವರುಷಗಳಿಂದ ಮಕ್ಕಳಾಗದ ಕಾರಣ ; ತಿರುಪತಿ ತಿಮ್ಮಪ್ಪನ ಸೇವೆ ಮತ್ತು ಹರಿಕೆಯ ಫಲವಾಗಿ ಪುತ್ರಿರತ್ನ ಜನನವಾಯಿತು. ಸೇವೆ ಫಲದಿಂದ ಹುಟ್ಟಿದ್ದಕ್ಕೆ , ಈ ಮಗುವಿಗೆ "ಗಿರಿಯಮ್ಮ" ನಾಮಕರಣ ಮಾಡಿದರು.  ಗಿರಿಯಮ್ಮ ನಾಲ್ಕು ವರುಷ ಇರುವಾಗಲೇ ತಾಯಿ ತೀರಿಹೋದರು. ಸ್ವಲ್ಪ ದಿನಗಳಲ್ಲಿ ತಂದೆಯು ತೀರಿಹೋದರು.ಇವಳು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಳು. ಬಾಲ್ಯದಿಂದಲೇ ದೈವಭಕ್ತೆ, ಪರೋಪಕಾರ ಗುಣ,ವೃದ್ಧರ ಸೇವೆಯ ಗುಣ ಎಲ್ಲವೂ ಅಭಿವೃದ್ಧಯಾಗಿ ಸುಗುಣಗಳ ಗಣಿಯಾಗಿ...
Ibharampura Apparavaru - Short Summary ಶ್ರಾವಣ ಶುದ್ಧ ತೃತೀಯಾ ಶ್ರೀಮದ್ ಅಪ್ಪಾವರ ಆರಾಧನ ಮಹೋತ್ಸವ , ಇಭರಾಮಪುರ श्रीरामचरणद्वन्द्ववर्धिचंद्रो दयोपमः | श्रीकृष्णपूजानिरतः कृष्णोमाम्सर्वदावतु || ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ,  ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು)  ಶ್ರೀ ಯೋಗಿ  ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ  ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ ,  ಶ್ರೀ ಇಭರಾಮಪುರ ಅಪ್ಪಾವರ ಆರಾಧನೆ ಮಹೋತ್ಸವ.  ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ : ಜನನ : 1789  ವಿಜಯ ದಶಮಿ ತಂದೆ : ಶ್ರೀ ಅಹೋಬಲಾಚಾರ್ಯ ತಾಯಿ : ಕೃಷ್ಣ ಬಾಯಿ ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ ) ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು  ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು ಸಮಕಾಲೀನ ಅಪರೋಕ್ಷ ಜ್ಞಾನಿಗಳು ...