Posts

Showing posts with the label TatvaJnana Install Base

NAGARA CHOWTI NAGARA PANCHAMI

  ನಾಗ ರ  ಚೌತಿ ಮತ್ತು   ನಾಗರ ಪಂಚಮಿ ‌ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಬೇಕು.. ಹೆಣ್ಣು ಮಕ್ಕಳು ಚೌತಿಯ ದಿನ ಹಾಲು ಎರೆಯಬೇಕು ಹೊರಗೆ ಕಲ್ಲು ನಾಗಪ್ಪನಿಗೆ.. ...ಪಂಚಮಿ ದಿನ ಗಂಡಸರು ಮನೆಯಲ್ಲಿ ಪೂಜೆ ಮಾಡಿ ಹಾಲೆರೆಯಬೇಕು . ಚತುರ್ಥಿಯ  ದಿನ ಹೆಣ್ಣುಮಕ್ಕಳು  ಸ್ನಾನದ ನಂತರ ಹೊಸ ವಸ್ತ್ರ ಧರಿಸಿ, ಸೌಭಾಗ್ಯದ ಚಿಹ್ನೆಗಳನ್ನು ಧರಿಸಿಕೊಂಡು, ಕಲ್ಲು ನಾಗಪ್ಪನಿಗೆ  ಅಥವಾ  ಹುತ್ತಕ್ಕೆ  ಹಾಲು ಅಭಿಷೇಕ ಮಾಡಿ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರ, ಅರಿಶಿನ-ಕುಂಕುಮ, ಜೋಳದ ಅರಳು, ನೆನೆದ ಕಡ್ಲಿ, ಹೂ-ಕೇದಿಗೆ,  ಗರಿಕೆ-ಪತ್ರಿ ಏರಿಸಬೇಕು. ತಂಬಿಟ್ಟು, ಜೋಳದರಳಿನ ಉಂಡೆ, ಎಳ್ಳುಂಡೆ ಮುಂತಾದ ಉಂಡೆಗಳನ್ನು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡಬೇಕು. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಬಂದು ನಾಗಪ್ಪನ ಪೂಜೆಯಲ್ಲಿ ಭಾಗವಹಿಸುವದು ವಿಶೇಷ... ನಾಗ ಚೌತಿಯ ದಿನ  ಹೆಣ್ಣು ಮಕ್ಕಳು ಉಪವಾಸ ಮಾಡಬೇಕು  ಯಾಕೆಂದರೆ ನಾವು.  ಮಾಡಿದ ಉಪವಾಸದ ಮಹತ್ವವೆಂದರೆ  ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ  ಚೌತಿಯಲ್ಲಿ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಇದರಿಂದ ನಾಗದೇವತೆಗಳು ಮರಳಿ...

Adhika Masa Mahatme

 ಅಧಿಕಮಾಸದ ಮಹತ್ತ್ವ ಅಧಿಕಮಾಸ ಎಂದರೇನು ? ಯಸ್ಮಿನ್ ಮಾಸಿ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ಚ | ಮಲಮಾಸಃ ಸ ವಿಜ್ಞೇಯಃ ಮಾಸಃ ಸ್ಯಾತ್ತು ತ್ರಯೋದಶಃ ||                   - ಕಾಠಕಗೃಹ್ಯಸೂತ್ರ ಚಾಂದ್ರೋ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕಿರ್ತಿತಃ  ||           - ಬ್ರಹ್ಮಸಿದ್ಧಾಂತ( ಸ್ಮೃತಿ ಮುಕ್ತಾವಳಿ ) ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು . ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ . ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ . ********* ಮಲ(ಅಧಿಕ)ಮಾಸದ ಅರ್ಥ ಮಲಪಕರ್ಷಣೋ ಮಾಸೋ ಮಲಮಾಸಸ್ತತೋ ಬುಧೈಃ | ನಿರ್ಧಾರಿತೋ ವಸಿಷ್ಠಾಧೈಃ ಪುರಾಣೈರ್ವೇದಚಿಂತಕೈಃ || ಮಲಂ ತು.ಪಾತಕಂ ನಾಮ ಸ್ನಾನದಾನಾದಿದ...

Chaturmasya Mahiti

  ಚಾತುರ್ಮಾಸ ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ.  ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ.  ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿ...

Yagnopavitha

   """"""""" ಯಜ್ಞೋಪವೀತ (ಜನಿವಾರ)"""''"" ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ. "ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನ...

Dhanur Masa Mahatme

 ಧನುರ್ಮಾಸದ ಮಹತ್ವ  ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ   (ಹುಗ್ಗಿ )ಮುದ್ಗಾನ್ನ  ವನ್ನು ನಿವೇದಿಸುವರು  ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ ನೀವೇದಯನ್  ಮೇ  ಮುದ್ಗಾನ್ನಂ ಸ ವೈ ಭಾಗವತೋತ್ತಮಃ ಕೋದಂಡಸ್ಥೆ  ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ  ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ. ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ ಅಧಮಾ ಸೂರ್ಯಸಹಿತಾ ಮದ್ಯಾಹ್ನೇ ನಿಷ್ಫಲಾ ಭವೇತ್ ಧನುರ್ಮಾಸದ ಪೂಜಾ ಸಮಯ ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ  ಆಚರಿಸುವುದು ಉತ್ತಮ ಪಕ್ಷವಾಗಿದೆ. ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ  ಮಾಡಿದ ಪೂ...

Dhanvantri Mahatme

" ಶ್ರೀ ಧನ್ವಂತರೀ ಸ್ತುತಿ " ಶ್ರೀಮದ್ಭಾಗವತ... ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ । ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।। ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು! ಈ ವಿಷಯವು " ಹರಿವಂಶ " ದಲ್ಲಿ... ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।। ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು. ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ.. " ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು. ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ.. ಕಾಲಕೂಟ ವಿಷ ಕಾಮಧೇನು ಉಚೈಶ್ರವಸ್ ಐರಾವತ ಪಾರಿಜಾತ ಅಪ್ಸರೆಯರು ಶ್ರೀ ಮಹಾಲಕ್ಷ್ಮೀದೇವಿಯರು ಕ್ರಮವಾಗಿ ಪ್ರಾದುರ್ಭೂತರಾದರು. ...

Shraddha Mahatwa

 " ಶ್ರಾದ್ಧದ ಮಹತ್ವ " " ಶ್ರಾದ್ಧ  " ಯೆಂದರೆ... " ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು. ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ. " ಬ್ರಹ್ಮಾಂಡ ಪುರಾಣ " ದಲ್ಲಿ... ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।। ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.   " ಶ್ರಾದ್ಧ ಕಲ್ಪಲತಾ " ದಲ್ಲಿ.... ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ । ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।। ಪ...

HAYAGREEVA DEVARA CHINTANE

  HAYAGREEVA DEVARA CHINTANE 🌷ಶ್ರೀ ಹಯಗ್ರಿವ ಚಿಂತನ🌷 ( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ ) ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ | ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ || ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ ! ಹಯಗ್ರೀವಾಸುರ ಮದಭರಿತ ಆನೆಯಂತೆ  ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ .  ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು . -ಶ್ರೀದಶಾವತಾರಸ್ತುತಿ -2 ವಿವರಣೆ :- ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ . ಅಥೋ ವಿಧಾತುರ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ | ನಿಹತ್ಯ ತಂ ಮತ್ಸ್ಯವಪು ರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ||  ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ | ವೈವಸ್ವತಾಯೋತ್ತಮಸಂವಿದಾತ್ಮ ವಿಷ್ಣೋಃ ಸ್ವರೂಪಪ್ರತಿ...
Shanthi Homas for Different Age Milestones  ವಯೋಮಾನಕ್ಕೆ ಅನುಸಾರವಾಗಿ  100 ವರ್ಷಗಳವರಗೆ ಆಚರಿಸಬೇಕಾಗುವ ಶಾಂತಿಗಳು    1) 50 ವರ್ಷಕ್ಕೆ  ವೈಷ್ಣವೀಶಾಂತಿ 2) 55 ವರ್ಷಕ್ಕೆ ವಾರುಣೀಶಾಂತಿ  3) 60 ವರ್ಷಕ್ಕೆ ಉಗ್ರರತಿಶಾಂತಿ  4) 65 ವರ್ಷಕ್ಕೆ ಮಹಾಪಥಶಾಂತಿ 5) 70 ವರ್ಷಕ್ಕೆ ಭೀಮರತಿಶಾಂತಿ 6) 75 ವರ್ಷಕ್ಕೆ ಐಂಧ್ರಿಶಾಂತಿ 7) 78 -81 ವರ್ಷಕ್ಕೆ ವಿಜಯರಥಿಶಾಂತಿ 8) 82 -85 ವರ್ಷದ ಓಳಗೆ ಸಹಸ್ರಚಂದ್ರದರ್ಶನಶಾಂತಿ  9) 85 ವರ್ಷದ ಮೇಲೆ ರೌಧ್ರಿಶಾಂತಿ 10) 90 ವರ್ಷಕ್ಕೆ ಸೌರಿಶಾಂತಿ   11) 95 ವರ್ಷಕ್ಕೆ ಪರಿಶಿಷ್ಠಶಾಂತಿ 12) 100 ವರ್ಷಕ್ಕೆ ಶತಾಭಿಷೇಕಶಾಂತಿ ☀ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನೊಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬೦ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡಬೇಕು. ಇದನ್ನು ಎಕೆ ಮಾಡಬೇಕು? ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾದೆ, ಛಾಯಾವಿಕೃತಿ. ಭೂತ-ಪ್ರೇತಾದಿ ಪೀಡಾರೂಪಕವಾದಂತಹ ನಾನಾವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ. ಈ ವಿಧಿಯಲ್ಲಿ ಗಣಪತಿ, ನವಗ್ರಹದೇವತೆಗಳನ್ನು, ಪೀಡಾಪರಿ...

AmshAvatara

Source: AmshAvatara of Sri Narayana Panditacharya by Sri Vyasanakere Prabhanjanacharya. AmshAvatara is a unique work of Narayanapanditacharya. In ninety two shlokas, it deals with the important characters of Ramayana & Mahabharatha.The characters in these two epics are the manifestations of various gods & demons. Narayanapanditacharya has given a list of who is who (with the exception of the Lord). He has based his work on Acharya Madhva's Mahabharata tatparya Nirnaya, Harivamsa, Padma purana etc.... The list of various gods & demons are in sanskrit alphabetical order. AmshAvatara helps in understanding the Mahabharatha & Ramayana & gives an insight into the various characters & their behavior.AMSHA means fraction; AMSHI is the whole containing fraction.The Lord takes two types of forms. He Himself manifest by directlydescending known as SAAKSHAAD roopas & in some case only His presence isexperienced at times, which is otherwise known as AVESHA...

Abhimani Devatha Gana

TATTVANAMA-------------ABHIMAANI DEVATHA 1. Jeeva Svaroopa------- Brahma 2 Mahat tatva (chitta, chetana, ahamkara, buddhi, Manas) --------Brahma &Sarasvathi 3. VijnAna tattva----------- Vayu & Bharathi, Soma 4. Shvaasa (breathing)-------Mukyaprana & Bharathidevi 5. Avyakta ----------Saraswathi, Bharathi 6. Ahankara------Garuda, Shesha, Rudra 7. Manas----- Parjanya, Agni, Indra, Kama, Garuda, Shesha, Rudra 8. ALL INDRIYAS------Indra/Kama---main niyamaka. Five pancha Jnanendriyas: shrothra (ear), thvak (skin), chakshus (eye), jihva(tongue), aagrAna (nose) Five karmendriyas: vAk (mouth), pAni (hand), pAdha (legs), pAyu (anus),upastha (genital) 9. Shrothra (ear)------- Chandra, Digdevathas Directions digdEvatas a. pURva (E) iMdra b. AgnEya (SE) Agni c. daxiNa (S) yama d. nairutya (SW) niruiti e. pashchima (W) varuNa f. vAyuvya (NW) pravahavAyu g. uttara (N) kubEra h. IshAnya (NE) Rudra 10. Thwak (skin)-------- Ahankarika prana 11. Chakshus (Eyes)------- Syambhuva manu, Surya (r...

Kaksha Taratamya

1. shrI viShNu sarvottama---- Vishnu is far far superior to all in allrespects, who is only independent all are under His control. 2. shrI lakShmI nityamuktaLu----- Lakshmi who is infinite times lower toVishnu & superior to all jivas. She is equal in respect of existing space &time with Vishnu & is called as Samana. 3. brahma vAyu nirdoShigaLu------ Brahma & vAyu. Sri Vayu attains Brahma'sposition & then attains Moksha. From that point, it is said that Sri Vayu is little lower to Brahma & aslo the sAdhana for Brahma at that time is onekalpa more than Sri Vayu. They are crore times lower to Mahalakshmi. 4. sarasvatI, bhAratI (level 1-4 are called parashuklatrayaru)-----wife of Brahma & Vayu.. Since Sri Bharati attains Saraswathi's position & then attains moksha, it is spoken that bhArathi is little lower to Saraswathi. Further one kalpa sAdhana is more to Saraswathi than Bharathi. 5. garuDa, sheSha, rudra------- garuDa, SheSha attains Moksha...

Devatha / Bhagavath Roopa in Naivedya Items

ITEM---------ABHIMANI DEVATA-------------BHAGAVATHRUPA 1. Anna-----Chandra------Keshava 2. Paramanna------Bharathi------Narayana 3. Bhakshya-------Surya-------Madhava 4. Ghee------Lakshmi-------Govinda 5. Milk-------Saraswathi------Vishnu 6. Mandigey------Brahma------Madhusudana 7. Butter-------vAyu----------Trivikrama 8. Curds-------Soma, Varuna-------Vamana 9. Bele (Dhal)-------Garuda--------Sridhara 10. Green leaves-------Mitra (Surya)--------Hrishikesha 11. Vegetables-------Sesha---------PadmanAbha 12. Amla (Sour)---------Gowri--------Damodara 13. Huli------------Rudra---------Sankarshana 14. Sugar/Jaggery-----Indra-----------Vasudeva 15. Condiments (Chatni, Seasoning, flavor)-----Bruhaspathi------Pradyumna 16. Pungent (Bitter items)---------Yama---------Aniruddha 17. Asafoetida, Cardomom, mustard seeds, Kesari,jeerige----Manmatha------Purushottama 18. Fried items--------Jayantha---------Adhokshaja 19. Sesame, Pumpkin---------Daksha--------Narasimha 20. Items m...