Adhika Masa Mahatme
ಅಧಿಕಮಾಸದ ಮಹತ್ತ್ವ
ಅಧಿಕಮಾಸ ಎಂದರೇನು ?
ಯಸ್ಮಿನ್ ಮಾಸಿ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ಚ |
ಮಲಮಾಸಃ ಸ ವಿಜ್ಞೇಯಃ ಮಾಸಃ ಸ್ಯಾತ್ತು ತ್ರಯೋದಶಃ ||
- ಕಾಠಕಗೃಹ್ಯಸೂತ್ರ
ಚಾಂದ್ರೋ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕಿರ್ತಿತಃ ||
- ಬ್ರಹ್ಮಸಿದ್ಧಾಂತ( ಸ್ಮೃತಿ ಮುಕ್ತಾವಳಿ )
ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು . ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ . ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .
*********
ಮಲ(ಅಧಿಕ)ಮಾಸದ ಅರ್ಥ
ಮಲಪಕರ್ಷಣೋ ಮಾಸೋ ಮಲಮಾಸಸ್ತತೋ ಬುಧೈಃ |
ನಿರ್ಧಾರಿತೋ ವಸಿಷ್ಠಾಧೈಃ ಪುರಾಣೈರ್ವೇದಚಿಂತಕೈಃ ||
ಮಲಂ ತು.ಪಾತಕಂ ನಾಮ ಸ್ನಾನದಾನಾದಿದೀಪಕೈಃ |
ಕ್ರಿಯತೇ ಭಸ್ಮಸಾತ್ ಸರ್ವಂ ಪುರುಷೋತ್ತಮಪೂಜಕೈಃ ||
ಮಲವನ್ನು ಕಳೆಯುವ ಮಾಸ ವಾದ್ದರಿಂದ ಅಧಿಕಮಾಸಕ್ಕೆ. ಮಲಮಾಸ ಎಂದು ಹೆಸರು ಎಂಬುದಾಗಿ ಪುರಾಣ ಮತ್ತು ವೇದಗಳನ್ನು ಬಲ್ಲ ವಸಿಷ್ಠಾದಿ ಜ್ಞಾನಿಗಳು ನಿರ್ಣಯಿಸಿ ಹೇಳಿರುವರು ಮಲ ಎಂದರೆ ಪಾತಕ . ಸ್ನಾನ ದಾನ ,ದೀಪಗಳಿಂದ ಪುರುಷೋತ್ತಮನನ್ನು ಆರಾಧಿಸಿದರೆ ಎಲ್ಲ ಪಾತಕವೂ ಬೂದಿಯಾಗುವುದು (ಶುಭಕಾರ್ಯಗಳಿಗೆ ನಿಷಿದ್ಧವಾದ ಕಾರಣದಿಂದಲೂ ಇದಕ್ಕೆ ಮಲಮಾಸ ಎಂದು ಹೆಸರು ).
- ಪದ್ಮಪುರಾಣ 6 /27 ,28
ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |
ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||
ಯಾವ ತಿಂಗಳಲ್ಲಿ ರವಿಸಂಕ್ರಾಂತಿ ಇರುವುದಿಲ್ಲವೋ ಅದು ಅಧಿಕಮಾಸ; ಎರಡು ರವಿ ಸಂಕ್ರಮಣಗಳು ಬಂದರೆ ಅದು ಕ್ಷಯಮಾಸ .
- ಭವಿಷ್ಯೋತ್ತರಪುರಾಣ
ಅಧಿಕಮಾಸದ ಮಹಿಮೆ
ಪುಣ್ಯೇsಹ್ನಿ ಪ್ರಾತರುತ್ಥಾಯ ಕೃತ್ವಾ ಪೌರ್ವಹ್ಣಿಕೀ ಕ್ರಿಯಾಃ |
ಗೃಹ್ಣೀಯಾನ್ನಿಯಮಂ ಭಕ್ತ್ತ್ಯಾ ಶ್ರೀಕೃಷ್ಣಂ ಚ ಹೃದಿ ಸ್ಮರನ್ ||
ಅಧಿಕಮಾಸದ ಶುದ್ಧ ಪ್ರತಿಪದೆಯು ದಿನದಂದು ಪ್ರಾತಃಕಾಲದಲ್ಲಿ ಎದ್ದು ಪ್ರಾತರಾವಿಧಿಗಳನ್ನೆಲ್ಲ ಮುಗಿಸಿ ಶ್ರೀಕೃಷ್ಣನ ಧ್ಯಾನ ಮಾಡುತ್ತ ಭಕ್ತಿ ಯಿಂದ ಪುರುಷೋತ್ತಮ ವ್ರತದ ನಿಯಮಗಳನ್ನು ಆಚರಿಸಲು ಸಂಕಲ್ಪಿಸಬೇಕು .
ಬೃಹನ್ನಾರದೀಯ ಪುರಾಣ 22 -28
ಶಾಲಿಗ್ರಮಾರ್ಚನಂ ಕಾರ್ಯಂ ಮಾಸೇ ಪುರುಷೋತ್ತಮೇ |
ತುಲಸಿದಲ ಲಕ್ಷೇಣ ತಸ್ಯಪುಣ್ಯಮನಂತಕಮ್ ||
ಅಧಿಕಮಾಸದಲ್ಲಿ ಒಂದು ಲಕ್ಷ ತುಳಸಿ ಆರ್ಚನೆಯಿಂದ ಸಾಲಿಗ್ರಾಮ ಪೂಜೆಯನ್ನು ಮಾಡಿದರೆ ಅನಂತ ಪುಣ್ಯ ಪ್ರಾಪ್ತಿಯಾಗುವುದು .
ಬೃಹನ್ನಾರದೀಯ ಪುರಾಣ 22-32
ದುಸ್ವಪ್ನಂ ಚೈವ ದಾರಿದ್ರ್ಯಂ ದುಷ್ಕೃತಂ ತ್ರಿವಿಧಂ ಚ ಯತ್ |
ತತ್ ಸರ್ವಂ ವಿಲಯಂ ಯಾತಿ ಕೃತೆ ಶ್ರೀಪುರುಷೋತ್ತಮೇ ||
ಅಧಿಕಮಾಸದ ಆಚರಣೆಯಿಂದ ದುಸ್ವಪ್ನ ದಾರಿದ್ರ್ಯಾ ದುಷ್ಕೃತ (ಕಾಯಿಕ , ವಾಚಿಕ ,ಮಾನಸಿಕ )ಎಂಬಮೂರುವಿಧ ತಾಪಗಳು ನಾಶವಾಗುತ್ತವೆ .
ಬೃಹನ್ನಾರದೀಯ ಪುರಾಣ 22 -35
ಪುರೂಷೋತ್ತಮ ಸೇವಾಯಾಂ ನಿಶ್ಚಲಂ ಹರಿಸೇವಕಂ |
ವಿಘ್ನಾದ್ರಕ್ಷಂತಿ ಶಕ್ರಾದ್ಯಾಃ ಪುರುಷೋತ್ತಮತುಷ್ಟಯೇ ||
ಅಧಿಕಮಾಸವನ್ನು ನಿಷ್ಠೆಯಿಂದ ಶ್ರೀಹರಿಪ್ರೀತಿಗೆಂದು ಆಚರಿಸುವ ಹರಿಭಕ್ತನಿಗೆ ವಿಘ್ನಗಳು ಒದಗದಂತೆ ಇಂದ್ರಾದಿದೇವತೆಗಳು ರಕ್ಷಿಸುವರು .
-ಬೃಹನ್ನಾರದೀಯ ಪುರಾಣ 22 -33
ಪುರುಷೋತ್ತಮಂ ಪ್ರಿಯಮುಂ ಪರಮಾದರೇಣ
ಕುರ್ಯಾದನನ್ಯ ಮನಸಾ ಪುರುಷೋತ್ತಮಮೇ ಯಃ |
ಪುರುಷೋತ್ತಮಃ ಪ್ರಿಯತಮಃ ಪುರುಷಃ ಸಭೂತ್ವಾ
ಪುರುಷೋತ್ತಮೇನ ರಮತೇ ರಸಿಕೇಶ್ವರೇಣ ||
ಪರಮಾತ್ಮನಿಗೆ ಅತ್ಯಂತ ಪ್ರಿಯಕರವಾದ ಈ ಪುರುಷೋತ್ತಮಾಸವನ್ನು ಯಾರು ಪರಮಾದರದಿಂದ ಭಕ್ತಿಯಿಂದ ಅನನ್ಯ ಮನಸ್ಕರಾಗಿ ಸೇವಿಸುವರೂ ಅವರು ಇಹಲೋಕದಲ್ಲಿ ಅತ್ಯಂತ ಕೀರ್ತಿಶಾಲಿಗಳಾಗಿ ಪುರುಷೋತ್ತಮನ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ ಪರಲೋಕದಲ್ಲಿ ಪುರುಷೋತ್ತಮನ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ ಪರಲೋಕದಲ್ಲಿ ಪುರುಷೋತ್ತಮನ ಸನ್ನಿಧಾನವನ್ನು ಹೊಂದಿ ಸುಖದಿಂದ ಇರುವರು .
ಬೃಹನ್ನಾರದೀಯ ಪುರಾಣ 22 -39
ಅಧಿಕಮಾಸದ ಮುಖ್ಯ ಕರ್ತವ್ಯ ಮತ್ತು ಅದರ ಫಲ
ಅಧಿಮಾಸೇ ಸಂಪ್ರಾಪ್ತೆ ಶುಭೇ ಸೂರ್ಯಾಧಿದೈವತೆ |
ತ್ರಯಸ್ತ್ರಿಂಶದಪೂಪಾಂಶ್ಚ ದಾನಾರ್ಹಾಂಶ್ಚ ದಿನೇ ದಿನೇ||
ಸುವರ್ಣ ಗುಡಸಂಯುಕ್ತಾನ್ ಕಾಂಸ್ಯಪಾತ್ರೇ ನಿಧಾಯಚ |
ವಿಷ್ಣುಪ್ರೀತ್ಯೈ ಪ್ರದದ್ಯಾಚ್ಚ ಪೃಥ್ವಿ ದಾನಫಲಂ ಲಭೇತ್ ||
ದ್ವಾದಶ್ಯಾಂ ಪೌರ್ಣಮಾಸ್ಯಾಂ ವಾ ಕ್ಷಯೇ ಪಾತೇ ಶುಭೇsಹ್ನಿ ವಾ |
ನಿಷ್ಕಿಂಚನೇನ ದಾತವ್ಯಾ ಘೃತಶರ್ಕರಯಾ ಸಹ ||
ಯಾವಂತಿ ಚೈವ ಛಿದ್ರಾಣಿ ತೇಷ್ವಪೂಪೇಷು ಪಾಂಡವ |
ತಾವದ್ವರ್ಷಸಹಸ್ರಾಣಿ ಸ್ವರ್ಗಲೋಕೆ ಮಹಿಯತೆ ||
ಅಧಿಕಮಾಸದಲ್ಲಿ ದ್ವಾದಶಿ ,ಹುಣ್ಣಿಮೆ ಅಥವಾ ಯಾವುದೇ ಶುಭದಿನಗಳಲ್ಲಿ ಬೆಲ್ಲ ತುಪ್ಪಗಳೋಂದಿಗೆ ಕೂಡಿದ ಮೂವತ್ತುಮೂರು ಅಪೂಪಗಳನ್ನು ಕಂಚಿನಪಾತ್ರೆಯಲ್ಲಿರಿಸಿ ಸುವರ್ಣ ಸಮೇತ ಯೋಗ್ಯ ಬ್ರಾಹ್ಮಣರಿಗೆ ಪ್ರತಿದಿನ ದಾನಕೂಡಬೇಕು .ಆದರಿಂದ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲ ಸ್ವರ್ಗದಲ್ಲಿ ವಾಸಿಸುವ ಪುಣ್ಯಲಭಿಸುತ್ತದೆ. ಮೂವತ್ತುಮೂರು ದೇವತೆಗಳನ್ನು ಉದ್ದೇಶಿಸಿ ಮಾಡುವ ಅಪೂಪದಾನವು ಪೃಥ್ವಿದಾನದ ಫಲವನ್ನು ತಂದುಕೂಡುತ್ತದೆ .
-ಭವಿಷ್ಯೋತ್ತರಪುರಾಣ
ಅಸಂಕ್ರಾಂತೇ ತು ಸಂಪ್ರಾಪ್ತೆ ಮಾಮುದ್ದಿಶ್ಯ ವ್ರತಂ ಚರೇತ್|
ಅಧಿಮಾಸಸ್ಯಾಧಿಪತಿರಹಂ ವೈ ಪುರುಷೋತ್ತಮಃ ||
ಸ್ನಾನಂ ದಾನಂ ಜಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಂ |
ದೇವಾರ್ಚಾಂ ಚ ತಥಾ ಚೈವ ಯೇsರ್ಚಯಂತಿ ನರಾ ಇಹ ||
ಅಕ್ಷಯಂ ತದ್ಭವೇತ್ ಸರ್ವಂ ಮಾಮುದ್ದಿಶ್ಯ ಚ ಯತ್ಕೃತಮ್||
ಅಧಿಕಮಾಸದಲ್ಲಿ ಸ್ನಾನ ,ದಾನ, ಜಪ ,ಹೋಮ ,ಸ್ವಾಧ್ಯಾಯ ತಿತೃತರ್ಪಣಂ ದೇವಪೂಜೆ ಇವುಗಳಿಂದ ಶ್ರೀಹರಿಯನ್ನು ಆರಾಧಿಸುವವನು ಅಕ್ಷಯಪುಣ್ಯವನ್ನು. ಪಡೆದುಕೊಳ್ಳುವನು .
-ಪದ್ಮಪುರಾಣ 1-15-17
**********
|| ಅಧಿಕಮಾಸದಲ್ಲಿ ಅಪೂಪದಾನದ ಮಹತ್ವ ||
ಅಧಿಕಮಾಸದಲ್ಲಿ ಪ್ರತಿದಿನವೂ ಅಪೂಪ ದಾನವು ವಿಹಿತ
ಅಧಿಮಾಸೇ ತು ಸಂಪ್ರಾಪ್ತೇ ಗುಡಸರ್ಪಿಯುತಾನಿ ಚ |
ತ್ರಯಾಸ್ತ್ರಿಂಶದಪೂಪಾನಿ ದಾತವ್ಯಾನಿ ದಿನೇ ದಿನೇ ||
ಅಧಿಕಮಾಸವು ಬಂದಾಗ. ಬೆಲ್ಲತುಪ್ಪಗಳೂಂದಿಗೆ ಕೂಡಿದ ಮೂವತ್ಮೂರು ಅಪೂಪಗಳನ್ನು ಪ್ರತಿನಿತ್ಯವೂ ದಾನಮಾಡಬೇಕು (ಪ್ರತಿದಿನವೂ ಕೂಡುವ ಅವಕಾಶವನ್ನು ಅನೇಕ ಕಾರಣಗಳಿಂದಾಗಿ ಹೊಂದವದರು ಆ ತಿಂಗಳಲ್ಲಿ ಒಂದು ದಿನವಾದರೂ ಕೂಡಲೇಬೇಕು.)
|| ಅಧಿಕಮಾಸದಲ್ಲಿ ಅಪೂಪದಾನದ ವಿಶೇಷ ||
ತ್ರಯಸ್ತ್ರಿಂಶದಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ |
ಸಘೃತಂ ಸಹಿರಣ್ಯಂ ಚ ಬ್ರಾಹ್ಮಣಾಯ ನಿವೇದಯೇತ್ ||
ಮೂವತ್ಮೂರು ಅಪೂಪ(ಅತಿರಸ )ಗಳನ್ನು ಕಂಚಿನಪಾತ್ರೆಯಲ್ಲಿರಿಸಿ ತುಪ್ಪ ಮತ್ತು ಚಿನ್ನದ ಸಮೇತ
ಯೋಗ್ಯಬ್ರಾಹ್ಮಣನಿಗೆ ಸಮರ್ಪಿಸಬೇಕು .
-ಭವಿಷ್ಯ ಪುರಾಣ
****************"
ಅಪೂಪಗಳನ್ನು ಶ್ರೀಹರಿಗೆ ಸಮರ್ಪೀಸುವ ವಿಧಿ
ಆಚ್ಛಾದ್ಯ ವಸ್ತ್ರಯುಗ್ಮೇನ ಪೀತೇನ ಚ ಯಥಾವಿಧಿ |
ವಿಷ್ಣವೇ ಚ ತತೋ ದದ್ಯಾದುಪವೀತೆ ಚ ಶೋಭನೇ ||
ಚಂದನೇನ ಸುಗಂಧೇನ ಪುಷ್ಪೈರ್ನಾನಾವಿಧೈನೃಪ|
ಧೂಪೈರ್ನಾನಾವಿದೈರ್ದೀಪೈಃ ಪೂಜಯೇಚ್ಚ ಯಥಾವಿಧಿ ||
ಮಿಷ್ಟಾನ್ನೈಶ್ಚೈವ ನೈವೇದ್ಯೈನಾಗವಲ್ಲಿ ದಲಾನ್ವಿತತೈಃ |
ಘಂಟಾಮೃದಂಗನಿರ್ಘೋಷೈಃ ಶಂಖದ್ವನಿಸಮನ್ವಿತೈಃ
ಅರಾರ್ತಿಕಂ ಪ್ರಕುರ್ವೀತ ಕರ್ಪೂರಾಗುರುಗುರುಚಂದನೈಃ |
ಪ್ರದಕ್ಷಿಣನಮಸ್ಕಾರಾನ್ ಮಃತ್ರಪುಷ್ಪಂ ಯಥಾವಿಧಿ ||
ಮೂವತ್ತುಮೂರು ಅಪೂಪಗಳನ್ನು ಒಂದು ಎರಡು ಪೀತಾಂಬರಗಳಿಂದ ಮುಚ್ಚಬೇಕು ಅವುಗಳನ್ನು ಎರಡು ನೂತನ ಯಜ್ಞೋಪವೀತಗಳೋಂದಿಗೆ ಶ್ರೀಹರಿಗೆ ಸಮರ್ಪಿಸಬೇಕು. ಶ್ರೀಗಂಧ ಬಗೆ ಬಗೆಯ ಸುಗಂಧ ಪುಷ್ಪಗಳು ಹಾಗೂ ದೂಪ ದಿಪಗಳಿಂದ ಪೂಜಿಸಬೇಕು. ಮೃಷ್ಟಾನ್ನಯುಕ್ತವಾದ ನೈವೇದ್ಯವನ್ನು ತಾಂಬೂಲದೂಂದಿಗೆ ಸಮರ್ಪಿಸಬೇಕು.ಘಂಟೆ ಮೃದಂಗ ,ಶಂಖ ಮೊದಲಾದ ಘೋಷಗಳನ್ನು ಮಾಡಬೇಕು. ಕರ್ಪೂರ ,ಅಗರು. ಚಂದನಗಳಿಂದ ಕೂಡಿದ ಮಂಗಳಾರತಿಯನ್ನು. ಸಮರ್ಪಿಸಬೇಕು .ಬಳಿಕ ಮಂತ್ರಪುಷ್ಪವನ್ನೂ.ಪ್ರದಕ್ಷಿಣೆ ನಮಸ್ಕಾರಗಳನ್ನೂ. ಅರ್ಪಿಸಬೇಕು .
-ಪದ್ಮಪುರಾಣ
**************
|| ಅಪೂಪದಾನ ಮಂತ್ರ ||
ವಿಷ್ಣುರೂಪಿ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ |
ಅಪೂಪಾನ್ನ ಪ್ರದಾನೇನ ಮಮ ಪಾಪಂ ವ್ಯಪೋಹತು ||
ನಾರಾಯಣ ಜಗದ್ಭೀಜ ಬಾಸ್ಕರ ಪ್ರತಿರೂಪಧೃಕ್ |
ವ್ರತೇನಾನೇನ ಪುತ್ರಾಂಶ್ಚ ಸಂಪದಂ ಚಾಭಿವರ್ಧಯ ||
ಯಸ್ಯ ಹಸ್ತೇ ಗದಾ ಚಕ್ರೋ ಗರುಡೋ ಯಸ್ಯ ವಾಹನಮ್|
ಶಂಖಃ ಕರತಲೇ ಯಸ್ಯ ಸ ಮೇ ವಿಷ್ಣುಃ ಪ್ರಸಿದತು ||
ಕಲಾಕಾಷ್ಠದಿ ರೂಪೇಣ ನೀಮೇಷಘಟಿಕಾದಿನಾ |
ಯೋ ವಂಚಯತಿ ಭೂತಾನಿ ತಸ್ಮೈಕಾಲತ್ಮನೇ ನಮಃ ||
ಕುರುಕ್ಷೇತ್ರಮಯೋ ದೇಶಃ ಕಾಲಃ ಪರ್ವ ದ್ವಿಜೋಹರಿಃ |
ಪೃಥ್ವಿ ಸಮಮಿದಂ ದಾನಂ ಗೃಹಾಣ ಪುರುಷೋತ್ತಮ ||
ಮಲಾನಾಂ ಚ ವಿಶುದ್ಧ್ಯರ್ಥಂ ಪಾಪಪ್ರಶಮನಾಯಚ |
ಪುತ್ರಪೌತ್ರಾದಿವೃಧ್ಯರ್ಥಂ ತೇನ ದಾಸ್ಯಮಿ ಭಾಸ್ಕರ ||
ವಿಷ್ಣುರೂಪದ ಸಹಸ್ರಕಿರಣನಾದ ಸೂರ್ಯ ಸರ್ವಪಾಪಗಳನ್ನು ಪರಿಹರಿಸುವನು ಈ ಅಪೂಪದಾನದಿಂದ ನನ್ನ ಪಾಪವನ್ನು ಪರಿಹರಿಸುವವನು . ಈ ಅಪೂಪದಾನದಿಂದ ನನ್ನ ಪಾಪವನ್ನು ಪರಿಹರಿಸಲಿ; ಜಗತ್ಕಾರಣನಾದ ಶ್ರೀನಾರಾಯಣನಾದ ನೀನು ಸೂರ್ಯನ ಬಿಂಬ ;ಈ ವ್ರತದಿಂದ ಪುತ್ರರನ್ನು ಸಂಪತ್ತನ್ನು ಅಭಿವೃದ್ಧಿಪಡಿಸು .
ಯಾರ ಕೈಯಲ್ಲಿ ಗದಾಚಕ್ರಗಳಿವೆಯೋ ,ಯಾರ ವಾಹನವು ಗರುಡನೋ ,ಯಾರ ಕರತಲದಲ್ಲಿ ಶಂಖವಿದೆಯೋ ಅಂಥ ವಿಷ್ಣುವು ನನ್ನಲ್ಲಿ ಪ್ರಸನ್ನನಾಗಲಿ .ಕಲಾ ಕಾಷ್ಠ ನಿಮೇಷ ,ಘಳಿಗೆ ಮೊದಲಾದ ರೂಪಗಳನ್ನು ನೆಲೆಸಿದ್ದು ಪ್ರಾಣಿಗಳನ್ನು ಮೋಸಗೊಳಿಸುವ (ನಿಯಂತ್ರಿಸುವ) ಕಾಲರೂಪಿಯಾದ ಶ್ರೀಹರಿಗೆ ನಮಸ್ಕಾರ .ಅಧಿಕಮಾಸದ ಕಾಲ ,ಪರ್ವಕಾಲ ;ಪ್ರತಿಸ್ಥಳವೂ ಕುರುಕ್ಷೇತ್ರ ; ಪ್ರತಿಯೊಬ್ಬ ವಿಪ್ರನಲ್ಲೂ ಶ್ರೀಹರಿಯ ಸನ್ನಿಧಾನ .ಈ ದಾನವಂತೂ ಪೃಥ್ವಿದಾನಕ್ಕೆ ಸಮಾನ . ಪುರುಷೋತ್ತಮರೂಪಿ ಪರಮಾತ್ಮನೇ ಇದನ್ನು ಸ್ವಿಕರಿಸು .ದೋಷಗಳ ಪಾಪಗಳ ನಾಶಕ್ಕೂಸ್ಕಾರ ಪುತ್ರಪೌತ್ರಾದಿಗಳ ಅಭಿವೃದ್ಧಿಗೊಸ್ಕರ ಹೇ ಬಾಸ್ಕರರೂಪಿ ವಿಷ್ಣುವೇ! ನಾನು ಇದನ್ನು ನಿನಗೆ ಸಮರ್ಪೀಸುತ್ತಿರುವೇನು .
****************
|| ಅಪೂಪದಾನಕಾಲದಲ್ಲಿ ಚಿಂತಿಸಬೇಕಾದ ಭಗವದ್ರೂಪಗಳು ||
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಹರಿಂ ಕೃಷ್ಣಮಧೋಕ್ಷಜಮ್ |
ಕೇಶವಂ ಮಾಧವಂ ರಾಮಮಚ್ಯುತ ಪುರುಷೋತ್ತಮಂ ||
ಗೋವಿಂದಂ ವಾಮನಂ ಶ್ರೀಶಂ ಶ್ರೀಕಂಠಂ ವಿಶ್ವಸಾಕ್ಷಿಣಮ್ ||
ನಾರಾಯಣಂ.ಮಧುರಿಪುಮನಿರುದ್ಧಂ ತ್ರಿವಿಕ್ರಮಮ್||
ವಾಸುದೇವಂ ಜಗದ್ಯೋನಿಮನಂತಂ ಶೇಷಶಾಯಿನಮ್ |
ಸಂಕರ್ಷಣಂ ಚ ಪ್ರದ್ಯುಮ್ನಂ ದೈತ್ಯಾರಿಂ ವಿಶ್ವತೋಮುಖಮ್ ||
ಜನಾರ್ದನಂ ಧರಾವಾಸಂ ದಾಮೋದರಮಘಾರ್ದನಮ್ ||
ಶ್ರೀಪತಿಂ ಚ ತ್ರಯಸ್ತ್ರಿಂಶದುದ್ದಿಶ್ಯ ಪ್ರತಿನಾಮಭಿಃ ||
ಮಂತ್ರೇರೇತೈಶ್ಚ ಯೋ ದದ್ಯಾತ್ ತ್ಯಯಸ್ತ್ರಿಂಶದಪೂಪಕಮ್ |
ಪ್ರಾಪ್ನೋತಿ ವಿಪುಲಾಂ ಲಕ್ಷ್ಮೀಂ ಪುತ್ರಪೌತ್ರಾದಿಸಂತತಿಮ್ ||
ವಿಷ್ಣು ಜಿಷ್ಣುಮಹಾವಿಷ್ಣು ಹರಿ ಅಧೋಕ್ಷಜ ಕೇಶವ ಮಾಧವ ರಾಮ ಅಚ್ಯುತ ಪುರುಷೋತ್ತಮ ಗೋವಿಂದ ವಾಮನ ಶ್ರೀಶ ಶ್ರೀಕಂಠ ವಿಶ್ವಸಾಕ್ಷಿ ನಾರಾಯಣ ಮಧುಸೂದನ ಅನಿರುದ್ಧ ತ್ರಿವಿಕ್ರಮ ವಾಸುದೇವ ಜಗದ್ಯೋನಿ ಅನಂತ ಶೇಷಶಾಯಿ ಸಂಕರ್ಷಣ ಪ್ರದ್ಯುಮ್ನ ದೈತ್ಯಾರಿ ವಿಶ್ವತೋಮುಖ ಜನಾರ್ದನ ಧರಾವಾಸ ದಾಮೋದರ ಅಘಾರ್ಧನ ಶ್ರೀಪತಿ -ಇವು.ಮೂವತ್ತುಮೂರು. ಅಪೂಪಗಳಲ್ಲಿ ಚಿಂತಿಸಬೇಕಾದ. ಹರಿಯರೂಪಗಳು ಪ್ರತಿಯೊಂದು ಅಪೂಪಗಳಲ್ಲಿ. ಚಿಂತಿಸಬೇಕಾದ ಶ್ರೀಹರಿಯ ರೂಪಗಳು ಪ್ರತಿಯೊಂದು ಅಪೂಪದಲ್ಲಿ ನಾಮೋಚ್ಚಾರಣೆ -ಪೂರ್ವಕ ಶ್ರೀಹರಿಯನ್ನು ಚೀಂತಿಸಿ ದಾನನೀಡುವವರು. ಅಪಾರವಾದ ಸಂಪತ್ತನ್ನು ಪುತ್ರ ಪೌತ್ರ ಮೊದಲಾದ ಸಂತತಿಯನ್ನು ಪಡೆಯುವರು .
(ಪದ್ಮಪುರಾಣದಲ್ಲಿ ಧರಾವಾಸ ,ದಾಮೋದರ , ಹಾಗೊ ಜನಾರ್ಧನ ಎಂಬ ಮೂರುನಾಮಗಳ ಬದಲಿಗ ಧರಾಧಾರ ,ಶ್ರೀಧರ, ಗರುಡದ್ವಜ ,ಎಂಬ ನಾಮಾಂತರಗಳು ಉಲ್ಲೇಖಿಸಲ್ಪಟ್ಟಿವೆ .)
*************
|| ಮೂವತ್ತುಮೂರು ದೇವತೆಗಳು ||
1-8 .ಅಷ್ಟವಸುಗಳು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು
1)ದ್ರೋಣ(ವಿಷ್ಣು)
2)ಧ್ರುವ (ಜಿಷ್ಣು)
3)ದೋಷ (ಮಹಾವಿಷ್ಣು)
4)ಅರ್ಕ (ಹರಿ)
5)ಅಗ್ನಿ (ಕೃಷ್ಣ)
6)ದ್ಯು (ಅಧೋಕ್ಷಜ )
7)ಪ್ರಾಣ (ಕೇಶವ )
8)ವಿಭಾವಸು (ಮಾಧವ)
9-19 . ಏಕಾದಶರುದ್ರರು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು.
9)ಭೀಮ (ರಾಮ)
10)ರೈವತ (ಅಚ್ಯುತ)
11)ಓಜ (ಪುರುಷೋತ್ತಮ)
12)ಅಜೈಕಪಾತ್ (ಗೋವಿಂದ)
13)ಮಹಾನ್ (ವಾಮನ)
14)ಬಹುರೂಪ (ಶ್ರೀಶ)
15)ಭವ (ಶ್ರೀಕಂಠ)
16)ವಾಮದೇವ (ವಿಶ್ವಸಾಕ್ಷೀ)
17)ಉಗ್ರ (ನಾರಾಯಣ
18)ವೃಷಕಪಿ (ಮಧುರಿಪು)
19)ಅಹಿರ್ಬುದ್ನಿ (ಅನಿರುದ್ಧ)
20-31.ದ್ವಾದಶಾದಿತ್ಯರು ಹಾಗೂ ಅವುಗಳ ಅಂತರ್ಯಾಮಿ ರೂಪಗಳು .
20)ವಿವಾಸ್ವಾನ್ (ತ್ರಿವಿಕ್ರಮ)
21ಅರ್ಯಮ (ವಾಸುದೇವ)
22)ಪೂಷಾ (ಜಗದ್ಯೋನಿ)
23)ತ್ವಷ್ಟೃ (ಅನಂತ)
24)ಸವಿತೃ (ಶೇಷಶಾಯಿ)
25)ಭಗ (ಸಂಕರ್ಷಣ)
26)ಧಾತೃ(ಪ್ರದ್ಯುಮ್ನ)
27)ಪರ್ಜನ್ಯ (ದೈತ್ಯಾರಿ)
28)ವರುಣ (ವಿಶ್ವತೋಮುಖ)
29)ಮಿತ್ರ (ಜನಾರ್ದನ)
30)ಶಕ್ರ (ಧರಾವಾಸ)
31)ಉರುಕ್ರಮ (ದಾಮೋದರ)
32)ಪ್ರಜಾಪತಿ (ಅಘಾರ್ಧನ)
33) ವಷಟ್ಕಾರ (ಶ್ರೀಪತಿ)
***********
ಅಧಿಕಮಾಸದಲ್ಲಿ ಕಂಚಿನಪಾತ್ರೆಯ ದಾನದ ಮಹತ್ವ
ಕಾಂಸ್ಯಾನಿ ಸಂಪುಟಾನ್ಯೇವ ತ್ರಿಂಶದ್ದೇಯಾನಿ ಸರ್ವಥಾ |
ತ್ರಯಸ್ತ್ರಿಂಶದಪೂಪೈಶ್ಚ ಮಧ್ಯೆ ಸಂಪೂರಿತಾನಿ ಚ ||
ಅಧಿಕಮಾಸದಲ್ಲಿ ಕಂಚಿನ ಮೂವತ್ತು ಸಂಪುಷ್ಟಗಳನ್ನು ಪ್ರತಿಯೊಂದರಲ್ಲಿ ಮೂವತ್ತುಮೂರು ಅಪೂಪ (ಅನಾರಸ)ಗಳನ್ನು. ಹಾಕಿ ದಾನಮಾಡಬೇಕು .
ಪ್ರತ್ಯಪೂಪಂ ತು ಯಾವಂತಿ ಛಿದ್ರಾಣಿ ಪೃಥಿವೀಪತೇ |
ತಾವದ್ವರ್ಷಸಹಸ್ರಾಣಿ ವೈಕುಂಠೇ ವಸಂತೇ ನರಃ ||
ಶತಃ ಪ್ರಯಾತಿ ಗೋಲೋಕಂ ನಿರ್ಗುಣಂ ಯೋಗಿದುರ್ಲಭಂ ||
ಯದ್ಗತ್ವಾ ನ ನಿವರ್ತಂತೇ ಜ್ಯೋತಿರ್ಧಾಮ ಸನಾತನಮ್ ||
ದಾನನೀಡಿದ ಅಪೂಪಗಳಲ್ಲಿ ಪ್ರತಿಯೊಂದರಲ್ಲಿ ಎಷ್ಟು ಛಿದ್ರಗಳಿರುವುವೋ ಅಷ್ಟು ವರ್ಷಗಳ ಕಾಲ ಕಂಚಿನ ಸಂಪುಟಗಳಲ್ಲಿ ಅಪೂಪದಾನ ಮಾಡುವವರು ವೈಕುಂಠದಲ್ಲಿ ನೆಲೆಸುವರು ಅಪ್ರಾಕೃತವಾದ ಯೋಗಿಗಳಿಗೊ ದುರ್ಲಭವಾದ ವೈಕುಂಠ ಅವರಿಗೆ ಲಭಿಸುವುದು .
ಬೃಹನ್ನಾರದೀಯ ಪುರಾಣ 25 -38,39,40
ಸ್ತ್ರೀಯರಿಗೂ ಅಧಿಕಮಾಸದ ಆಚರಣೆ ವಿಹಿತ
ಯಃ ಸ್ತ್ರೀಯಃ ಸುಭಗಾಃ ಪುತ್ರಸುಖಸೌಭಾಗ್ಯಹೇತವೇ |
ಪುರುಷೋತ್ತಮೇ ಕರಿಷ್ಯಂತಿ ಸ್ನಾನದಾನಾರ್ಚನಾದಿಕಮ್ ||
ತಾಸಾಂ ಸೌಭಾಗ್ಯ ಸಂಪತ್ತಿಸುಖಪುತ್ರಪ್ರದೋ ಹ್ಯಹಮ್ ||
ಪುತ್ರಸುಖ ಹಾಗೂ ಸೌಭಾಗ್ಯಗಳಿಗಾಗಿ ಅಧಿಕಮಾಸದಲ್ಲಿ ಸ್ನಾನ ,ದಾನ, ಹಾಗೂ ಆರ್ಚನೆ ಮೊದಾಲದುವುಗಳನ್ನು. ಆಚರಿಸುವ ಸ್ತ್ರೀಯರು ಲಕ್ಷಣವತಿ ಎನ್ನಿಸುವರು ಅವರಿಗೆ ಶ್ರೀಹರಿಯು ಸೌಭಾಗ್ಯ ,ಸಂಪತ್ತು ಸುಖ ಹಾಗೂ ಸಂತತಿಯನ್ನು ಕರುಣಿಸುವರು .
ಬೃಹನ್ನಾರದೀಯ ಪುರಾಣ 7 -36
ಮಲಮಾಸವ್ರತಂ ನಾರೀ ಕರೋತೀಹ ಭಾರತ |
ದಾರಿದ್ರ್ಯಂ ಪುತ್ರಶೋಕಂ ತು ನ ವೈದವ್ಯಂ ಲಭೇತ ಸಾ ||
ಮಲ (ಅಧಿಕ)ಮಾಸ ವ್ರತವನ್ನು ಆಚರಿಸುವ ಸ್ತೀಯು ದಾರಿದ್ರ್ಯ ಪುತ್ರಶೋಕ ,ವೈಧವ್ಯಗಳನ್ನು ಹೊಂದಲಾರಳು .
ಭವಿಷ್ಯೋತ್ತರಪುರಾಣ 84 -85
***********"
ಅಧಿಕಮಾಸದಲ್ಲಿ ನಿಷಿದ್ಧಕಾರ್ಯಗಳು
ಅನಿತ್ಯಮನಿಮಿತ್ತಂ ಚ ದಾನಂ ಚ ಮಹಾದಾನಾದಿಕಮ್
ಅಗ್ನ್ಯಾಧಾನಧ್ವರಾ ಪೂರ್ವತೀರ್ಥ ಯಾತ್ರಾ ಮರೇಕ್ಷಣಂ ||
ದೇವಾರಾಮತಟಾಕಾದಿಪ್ರತಿಷ್ಠಾಂ ಮೌಂಜಿಬಂಧನಮ್ |
ಆಶ್ರಮಸ್ವೀಕೃತಿಂ ಕಾಮ್ಯವೃಷೋತ್ಸರ್ಗಂ ಚ ನಿಷ್ಕ್ಕ್ರಮ ಮ್ ||
ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||
ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಗ್ರಹಾಣಾಂ ಚ ಪ್ರವೇಶನಮ್ ||
ಸ್ನಾನಂ ವಿವಾಹಂ ನಾಮಾತಿಪನ್ನಂ ದೇವಮಹೋತ್ಸವಮ್ |
ವ್ರತರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||
ಪ್ರಾಯಶ್ಚಿತ್ತಂ ಚ ಸರ್ವಸ್ಯ ಮಲಮಾಸೇ ವಿವರ್ಜಯೇತ್ ||
ತುಲಾಪುರುಷದಾನದಿ ಮಹಾದಾನಗಳು ಅಗ್ನ್ಯಾಧಾನ ,ಯಜ್ಞ ,ಉದ್ಯಾನವನಗಳ ನಿರ್ಮಾಣ ಕೆರೆ ಕಟ್ಟಿಸುವುದು ,ಉಪನಯನ , ಸಂನ್ಯಾಸ ಸ್ವೀಕಾರ ,ಜ್ಯೋತಿಷ್ಟೋಮಾದಿ ಕಾಮ್ಯಕಾರ್ಮಗಳು ಮಗುವನ್ನು. ಮೊದಲಬಾರಿಗೆ ಮನೆಯಿಂದ ಹೊರಕ್ಕೆ ಕರೆದೊಯ್ಯುವ ಕಾರ್ಯ ,ಚೌಲ ,ಉಪನಯನ ,ವಿಶೇಷರೀತಿಯ ವ್ರತಗಳು ,ಅನ್ನಪ್ರಾಶನ ,ಗೃಹಾರಂಭ ,
ಗೃಹಪ್ರವೇಶ ,ವಿಶೇಷ ತೀರ್ಥಸ್ನಾನ ವಿವಾಹ ,ಪಾಪಗಳಿಗೆ ಪ್ರಾಯಶ್ಚಿತ್ತ ,ಈ ಕಾರ್ಯಗಳನ್ನು.ಅಧಿಕಮಾಸದಲ್ಲಿ ಮಾಡಕೊಡದು .(ಅಧಿಕಮಾಸದಲ್ಲಿ ಬಿಡುವ ಈ ಮೇಲಿನ ಕಾರ್ಯಗಳನ್ನು ಮುಂದೆಶುದ್ಧಮಾಸದಲ್ಲಿಯೇ ಮಾಡಬೇಕು..)ಅಧಿಕಮಾಸಕ್ಕಿಂತ ಮುಂಚಿತವಾಗಿ ಪ್ರಾರಂಭಿಸಿದ (ವಿಷ್ಣುಪಂಚಕಾದಿ) ವ್ರತ ಮತ್ತು ವೈಶಾಖ ಸ್ನಾನಾದಿಕಾರ್ಯಗಳನ್ನು ಮಾತ್ರ ಅಧಿಕಮಾಸದಲ್ಲಿ ಮುಂದುವರಿಸಬೇಕು.
-ಬೃಹಸ್ಪತಿಃ(ಸ್ಮೃತಿಮುಕ್ತಾವಳೀ)
ಮಲ್ಲಿಮ್ಲುಚೇತು ಸಂಪ್ರಾಪ್ತೇ ಕ್ರಿಯಾ ಸರ್ವಾಃಪರಿತ್ಯಜೇತ್ |
ಪಿತೃಕಾರ್ಯಂ ತು ಸಂಪ್ರಾಪ್ತೇ ತೀರ್ಥಯಾತ್ರಾವ್ರತಾದಿಕಮ್ ||
ಕ್ಷೌರಂ ಮೌಂಜಿವಿವಾಹೌ ಚ ವ್ರತಂ ಕಾಮ್ಯೋಪವಾಸಕಮ್ |
ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೈಶ್ಚ ವಿಶೇಷತಃ ||
ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ ,ತೀರ್ಥಶ್ರಾದ್ಧ ,ಕ್ಷೌರ ,ಉಪನಯನ ,ವಿವಾಹ ಕಾಮ್ಯವ್ರತ , ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು .
-ಬೃಹನ್ನಾರದೀಯ ಪುರಾಣ 3-37 ,38
***********
ಕ್ಷೌರಂ ಮೌಂಜಿ ಕಾಮ್ಯೋಪವಾಸಕಮ್ |
ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೇನ ವಿಶೇಷತಃ ||
ಮಲ(ಅಧಿಕ)ಮಾಸದಲ್ಲಿ ಕ್ಷೌರ ,ಉಪನಯನ ,ವಿವಾಹ ,ಕಾಮ್ಯವ್ರತ ಹಾಗೂ ಕಾಮ್ಯೋಪವಾಸಗಳನ್ನು ಗೃಹಸ್ಥನಾದವನು ವಿಶೇಷವಾಗಿ ತೊರೆಯಬೇಕು .
-ಭವಿಷ್ಯೋತ್ತರಪುರಾಣ
ಅಧಿಕಮಾಸದ ವಿಶೇಷಪರ್ವಕಾಲಗಳು
ವೈಧೃತಿಶ್ಚ ವ್ಯತಿಪಾತೋ ರಾಕಶ್ಚೈವ ಕುಹೂಸ್ತಥಾ |
ದ್ವಾದಶೀ ಪಂಚಪರ್ವಣಿ ಪರಂಶ್ರೇಷ್ಠಾನ್ಯನುಕ್ರಮಾತ್ ||
ವೈಧೃತಿ ವ್ಯತಿಪಾತ (ಎಂಬ ಎರಡು ಯೋಗಗಳು )ಹುಣ್ಣಿಮೆ ಅಮಾವಾಸ್ಯೆ ಹಾಗೂ ದ್ವಾದಶೀ ಈ ಐದು ಅನುಕ್ರಮವಾಗಿ ಹೆಚ್ಚು ಹೆಚ್ಚು ಮಹತ್ವದ ಅಧಿಕಮಾಸದ ಮಹಾಪರ್ವದಿವಸಗಳು (ಉಭಯ ಪಕ್ಷದ ದ್ವಾದಶಿಗಳು ಮಹಾವಿಶೇಷಪರ್ವಕಾಲಗಳು ಎಂದರ್ಥ)
-ಪದ್ಮಪುರಾಣ 12-4
*********
ಅಧಿಕಮಾಸದಲ್ಲಿ ಉಪವಾಸದ ಮಹತ್ವ
ದ್ವಾತ್ರಿಂಶದ್ಭಿರ್ಗತೈರ್ಮಾಸೈರ್ದಿನೈಷೋರ್ಡಶಭಿಸ್ತಥಾ |
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕಃ ||
ಪಂಚಮೇ ಪಂಚಮೇ ವರ್ಷೇ ದೌ ಮಾಸಾವಧಿಮಾಸಕೌ |
ತೇಷಾಂ ಕಾಲತಿರೇಕೇಣ ಗ್ರಹಾಣಾಮತಿಚಾರತಃ ||
ಏಕಮಪ್ಯುಪವಾಸಂ ಯಃ ಕರೋತ್ಯಸ್ಮಿನ್ ತಪೋನಿಧೇ |
ಅಸಾವನಂತಪಾಪಾನಿ ಭಸ್ಮೀಕೃತ್ಯ ದ್ವೀಜೋತ್ತಮ ||
ಸರಾಸರಿ ಲೆಕ್ಕದಲ್ಲಿ ಮೂವತ್ತೆರಡು ತಿಂಗಳು.ಹದಿನಾರು ದಿನಗಳು ಹಾಗೂ ನಾಲ್ಕು ಘಳಿಗೆಯೊಮ್ಮೆ ಅಧಿಕಮಾಸವು ಬರುತ್ತದೆ . ಪ್ರತಿ ಐದುವರ್ಷಗಳಲ್ಲಿ ಎರಡು ಅಧಿಕಮಾಸಗಳಾಗುತ್ತವೆ. ಇಂತಹ ಪವಿತ್ರವಾದ ಅಧಿಕಮಾಸದಲ್ಲಿ ಒಂದುದಿನವಾದರೂ ಉಪವಾಸ ಮಾಡುವವನು ಅನಂತಪಾಪಗಳಿಂದ ಬಿಡುಗಡೆ ಹೊಂದುವನು.
-ಸ್ಮೃತಿ
**********
ಏಕಭುಕ್ತೇನ ನಕ್ತೇನ ತಥೈವಾಯಾಚಿತೇನ ವಾ |
ಉಪವಾಸೇನ ಕುರ್ವೀತ ಮಲಮಾಸವ್ರತಂ ನರಃ ||
ಅಧಿಕಮಾಸದಲ್ಲಿ ಏಕಭುಕ್ತ (ಒಂದೇ ಊಟ)ನಕ್ತಭೋಜನ (ರಾತ್ರಿಯಲ್ಲಿ ಮಾತ್ರ ಭೋಜನ)ಅಥವಾ ಉಪವಾಸ ವ್ರತಗಳನ್ನು ಆಚರಿಸಬೇಕು.
-ಪದ್ಮಪುರಾಣ 2-5
ಅಧಿಮಾಸೇ ನರೋ ನಕ್ತಂ ಯೋ ಭುಂಕ್ತೇ ಸ ನರಾಧಿಪ |
ಸರ್ವಾನ್ ಕಾಮಾನವಾಪ್ನೋತಿ ನರೋ ನೈವಾತ್ರ ಸಂಶಯಃ ||
ಅಧಿಕಮಾಸದಲ್ಲಿ ನಕ್ತ(ರಾತ್ರಿಮಾತ್ರ)ಭೋಜಪವ್ರತವನ್ನು ಮಾಡುವುದು. ಸಹ ವಿಹಿತ ಇದನ್ನು ಆಚರಿಸುವವನು ಸಕಲ ಆಕಾಂಕ್ಷೆಗಳನ್ನು ಈಡೆರಿಸಿಕೂಳ್ಳುವನು ; ಇದು.ನಿಶ್ಚಿತ .
-ಬೃಹನ್ನಾರದೀಯ ಪುರಾಣ 26-16
***********
|| ಏಕಾನ್ನವ್ರತ ||
ಏಕಾನ್ನೇನ ನರೋ ತಸ್ತು ಮಲಮಾಸಂ ನಿಷೇವತೇ.|
ಚತುರ್ಭುಜೋ ನರೋ ಭೂತ್ವಾ ಸ ಯಾತಿ ಪರಮಾಂ ಗತಿಮ್ ||
ಏಕಾನ್ನಾನ್ನಾಪರಂ ಕಿಂಚಿತ್ ಪವಿತ್ರಮೀಹ ವಿದ್ಯತೇ |
ಏಕಾನ್ನಾನ್ಮುನಯಃ ಸಿದ್ಧಾಃ ಪರಂ ನಿರ್ವಾಣಮಾಗತಾಃ ||
ಒಂದುಬಾರಿ ಮಾತ್ರ ಉಂಡ ಊಟ ,ಕುಡಿದ ನೀರು ಎಂಬ ಏಕಾನ್ನಭೋಜನದ ವ್ರತ ಅಧಿಕಮಾಸದಲ್ಲಿ ವಿಶೇಷವಾಗಿ ವಿಹಿತ. ಇದನ್ನು ಆಚರಿಸುವವನು ಚತುರ್ಭುಜದಿಂದ ಕೂಡಿದ ಸಾರೂಪ್ಯಮುಕ್ತಿಯನ್ನು ಪಡೆಯುವನು . ಈ ವ್ರತಕ್ಕೆ ಸಮನಾದ ಬೇರೊಂದು ಪವಿತ್ರವ್ರತ ಇಲ್ಲ ಇದರ ಅನುಷ್ಠಾನದಿಂದ ಮುನಿಗಳು ಶ್ರೇಷ್ಠಸಿದ್ಧಿಯನ್ನು ಮುಂದೆ ಮುಕ್ತಿಯನ್ನು ಪಡೆದಿರುವರು .
-ಬೃಹನ್ನಾರದೀಯ ಪುರಾಣ 26 -14 ,15
***********
ಅಧಿಕಮಾಸದಲ್ಲಿ ಶ್ರಾದ್ಧ ವಿಚಾರ
ಶ್ರಾದ್ಧಕ್ಕೆ ಯಾವ ಮಾಸ ಯಾವ ಪಕ್ಷ ಯಾವತಿಥಿಯಲ್ಲಿ ಜೀವನು ಮೃತನಾಗಿರುವನೋ ಪ್ರತಿವರ್ಷವೂ ಅದೇ ಮಾಸ ಅದೇ ಪಕ್ಷ ಅದೇತಿಥಿಯಲ್ಲಿ ಮೃತಾಹಶ್ರಾದ್ಧವನ್ನು ಮಾಡಬೇಕೆಂಬ ನಿಯಮವಿದೆ .
ಆದರೆ ಅಧಿಕಮಾಸದಲ್ಲಿ ಬರುವ ಶ್ರಾದ್ಧ ದಿನಗಳಲ್ಲಿ ಬ್ರಾಹ್ಮಣರ ಭೋಜನವನ್ನು ಮಾತ್ರ ಮಾಡಿಸಿ ಶುದ್ಧ(ನಿಜ)ಮಾಸದಲ್ಲಿ ಪಿಂಡ ಪ್ರಧಾನ ಪೂರ್ವಕವಾಗಿ ಶ್ರಾದ್ಧವನ್ನು ಮಾಡಬೇಕು.
ಮಲಮಾಸ ಶ್ರಾದ್ಧ ದಿನಸ್ಯ ವಂಧ್ಯತ್ವ ನಿರಾಸಾರ್ಥಂ ಪಿತ್ರುದ್ದೇಶೇನ |
ಬ್ರಾಹ್ಮಣಾನ್ ಭೋಜಯಿತ್ವಾ ಶುದ್ಧಮಾಸೇ ಸಪಿಂಡಂ ಶ್ರಾದ್ಧಂ ಕುರ್ಯಾತ್ ||
ಎಂದು ಶ್ರೀಕೃಷ್ಣಾಚಾರ್ಯ ಸ್ಮೃತಿಮುಕ್ತಾವಳೀ ಗ್ರಂಥದಲ್ಲಿ ತಿಳಿಸಿದ್ದಾರೆ.
ಹಿಂದೆ ಅಧಿಕಮಾಸದಲ್ಲಿ ಮರಣಹೊಂದಿದವರ ಪ್ರತಿಸಾಂವತ್ಸಾರಿಕ ಶ್ರಾದ್ಧವನ್ನು ಅದೇ ಮಾಸವು ಪುನಃ ಅಧಿಕಮಾಸವಾಗಿಬಂದಾಗ ಆ ಅಧಿಕಮಾಸದಲ್ಲಿಯೇ ಮಾಡಬೇಕು .ನಿಜಮಮಾಸದಲ್ಲಿ ಮಾಡುವ. ಅವಶ್ಯಕತೆ ಇಲ್ಲ ಎಂದು. ಶ್ರಾದ್ಧ ಕಲ್ಪಲತಾ ಗ್ರಂಥದಲ್ಲಿ ತಿಳಿಸಿದ್ದಾರೆ .
ಮಲಮಾಸೇ. ಮೃತಾನಾ ಚ ಶ್ರಾದ್ಧಂ ಯತ್ ಪ್ರತಿವತ್ಸರಮ್|
ಮಲಮಾಸೇಪಿ ಕರ್ತವ್ಯಂ ನಾನ್ಯೇಷಾಂ ತು ಕಥಂಚನ ||
ಹಿಂದೆ ಶುದ್ಧಮಾಸದಲ್ಲಿ.ಮೃತಿ ಹೂಂದಿದವರಿಗೆ. ಅದೇ. ಮಾಸ ಅಧಿಕಮಾಸವಾಗಿ ಬಂದಾಗ ಪ್ರತಿಸಾಂವತ್ಸಾರಿಕ ಶ್ರಾದ್ಧವನ್ನು. ಅಧಿಕಮಾಸದಲ್ಲಿ ಮಾಡಕೂಡದು. ಕೇವಲ ಬ್ರಾಹ್ಮಣ. ಭೋಜನಮಾಡಿಸಿ ಶುದ್ಧಮಾಸದಲ್ಲಿ ಶ್ರಾದ್ಧ ಮಾಡಬೇಕು .
ಅಧಿಕಮಾಸದಲ್ಲಿ ಮರಣ ಹೊಂದಿದವರ ಹನ್ನೋಂದುದಿನಗಳ ಕರ್ಮ ಸಂಪಡೀಕರಣವನ್ನು ಅಧಿಕಮಾಸದಲ್ಲಿಯೇ. ಮಾಡಬೇಕು.
ಬೇರೆ ಮಾಸದಲ್ಲಿ. ಮೃತರಾದವರ ಮಾಸಿಕಶ್ರಾದ್ಧವನ್ನು ಮಾಡುವಾಗ ಎರಡನೆಯ ಮಾಸದಿಂದ ಹನ್ನೆರಡನೆಯ ಮಾಸದವರೆಗೆ ಮಧ್ಯದಲ್ಲಿ ಅಧಿಕಮಾಸ ಬಂದರೆ ಆ ತಿಂಗಳ. ಮಾಸಿಕವನ್ನೂ ಶುದ್ಧ ಹಾಗೂ ಅಧಿಕಮಾಸ ಇವೆರಡರಲ್ಲಿಯೂ ಮಾಡಬೇಕು .ಮೃತರಾದವರ ಹನ್ನೆರಡನೆಯ ಮಾಸಿಕ ಶ್ರಾದ್ಧವು ಅಧಿಕಮಾಸವಾಗಿ ಬಂದರೆ ಆ ತಿಂಗಳ ಮಾಸಿಕವನ್ನು ಅಧಿಕಮಾಸದಲ್ಲಿಯೂ ಶುದ್ಧ ಮಾಸದಲ್ಲಿಯೂ ಮಾಡಿ ಮರುದಿನವೇ ಪ್ರಥಮಾಬ್ಧಿಕ ಶ್ರಾದ್ಧವನ್ನು ಮಾಡಬೇಕು .

🌷ಅಧಿಕಮಾಸದ ದಾನ -ಧರ್ಮಗಳು 🌷
ಅಧಿಕಮಾಸದಲ್ಲಿ ದೀಪಾರಾಧನೆಯ ಮತ್ತು ದೀಪದಾನದ ಮಹತ್ವ
ವೇದೋಕ್ತಾನಿ ಕರ್ಮಾಣಿ ದಾನಾನಿ ವಿವಿಧಾನಿಚ |
ಪುರುಷೋತ್ತಮದೀಪಸ್ಯ ಕಲಾಂ ನಾರ್ಹಂತಿ ಷೋಡಶೀಮ್ ||
ವೇದೋಕ್ತವಾದ ಸಕಲಕರ್ಮಗಳು ನಾನಾತೆರನಾದ ದಾನಗಳು ಸಹ ಅಧಿಕಮಾಸದಲ್ಲಿ ದೀಪ ಸಮರ್ಪಣೆಗೆ ಹದಿನಾರನೆಯ ಒಂದಂಶಕ್ಕೂ ಸಾಟಿ ಎನಿಸವು
ಬೃಹನ್ನಾರದೀಯ ಪುರಾಣ 24 -19
ಉಪರಾಗಸಹಸ್ರಾಣಿ ವ್ಯತಿಪಾತ ಶತನಿಚ |
ಪುರುಷೋತ್ತಮದೀಪಸ್ಯ ಕಲಾಂ ನಾರ್ಹಂತಿ ಷೋಡಶೀಮ್
ಸಾವಿರಾರು ಗ್ರಹಣಗಳು ನೂರಾರು ವ್ಯತಿಪಾತಯೋಗಗಳು ಸಹ ಅಧಿಕಮಾಸದ ದೀಪಕ್ಕೆ ಹದಿನಾರನೆಯ ಒಂದಂಶಕ್ಕೂ ಸಾಟಿಎನ್ನಿಸವು .
-ಬೃಹನ್ನಾರದೀಯ ಪುರಾಣ 24 -24
***********
🌷ದೀಪಾರಾಧನೆಯ ಮಂತ್ರ🌷
ಗೃಹಾಣೇಮಂ ಮಯಾ ದತ್ತಂ ಸುದೀಪಂ ಪುರುಷೋತ್ತಮ |
ಪ್ರಸಾದಸುಮುಖೋ ಭೂತ್ವಾ ವಾಂಛಿತಾರ್ಥಪ್ರದೋ ಭವ ||
ಪುರುಷೋತ್ತಮನೇ ! ನಾನು ಸಮರ್ಪಿಸುವ ಈ ಉತ್ತಮದೀಪವನ್ನು ಸ್ವೀಕರಿಸು ಪ್ರಸನ್ನನಾಗಿ ನಾನು ಬಯಸಿದ್ದನ್ನು ನೀಡಿ ಅನುಗ್ರಹಿಸು .
-ಪದ್ಮಪುರಾಣ 7-37
🌺ದೀಪದಾನ ಮಂತ್ರ🌺
ದೀಪಸ್ತಮೋ ನಾಶಯತಿ ದೀಪಃ ಕಾಂತಿ ಪ್ರಯಚ್ಚತಿ |
ತಸ್ಮಾದ್ದೀಪಪ್ರದಾನೇನ. ಪ್ರಿಯತಾಂ ಪುರುಷೋತ್ತಮಃ ||
ಅವಿದ್ಯಾತಮಸಾ ವ್ಯಾಪ್ತೇ ಸಂಸಾರೇ ಪಾಪಗರ್ಭಿತೇ |
ಜ್ಞಾನಮೋಕ್ಷಪ್ರದೋ ದೀಪಸ್ತಸ್ಮಾದ್ದತೋ ಮಯಾ ತವ ||
ದೀಪವು ಕತ್ತಲೆಯನ್ನು ಕಳೆಯುವುದು ; ಕಾಂತಿಯನ್ನು ನೀಡುವುದು .ಆದ್ದರಿಂದ ದೀಪದಾನದಿಂದ ಪುರುಷೋತ್ತಮನು ಪ್ರೀತನಾಗಲಿ .ಅವಿದ್ಯೆಯು ಕತ್ತಲಿನಿಂದ ಕೂಡಿದ ಒಡಲಲ್ಲಿ ಪಾಪವನ್ನು ತುಂಬಿಕೊಂಡಿರುವ ಸಂಸಾರಕ್ಕೆ ದೀಪವು ಜ್ಞಾನಮೋಕ್ಷಗಳನ್ನು ನೀಡುವಂತಹುದು ; ಆದ್ದರಿಂದ. ನಾನು ನಿನಗೆ. ದೀಪವನ್ನು ನೀಡಿರುವೆನು .
-ಪದ್ಮಪುರಾಣ 7 /35 -36
**********
ಅಧಿಕಮಾಸದಲ್ಲಿ ದೀಪದಾನದ ಮಹಿಮೆ
ಅಧಿಕ ಮಾಸದಲ್ಲಿ ದೀಪದಾನ ಮಾಡುವುದರಿಂದ,ಧನ,ಧಾನ್ಯ,ಪಶು ,
ಪುತ್ರರು ,ಪೌತ್ರರು ಹಾಗೂ ಯಶಸ್ಸು ಎಲ್ಲವೂ ಪ್ರಾಪ್ತವಾಗುತ್ತವೆ .ಮಕ್ಕಳಿಲ್ಲದವರು ಅಧಿಕಮಾಸದಲ್ಲಿ ದೀಪದಾನ ಮಾಡುವುದರಿಂದ ಮಕ್ಕಳನ್ನು ಪಡೆಯುತ್ತಾರೆ . ಸ್ತ್ರೀಯರಿಗೆ ಸೌಭಾಗ್ಯ ಒದಗಿಸಿ ಕೊಡುತ್ತದೆ. ರಾಜ್ಯಭೃಷ್ಟರಿಗೆ ರಾಜ್ಯವನ್ನು ದೊರಕಿಸಿ ಕೊಡುತ್ತದೆ.ಮನೋರಥಗಳನ್ನು ಪೂರ್ಣಮಾಡುತ್ತದೆ . ದೀಪದಾನ ಮಾಡುವುದರಿಂದ.ಕನ್ಯೆಯು ಅನುರೂಪನಾದ ,ಸದ್ಡುಣಿಯಾದ ಆಯುಷ್ಯವಂತವಾದ ಗಂಡನನ್ನು ಹೊಕದುವಳು. ಪುರುಷನು ದೀಪದಾನ ಮಾಡಿದ್ದಾದರೆ.ತನಗೆ ಅನುರೂಪಳಾದ ಸುಶೀಲೆಯಾದ ಪತಿವ್ರತೆಯಾದ ಹೆಂಡತಿಯನ್ನು ಪಡೆಯುವನು . ವಿದ್ಯಾರ್ಥಿಯು ವಿದ್ಯೆಯನ್ನು , ಸಿದ್ಧಿಯನ್ನು ಇಚ್ಛಿಸುವವನು ಸಿದ್ಧಿಯನ್ನು ,ಧನಾರ್ಥಿಯು ದ್ರವ್ಯವನ್ನು, ಮುಮುಕ್ಷುವು ಮೋಕ್ಷವನ್ನು ದೀಪದಾನದಿಂದ ಪಡೆಯುತ್ತಾರೆ ನಿಶ್ಚಿತ.
-ಅಧಿಕಮಾಸಮಹಾತ್ಮೆ ಶ್ರೀಬೃಹನ್ನಾರಾಧೀಯ ಪುರಾಣ 24-26,27,28,29,30,31
*********
ಅಧಿಕಮಾಸದಲ್ಲಿ ಭಾಗವತ ಶ್ರವಣದ ಮಹತ್ವ
ಶ್ರೀಮದ್ಭಾಗವತಂ ಭಕ್ತ್ತ್ಯಾ ಶ್ರೋತವ್ಯಂ ಪುರುಷೋತ್ತಮೇ |
ತತ್ಪುಣ್ಯಂ ವಚಸಾ ವಕ್ತುಂ ವಿಧಾತಾsಪಿ ನ ಶಕ್ನುಯಾತ್ ||
ಅಧಿಕಮಾಸದಲ್ಲಿ ಭಕ್ತಿಯಿಂದ ಶ್ರೀಮದ್ಭಾಗವತವನ್ನು ಶ್ರವಣಮಾಡಲೇಬೇಕು :ಅದರ ಪುಣ್ಯವನ್ನು ಬ್ರಹ್ಮದೇವರು ಸಹ ವರ್ಣಿಸಲು ಸಶಕ್ತರಾಗಲಾರರು .
-ಬೃಹನ್ನಾರದೀಯ ಪುರಾಣ 22/30
ಬ್ರಹ್ಮದೇವರು ಸಕಲವನ್ನು. ಬಲ್ಲ ಪೂರ್ಣಪ್ರಜ್ಞರು .ಅವರು ಸಹ ವರ್ಣಿಸಲಾರರು ಎಂಬುದು ಅತಿಶಯೋಕ್ತಿ ಮಾತ್ರ .ಇಲ್ಲಿ ಬ್ರಹ್ಮ(ವಿಧಾತ)ಎಂದರೆ ಬೃಹಸ್ಪತಿ ಮೊದಲಾದ ಇತರದೇವತೆಗಳು ಎಂದು ಅರ್ಥ ಮಾಡಿಕೊಳ್ಳಬಹುದು ಗೀತಾಭಾಷ್ಯದಲ್ಲಿನ ಬ್ರಹ್ಮಾsಪಿ ತನ್ನ ಜಾನತಿ ಎಂಬುದಕ್ಕೆ ಪ್ರಮೇಯದೀಪಿಕೆಯಲ್ಲಿ ಬಂದ ವಿವರಣೆಯಂತೆ ಎಂದು ತಿಳಿಯಬೇಕು .
***********
ಅಧಿಕಮಾಸದಲ್ಲಿ ಶ್ರೀಮದ್ಭಾಗವತಗ್ರಂಥದಾನದ ಮಹತ್ವ
ಶೀಮದ್ಭಾಗವತಂ ದದ್ಯಾದ್ವೈಷ್ಣವಾಯ ದ್ವಿಜನ್ಮನೇ |
ಶಕ್ತಶ್ಚೇನ್ನ ವಿಲಂಬೇತ ಚಲಮಾಯುರ್ವಿಚಾರಯನ್ನ ||
ಶಕ್ತನಾದವನು ಆಯುಷ್ಯ ಅಸ್ಥಿರ ಎಂದು ಗಮನಿಸಿ ಅಧಿಕಮಾಸದಲ್ಲಿ ವೈಷ್ಣವ -ಬ್ರಾಹ್ಮಣನಿಗೆ ಶ್ರೀಮದ್ಭಾಗವತಗ್ರಂಥವನ್ನು. ದಾನವಾಗಿನಿಡಬೇಕು.
ಶ್ರೀಮದ್ಭಾಗವತಮ್ ಸಾಕ್ಷಾದ್ಭಗವದ್ರೂಪಮದ್ಭುತಮ್ |
ಯೋದದ್ಯಾದ್ವೈಷ್ಣವಾಯೈವ ಪಂಡಿತಾಯ ದ್ವಿಜನ್ಮನೇ ||
ಶ್ರೀಮದ್ಭಾಗವತವು ಸಾಕ್ಷಾತ್ ಶ್ರೀಹರಿಯ ಪ್ರತಿಕೃತಿ ,ವಿಧ್ವಾಂಸನಾದ ವೈಷ್ಣವ.-ಬ್ರಾಹ್ಮಣನಿಗೆ ಅದನ್ನು.ದಾನವಾಗಿ ನೀಡಬೇಕು.
-ಬೃಹನ್ನಾರದೀಯ ಪುರಾಣ 25/32 ,33
***********
ಆಧಿಕಮಾಸದಲ್ಲಿ ಕೊಡಬೇಕಾದ ದಾನಗಳು ಅವುಗಳ ಫಲ
1) ಸುವರ್ಣದಾನ- ದಾರಿದ್ರ್ಯನಾಶ
2) ಗೋದಾನ -ಬ್ರಹ್ಮಲೋಕಪ್ರಾಪ್ತಿ
3) ರಜತದಾನ -ಪಿತೃಗಳಿಗೆ ತೃಪ್ತಿ
4) ತಾಮ್ರಪಾತ್ರದಾನ- ಸರ್ವಾಭಿಷ್ಟಸಿದ್ಧಿ
5) ರತ್ನದಾನ -ರಾಜಯೋಗ
6) ಮುತ್ತುಗಳದಾನ -ಭುಕ್ತಿಮುಕ್ತಿ ಪ್ರಾಪ್ತಿ
7) ವಸ್ತ್ರದಾನ-ಚಂದ್ರಲೋಕಪ್ರಾಪ್ತಿ
8) ಶಾಲುದಾನ-ಪಾಪಪರಿಹಾರ
9) ರೇಷ್ಮವಸ್ತ್ರದಾನ -ಭಯಪರಿಹಾರ
10 ಧಾನ್ಯದಾನ -ಸರ್ವಾರ್ಥಸಿದ್ಧಿ
11) ಪಾದರಕ್ಷೆಗಳದಾನ -ಸುಖಕರಪರಲೋಕ ಪ್ರಯಾಣ
**********
ಅಧಿಕಮಾಸದಲ್ಲಿ ವಿಶೇಷವಾಗಿ ಕೈಗೊಳ್ಳಬೇಕಾದವ್ರತಗಳು ವ್ರತಗಳ ಪೂರ್ಣತೆಗಾಗಿ ವಿಹಿತವಾದ ದಾನಗಳು .
1)ರಾತ್ರಿಭೋಜನವ್ರತ -ಬ್ರಾಹ್ಮಣ ಭೋಜನ
2)ಆಯಾಚಿತವ್ರತ- ಸುವರ್ಣದಾನ
3)ಅಮಾವಾಸ್ಯೆಯವರೆಗೆ ಮಾಸೋಪವಾಸ -ಸುವರ್ಣ ದಾನ
4)ನೆಲ್ಲಿಕಾಯಿಸ್ನಾನ- ಮೊಸರು ಅಥವ ಹಾಲುದಾನ
5)ಫಲಹಾರವ್ರತ -ಫಲದಾನ
6)ತೈಲತ್ಯಾಗವ್ರತ -ಘೃತದಾನ
7)ಘೃತ(ತುಪ್ಪ)ತ್ಯಾಗವ್ರತ-ಹಾಲುದಾನ
8)ಧಾನ್ಯತ್ಯಾಗವ್ರತ -ಗೊಧಿ ಮತ್ತು ಅಕ್ಕಿದಾನ
9)ನೆಲದಮೇಲೆ ಮಲಗುವ ವ್ರತ -ಶಯ್ಯಾ(ಹಾಸಿಗೆ)ದಾನ
10)ಎಲೆಯಲ್ಲಿ ಊಟಮಾಡುವ ನಿಯಮ -ಬ್ರಾಹ್ಮಣಭೋಜನ
11)ಮೌನವ್ರತ -ಗಂಟೆ ,ತಿಲ ,ಸುವರ್ಣಗಳದಾನ.
12)ನಖಕೇಶಧಾರಣೆ -ದರ್ಪಣದಾನ.
13)ಪಾದರಕ್ಷೆಗಳ ತ್ಯಾಗ -ಪಾದರಕ್ಷೆಗಳದಾನ
14)ಅಲವಣವ್ರತ -ಬಗೆಬಗೆಯ ರಸಪದಾರ್ಥಗಳದಾನ
15)ದೀಪದಾನದ ವ್ರತ -ಬಂಗಾರದ ಬತ್ತಿಯದೀಪದ ದಾನ
16ಧಾರಣ ಪಾರಣವ್ರತ-ಎಂಟು ಉದಕುಂಭಗಳ ದಾನ
**********
ಅಧಿಕಮಾಸದಲ್ಲಿ ಕೊಡಬೇಕಾದ ದಾನಗಳು
1)ಶಾಲಗ್ರಾಮದಾನ
2)ಶ್ರೀಮದ್ಭಾಗವತ ಗ್ರಂಥದಾನ
3)ಪ್ರತಿಮಾದಾನ
4)ಭೂದಾನ
5)ಸುವರ್ಣದಾನ
6)ದ್ರವ್ಯದಾನ
7)ಧಾನ್ಯದಾನ
8)ತಿಲದಾನ
9)ಉದಕುಂಭದಾನ
10)ಛತ್ರಿದಾನ
11)ಪಾದರಕ್ಷದಾನ
12)ಲವಣ((ಉಪ್ಪು)ದಾನ
13)ನೆಲ್ಲಿಕಾಯಿ(ಧಾತ್ರಿ)ದಾನ
14)ಧನದಾನ
15)ಘೃತ(ತುಪ್ಪ)ದಾನ
16)ದೀಪದಾನ
17 )ಶಯ್ಯಾ ದಾನ
18 ) ಅಧಿಕಮಾಸ ಮಹಾತ್ಮೆ ಗ್ರಂಥದಾನ
**********
ಅಧಿಕಮಾಸದಲ್ಲಿ ವಿಶೇಷವಾಗಿ ಪ್ರತಿನಿತ್ಯ ಹೇಳಬೇಕಾದ.ಮಂತ್ರ
ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |
ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||
ಗೋವರ್ಧನವನ್ನು ಧರಿಸಿದ,ಗೋಪರೂಪದ,ಗೋಕುಲಕ್ಕೆ ಹಬ್ಬವೆನ್ನಿಸಿದ,ಗೋಪಿಯರಿಗೆ ಪ್ರೀಯನಾದ,ಸರ್ವೇಶನಾದ,ವೇದವೇದ್ಯನಾದ ಶ್ರೀಗೋಪಾಲಕೃಷ್ಣನಿಗೆ ನಮಸ್ಕರಿಸುವೆನು.
-ಬೃಹನ್ನಾರದೀಯ ಪುರಾಣ 31/29
***********
ಹರಿದಾಸರು ಕಂಡ ಪುರುಷೋತ್ತಮ
ಪುರುಷೋತ್ತಮ ಮುರಾರೇ ಬಾರೋ ಪುರಾಣಪುರುಷ ದೊರೆ
-ಶ್ರೀಪಾದರಾಜರು
ಪಾರಿಜಾತದ ಹೂವೆ ನಾರಿಗೆ ತಂದನೇ -ಧೀರದಾನವರ ಗೆಲಿದಾನೇ |
ಧೀರದಾನವರ ಗೆಲಿದಾನೇ -ನರಹರಿ ಪುರುಷೋತ್ತಮ ನಮ್ಮ ಮನೆದೈವಸುವ್ವಿ ||
-ಶ್ರೀವಾದಿರಾಜಸ್ವಾಮಿಗಳು
ಪುರುಷೋತ್ತಮಗಾರುಸಾಟಿ -ಪರಬ್ರಹ್ಮಸ್ವರೂಪಿಯೇ ನಿನಗಾರೊ ಪೋಟಿ |
ಮಹಿಮೆ ಕೇಳಿದರೊಂದು ಕೊಟಿ ನಿನ್ನ -ಹೃದಯದಿ ಬ್ರಹ್ಮಾಂಡ ಕಂಡಕಿರಿಟಿ ||
ಪುರುಷೋತ್ತಮನ ಪುರಾಣಪುರೋಷೋತ್ತಮನೆಂದು ತಿಳಿಯಿರೋ
ನಿತ್ಯನೆಮ ಎಂಬೋದಿಲ್ಲ -ಮತ್ತೆ ದಾನಧರ್ಮವಿಲ್ಲ |
ವ್ಯರ್ಥವಾಗಿ ಕೆಡಲಿಬೇಡಿ ಪುರುಷೋತ್ತಮನ್ನ ನೆನೆಯಿರೋ ||

ಪುರುಷೋತ್ತಮನಿಗೆ ಪರಿಮಳ ಕುಸುಮಗಳು -ರಾಮಗೋವಿಂದ
-ಶ್ರೀಪುರಂದರದಾಸರು
ಹರುಷದಿಂದನಿನ್ನ ನಾಮ -ಸ್ಮರಿಸುವಂತೆ ಮಾಡು ಪ್ರೇಮ |
ಇರಿಸುನಿನ್ನ ಚರಣದಲ್ಲಿ -ಪುರುಷೋತ್ತಮ ||
-ಶ್ರೀಕನಕದಾಸರು
ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ -ರಾಮರಾಮ |
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ -ರಾಮರಾಮ .
-ಶ್ರೀವಿಜಯದಾಸರು
ಕ್ಷರಾಕ್ಷರದೂಳಗೆ ಪರಮ ಉತ್ತಮನಾದ ಕರಿರಾಜವರದ ಕವಿಗೇಯ
ಕರಿರಾಜವರದ ಕವಿಗೇಯನಾದ ಶ್ರುಪುರುಷೋತ್ತಮನ್ನ ಮುನ್ನ ಬಲಗೊಂಬೆ ಕೋಲೆ ||

-ಶ್ರೀಮೋಹನದಾಸರು
Comments
Post a Comment