PATIYA PADAKKE ERAGI SUDHAMA CHARITRE
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ ವಂದನೆಯ ಮಾಡಿದಳು || ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- | ದ್ಗತಿಯಾಗಲೆನುತ ಪೇಳಿದಳು || ೧ || ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ | ಹೊದಿಯಲಿಕ್ಕಿಲ್ಲ ಆಶನವಿಲ್ಲ || ಗದಗದ ನಡುಗುತ ಮಧುರ ಮಾತಾಡುತ | ಸದನದೊಳಿರುತಿದ್ದನಾಗ || ೨ || ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ ಧ್ಯಾನ ಮಾಡುತಲಿ || ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ ತರುವನು ಮುಷ್ಟಿ ತುಂಬ || ೩ || ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ ಪಾಕ ಮಾಡುವಳು || ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ ಉಳಿದದ್ದುಂಬುವಳು || ೪ || ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ ಮಾತನಾಡಿದಳು || ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- | ದ್ಗತಿಯೇನೆನುತ ಪೇಳಿದಳು || ೫ || ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ ಆಡಿದ ಗೆಳೆಯರಿಲ್ಲೆ || ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು ದಾರಿಲ್ಲೆ ನಿಮಗೆ || ೬ || ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು ಕ್ಲೇಶದಲಿ || ೭ || ಮಡದಿ ಮಾತನು ಕೇಳಿ ಮನದಲಿ ಯೋಚಿಸಿ | ಹುಡುಗನಾಗಿರಲಿಕ್ಕೆ ಹೋಗಿ || ಗುರುಕುಲ ವಾಸದಲಿ ಹರಿ ...