Posts

Showing posts with the label Sulaadis

GARUDADRI NARASIMHA SULADI

  ಶ್ರೀ ಪುರಂದರದಾಸಾರ್ಯ ವಿರಚಿತ   ಗರುಡಾದ್ರಿ ನರಸಿಂಹ ದೇವರ ಸುಳಾದಿ   ರಾಗ : ಸಾವೇರಿ   ಧೃವತಾಳ  ಅಂಜುವೇ ನಾ ನೀ ಸಿಂಗದ ಮುಖದವ  ಹುಂಕರಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ತ್ಯೆರವಾಯ ತೆರವುತ ಗದ್ಗಹಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಘುಡುಘುಡಿಸುತ ಕಿಡಿಗಳ್ಯರಗಿಸುವೆ ಒಮ್ಮೆಮ್ಮೆ ಅಂಜುವೆ ನಾ ನೀ ಕಿವಿಯನುಳುಪಿ ಮೇಲೆ ಕವಿದೆರಗುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಸಿರಿ ಮುದ್ದು ನರಸಿಂಹ  ಪುರಂದರವಿಠ್ಠಲ ನೀ ಉರಿಮಾರಿ ದೈವವೆಂದಜುವೆ ॥೧॥  ಮಟ್ಟತಾಳ  ಹಿರಣ್ಯಕಶಿಪುವಿನ್ನ ಉದರ ಬಗಿದ ಬಳಿಕ ಕರುಳು ಮಾಲಿ ತೆಗೆದು ಕೊರಳೊಳಿಟ್ಟ ಬಳಿಕ ಉರಿಯನುಗುಳುವೇತಕೆ ಸಿರಿಯ ನುಡಿಸದ್ಯಾತಕೆ ಹರ ಬೊಮ್ಮಾದಿಗಳ ಸರಕು ಮಾಡಿದಿದ್ದ್ಯಾತಕೆ ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ  ಪ್ರಹ್ಲಾದದೇವ ಬಂದರೆ ತೆಗೆದು ಮುದ್ದಾಡಿದ್ಯಾತಕೆ ॥೨॥  ತ್ರಿವಿಡಿತಾಳ  ಅಟ್ಟಹಾಸ ಕಬುಜಜಾಂಡ ಕಟ್ಟಹ ಪ್ರತಿಧ್ವನಿಯಗೊಡುತಿರೆ ಮೆಟ್ಟಿದಿಳೆ ತಲೆ ಕೆಳಗಾಗುತಲಿರೆ ಬೆಟ್ಟಗಳುರಳುರಳಿ ಬೀಳುತಿರೆ ಅಷ್ಟದಿಕ್ಕುಗಳಂ ಬೆಳಗುತಿರೆ ದಿಟ್ಟ ಮುದ್ದು ನರಸಿಂಹ ಪುರಂದರ -  ವಿಠ್ಠಲ ನಿನಗೆದಿರಾರೀ ಜಗದೊಳು ॥೩॥  ಅಟ್ಟತಾಳ  ಉರಿಮಾರಿ ಸಾಗರಗಳು ಸುರಿಯೆ ನಾಲಿಗೆಯಿಂದ ಚರಾಚರಂಗಳು ಚಾರಿವರಿವುತಲಿರೆ ಬ್ರಹ್ಮಾಂಡ ಒಂದೆ ಸಿಡಿದು ಹೋಗುತ್ತಿತ್ತು ಬ್ರಹ್ಮ ಪ್ರಳಯ ವಂದಾಗಿ ಪೋಗ...

HARI HARA SULADI

ಪುರಂದರದಾಸರ ರುದ್ರದೇವರ ಕುರಿತ ಸುಳಾದಿ ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು | ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ | ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು | ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3|| ಅಟ್ಟತಾಳ ಬಾಣಾಸುರನ ಭಕುತಿಗೊಲಿದು ಬಂದು | ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು | ಬಾಹು ಸಹಸ್ರವ ಕಡಿಯುವಾಗ | ಬೇಕು ಬೇಡೊಂದೊಮ್ಮೆ ಎಂದನೆ ಶಿವನು | ಪುರಂದರವಿಠಲ ಪರದೈವವೆಂದರಿತ ಕಾರಣ | ಒಪ್ಪಿಸಿಯೇ ಕೊಟ್ಟಾ ಶಿವನು ||4|| ತ್ರಿವುಡೆತಾಳ ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ | ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ | ವಿಷ್ಣು ಪುರಂದರವಿಠಲ ರಾಯನ ಅತ್ಯಧಿಕ ಪ್ರಿಯ...

MADHAVANANGHRI NITYA VADIRAJARA SULADI

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ ವಾದ ಮಾಯಾ ವಾದಿಗಳ ಗೆದ್ದ  ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ  ವೇದವೇದ್ಯ "ವಿಜಯವಿಠಲ" ತಾನು| ಆದರದಿಂದವರ ಭುಜದಿ ಹಯವಕ್ತ್ರನಾಗಿ |  ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ | ಶ್ರೀಧರನ ಮಹಿಮೆ ಸಾಧುಜನರು ಕೇಳಿ || ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ | ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ | ಸಡಗರದ ಭಕ್ಷ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು | ಕಡಗೋಲು ವೇಣು ಪಿಡಿದುಡಿಪಿಲಿನಿಂದ | ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು | ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ || ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ | ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |  ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ |  ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು | ಸಾಮಾನ್ಯ ಜನರಿಗೆ ದೊರಕುವನೇ ಕೇಳಿ || ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ- ಗ್ವಿಜಯ ಮಾಡಲು ಪುರಕೆ | ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಲರನಾಳಿದಾ | ನಿಜವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯಸಾರಧಿ ಪಾದ ರಜದ ಮಹಾ...
  SRI KRISHNA AVATARA SULADI ಶ್ರೀವಿಜಯದಾಸಾರ್ಯ ವಿರಚಿತ   ಶ್ರೀಕೃಷ್ಣಾವತಾರ ಮಹಿಮೆ ಸುಳಾದಿ   ರಾಗ ರೀತಿಗೌಳ   ಧ್ರುವತಾಳ  ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ - ಕ್ಷಿತನ ಪ್ರಾಣವನ್ನು ಉಳಹಿದ ದೈವವೆ ರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ - ಸತಿಯರ ಭೋಗಿಸಿ ಸುತರ ಪಡೆದದೇನೋ ಚತುರ ಮೊಗಾದಿಗಳ ಪೆತ್ತ ಪರಮಪುರುಷ ಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾ ಗತಿಯಾಗಬೇಕೆಂದು ಸುತನಗೋಸುಗ ಪೋಗಿ ಕೃತವಿರೋಧಿಯ ವಲಿಸಿ ವರವ ಕೈಕೊಂಡದ್ದೇನೊ ನುತಿಸಿದ ಜನರಿಗೆ ಅನುದಿನ ತಪ್ಪದಲೇ ಹಿತವಾಗಿರುತಿಪ್ಪ ಭಕ್ತವತ್ಸಲದೇವ ಶಿತವಾಹನಗೊಲಿದು ರಣದೊಳು ಸುಧನ್ವನ್ನ ಹತಮಾಡಿಸಿದ್ದು ಆವದೋ ಕರುಣತನವೋ ತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದು ಕೃತಭುಜರೊಂದಾಗಿ ಗಣಣೆ ಕಾಣದೆ ಎಣಿಸಿ ಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆ ಅಮಿತಭೋಜನನೆಂದು ಕರಿಸಿಕೊಂಬುವದೇನೋ ಪತಿತಪಾವನ ರಂಗಾ ವಿಜಯವಿಟ್ಠಲ ನಿನ್ನ ಕೃತಕಾರ್ಯಂಗಳಿಗೆ ನಾನೇನೆಂಬೆ ತಲೆದೂಗಿ ॥ 1 ॥   ಮಟ್ಟತಾಳ  ಬಲು ರವಿ ಪ್ರಕಾಶನೆಂದು ನಿನ್ನನ್ನು ಕಲಕಾಲಾ ಬಿಡದೆ ಪೊಗಳುವ ಬಗೆ ನೋಡು ಇಳಿಯೊಳಗೆ ಯಿದ್ದ ಮನುಜರ ಕಣ್ಣಿಗೆ ಬೆಳಗು ತೋರಿ ಪ್ರೀತಿ ಮಾಡಿದ ಪರಿಯೇನೋ ಹಲವು ಬಗೆಯಿಂದ ಶುದ್ದಾತ್ಮನೆಂದು ವಲಿಸಿ ವೇದಂಗಳು ಬೆರಗಾಗುತಲಿರೇ ಗಲಭೆ ಮಾಡದೆ ಪೋಗಿ ಗೊಲ್ಲತಿಯರ ಮನೆ ಒಳಪೊಕ್ಕು ಪಾಲು ಮೊಸರು ಬೆಣ್ಣೆಯ ಕದ್ದೆ ಜಲಜಜಾಂಡದಕಿಂತ...
  SADHANA SULADI BY SRI VIJAYA DASARU ಶ್ರೀ ವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ  (ದೇಹ ಅನಿತ್ಯ, ಅಸ್ಥಿರ. ಸಂಸಾರ ಅಸಾರವಾದುದು. ಆದ್ದರಿಂದ ಸಂಸಾರದಲ್ಲಿ ಮುಳುಗದೆ ವೈರಾಗ್ಯ ಪೊಂದು. ನಿರಂತರ ಪರೇಶನನ್ನು ಭಜಿಸು.)   ರಾಗ ಬೇಹಾಗ್   ಧ್ರುವತಾಳ  ಈಗಲೊ ಇನ್ನಾಗಲೊ ಈ ಗಾತ್ರ ಸ್ಥಿರವಲ್ಲ ಭೋಗದಾಶೆಯ ಬಿಡು ಜಾಗು ಮಾಡದಲೆ ಭಾಗವತರ ಸಂಯೋಗದಿಂದಲಿ ವೀ - ರಾಗ ನೀನಾಗು ಬಲು ಜಾಗರತನದಲಿ ಭಾಗದೆಯರ ಗೆಲ್ಲು ತ್ಯಾಗಿಯಾಗು ಸರ್ವದಲಿ ಬಾಗಿ ಜ್ಞಾನಿಗಳಿಗೆರಗು ದಾಸನೆನಿಸೀ ತಾಗುಣದಲಿ ಬ್ಯಾಸಿಗೆ ಬಿಸಲೊಳಗೆ ಪೋಗುವನು ಮನುಜ ತಂಪಾಗುವನೆಂದು ಒಂದು - ನಾಗನ ಫಣದ ಕೆಳಗೆ ಕುಳಿತಂತೆ ಆಗುವದು ಭವಸಾಗರದ ಸುಖವೊ ಹೀಗೆಂದು ತಿಳಿ ಜನ್ಮರೋಗ ಹಿಂದುಗಳಿಯೋ ನೀಗು ಸತ್ಕರ್ಮವು ಚನ್ನಾಗಿ ಸಾಧನ ಬಯಸಿ ಭಾಗೀರಥಿ ಜನಕ ವಿಜಯವಿಟ್ಠಲನ್ನ ಲೇ - ಸಾಗಿ ಕಾಣುವದು ಇಂಪಾಗಿ ಸಂಚರಿಸುತ್ತ ॥ 1 ॥   ಮಟ್ಟತಾಳ  ನಾಚಿಕಿಲ್ಲದ ಮನವೆ ಯೋಚಿಸಿ ನೀ ನೋಡು ಪ್ರಾಚೀನಕರ್ಮ ಆಚರಿಸದೆ ಬಿಡದು ವಾಚದಲ್ಲಿ ಕೇಳು ನೀಚಮಾರ್ಗವೆ ಕಳಿಯೊ ಈ ಚರಾಚರದಲ್ಲಿ ಯೋಚನೆ ಪರನಾಗಿ ಪಾಚಿ ತೆರನಾದ ಪೋಚೆ ಸಂಸಾರದಾ - ಲೋಚನೆ ತೊರೆವದು ಸೂಚಿಸುವೆನು ನಿನಗೆ ಕೀಚಕಾರಿ ಪ್ರೀಯ ವಿಜಯವಿಟ್ಠಲ ಭವ ಮೋಚಕನೆಂದು ಶ್ರೀಚರಣವ ನೆನಿಸೊ ॥ 2 ॥   ತ್ರಿವಿಡಿತಾಳ  ಚಂಚಲ ಮನವೆ ನಿನಗೆಷ್ಟು ಪೇಳಿದರೇನು ವಂಚನೆ ಬಿಡದಲೆ ಚರಿಸುತಿಪ್ಪೆ ಹಂ...
  VRUSHABA DEVARA SULADI ಶ್ರೀವಿಜಯದಾಸಾರ್ಯ ವಿರಚಿತ   ಶ್ರೀ ಋಷಭ ದೇವರ ಸುಳಾದಿ  (ಮೇರುದೇವಿಯಲ್ಲವತರಿಸಿದ ಸೌಭರಿಮುನಿವಂದ್ಯ , ಮೇಧಾದಿ ನಿಯಾಮಕ , ವಿಷಯದ ಮಡುವಿನಲ್ಲಿ ವಿಷದಂತನ ಕಸುವಡಗಿಸಿದ, ಋಷಿ ವೇಷಧಾರಿಯಾದ ಋಷಭದೇವನೇ ಸದಾ ಎನ್ನ ಹೃದಯದಲ್ಲಿ ಸುಳಿದು , ದುರಿತವನ್ನು ತರಿದು, ಸಂಸಾರ ಸಾಗರದಿಂದ ದಾಟಿಸು.)   ರಾಗ ವಲಚಿ   ಧ್ರುವತಾಳ  ಸೌಭಾಗ್ಯವಂತ ಜಯತು ಸೌಂದರ್ಯಸಾರ ಜಯತು ಭೂಭಾರಹರಣ ಜಯತು ಭೂಮಾ ಜಯತು ಶ್ರೀಭೂರಮಣ ಜಯತು ಶೃಂಗಾರ ಪುರುಷ ಜಯತು ಶೋಭನಮೂರ್ತಿ ಜಯತು ಸೌಖ್ಯ ಜಯತು ಲೋಭ ವಿರಹಿತ ಜಯತು ಲೋಕೇಶ ಜನಕ ಜಯತು ಲಾಭ ಪ್ರದಾತ ಜಯತು ಲಘುವೆ ಜಯತು ವೈಭೋಗಾನಂದ ಜಯತು ವೈಕುಂಠವಾಸ ಜಯತು ಭೂ ಭೂಜ ರತ್ನ ಜಯತು ಭೂಷಾ ಜಯತು ನಾಭಿ ಕಮಲಾ ಜಯತು ನಾಗಾರಿ ಗಮನಾ ಜಯತು ಗೋ ಭೀತಿನಾಶ ಜಯತು ಗೋತ್ರಜ ಜಯತು ಶ್ರೀಭಾಗ ಚರಣ ಜಯತು ತ್ರಿದಶ ವಂದಿತ ಜಯತು ವೈಭವಕೀರ್ತಿ ಜಯತು ವೈದ್ಯ ಜಯತು ನಾಭಿನಂದನ ಜಯತು ನಾನಾವತಾರ ಜಯತು ಸ್ವಭಾವ ಲೀಲಾ ಜಯತು ಸ್ವಾಮೀ ಜಯತು ಸಾಭಿಮಾನನೆ ಜಯತು ಸಮಸ್ತ ಫಲದಾ ಜಯತು ಸಾಭೀಮ ದೈವ ಜಯತು ಸಮಸ್ತ ಸಾಧು ಜಯತು ಸುಭಾಷ್ಯಪಾಲ ಜಯತು ಸುಖಸಾಂದ್ರ ಜಯತು ಕುಭಾವ ವೈರಿ ಜಯತು ಕುಶಲಾ ಜಯತು ಸೌಭರಿಮುನಿ ವಂದ್ಯ ವಿಜಯವಿಟ್ಠಲ ಋಷಭ ಈ ಭೋಗದಲ್ಲಿ ನಿಂದು ವಿಜ್ಞಾನವನ್ನೆ ಕೊಡು ॥ 1 ॥   ಮಟ್ಟತಾಳ  ಋಷಭ ಋಷಭ ಮಹಾ ಋಷಿಜನ ಮನೋಹರ ವೃಷಭವಾಹನ ಪ್ರೀಯ ಹೃಷಿ...
  MUKTARA PRAKARANA SULADI ಶ್ರೀ ವಿಜಯದಾಸಾರ್ಯ ವಿರಚಿತ   ಮುಕ್ತರ ಪ್ರಕರಣ ಸುಳಾದಿ   ರಾಗ ಆನಂದಭೈರವಿ   ಧ್ರುವತಾಳ  ಮುಕುತಿಯಾದವರ ಪ್ರಕರಣವ ತಿಳಿಯಬೇಕು ಭಕುತಿಯಿಂದಲಿ ಭಾವ ಶುದ್ದನಾಗಿ ಮುಕುತರೊಳಗೆ ತಾರತಮ್ಯವೇ ವುಂಟು ಆ - ಸಕುತರಾಗಿಪ್ಪರು ಹರಿ ಪದದಿ ಕಕುಲಾತಿ ಮೊದಲಾದ ದೋಷ ರೂಪಗಳಿಲ್ಲ ಅಕಟಕಟ ಯಿವರೀಗ ವಿಲಿಂಗರು ಸಕಲರೊಳಗೆ ಬ್ರಹ್ಮ ಉತ್ತಮ ದೇವತಿ ಅಕಳಂಕನಯ್ಯ ಸಂಸಾರದಲ್ಲಿ ಪ್ರಕಟ ಜ್ಞಾನವೇ ಸರಿ ವ್ಯಕ್ತವಾಗುವದು ಬಾ - ಧಕವಿಲ್ಲ ಋಜುಗಣಸ್ಥ ಜನರಿಗೆ ಮುಕುತಿಲಿ ಈಶಾದನ್ಯತ್ರ ಜಗದ್ವಿಷಯ ಜ್ಞಾನ ಶಕಲಯಿಲ್ಲದೆ ಅನಾಲೋಚನೆಯಲ್ಲಿ ಲಕುಮಿಗೆ ಸಾಮ್ಯ ಬಂತು ಎನದೀರಿ ಸದಾವಕ್ಕು ಉಕುತಿಯ ಲಾಲಿಸುವದು ಬೊಮ್ಮಗಿಂದಲಿ ಶ್ರೀ - ಲಕುಮಿಯ ಜ್ಞಾನ ಈಶ ಸರ್ವ ಪದಾರ್ಥದಲ್ಲ್ಯ - ಧಿಕವಾಗಿಪ್ಪದು ಈಶಕೋಟಿ ಗಣನೆ ವಿಕಸಿತವಾದ ಶ್ರೀಹರಿಯ ಜ್ಞಾನಕ್ಕೆ ಎ - ಣಿಕೆ ವುಂಟೆ ಆವಾವ ಕಾಲಕ್ಕು ಗುಣಿಸಿದರು ಮುಕುತರು ತಮ್ಮ ತಮ್ಮ ಯೋಗ್ಯತೆ ಉಳ್ಳನಿತು ಸುಖಸಾಂದ್ರರಾಗಿ ಗರುಡ ಶೇಷಾದ್ಯರು ಗುಣ - ನಿಕರದಲ್ಲಿ ನಿತ್ಯ ಸರ್ವವು ವಶಕರವು ರಕ್ಕಸಾರಿಯ ಇಚ್ಛಾವರ್ಕ ಒಂದುಂಟು ಇವರಿಗೆ ತ್ವಕು ಮೊದಲಾದಿಂದ್ರಿಯಗಳು ಸ್ವರೂಪಭೂತವೆನ್ನಿ ರುಕುಮಾಭರಣ ವಸನ ದಿವ್ಯ ತೇಜೋಮಯರು ಅಖಿಲ ಜೀವರು ವೈಕುಂಠ ಆರಂಭಿಸಿ ತಕತಕ್ಕ ಸ್ಥಾನದಲ್ಲಿ ಇಪ್ಪರು ಮೇರುವಿಡಿದು ಮುಕುತಾರ್ಥ ಅಂಶರಹಿತವಾದ ಮುಕ್ತರು ತಾ - ತ್ವಿಕರಾತಾತ್ವಿಕರಂತೆ ಸಮರ್ಥರಲ್ಲ ನ...
NINDA VYANGA STOTRA SULADI   ಶ್ರೀ ಪುರಂದರದಾಸಾರ್ಯ ವಿರಚಿತ   ನಿಂದಾ - ವ್ಯಂಗ್ಯ ಸ್ತೋತ್ರ ಸುಳಾದಿ   ಧೃವತಾಳ  ಗೋಪಿ ದೇವಿಯಂತೆ ಒರಳಿಗೆ ಕಟ್ಟಾದೆ ಬರಿದೆ ದೈನ್ಯವ ಬಡುವೆನಾ ಭೃಗುಮುನಿಯಂತೆ ನಿನ್ನೆದೆ ಮೇಲೊದಿಯಾದೆ ಬರಿದೆ ದೈನ್ಯವಾ ಬಡುವೆನಾ ಭೀಷ್ಮನಂತೆ ನಿನ್ನ ಹಣಿಯ ಒಡಿಯದಲೆ ಬರಿದೆ ದೈನ್ಯವಾ ಬಡುವೆನಾ ಕೊಂಕಣಿಗಾರ ಯಮ್ಮಿಗೆ ಕೊಡತೆ ಮದ್ದಂಬಂತೆ ನಿನಗವರೇ ಮದ್ದೋ ಶ್ರೀಪುರಂದರವಿಠ್ಠಲ ॥೧॥  ಮಟ್ಟತಾಳ  ಕಾಳಿಂಗನಂತೆ ನಿನ್ನ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನನು ಬಾಗಿಲ ಕಾಯಿಸಬೇಕು ಕುಬುಜೆಯಂತೆ ನಿನ್ನ ಪಿಡಿದು ಎಳಿಯಬೇಕು ಇವರ ನಿನಗೆ ಬೇಕೊ ಪುರಂದರವಿಠ್ಠಲ ॥೨॥  ತ್ರಿವಿಡಿತಾಳ  ಅರ್ಜುನನಂತೆ ನಿನ್ನ ಕೈಲಿ ಹಗ್ಗವ ಕೊಟ್ಟು ಬಂಡಿಯ ಕುದುರೆಗಳನು ಹೊಡಿಸಬೇಕು ಧರ್ಮತನಯನಂತೆ ಬಾ ಹೋಗು ಎನಬೇಕು ಶಬರಿ ಕೊಟ್ಟದ್ದೇ ನಿನಗೆ ಕೊಡಲಿ ಬೇಕು ನಿನಗಂಜದಿರಬೇಕು ಪುರಂದರವಿಠ್ಠಲ ॥೩॥  ಅಟ್ಟತಾಳ  ಇಂದ್ರನಂತೆ ಮಳೆಗರೆದು ಗೋಕುಲದಲ್ಲಿ ನಿಂದಿರಾಸಬೇಕು ಏಳು ದಿನ ಕುಂದದೆ ಬೆಟ್ಟವ ಪೊರೆಸಿ ದಣಿಸಬೇಕು ವೃಂದಾರಕರಂತೆ ಅಂಜದಲೇ ಸಂದೇಹ ಮಾಡಬಾರದೆಲೋ ಈ ಮಾತಿಗೆ ಸಿಂಧುಶಯನವಾಸ ಪುರಂದರವಿಠ್ಠಲ ॥೪॥  ಏಕತಾಳ  ಬಲಿಯಂತೆ ಮುಕುಟವ ಕಿತ್ತಿಕೊಂಡೋಡಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ನಿನಗಂಜದಿರಬೇಕು ಪುರಂದರವಿಠ್ಠಲ ॥೫॥   ಜತೆ  ಅಂಜುವರಿಗೆ ಅರಳಿಮರ...
SRI GOPALADASA VIRACHITA UPASANA SULADI ಶ್ರೀ ಗೋಪಾಲದಾಸಾರ್ಯ ವಿರಚಿತ ಉಪಾಸನಾ ಸುಳಾದಿ  (ಚಲ ಅಚಲಗಳಲ್ಲಿ ಸರ್ವಕ್ರಿಯಾದಲ್ಲಿ ಅದ್ವೈತತ್ರಯನಾದ ಶ್ರೀಹರಿಕರ್ತೃ ನಿಯಾಮಕನೆಂದರಿತು, ಸಕಲರೂಪ ಬಿಂಬನಲ್ಲಿ ಐಕ್ಯ ಚಿಂತಿಸಿ ಧ್ಯಾನೋಪಾಸನ ಕ್ರಮ. )   ಧ್ರುವತಾಳ  ಧ್ಯಾನ ಮಾಡು ಮನವೆ ದೈನ್ಯ ವೃತ್ತಿಯಲಿನ್ನು ಜ್ಞಾನವಂತನಾಗಿ ಗೆದ್ದು ವಿಷಯಾ ಹಾನಿ ಲಾಭಗಳಿಗೆ ಹರುಷ ಕ್ಲೇಶವು ಬಡದೆ ಜಾಣತನದಿ ಚಿಂತಿಸು ಜಗದೀಶನ್ನ ನಾನು ಎಂಬೊದು ಬಿಟ್ಟು ನಿತ್ಯದಲ್ಲಿ ಇನ್ನು ಜ್ಞಾನಪೂರ್ಣ ಶ್ರೀಹರಿಯ ಧೇನಿಸಿನ್ನು ಯೋನಿ ಯಂಭತ್ತು ನಾಲ್ಕು ಲಕ್ಷ ಬಂದ ಕಾಲಕ್ಕೂ ನೀನು ಪಕ್ವ ಬಾರದಾ ಗತಿಯು ಇಲ್ಲಾ ಕಾಣೆ ನಿನಗೆ ಮುಖ್ಯ ಸಾಧನ ಸಂಪತ್ತು ಮಾನವ ಯೋನಿಯಲ್ಲೆ ಘಳಿಸಬೇಕು ಕ್ಷೋಣಿಯೊಳಗೆ ಈ ಜನ್ಮ ಬಪ್ಪದೆ ದುರ್ಘಟ ಶ್ರೀನಾಥನ ಕಾರುಣ್ಯವೆಂದು ತಿಳಿಯೋ ಶ್ವಾನ ಸೂಕರ ನಾನಾ ಯೋನಿ ಬಂದ ಕಾಲಕ್ಕೂ ಮಾನಿಸನಾಗೆ ಚಿಂತಿಸಲಿ ಬೇಕು ಜ್ಞಾನ ಅಲ್ಲಿ ದೊರೆಯದು ಕುಚ್ಛಿತ ಯೋನಿಯಲ್ಲಿ ನಾನಾ ಭವಣೆ ಯುಂಟು ನಾ ಏನೆಂಬೆ ನಾನಾಕು ಜೀವರಿನ್ನು ನಾಲ್ಕು ಬಗೆಯ ಕರ್ಮ ತಾವು ಮಾಡುತಿಹರೋ ದೇಹಧಾರಿಗಳಾಗಿ ಕಾಣಿಸುವರು ಎಲ್ಲಾ ಜಗದವೊಳಗೆ ಇನ್ನು ಜ್ಞಾನ ಮಾತ್ರ ನೀ ಪಿಡಿದು ಕುಳಿತುಕೋ ಗೇಣು ಮೊಳವು ಅಣುರೇಣು ಸ್ಥಳದ ಪರಿ ನಾನಾ ದೇಹಧಾರಿಗಳಿಂದ ಆಗುವ ಕರ್ಮ ಕಾಣೋ ನಿನ್ನಲ್ಲಿ ಇದ್ದು ಸ್ವಾಮಿ ಮಾಡಿಪನೆಂದು ಖೂನ ಪಿಡಿದು ಕುಣಿ ಕುಣಿದಾಡೋ  ನಾನು ಅಸ್ವತಂತ್ರ ನನ್ನಂತೆ ...
  DHREYOLAGE NAMMA GURURAGHAVENDRA RINNU ಶ್ರೀ ಗೋಪಾಲದಾಸರು ರಚಿಸಿದ  ಶ್ರೀ *ಗುರುರಾಘವೇಂದ್ರರ ಮಹಾತ್ಮ್ಯ ಸ್ತೋತ್ರ ಸುಳಾದಿ  ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು | ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ | ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ | ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ | ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ | ಪರಿಶುದ್ಧನಾದನೆಂದು ಅರಿತು ಈ ಸ್ಥಳದಲ್ಲಿ | ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ | ಪರಲೋಕ ಸಾಧನ ಪರಿಪೂರ್ತಿ ಮಾಡಿಕೊಂಡು | ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ | ಧರಿಯ ಮ್ಯಾಲಿದ್ದ ಜನರ ಪೊರಿಯಬೇಕೆಂದೆನುತ | ಹರಿ ನೋಡಿದನು ಇವರ ಪರಮ ದಯಾಳು ತಾನವನ್ನು ತಾನು | ಗುರುವಂತರ್ಯಾಮಿಯಾಗಿ ವರವಾನೀಯಲಿ ಜಗಕೆ | ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು | ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ ನಾರಾಯಣ ತಾನೆ | ವರ ಸನ್ನಿಧಾನನಾಗಿ |-ವರಿಗೆ ಫಲ ತಂದೀವ ಇಹಪರದಲ್ಲಿನ್ನು | ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ | ಶರಣರ ಪೊರೆವ ಚರಿಯಾ ಪರಿಪರಿ ಉಂಟೋ ||1|| ಮಟ್ಟತಾಳ ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ | ಎರಡೆರಡು ನಾಲ್ಕು ಹರಿಯ ಮೂರುತಿಗಳು | ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು | ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ | ತರುವಾಯದಲಿನ್ನು ತರತಮ್ಯನುಸಾರ | ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |...
RAYARA HASTODAKA SULADI ಶ್ರೀ ರಾಯರ ಹಸ್ತೋದಕ ಸುಳಾದಿ (ಶ್ರೀ ಗುರುಜಗನ್ನಾಥದಾಸರ ರಚನೆ)  ರಾಗ ಅಭೋಗಿ   ಧ್ರುವತಾಳ  ಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆ ಪರಮ ಭಕುತಿಯಿಂದ ಅರುಪಿಸೋ ಬಗೆಯನು ಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆ ಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನು ವರ ಯತಿಗಳನ್ನೋದಕ ಗಿರಿ ಸಾಗರ ಸಮವು ಮರಳಿ ನೀಡೋದು ಜಲ ನಿರುತದಲ್ಲಿ ವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲ ವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದು ವರ ವನಸ್ಥನಿಗಿಡೆ ವರ ಶತವೆನಿಸುವೋದು ಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯ ಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯ ಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನು ಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದು ವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮ   ಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು ॥ 1॥  ಮಟ್ಟತಾಳ  ಅನ್ನ ಸಾಮಗ್ರದಲ್ಲಿ ಇಂದು ಕೇಶವ ಎನ್ನಿ ಮುನ್ನೆ ಭಾರತಿ ಪರಮಾನ್ನ ನಾರಾಯಣ ಇನ್ನು ಭಕ್ಷಕೆ ಸೂರ್ಯರನ್ನ ಮಾಧವ, ಘೃತಕೆ ಚೆನ್ನೆ ಲಕ್ಷುಮಿ ಗೋವಿಂದನು ಎನ್ನಿ ಮುನ್ನ ಕ್ಷೀರಕೆ ವಾಣಿ ಅನ್ನಿ ವಿಷ್ಣುದೇವ ಘನ್ನ ಮಂಡಿಗೆ ಬ್ರಹ್ಮ ಇನ್ನು ಮಧುಘಾತಿ ಬೆಣ್ಣೆಯಲ್ಲಿ ವಾಯು ಚೆನ್ನ ತ್ರಿವಿಕ್ರಮ  ಮುನ್ನ ದಧೀಯಲ್ಲಿ ಸೋಮ ವರುಣ ವಾಮ - ನನ್ನ ತಿಳಿ, ಸೂಪ ಚೆನ್ನ ವೀಪ ಶ್ರೀಧರ  ಮುನ್ನೆ ಶಾಖ ಪತ್ರ ಸ್ವನ್ನಗದಿರ ಮಿತ್ರ ಚೆನ್ನ ಹೃಷೀಕೇಶ,...
INDUMUKHIYE NINNA SANDURUSHANA  ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ   (ಗುರುವಿಜಯವಿಟ್ಠಲ ಅಂಕಿತ)   ಶ್ರೀ ರಮಾದೇವಿ ಸ್ತೋತ್ರ ಸುಳಾದಿ  ಇಂದುಮುಖಿಯೆ ನಿನ್ನ ಸಂದರುಶನದಿಂದಾ - ನಂದವಾಯಿತು ಅರವಿಂದನಯನೆ ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ ಸುಂದರವಾದ ರೂಪದಿಂದ ಬಂದು ಮಂದಹಾಸದಿಂದ ಮಾತನಾಡಿದರಿಂದ ಬೆಂದು ಪೋದವೆನ್ನ ತ್ರಿವಿಧ ತಾಪ ಇಂದಿರೇ ಈ ರೂಪದಿಂದ ತೋರಿದಳು ಬಂಧುನೆನಿಪ ಲೋಕ ಗುರು ಸತಿಯೊ ಕಂದು ಕಂಧರನಾದ ದೇವನ್ನ ರಾಣಿಯೊ ಇಂದ್ರಾಣಿ ಮೊದಲಾದ ಜನರೋರ್ವಳೊ ಮಂದಾಕಿನಿಯೊ ಇದರೊಳೊಂದರಿಯೇ ಕರುಣ - ಸಿಂಧುವೆ ನಿನ್ನ ಪದಕೆ ನಮೊ ನಮೊ ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು ಪೊಂದಿಪ್ಪ ಕಾರಣದಿಂದ ನಿನ್ನ ಅಂದವಾದ ರೂಪ ಕ್ರೀಯಗಳನ್ನು ತಿಳಿದು ವಂದಿಸಿ ವರಗಳು ಬೇಡಲಿಲ್ಲ ಇಂದಿರೆ ರಮಣನ ಬಂಧಕ ಶಕುತಿಯು ಮಂದನಾದವ ನಾನು ಮೀರುವೆನೇ ಕಂದನ ಅಪರಾಧವೆಣಿಸದಲೇ ನೀನು ಅಂದ ವಚನವನ್ನೆ ಸತ್ಯ ಮಾಡಿ ಬಂಧುನೆನಿಸಿಕೊಂಬ ಗುರುವಿಜಯವಿಟ್ಠಲನ್ನ  ಎಂದೆಂದಗಲದಿಪ್ಪ ವರವ ನೀಡು ॥ 1 ॥   ಮಟ್ಟತಾಳ  ಸಾನುರಾಗದಿ ಎನ್ನ ಸಾಮೀಪ್ಯವ ನೈದಿ ಪಾಣಿದ್ವಯದಲ್ಲಿ ವೇಣು ಸ್ಪರಿಶ ಮಾಡಿ ಏನು ಬೇಡುವೆ ಬೇಡು ನೀಡುವೆನೆಂತೆಂದು ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ ಮಾನುಷನ್ನ ಜನಿತ ಅಜ್ಞಾನದಿಂದ ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ ಪೂರ್ಣ ಮಾಡು ಯೆಂದು ವರಗ...
TATWABHIMANI DEVATEGALA SULADI ತತ್ವಾಭಿಮಾನಿ ದೇವತೆಗಳ ಸುಳಾದಿ  ಧ್ರುವತಾಳ: ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ನಿಮಗೆ ಹಸ್ತವ ಮುಗಿದು ಕೊಂಡಾಡುವೆ ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು ಅಮರ ನಿಮ್ನಗ ಮಜ್ಜನ ಗೋಸುಗ ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ ರಮೆಯರಸನ್ನ ನೋಳ್ಪಸಾಧನ ತೋರಿ ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ ಶ್ರಮ ಸಾದ್ಯವಾಗದಂತೆ ಪೈಣವಿತ್ತು ತಮೊರಜೊಗುಣದವರ ಬಾಧಿಯ ತಪ್ಪಿಸಿ ಉತ್ತಮ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ ಕುಮತ ಪೊಂದಿದ ನಿತ್ಯ ಕುಮತಿಜನರ ಸಂಗ ನಿಮಿಷವಾದರೂ ಕೊಡದೆ ಪಾಲಿಸಬೇಕು ಯಮನೇಮ ಮಿಗಿಲಾದ ಸತ್ಕರ್ಮಾಚಾರದಿಂದ ಸಮಚಿತ್ತ ಭೇದದಿಂದ ಇರಲಿ ಎನಗೆ ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ ಭ್ರಮಣವಲ್ಲದೆ ಲೇಸುಲೇಸ ಕಾಣೆ ರಮೆಯರಸ ನಮ್ಮ ವಿಜಯವಿಠ್ಠಲನಂಘ್ರಿ ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡಿ ||೧||  ಮಟ್ಟತಾಳ:  ತನುವೆನ್ನದೆಂಬೆನೆ ತನುವೆನ್ನದಲ್ಲ ಮನವೆನ್ನದೆಂಬೆನೆ ಮನವೆನ್ನದಲ್ಲ ಧನವೆನ್ನದೆಂಬೆನೆ ಧನವೆನ್ನದಲ್ಲ ಜನವೆನ್ನದೆಂಬೆನೆ ಜನವೆನ್ನದಲ್ಲ ತನು ಮನ ಧನ ಜನವು ಅನುದಿನದಲ್ಲಿ ನೋಡೆ ವನಜಭವಾದಿಗಳೇ ಎಣಿಸಿ ಪೇಳುವುದೇನು ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾತಿನ ಉಪಚಾರವ್ಯಾತಕೆ ಘನ್ನಮೂರುತಿ ನಮ್ಮ ವಿಜಯವಿಠ್ಠಲನ್ನ ಪ್ರೇರಣೆಯಿಂದಲಿ ನಿಮ್ಮ ಸಕಲ ಚೇಷ್ಟಪ್ರದವೋ ||೨||  ತ್ರಿವಿ...
  DURITAVANA KHUTARI DURJANA KULAVYRI ಶ್ರೀ ಜಗನ್ನಾಥದಾಸಾರ್ಯ ವಿರಚಿತ  ಶ್ರೀ ಲಕ್ಷ್ಮೀನೃಸಿಂಹ ಸುಳಾದಿ   ರಾಗ : ದೇಶ್   ಧ್ರುವತಾಳ  ದುರಿತವನ ಕುಠಾರಿ ದುರ್ಜನ ಕುಲವೈರಿ ಶರಣಾಗತ ವಜ್ರ ಪಂಜರ ಕುಂಜರ- ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ ಪರಮ ಕರುಣಾಸಿಂಧು ಭಕುತ ಬಂಧು ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ ಹರಿಯೆ ಕ್ಷರಾಕ್ಷರ ಪುರುಷೋತ್ತಮ ಉರುಗಾಯ ವೈಕುಂಠವರ ಮಂದಿರ ಚಂದಿರ ತರಣಿಕೋಟಿ ಸಂಕಾಶ ವಿಮಲಕೇಶ ಧುರದೊಳಗರ್ಜುನನ ತುರಗ ನಡೆಸಿದ ಸಂ- ಗರ ಭಯಂಕರ ಲೋಕೈಕ ವೀರ ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ  ಮೊರೆಹೊಕ್ಕ ದಾಸಗೆ ಬಂದ ಭಯವ ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ  ಸರುವರಂತರ್ಯಾಮಿ ಲೋಕೈಕಸ್ವಾಮಿ ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ ಅರಿದೆನೊ ನೀನೆಮ್ಮ ಪೊರೆವುದೀಗ ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ- ಪರಿಪಾಲಕನೆಂಬ ಬಿರುದು ನಿನ್ನದಲ್ಲವೆ॥೧॥  ಮಟ್ಟತಾಳ  ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ ಸದನನಾಗಿ ಇರ್ಪೆ ನಿನ್ನ ದಾಸರಿಗಾಗಿ ಮಧುಸೂದನ ಜಗನ್ನಾಥವಿಠ್ಠಲರೇಯ  ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ॥೨॥  ರೂಪಕತಾಳ  ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ ಪ್ರೇರಣ ಸಾಕ್ಷಿ ಕಾರಣಕಾರ್ಯ ದೋಷ ವಿ- ದೂರ ಸದ್ಗುಣ ಸಾಂದ್ರ ಸಜ್ಜನಾಂಬುಧಿ ಚಂದ್ರ ಭಾರಕರ್ತ ಜಗಕೆ ನೀನಿರೆ ಎಮ್ಮ ಮ- ನೋರಥ ಸಲಿಸುವುದೇನಸಾಧ್...
DHANVANTARI SULADI  ಧನ್ವಂತರೀ ಸ್ತೋತ್ರ ಸುಳಾದಿ ಧ್ರುವತಾಳ: ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವುದು | ಕಾಯಾ ನಿರ್ಮಲಿನಾ ಕಾರಣವಾಹುದೋ | ಮಾಯಾ ಹಿಂದಾಗುವುದು ನಾನಾರೋಗದ ಬೀಜ | ಬೇಯಿಸಿ ಕಳೆವುದು ವೇಗದಿಂದ | ನಾಯಿಮೊದಲಾದ ಕುತ್ಸಿತದೇಹನಿ ಕಾಯವ ತೆತ್ತು ದುಷ್ಕರ್ಮದಿಂದ | ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ | ಹೇಯ ಸಾಗರದೊಳು ಬಿದ್ದು ಬಳಲೀ | ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ | ಬಾಯಿಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕಕರ್ತ | ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ | ನೋಯಗೊಡದೆ ನಮ್ಮನ್ನು ಪಾಪಿಪಾ ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ | ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ | ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಠ್ಠಲ ರೇಯಾ ಪ್ರಿಯನು ಕಾಣೊ ನಮಗೆ ಅನಾದಿರೋಗ ಕಳೆವಾ ||೧||  ಮಟ್ಟತಾಳ:  ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ |  ಜ್ಞಾನದಿಂದ ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ | ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ | ಚನ್ನ ಮೂರುತಿ ಸುಪ್ರಸನ್ನ ವಿಜಯ ವಿಠ್ಠಲ ನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ||೨||  ತ್ರಿವಿಡಿತಾಳ:  ಶಶಿಕುಲೋದ್ಭವ ಧೀರ್ಘತಮನಂದನ ದೇವಾ |  ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ...
PONDI BHAJISO SATATA ONDE MANADI ಶ್ರೀ ಶ್ಯಾಮಸುಂದರವಿಠಲ ದಾಸಾರ್ಯ ವಿರಚಿತ  ಶ್ರೀ ಜಗನ್ನಾಥದಾಸರ ಸ್ತೋತ್ರ ಸುಳಾದಿ   ರಾಗ ಹಂಸಧ್ವನಿ ಧ್ರುವತಾಳ  ಪೊಂದಿ ಭಜಿಸು ಸತತ ವೊಂದೇ ಮನದಿ ಸ್ಥಂಭ - ಮಂದಿರ ಮಾನವಿ ದಾಸಾರ್ಯರಾ ಮಂದಮಾನವ ಕೇಳೋ ವಂದಿಸಿ ಸೇವಿಪರ ಬಂಧನ ಪರಿಹರಿಸಿ ಮನದಭೀಷ್ಟಾ ತಂದು ಕೊಡುವದಕ್ಕೆ ಮಂದಾರ ಕುಜದಂತೆ ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೋ ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ ಬೆಂದು ಪೋಪವು ದೋಷವೃಂದವೆಲ್ಲಾ ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ ತಂದೆ ಸಲಹುವಂತೆ ರಕ್ಷಿಸುವರೋ ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು -  ರಂದರ ಗುರು ಸ್ವಾದಿರಾಜರ ಪ್ರೀತ ಸಿಂಧೂರವರದ ಶ್ಯಾಮಸುಂದರ ನಾಜ್ಞದಿ ಇಂದುವಿನಂತೆ ಮೂಡಿ ಪುನಃ ಜಗದಿ ॥ 1 ॥   ಮಟ್ಟತಾಳ  ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ  ಮರುತಾಗಮ ಘಳಿಸಿ  ತುರುರಕ್ಷಕ ದಾಸ - ವರ್ಯರ ಕರುಣದಲಿ ಶರಧಿಜ ಭಾಗದಲಿ ಧರಣಿಪ ವಿಠಲೆಂಬೋ ಸುರುಚರದಂಕಿತವ  ದೊರಕಿಸಿ ಪ್ರಾಕೃತದಿ  ಕರುಣಾಕರ ಶ್ಯಾಮಸುಂದರನ ವರ್ಣಿಸಿದಾ  ಪರಮ ಭಾಗವತರ ನೆರೆನಂಬು ನಿರುತಾ  ॥ 2 ॥   ತ್ರಿವಿಡಿತಾಳ  ಇವರ ಸಂದರುಶನ ಭವಬಂಧ ಮೋಚನ ಇವರ ಚರಣ ಧ್ಯಾನ ಗಂಗಾ ಸ್ನಾನ ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ ಇವರ ಕವನ ಸ್ತವನ ಶ್ರವಣದಿಂದ ಪವನ ಸಚ್ಛಾಸ್ತ್ರದ  ಪ್ರವಚನ ಫಲವಕ್ಕು ಇವರಿದ್ದ ಸ್ಥಳ ...
SRI PANDURANGA MAHIMA SULADI ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಪಾಂಡುರಂಗ ಮಹಿಮಾ ಸುಳಾದಿ   ರಾಗ ಅಭೋಗಿ   ಧ್ರುವತಾಳ  ಸುಂದರಮಯವಾದ ದ್ವಂದ್ವ ಚರಣವನ್ನು  ಇಂದು ಕಂಡೆನು ಬಂದು  ಅಂದು ಕಾಳಿಂದಿಯಾ ಧುಮುಕಿ ನಾ -  ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು  ದುಂದುಭಿ ರಭಸಾ ಮೊರಿಯೆ ಗಗನ -  ದಿಂದಲೆ ಪೂಮಳೆ ಬಿಡದೆ ಸುರಿಯೆ । ವೃಂದಾರಕವೃಂದ ಚಂದಾಗಿ ಸರಸಿಜ  ನಂದನ ಸಹಿತ ವಂದನೆ ಗೈವುತಿರೆ  ನಂದನಂದನ ಗೋಪಿಯ ಕಂದ  ಅಂದಂದಾಡಿದ ಗೋವಿಂದ ವಿಜಯವಿಟ್ಠಲಾ  ನಿಂದು ನಲುವಿಂದಾ ಮೆರೆವನು ಇಲ್ಲಿ  ಇಂದಿರೆಯರಸನ ನಂದ ಮೂರುತಿಯಾ ॥ 1 ॥   ಮಟ್ಟತಾಳ  ಇದೆ ವೈಕುಂಠಾ ಇದೆ ಶ್ವೇತದ್ವೀಪಾ ಇದೆ ಅನಂತಾಸನ ಇದೆ ಗೋಕುಲವು ಇದೆ ವೃಂದಾವನ ಇದೆ ದ್ವಾರಾವತಿ  ಇದೆ ನಮ್ಮಾ ಯದುಪತಿ ಇಪ್ಪಾನಗರಾ । ಇದೆ ನಮ್ಮ ತಿರುಮಲಾ ವಿಜಯವಿಟ್ಠಲ ನಿಪ್ಪಾ ಸಂಭ್ರಮವೋ ॥  2 ॥   ತ್ರಿವಿಡಿತಾಳ  ಧನ್ಯ ನಾನಾದೆನೋ ದಾನ್ನವಾರಿಯಾ ಕಂಡು  ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ  ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ  ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ  ಅನ್ನ್ಯಾ ದೇವರಿಗೆ ಶಿರವಾಗಿ ಶಿರವಾಗಿ ಶ -  ರಣು ಶರಣೆನ್ನಿರೋ ಆವಾವ ಕಾಲದಲ್ಲಿ  ರನ್ನ ಕೈ ಸೇರಲು ಗಾಜುಮಣಿ ಬಯಸುವೆನೆ  ತ...
  KALI NIGRAHA SULADI ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ  (ಗುರುವಿಜಯವಿಟ್ಠಲ ಅಂಕಿತ)  ಕಲಿನಿಗ್ರಹ ಸುಳಾದಿ  ಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನ  ತಲೆಯ ಮೇಲೆ ಕಾಲು ಇಟ್ಟು ನಡಿವೆ ಸತತ ಬಲಹೀನನೆಂದು ತಿಳಿದು ನೈಜ ಸ್ವಭಾವದಿಂದ ಕುಲಗೇಡಿ ಚೇಷ್ಟೆಗಳ ಪ್ರೇರಿಸುವಿ ಮಲಿನಯುಕ್ತನೆ ನಿನ್ನ ಕರ್ತೃತ್ವ ಎನ್ನ ಮೇಲೆ ನೆಲೆಯಾಗಿ ನಿಂದಿರದು ಎಂದೆಂದಿಗೆ ತಿಳಿದು ನೋಡಿಕೋ ಉಭಯ ಅಂಶಾಂಶದಲ್ಲಾಗೆ  ತಲಿಯ ಬಾಗಿದವನೆ ದುರುಳ ನಿನಗೆ  ಬಲವೀರ್ಯನಾದ ಎನ್ನ ಒಡಿಯನ್ನ ಬಲದಿಂದ  ಚಲಿಸದಲೇ ನಿನ್ನ ತೃಣಕೆ ಬಗೆದು ಕೆಲವು ಶಸ್ತ್ರದಿಂದ ಕೆಲವು ವಾಕ್ಯದಿಂದ ತಲೆ ಎತ್ತದಂತೆ ಮಾಡಿದ್ದದನು ಮರದೇ ಮೊಲದಂತೆ ಜರಿದು ಈಗ ಮದೋನ್ಮತ್ತವಾದ ಬಲದಿಂದ ನಿನ್ನ ಯುಗವೆಂದು ತಿಳಿದು ಮಲತ ಗರ್ವದಿಂದ ಮಾಯಾ ಮಾಡುವಿ ಸುಜನ - ಕುಲ ದೂಷಕನೆ ಬಲು ಕುಜನ ಶಿರೋಮಣಿಯೆ  ಬಲಿಗೆ ಬಲಿಯಾದ ಗುರುವಿಜಯವಿಟ್ಠಲರೇಯನ  ಬಲ ಎನಗಿರಲಾಗಿ ಎದುರೇ ನೀನು ॥ 1 ॥  ಮಟ್ಟತಾಳ  ಬಲವುಳ್ಳವನೆಂದು ಬಲು ಗರ್ವದಲಿಂದ ಬಳಲುವದು ಸಲ್ಲಾ ಲಜ್ಜೆಯನು ತೊರೆದು ಬಲಯುಕ್ತ ನೀನಾಗೆ ಅಂದಿನ ಕಾಲದಲ್ಲಿ ಮಲತ ಮಲ್ಲರ ಗಂಡನೆನಿಪರ ಕೈಯಿಂದ ತಲಿಯ ತುಳಿಸಿಕೊಂಡಿ ಚರಣ ತಳದಿಂದ ಹಳಿ ಹಳಿ ನಿನ್ನ ಪೌರುಷತನ ಸುಡಲಿ ಭಳಿರೆ ಭಳಿರೆ ಗುರುವಿಜಯವಿಟ್ಠಲರೇಯನ  ಒಲಿಮೆಯುಳ್ಳವರೆಲ್ಲ ನಿನಗಂಜುವರೇನೊ ॥ 2 ॥  ತ್ರಿವಿಡಿತಾಳ  ಬಲಹೀನ ಮನು...
  PRANAVA MANTRA SULADI ಶ್ರೀ ವಿಜಯದಾಸಾರ್ಯ ವಿರಚಿತ  ಪ್ರಣವ ಮಂತ್ರ ಸುಳಾದಿ  (ತಾರ ಓಂಕಾರ ವ್ಯಾಹೃತಿ ಅಷ್ಟಾಕ್ಷರಾದಿ ಮಂತ್ರಗಳು , ಮಂತ್ರ ಮಾಡುವ ಕ್ರಮ, ನ್ಯಾಸ ವಿಚಾರ.)   ರಾಗ ಭೌಳಿ   ಧ್ರುವತಾಳ  ತಾರ ಮಂತ್ರವೆ ಜಪಿಸು ತವಕದಿಂದಲಿ ಭವ - ತಾರವಾಗುವದು ಲಾಲಿಸು ಚನ್ನಾಗಿ ಈರೆರಡು ಶೀರ್ಷ ಪಿಂಡೀಕೃತವಾದ ಓಂ - ಕಾರ ನಿರಂತರ ಸಾರವೆನ್ನು ಏಕಾವರ್ಣ ಶ್ರೀರಮಣ ನಾರಾಯಣನ ಪ್ರತಿಪಾದಿಸುತ್ತಿದೆ ಮೀರಿದ ದೈವವೆಂದು ಒಲಿಸಿ ಒಲಿಸೀ ತಾರತಮ್ಯವೆ ಉಂಟು ಇದನೆ ಗ್ರಹಿಸುವಲ್ಲಿ ಆರಾರ ತಕ್ಕ ಯೋಗ್ಯತ ಸಾಧನ ಭಾರತದಲ್ಲಿ ಕೇಳು ವೈದಿಕ ಲೌಕಿಕ ವ್ಯವ - ಹಾರ ಮಾತಿಗೆ ಇದೆ ಪ್ರಥಮ ವ್ಯಕ್ತಿ ಕಾರಣ ಕಾರ್ಯದಲ್ಲಿ ವ್ಯಾಪ್ತವಾಗಿದೆ ವಿ - ಸ್ತಾರ ಬೊಮ್ಮಾಂಡದೊಳು ನಿಬಿಡಿಯಾಗಿ ದ್ವೀರಷ್ಟ ಪಂಚ ಪಂಚ ಚತುರಷ್ಟಾ ಚಮುತಾಗಿ ಚಾರು ಪ್ರಕಾಶದಿಂದ ಅಭಿವ್ಯಕ್ತಿಯೊ ಆರು ಎರಡರಿಂದ ತಿಳಿಯಬೇಕು ಮೂರುತಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ ಅಂ - ತರಾತ್ಮ ಪರಮಾತ್ಮ ಜ್ಞಾನಾತ್ಮ ಹರಿಯಾ ಈ ರೀತಿಯಲ್ಲಿ ನೆನೆಸು ಒಂದೊಂದು ಸ್ಥಾನದಲ್ಲಿ ವಾರವಾರಕೆ ಬಿಡದೆ ಹೃದಯಾದಲ್ಲಿ ನಾರಾಯಣ ದೇವ ವಿಜಯವಿಟ್ಠಲರೇಯ  ಪಾರತಂತ್ರ ರಹಿತ ಸರ್ವಭೂತಸ್ಥ ಕಾಣೋ ॥ 1 ॥   ಮಟ್ಟತಾಳ  ಪ್ರತಿ ಪ್ರತಿ ಮಂತ್ರಕ್ಕೆ ಪ್ರಣವ ನುಡಿಯಬೇಕು ಅತಿಶಯವನೆ ಕೇಳು ಆನಾದಿ ಇದೆ ಸಿದ್ಧ ಯತಿಗಳಿಗೆ ಪ್ರಣವ ಮುಖ್ಯ ಸಾಧನ ಕಾಣೋ ಇತರಾಶ್ರಮ ಜನಕೆ ಯೋಗ್...
TIRUVENGALESHA MAHIMA SULADI   ಶ್ರೀ ಪುರಂದರದಾಸಾರ್ಯ ವಿರಚಿತ  ತಿರುವೆಂಗಳೇಶ ಮಹಿಮಾ ಸುಳಾದಿ   ರಾಗ : ಕಾಂಬೋಧಿ  ಧೃವತಾಳ  ಅಚ್ಯುತಾನಂತ ಗೋವಿಂದ ಶ್ರೀ ಮುಕುಂದ ಸಚ್ಚಿದಾನಂದ ಸ್ವರೂಪ ಭಕ್ತ ವತ್ಸಲ ಪುರುಷೋತ್ತಮ ಪರಂಧಾಮಾ ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಭಾರ್ಗವ ರಾಘವ ಕೃಷ್ಣ ಬುದ್ಧಾವತಾರ ಕಲ್ಕಿ ನಾರಾಯಣ ಅಪ್ಪಾರಮಹಿಮ ನಾರಾಯಣ ಅನಂತ ಅವತಾರ ನಾರಾಯಾಣ ಸರ್ಪಶಯನನೆ ನಾರಾಯಣ ಸಿರಿ ಪುರಂದರವಿಠ್ಠಲ ವಿಭುವೆ ತಿರುವೆಂಗಳಪ್ಪ ಎನ್ನಪ್ಪ ಅಚ್ಯುತಾನಂತ ಗೋವಿಂದ ॥೧॥  ಮಟ್ಟತಾಳ  ಮಂಗಳ ವಕ್ಷದಲ್ಲಿ ಸಂಗ ಸುಖ ಇಪ್ಪಳವ್ವೆ ಅಂಗನೆ ಲಕುಮೆವ್ವೆ ಭಂಗರವಾದಳವ್ವೆ ಶೃಂಗರವಾದಳವ್ವೆ ಅಂಗನೆ ಲಕುಮೆವ್ವೆ ರಂಗ ಪುರಂದರವಿಠ್ಠಲಗೆ ಭಂಗರವಾದಳವ್ವೆ ಶೃಂಗರವಾದಳವ್ವೆ ॥೨॥  ತ್ರಿವಿಡಿತಾಳ  ಉಟ್ಟಿದ್ದ ದಟ್ಟಿಯು ಕಟ್ಟಿದ ಕಠಾರಿ ತೊಟ್ಟಂಬು ತೋಲಾತ್ಮ ಮೆಟ್ಟಿದ್ದ ಮೆಟ್ಟು ಕಟ್ಟಾಳು ಖಳರ ಕೆಂದೊಟ್ಟುವ ಕಡು ಧಿಟ್ಟ ಸೃಷ್ಟಿಪಾ ಪುರಂದರವಿಠ್ಠಲರೇಯಾ ॥೩॥  ಅಟ್ಟತಾಳ  ಇದೆ ದನುಜ ಮರ್ದನ ಚಕ್ರಹಸ್ತ ಇದೇ ವೇದಮಯ ಶಂಖಹಸ್ತ ಇದೇ ಅಮೃತವ ನೀಡಿದ ಹಸ್ತ ಇದೇ ತಿರುವೆಂಗಳಪ್ಪನ ಕುರುಹು ಇದೇ ಪುರಂದರವಿಠ್ಠಲನ ಮೂರುತಿ ॥೪॥  ಆದಿತಾಳ  ಕಿರೀಟ ಕುಂಡಲಧರನ ಕಂಡೆ ಸರಮಣಿಗಳ ಭೂಷಣನ್ನ ಕಂಡೆ ಸಿರಿಯಿಪ್ಪ ವಕ್ಷಸ್ಥಳನ್ನ ಕಂಡೆ ವರಪ್ರದನ ಕಂಡೆ ವರದೇಶನ ಕಂಡೆ ತಿರುವೆಂಗಳಪ್ಪನ ಚರಣವ ಕಂಡೆ...