MADHAVANANGHRI NITYA VADIRAJARA SULADI
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ |
ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ |
ಸಾದರದಿಂದ ಭಜಿಸಿ ಮೇದಿನಿಗೆ ಭಾರ
ವಾದ ಮಾಯಾ ವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ
ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ |
ಸಾದರದಿಂದ ಭಜಿಸಿ ಮೇದಿನಿಗೆ ಭಾರ
ವಾದ ಮಾಯಾ ವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ
ವೇದವೇದ್ಯ "ವಿಜಯವಿಠಲ" ತಾನು| ಆದರದಿಂದವರ ಭುಜದಿ ಹಯವಕ್ತ್ರನಾಗಿ |
ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ |
ಶ್ರೀಧರನ ಮಹಿಮೆ ಸಾಧುಜನರು ಕೇಳಿ ||
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ |
ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ |
ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ |
ಸಡಗರದ ಭಕ್ಷ ಪಾಯಸ ಘೃತ ನೀಡೆ |
ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು |
ಕಡಗೋಲು ವೇಣು ಪಿಡಿದುಡಿಪಿಲಿನಿಂದ |
ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು |
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||
ತಾಮಸ ಗುಣವುಳ್ಳ ಪಾಮರ ಜನರಿಗೆ |
ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ |
ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |
ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ |
ಶ್ರೀಧರನ ಮಹಿಮೆ ಸಾಧುಜನರು ಕೇಳಿ ||
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ |
ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ |
ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ |
ಸಡಗರದ ಭಕ್ಷ ಪಾಯಸ ಘೃತ ನೀಡೆ |
ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು |
ಕಡಗೋಲು ವೇಣು ಪಿಡಿದುಡಿಪಿಲಿನಿಂದ |
ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು |
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||
ತಾಮಸ ಗುಣವುಳ್ಳ ಪಾಮರ ಜನರಿಗೆ |
ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ |
ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |
ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ |
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ |
ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು |
ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ||
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ-
ಗ್ವಿಜಯ ಮಾಡಲು ಪುರಕೆ |
ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು |
ಅಜನ ಪದಕೆ ಬಂದು ಅಖಿಲರನಾಳಿದಾ |
ನಿಜವಾಯು ಹನುಮ ಭೀಮ ಮಧ್ವನೆನಿಸಿದ |
ವಿಜಯಸಾರಧಿ ಪಾದ ರಜದ ಮಹಾತ್ಮೆಯಿಂದ |
ಗಜವೈರಿ ಭಂಜನ " ವಿಜಯವಿಠ್ಠಲ"ನ್ನ|
ಭಜನೆಯ ಗೈಯುತ ಬಹುಕಾಲದಿ |
ಋಜುಗಣ ಪಂಕ್ತಿಯೊಳಗೆ ಕುಳಿತಾ |
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮನವುಳ್ಳ |
ಸುಜನ ಶಿರೋಮಣಿ ವಾದಿರಾಜನು ತಾ- |
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ |
ಅಜಪದಕೆ ಸಲ್ವನು ಲೇಶ ಸಂಶಯಬೇಡಿ |
ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿರೋ ||
ಮನಶುದ್ಧರಾಗಿ ಮಾಧವನಂಘ್ರಿಯನು |
ದಿನದಿನದಲ್ಲಿ ನಂಬಿಕೊಂಡಿಪ್ಪರೆ |
ಅನವರತಾನಂದ ಗುರು ಮಧ್ವರಾಯರ ದಿವ್ಯ |
ವನಜಪಾದಂಗಳ ಸ್ಮರಿಸಲು |
ಹನುಮೇಶ ನಮ್ಮ ಶಿರಿ "ವಿಜಯವಿಠ್ಠಲ" ತಾನು |
ಮುನಿ ವಾದಿರಾಜರ ಸಾಮಾನ್ಯರೆಂತೆಂದು |
ಎಣಿಸಿದವರನ್ನು ಘನವಾಗಿ ಶಿಕ್ಷಿಪ |
ಇನತನುಜೋದ್ಭವ ಕೋಪದಿಂದ | ವಾದಿರಾಜರ ಮಹಿಮೆ-
ಯನು ಕೊಂಡಾಡಿ ಅನುದಿನ ಸುಜನರು ||
ಜತೆ
ಮೋದತೀರ್ಥರ ಮತ ಸೇನಾಧಿಪತಿಯಾದ |
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ |
ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು |
ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ||
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ-
ಗ್ವಿಜಯ ಮಾಡಲು ಪುರಕೆ |
ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು |
ಅಜನ ಪದಕೆ ಬಂದು ಅಖಿಲರನಾಳಿದಾ |
ನಿಜವಾಯು ಹನುಮ ಭೀಮ ಮಧ್ವನೆನಿಸಿದ |
ವಿಜಯಸಾರಧಿ ಪಾದ ರಜದ ಮಹಾತ್ಮೆಯಿಂದ |
ಗಜವೈರಿ ಭಂಜನ " ವಿಜಯವಿಠ್ಠಲ"ನ್ನ|
ಭಜನೆಯ ಗೈಯುತ ಬಹುಕಾಲದಿ |
ಋಜುಗಣ ಪಂಕ್ತಿಯೊಳಗೆ ಕುಳಿತಾ |
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮನವುಳ್ಳ |
ಸುಜನ ಶಿರೋಮಣಿ ವಾದಿರಾಜನು ತಾ- |
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ |
ಅಜಪದಕೆ ಸಲ್ವನು ಲೇಶ ಸಂಶಯಬೇಡಿ |
ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿರೋ ||
ಮನಶುದ್ಧರಾಗಿ ಮಾಧವನಂಘ್ರಿಯನು |
ದಿನದಿನದಲ್ಲಿ ನಂಬಿಕೊಂಡಿಪ್ಪರೆ |
ಅನವರತಾನಂದ ಗುರು ಮಧ್ವರಾಯರ ದಿವ್ಯ |
ವನಜಪಾದಂಗಳ ಸ್ಮರಿಸಲು |
ಹನುಮೇಶ ನಮ್ಮ ಶಿರಿ "ವಿಜಯವಿಠ್ಠಲ" ತಾನು |
ಮುನಿ ವಾದಿರಾಜರ ಸಾಮಾನ್ಯರೆಂತೆಂದು |
ಎಣಿಸಿದವರನ್ನು ಘನವಾಗಿ ಶಿಕ್ಷಿಪ |
ಇನತನುಜೋದ್ಭವ ಕೋಪದಿಂದ | ವಾದಿರಾಜರ ಮಹಿಮೆ-
ಯನು ಕೊಂಡಾಡಿ ಅನುದಿನ ಸುಜನರು ||
ಜತೆ
ಮೋದತೀರ್ಥರ ಮತ ಸೇನಾಧಿಪತಿಯಾದ |
ವಾದಿರಾಜ ಮುನಿಯು "ವಿಜಯವಿಠ್ಠಲ" ದಾಸಾ
Comments
Post a Comment