RAYARA HASTODAKA SULADI

ಶ್ರೀ ರಾಯರ ಹಸ್ತೋದಕ ಸುಳಾದಿ

(ಶ್ರೀ ಗುರುಜಗನ್ನಾಥದಾಸರ ರಚನೆ)


 ರಾಗ ಅಭೋಗಿ 

 ಧ್ರುವತಾಳ 

ಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆ
ಪರಮ ಭಕುತಿಯಿಂದ ಅರುಪಿಸೋ ಬಗೆಯನು
ಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆ
ಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನು
ವರ ಯತಿಗಳನ್ನೋದಕ ಗಿರಿ ಸಾಗರ ಸಮವು
ಮರಳಿ ನೀಡೋದು ಜಲ ನಿರುತದಲ್ಲಿ
ವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲ
ವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದು
ವರ ವನಸ್ಥನಿಗಿಡೆ ವರ ಶತವೆನಿಸುವೋದು
ಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯ
ಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯ
ಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನು
ಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದು
ವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮ 
 ಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು ॥ 1॥

 ಮಟ್ಟತಾಳ 

ಅನ್ನ ಸಾಮಗ್ರದಲ್ಲಿ ಇಂದು ಕೇಶವ ಎನ್ನಿ
ಮುನ್ನೆ ಭಾರತಿ ಪರಮಾನ್ನ ನಾರಾಯಣ
ಇನ್ನು ಭಕ್ಷಕೆ ಸೂರ್ಯರನ್ನ ಮಾಧವ, ಘೃತಕೆ
ಚೆನ್ನೆ ಲಕ್ಷುಮಿ ಗೋವಿಂದನು ಎನ್ನಿ
ಮುನ್ನ ಕ್ಷೀರಕೆ ವಾಣಿ ಅನ್ನಿ ವಿಷ್ಣುದೇವ
ಘನ್ನ ಮಂಡಿಗೆ ಬ್ರಹ್ಮ ಇನ್ನು ಮಧುಘಾತಿ
ಬೆಣ್ಣೆಯಲ್ಲಿ ವಾಯು ಚೆನ್ನ ತ್ರಿವಿಕ್ರಮ 
ಮುನ್ನ ದಧೀಯಲ್ಲಿ ಸೋಮ ವರುಣ ವಾಮ -
ನನ್ನ ತಿಳಿ, ಸೂಪ ಚೆನ್ನ ವೀಪ ಶ್ರೀಧರ 
ಮುನ್ನೆ ಶಾಖ ಪತ್ರ ಸ್ವನ್ನಗದಿರ ಮಿತ್ರ
ಚೆನ್ನ ಹೃಷೀಕೇಶ, ಇನ್ನು ಫಲದಲ್ಲಿ
ಘನ್ನ ಶೇಷಾನಲ್ಲಿ ರನ್ನ ಪದುಮನಾಭ
ಮುನ್ನೆ ಆಮ್ಲದಲ್ಲಿ ಸ್ವನ್ನಗೌರೀ ಅಲ್ಲಿ
ಅನ್ನು ದಾಮೋದರ ಅನ್ನಾಮ್ಲ ಪತಿ ರುದ್ರ 
ಚೆನ್ನ ಜಯಾಪತಿ ಮುನ್ನೆ ಶರ್ಕರ ಶತ -
ಮನ್ಯು ವಾಸುದೇವ ಘನ್ನಮಹಿಮ ಗುರುಜ - 
 ಗನ್ನಾಥವಿಠಲ ಪಾವನ್ನ ಪದಯುಗ
ಮನ್ನದೊಳಗೆ ನೆನೆಸುತಿರು  ॥ 2 ॥

 ತ್ರಿವಿಡಿತಾಳ 

ಪರಿಪರಿ ಉಪಸ್ಕಾರ ಪರಮೇಷ್ಠಿ ಪ್ರದ್ಯುಮ್ನ
ಅರಿವೋದು ಕಟು ಯಮ ವರ ಅನಿರುದ್ಧನ್ನ
ವರ ಇಂಗು ಸಾಸಿವಿ ಏಲ ಮರೀಚಿ
ಜೀರಿಗಿಯಲ್ಲಿ ಕರ್ಪೂರ ಚಂದನ ಕೇ-
ಶರ ಬಗೆಬಗೆ ವಿಧ ಪರಿಮಳ ದ್ರವ್ಯಕೆ
ಸ್ಮರನು ಪುರುಷೋತ್ತಮ ದೇವನಿಪ್ಪ
ವರರಸ ಇತ್ಯಾದಿ ಘೃತ ತೈಲ ಪಕ್ವದಿ
ಇರುತಿಹ ಜಯಂತನಧೋಕ್ಷಜ ಮೂರುತಿ
ಸ್ಮರಿಸು ಕೂಷ್ಮಾಂಡ ತಿಲ ಮಾಷ ಸಂಡಿಗೆಯಲಿ
ವರ ದಕ್ಷ ನರಹರಿ ದೇವನ ನೆನಿಸು
ಇರುತಿಪ್ಪ ಮನು ಮಾಷ ಭಕ್ಷ ಅ -
ಧ್ವರ ಕಾರ್ಯಕಚ್ಯುತ ಮೂರುತಿಯೋ
ಸುರುಚಿ ಲವಣದಲ್ಲಿ ನಿರಋತಿ ಜನಾರ್ಧನ
ಇರುತಿಹ ಶಾಖ ಫಲ ರಸಕೆ ಪ್ರಾಣೋಪೇಂದ್ರ
ಪರಮಪುರುಷ ದೇವನಿಹನೆಂದು ತಿಳಿವೋದು
ವರತಾಂಬೂಲ ಗಂಗಾ ಹರಿನಾಮಾನಿರುವೋನು
ವರ ಸ್ವಾದೋದಕದಲ್ಲಿ ಇರುತಿಪ್ಪ ಬುಧನಲ್ಲಿ
ಇರುತಿಹ ಕೃಷ್ಣದೇವ ಗುರುಜಗನ್ನಾಥವಿಠ್ಠಲ - 
ನರಿತು ನೀಡಲು ನಮ್ಮ ಗುರು ಕೈಯ್ಯ ಕೊಂಬೋನು ॥ 3 ॥

 ಅಟ್ಟತಾಳ 

ಒಂದೊಂದು ಕವಳ ಗೋವಿಂದನ್ನ ಸ್ಮರಿಸುತ್ತ
ಇಂದು ನಿಭಾ ಭಕ್ಷ್ಯ ಕವಳಕ್ಕೆ ಅಚ್ಯುತ -
ನೆಂದು, ಶಾಖ ಕವಳ ಧನ್ವಂತ್ರಿ ಸ್ಮರಿಸುತ್ತ
ಮುಂದೆ ಪರಮಾನ್ನ ಒಂದೊಂದು ಕವಳಕ್ಕೆ
ಅಂದು ವಿಷ್ಣು ಪಾಂಡುರಂಗನ್ನ ಸ್ಮರಿಸುತ್ತ
ಕುಂದಿಲ್ಲದಾ ಬೆಣ್ಣೆ ಉಂಬುವೋ ಕಾಲದಲ್ಲಿ
ಸುಂದರ ಮೂರುತಿ ತಾಂಡವ ಕೃಷ್ಣನು 
ಛಂದ ದಧ್ಯನ್ನ ಕವಳಕ್ಕೆ ಶ್ರೀನಿವಾಸ -
ನೆಂದು ಸುತೈಲ ಘೃತ ಪಕ್ವಕೆ ವೇಂಕಟ -
ನೆಂದು ಕದಲಿ ದ್ರಾಕ್ಷಿ - ಖರ್ಜೂರ ದಾಡಿಮ
ಛಂದ ನಾರಿಕೇಳ ಚೂತ ಧಾತ್ರಿ ಜಂಬೂ
ಕಂದಮೂಲ ಫಲ ಭಕ್ಷಣ ಕಾಲಕ್ಕೆ
ನಂದನಂದನ ಬಾಲಕೃಷ್ಣನ್ನ ಸ್ಮರಿಸುತ್ತ -
ಲ್ಲಿಂದ ಜಲಪಾನದಲ್ಲಿ ವಿಷ್ಣುದೇವ 
ನಿಂದ್ರಾದೆ ವರತಾಂಬೂಲ ಕವಳದಲ್ಲಿ
ಸುಂದರ ಪ್ರದ್ಯುಮ್ನ ದೇವನ ಸ್ಮರಿಸುತ್ತ
ಲ್ಲಿಂದ ಆಪೋಶನ ದ್ವಯದಲ್ಲಿ ವಾಯುಸ್ಥ
ಇಂದಿರಾ ರಮಣ ಮುಕುಂದನ ಧೇನಿಸಿ
ನಂದಾದಿ ಈ ರೀತಿ ಚಿಂತಿಸಿ ನೀಡಲು 
ಸುಂದರ ಗುರುರಾಘವೇಂದ್ರಾಂತರ್ಗತ ನಮ್ಮ 
ಇಂದಿರಾಪತಿ ಗುರುಜಗನ್ನಾಥವಿಠಲ ತಾ -
ನಂದದಿ ಕೈ ಕೊಂಡು ಮನ್ನಿಸಿ ಪೊರೆವೋನು  ॥4॥

 ಆದಿತಾಳ 

ಅರಿತು ಈ ರೀತಿಂದ ನಿರುತ ಹಸ್ತೋದಕ 
ಗುರುಗಳಿಗರ್ಪಿಸಿ ತ್ವರಿತದಿ ಕೈಕೊಂಡು
ಪರಮಸುಖವಿತ್ತು ಪರಿಪಾಲಿಪರಿಹ -
ಪರದಲ್ಲಿ ಇವರಿಗೆ ಬರುವ ದುರಿತ 
ತರಿದು ಪೊರೆವರು ಇಲ್ಲವೊ ಇವರನ್ನ ಬಿಟ್ಟರೆ 
ಹರಿಯು ಅಲ್ಲವೆ ಮತ್ತನ್ಯರು ಆರೈ
ಹರಿ ತಾ ಮುನಿಯೇ ಗುರುಗಳು ಕಾಯುವರು
ಗುರುಗಳು ಮುನಿಯೇ ಹರಿ ತಾ ಕಾಯನು
ವರಶಾಸ್ತ್ರ ಪುರಾಣವು ಪೇಳೋದು
ಗುರುವೆ ತಾಯಿತಂದೆ ಗುರುವೆ ಮಮದೈವ
ಗುರುವೆ ಪರಿವಾರ ಗುರುವೆ ಗತಿ ನಿತ್ಯ
ಗುರುವೆ ಪಾಲಿಸೆಂದು ಗುರುಗಳ ಭಜಿಸೆ 
ಗುರುವು ದೊರೆತರೆ ಹರಿ ತಾ ದೊರೆವನು
ಗುರುವು ಮರೆತರೆ ಹರಿ ತಾ ಮರೆವನು
ಗುರುಗಳ ಪಾದ ಶಿರದ ಪರಿಯಂತ ಸ್ಮರಿಸಲು ಪಾಪ
ಪರಿಹಾರವಾಗೋದು ಗುರುವಂತರ್ಗತ ನಮ್ಮ 
 ಗುರುಜಗನ್ನಾಥವಿಠ್ಠಲ ಪರಮ ಹರುಷ ಬಡುವೋನು  ॥5॥

 ಜತೆ 

ಚಿಂತಿಸಿ ಪದಾರ್ಥ ಇಂತು ನೀಡಲು ಗುರು 

ವಂತರ್ಗತ ಗುರುಜಗನ್ನಾಥವಿಠ್ಠಲ ಕೊಂಬ

Comments

Popular posts from this blog

Kaksha Taratamya