NINDA VYANGA STOTRA SULADI


 ಶ್ರೀ ಪುರಂದರದಾಸಾರ್ಯ ವಿರಚಿತ 

 ನಿಂದಾ - ವ್ಯಂಗ್ಯ ಸ್ತೋತ್ರ ಸುಳಾದಿ 



 ಧೃವತಾಳ 

ಗೋಪಿ ದೇವಿಯಂತೆ ಒರಳಿಗೆ ಕಟ್ಟಾದೆ
ಬರಿದೆ ದೈನ್ಯವ ಬಡುವೆನಾ
ಭೃಗುಮುನಿಯಂತೆ ನಿನ್ನೆದೆ ಮೇಲೊದಿಯಾದೆ
ಬರಿದೆ ದೈನ್ಯವಾ ಬಡುವೆನಾ
ಭೀಷ್ಮನಂತೆ ನಿನ್ನ ಹಣಿಯ ಒಡಿಯದಲೆ
ಬರಿದೆ ದೈನ್ಯವಾ ಬಡುವೆನಾ
ಕೊಂಕಣಿಗಾರ ಯಮ್ಮಿಗೆ ಕೊಡತೆ ಮದ್ದಂಬಂತೆ
ನಿನಗವರೇ ಮದ್ದೋ ಶ್ರೀಪುರಂದರವಿಠ್ಠಲ ॥೧॥

 ಮಟ್ಟತಾಳ 

ಕಾಳಿಂಗನಂತೆ ನಿನ್ನ ಕಟ್ಟಿ ಬಿಗಿಯಬೇಕು
ಬಲಿಯಂತೆ ನಿನ್ನನು ಬಾಗಿಲ ಕಾಯಿಸಬೇಕು
ಕುಬುಜೆಯಂತೆ ನಿನ್ನ ಪಿಡಿದು ಎಳಿಯಬೇಕು
ಇವರ ನಿನಗೆ ಬೇಕೊ ಪುರಂದರವಿಠ್ಠಲ ॥೨॥

 ತ್ರಿವಿಡಿತಾಳ 

ಅರ್ಜುನನಂತೆ ನಿನ್ನ ಕೈಲಿ ಹಗ್ಗವ ಕೊಟ್ಟು
ಬಂಡಿಯ ಕುದುರೆಗಳನು ಹೊಡಿಸಬೇಕು
ಧರ್ಮತನಯನಂತೆ ಬಾ ಹೋಗು ಎನಬೇಕು
ಶಬರಿ ಕೊಟ್ಟದ್ದೇ ನಿನಗೆ ಕೊಡಲಿ ಬೇಕು
ನಿನಗಂಜದಿರಬೇಕು ಪುರಂದರವಿಠ್ಠಲ ॥೩॥

 ಅಟ್ಟತಾಳ 

ಇಂದ್ರನಂತೆ ಮಳೆಗರೆದು ಗೋಕುಲದಲ್ಲಿ
ನಿಂದಿರಾಸಬೇಕು ಏಳು ದಿನ
ಕುಂದದೆ ಬೆಟ್ಟವ ಪೊರೆಸಿ ದಣಿಸಬೇಕು
ವೃಂದಾರಕರಂತೆ ಅಂಜದಲೇ
ಸಂದೇಹ ಮಾಡಬಾರದೆಲೋ ಈ ಮಾತಿಗೆ
ಸಿಂಧುಶಯನವಾಸ ಪುರಂದರವಿಠ್ಠಲ ॥೪॥

 ಏಕತಾಳ 

ಬಲಿಯಂತೆ ಮುಕುಟವ ಕಿತ್ತಿಕೊಂಡೋಡಬೇಕು
ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು
ನಿನಗಂಜದಿರಬೇಕು ಪುರಂದರವಿಠ್ಠಲ ॥೫॥

 ಜತೆ 

ಅಂಜುವರಿಗೆ ಅರಳಿಮರನೆ ರಕ್ಕಸನಂತೆ
ಅಂಜಬಾರದೊ ನಿನಗೆ ಪುರಂದರವಿಠ್ಠಲಾ ॥೬॥

Comments

Popular posts from this blog

Kaksha Taratamya