SRI PANDURANGA MAHIMA SULADI
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಪಾಂಡುರಂಗ ಮಹಿಮಾ ಸುಳಾದಿ
ರಾಗ ಅಭೋಗಿ
ಧ್ರುವತಾಳ
ಸುಂದರಮಯವಾದ ದ್ವಂದ್ವ ಚರಣವನ್ನು
ಇಂದು ಕಂಡೆನು ಬಂದು
ಅಂದು ಕಾಳಿಂದಿಯಾ ಧುಮುಕಿ ನಾ -
ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು
ದುಂದುಭಿ ರಭಸಾ ಮೊರಿಯೆ ಗಗನ -
ದಿಂದಲೆ ಪೂಮಳೆ ಬಿಡದೆ ಸುರಿಯೆ ।
ವೃಂದಾರಕವೃಂದ ಚಂದಾಗಿ ಸರಸಿಜ
ನಂದನ ಸಹಿತ ವಂದನೆ ಗೈವುತಿರೆ
ನಂದನಂದನ ಗೋಪಿಯ ಕಂದ
ಅಂದಂದಾಡಿದ ಗೋವಿಂದ ವಿಜಯವಿಟ್ಠಲಾ
ನಿಂದು ನಲುವಿಂದಾ ಮೆರೆವನು ಇಲ್ಲಿ
ಇಂದಿರೆಯರಸನ ನಂದ ಮೂರುತಿಯಾ ॥ 1 ॥
ಮಟ್ಟತಾಳ
ಇದೆ ವೈಕುಂಠಾ ಇದೆ ಶ್ವೇತದ್ವೀಪಾ
ಇದೆ ಅನಂತಾಸನ ಇದೆ ಗೋಕುಲವು
ಇದೆ ವೃಂದಾವನ ಇದೆ ದ್ವಾರಾವತಿ
ಇದೆ ನಮ್ಮಾ ಯದುಪತಿ ಇಪ್ಪಾನಗರಾ ।
ಇದೆ ನಮ್ಮ ತಿರುಮಲಾ ವಿಜಯವಿಟ್ಠಲ ನಿಪ್ಪಾ ಸಂಭ್ರಮವೋ ॥ 2 ॥
ತ್ರಿವಿಡಿತಾಳ
ಧನ್ಯ ನಾನಾದೆನೋ ದಾನ್ನವಾರಿಯಾ ಕಂಡು
ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ
ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ
ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ
ಅನ್ನ್ಯಾ ದೇವರಿಗೆ ಶಿರವಾಗಿ ಶಿರವಾಗಿ ಶ -
ರಣು ಶರಣೆನ್ನಿರೋ ಆವಾವ ಕಾಲದಲ್ಲಿ
ರನ್ನ ಕೈ ಸೇರಲು ಗಾಜುಮಣಿ ಬಯಸುವೆನೆ
ತನ್ನಿಂದ ತಾ ವಲಿದು ವಿಜಯವಿಟ್ಠಲ ಕರ -
ವನ್ನು ಪಿಡಿಯೆ ಎನಗೆ ಇನ್ನು ಯಾತರ ಭೀತಿ ॥ 3 ॥
ಅಟ್ಟತಾಳ
ಮೈಲಿಗಿಯವ ನಾನಾದಡೆ ಜಗದಯ್ಯಾ
ಅಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ
ಮೈಲಿಗಿ ಉಂಟೇನೋ ಮದನಾರಿಯ ಒಡೆಯಾ
ಮೈಲಾರಿ ಜೊಕ್ಕನು ಆವ ಕುಲದವ
ಅಯ್ಯಾ ವಿಜಯವಿಟ್ಠಲಾ ಅನುದಿನ ನೀನೊಲಿಯೆ
ವೈವಾದು ಸದ್ಗತಿಗೆ ಒಂದೆ ನಾಮವೆ ನೆನಿಯೆ ॥ 4 ॥
ಆದಿತಾಳ
ಹರಿದು ಎಂತನ್ನರಿಯಾದ ನರರಿಗೆ
ಶರಣ ಜನರಿಗೆ ಬಲು ಮರಳು ಕಾಣೋ ಪಾಂಡುರಂಗಾ
ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ
ಸಿರಿಧರಪತಿ ವಿಜಯವಿಟ್ಠಲಾ
ಗುರು ಪುರಂದರನ ಪ್ರೀಯಾ ॥ 5 ॥
ಜತೆ
ಪಂಢರಿರಾಯಾ ಪ್ರಾಕೃತ ವಿರಹಿತ ಕಾಯಾ
ಪುಂಡರೀಕ ವರದ ವಿಜಯವಿಟ್ಠಲರೇಯಾ ॥
Comments
Post a Comment