HAYAGREEVA DEVARA CHINTANE
HAYAGREEVA DEVARA CHINTANE
🌷ಶ್ರೀ ಹಯಗ್ರಿವ ಚಿಂತನ🌷
( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ )
ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ
ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ |
ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ
ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ ||
ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ !
ಹಯಗ್ರೀವಾಸುರ ಮದಭರಿತ ಆನೆಯಂತೆ ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ . ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು .
-ಶ್ರೀದಶಾವತಾರಸ್ತುತಿ -2
ವಿವರಣೆ :-
ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ .
ಅಥೋ ವಿಧಾತುರ್ಮುಖತೋ ವಿನಿಃಸೃತಾನ್
ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ |
ನಿಹತ್ಯ ತಂ ಮತ್ಸ್ಯವಪು ರ್ಜುಗೋಪ
ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ||
ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ |
ವೈವಸ್ವತಾಯೋತ್ತಮಸಂವಿದಾತ್ಮ
ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್ |
ಮಹಾಭಾರತತಾತ್ಪರ್ಯನಿರ್ಣಯ 3-40-41
ಹಯಗ್ರೀವಾಸುರ ಬಲಿಷ್ಠಾನಾದ ದೈತ್ಯ ಬ್ರಹ್ಮದೇವರ ಮುಖದಿಂದ ಹೊರಹೊಮ್ಮಿದ ವೇದಗಳನ್ನೇ ಅಪಹರಿಸಿದ .ಆಗ ಪರಮಾತ್ಮ ಮತ್ಸ್ಯನಾಗಿ ಅವತರಿಸಿದ ರಾಕ್ಷಸರನ್ನು ಸಂಹರಿಸಿ ಸಪ್ತರ್ಷಿಗಳನ್ನು ವೈವಸ್ವತಮನುವನ್ನು ರಕ್ಷಿಸಿದ ಬೃಹ್ಮದೇವರಿಗೆ ಪುನಃ ವೇದಗಳನ್ನು ನೀಡಿದ ವೈವಸ್ವತ ಮನುವಿಗೆ ಪರಮಾತ್ಮನ ಸ್ವರೂಪವನ್ನು ಉಪದೇಶಿಸಿದ .ಸತ್ಯವ್ರತರಾಜನೇ ಮುಂದೆ ವೈವಸ್ವತಮನುವಾದನು ಹಿಂದಿನ ಶ್ಲೋಕದ ವಿವರಣೆಯಲ್ಲಿ ಇದರ ಬಗ್ಗೆ ವಿವರಣೆ ಇದೆ .
ಐತರೇಯ ಭಾಷ್ಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ದಶಾವತಾರಗಳನ್ನು ಹೇಳುವಾಗ ಮೊದಲು ಮತ್ಸ್ಯಾವತಾರವನ್ನೇ ವರ್ಣಿಸಿದ್ದಾರೆ . ಚಾಕ್ಷುಷ ಮನ್ವಂತರದಲ್ಲಿ ಪ್ರಳಯಜಲದಲ್ಲಿ ಶ್ರೀಹರಿಮತ್ಸ್ಯರೂಪದಿಂದ ವಿಹರಿಸಿದ ಆ ರೂಪವನ್ನು ಶ್ರೀವಾದಿರಾಜರು ಮೊದಲ ಶ್ಲೋಕದಲ್ಲಿ ತಿಳಿಸಿದ್ದಾರೆ ಮತ್ಸ್ಯಾವತಾರವು ಎರಡು ಬಾರಿ ಆಗಿರವುದು ಎರಡನ್ನೂ ಸೇರಿಸಿ ಇಲ್ಲಿ ಸ್ತುತಿಸಿರುವರು .
ಎರಡನೇಯ ಶ್ಲೋಕದಲ್ಲಿ ಹಯತುಂಡಾಕೃತೇ ! ಎಂದು ಹಯಗ್ರೀವರೂಪವನ್ನು ಸಂಭೋದಿಸಿ ಹಯಗ್ರೀವಾಸುರನ ಸಂಹಾರವನ್ನು ಹೇಳಿರುವರು ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದು ಪುರಾಣಗಳಲ್ಲಿ ಇದೆ .
ಮಧುಕೈಟಭರು ವಾಯುದೇವರ ಆವೇಶದಿಂದ ದರ್ಪಿಷ್ಠರಾಗಿ ನೀರಿನಲ್ಲಿ ಬೆಳೆದರು .ಬ್ರಹ್ಮದೇವರ ವರದಿಂದ ಅವಧ್ಯರಾದ ಆ ದೈತ್ಯರು ವೇದಸಮೂಹವನ್ನೇ ಅಪಹರಿಸಿದರು . ಆಗ ಶ್ರೀಹರಿ ಹಯಗ್ರೀವ ರೂಪವನ್ನು ಧರಿಸಿ ಕೈಗಳಿಂದಲೇ ಅವರನ್ನು ಹೊಡೆದು ಸಂಹರಿಸಿದ .
ತ್ವಯಾ ಪುರಾಕರ್ಣ ಪುಟಾದ್ ವಿನಿಸೃತೌ ಮಧುಕೈಟಭಾಖ್ಯೌ |
ಪ್ರಭಂಜನಾವೇಶವಶಾತ್ ತ್ವದಾಜ್ಞಯಾ
ಬಲೋದ್ಧ ತಾವಶು ಜಲೇಭ್ಯವರ್ಧತಾಮ್ ||
ತ್ವದಾಜ್ಞಯಾ ಬ್ರಹ್ಮವರಾವಧ್ಯೌ
ಚಕ್ರೀಡಷಾಸಂಭವಯಾ ಮುಖೋದ್ಗಾತಾನ್ |
ಸ್ವಯಂ ಭೂವೋ ವೇದ ಗಣಾನಪಾರ್ಷತಾಂ
ತದಾಭವಸ್ತ್ವಂ ಹಯಶೀರ್ಷ ಈಶ್ವರಃ ||
ಆಹೃತ್ಯ ವೇದಾನುಖಿಲಾನ್ ಪ್ರದಾಯ
ಸ್ವಯಂಭುವೇ ತೌ ಚ ಜಘಂಥ ದಸ್ಯೂ |
ಮಹಾಬಾರತ ತಾತ್ಪರ್ಯನಿರ್ಣಯ 3-58 ,59,60
ಹೀಗೆ ಮಧುಕೈಟಭರ ಸಂಹಾರ ಹಯಗ್ರೀವರೂಪದಿಂದಲೂ ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದೆಂದು ಉಲ್ಲೇಖವಿದೆ .ಆದರೆ ಎರಡೂ ರೂಪಗಳಿಂದಲೂ ಆಗಿರುವ ಕಾರ್ಯ ವೇದಗಳನ್ನು ಸಂರಕ್ಷಿಸಿ ಬ್ರಹ್ಮದೇವರಿಗೆ ನೀಡಿರುವುದು . ಈ ರೀತಿ ಎರಡೂ ರೂಪಗಳಲ್ಲಿಯೂ ಸಮಾನ ಕಾರ್ಯ . ಮತ್ತು ಹಯಗ್ರೀವ ಆರಾಧ್ಯದೈವ ಭಗವಂತನ ಎಲ್ಲ ರೂಪಗಳಿಗೂ ಅಭೇಧವಿದೆ ಎಂದು ತಿಳಿಸುವುದು ಈ ಎಲ್ಲ ಉದ್ದೇಶದಿಂದ ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವರೂಪಗಳನ್ನು ಸಂಕಲಿಸಿ ಸ್ತುತಿಸಿದ್ದಾರೆ .
ಶ್ರೀಮದ್ ಭಾಗವತದಲ್ಲಿ ಹಯಗ್ರೀವ ಅವತಾರದ ವರ್ಣನೆ
ಸತ್ರೇ ಮಮಾಸ ಭಗವಾನ್ ಹಯಶೀರ್ಷ ಏಷಃ
ಸಾಕ್ಷತ್ ಯಜ್ಞಪುರುಷಸ್ತಪನೀಯವರ್ಣಃ |
ಛಂದೋಮಯೋ ಮಖಮಯೋsಖಿಲದೇವತಾತ್ಮಾ
ವಾಚೋ ಬಭೂವುರುಶತೀಃ ಶ್ವಸತೋsಸ್ಯ ನಸ್ತಃ ||
ಸಾಕ್ಷತ್ ಯಜ್ಞಪುರುಷನಾದ ನಾರಾಯಣ ಚತುರ್ಮುಖ ಬ್ರಹ್ಮದೇವರ ಸತ್ರಯಾಗದಲ್ಲಿ ಹಯಗ್ರೀವನಾಗಿ ಅವತರಿಸಿದ ಮೂಲ ರೂಪದಲ್ಲಿ ಬಂಗಾರದಂತೆ ಅವತಾರದಲ್ಲಿ ಬೆಳ್ಳಿಯಂತೆ ಹೊಳೆಯುವ ಈ ಹಯಗ್ರೀವನೆ ವೇದಗಳಿಗೂ ಯಜ್ಞಗಳಿಗೂ ಸಕಲ ದೇವತೆಗಳಿಗೂ ಆಧಾರ . ಅವನು ಉಸಿರಾಡುವಾಗ ಮೂಗಿನಿಂದ ಅಪೌರುಷೇಯವಾದ ವೇದಗಳು ಆವಿರ್ಭಾವಗೊಂಡವು .
ತಂತ್ರಸಾರಸಂಗ್ರಹದಲ್ಲಿ ಹಯಗ್ರೀವ ಅವತಾರದ ವರ್ಣನೆ
ವಂದೇತುರಂಗವದನಂ ಶಶಿಬಿಂಬ ಸಂಸ್ಥಂ
ಚಂದ್ರಾವದಾತಮಮೃತಾತ್ಮಕರೈಃಸಮಂತಾತ್ |
ಅಂಡಂತರಂ ಬಹಿರಪಿ ಪ್ರತಿಭಾಸಯಂತಂ
ಶಂಖಾಕ್ಷ ಪುಸ್ತಕ ಸುಬೋಧಯುತಾಬ್ಜಬಾಹುಮ್ ||
ನಸ್ತೋ ಮುಖಾದಪಿ ನಿರಂತರಂ ಮುದ್ಗಿರಂತಂ
ವಿದ್ಯಾ ಅಶೇಷತ ಉತಾಬ್ಜಭವೇಶಮುಖೈಃ |
ಸಂಸೇವ್ಯಮಾನಮತಿಭಕ್ತಿಭರಾವನಮ್ರೈಃ
ಲಕ್ಷ್ಮ್ಯಾಮೃತೇನ ಸತತಂ ಪರಿಷಿಚ್ಯಮಾನಮ್ ||
ಕುದುರೆಯ ಮುಖ ಚಂದ್ರಮಂಡಲದಲ್ಲಿ ವಾಸ ಚಂದ್ರನ ಬಿಳಿಪು .ನಾಶವಿಲ್ಲದ ತನ್ನ ಕಿರಣಗಳಿಂದ ಬ್ರಹ್ಮಾಂಡದ ಒಳ ಹೊರಗೆ ಬೆಳಗುತಿದ್ದಾನೆ .ಶಂಖ ಅಕ್ಷಮಾಲೆ ,ಪುಸ್ತಕ ಮತ್ತು ಜ್ಞಾನಮುದ್ರೆಗಳನ್ನು ಧರಿಸಿದ ಕಮಲದಂತಹ ನಾಲ್ಕು ಕೈಗಳು .
ಮೂಗಿನಿಂದಲೂ ಬಾಯಿಯಿಂದಲೂ ನಿರಂತರವಾಗಿ ಸಕಲವಿದ್ಯೆಗಳನ್ನು ಉಚ್ಚರಿಸುತ್ತಾನೆ .ಅತಿಶಯವಾದ ಭಕ್ತಿಯಿಂದ ಬಾಗಿದ ಬ್ರಹ್ಮರುದ್ರಾದಿಗಳಿಂದ ಸೇವಿಸಲ್ಪಡುತ್ತಿದ್ದಾನೆ .ಲಕ್ಷ್ಮೀದೇವಿ ಅಮೃತಾಭಿಷೇಕವನ್ನು ಮಾಡುತ್ತಿದ್ದಾಳೆ .ಇಂತಹ ಹಯಗ್ರೀವರೂಪವನ್ನು ನಮಿಸುತ್ತೇನೆ .
ಸುಮಧ್ವ ವಿಜಯ ಮಹಾಕಾವ್ಯದಲ್ಲಿ ಹಯಗ್ರೀವ ಅವತಾರದ ವರ್ಣನೆ
ಚತುರಾನನಾಯ ಚತುರಃ ಪುರಾಽಽಗಮಾನ್ ಪ್ರದದಾವಸಾವನಿಮಿಷೇಶ್ವರಃ ಪ್ರಭುಃ |
ವಿನಿಹತ್ಯ ಹಿ ಶ್ರುತಿಮುಷಂ ಪುರಾತನಮ್ ವಪುಷೋದ್ಧತಂ ಹಯಮುಖೇನ ಸದ್ರಿಪುಮ್ ||
ಸಜ್ಜನ ಶತ್ರುವಾದ ವೇದಗಳ ಕಳ್ಳನಾದ ಮಧು ಕೈಟಭ ಎಂಬ ದೈತ್ಯರು ವೇದಗಳನ್ನು ಕದ್ದಿದ್ದರು .ಆಗ ಭಗವಂತನು ಕುದುರೆಯ ಮುಖದ ಹಯಗ್ರೀವರೂಪವನ್ನು ಧರಿಸಿ ಆ ದೈತ್ಯರನ್ನು ಸಂಹರಿಸಿ ಚತುರ್ಮುಖ ಬ್ರಹ್ಮದೇವರಿಗೆ ನಾಲ್ಕು ವೇದಗಳನ್ನು ನೀಡಿದನು .
ಮತ್ಸ್ಯರೂಪದಿಂದ ಹಯಗ್ರೀವಾಸುರನನ್ನೂ ಹಯಗ್ರೀವರೂಪದಿಂದ ಮಧು ಕೈಟಭರನ್ನೂ ಶ್ರೀಹರಿಯು ಸಂಹರಿಸಿ. ವೇದಗಳನ್ನೂ ಬ್ರಹ್ಮದೇವರಿಗೆ ನೀಡಿದನು .
ನಾರಾಯಣ ಪಂಡಿತಾಚಾರ್ಯರು ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವ ಅವತಾರಗಳನ್ನು ವರ್ಣಿಸಿದ್ದಾರೆ .ಮೊದಲನೇ ಶ್ಲೋಕದ ವಿವರಣೆಯಲ್ಲಿ ಈ ಇದೆ ಶ್ಲೋಕಕ್ಕೆ ಮತ್ಸ್ಯಾವತಾರ ಪರವಾದ ಅರ್ಥವನ್ನು ಕೊಡಲಾಗಿದೆ .
- ಮಧ್ವವಿಜಯ 8-14
ಶ್ರೀರುಗ್ಮೀಣೀಶವಿಜಯ ಮಹಾಕಾವ್ಯದಲ್ಲಿ ಹಯಗ್ರೀವಾವತರದ ವರ್ಣನೆ
ಮಧುರಯಾ ಜಿತದಾನವ ಸದ್ಗಿರಾ
ವಶನಿಕಾಯ ಗತಾಗಮಸಿಧಕಃ |
ನರತುರಂಗಮಹರ್ಷಕದಾಕೃತೇ
ಭವಗತಾವಗತಾಖಿಲ ಪಾಹಿ ನಃ ||
ಮಧು ಎಂಬ ದಾನವನ ವೇಗಕ್ಕೆ ವಶನಾಗದ ದಾನವರ ಸಭೆ ಎಂಬ ಬೆಟ್ಟದ ನಾಶಕ್ಕೆ ವಜ್ರದೇಹಿಯಾದ ದಾನವರಿಂದ ಅಪಹರಿಸಲ್ಪಟ್ಟ ವೇದಗಳನ್ನು ಮರಳಿ ತಂದಿತ್ತ ಹಯಗ್ರೀವ ಎಂಬ ಆನಂದಕರವಾದ ರೂಪದ ನಿತ್ಯಮುಕ್ತನಾದ ಎಲ್ಲವನ್ನೂ ಬಲ್ಲ ಶ್ರೀಹರಿಯೇ ! ನಮ್ಮನ್ನು ಪಾಲಿಸು .
ರುಗ್ಮೀಣೀಶವಿಜಯ 17-8
ವೇದಾಧ್ಯಯನದಿಂದ ಪರಮಾತ್ಮನ ಮಹಿಮೆಯನ್ನು ತಿಳಿದಾಗ ಮೋಕ್ಷವು ದೊರೆಯುತ್ತದೆ ಎಂದು ಶ್ರುತಿವಾಕ್ಯವಿದೆ ಅದಕ್ಕೆ ವೇದಗಳನ್ನು ಅಪಹರಿಸಿದ ದೈತ್ಯರ ಸಂಹಾರವನ್ನು ಮಾಡಿ ಚತುರ್ಮುಖ ಬ್ರಹ್ಮದೇವರಿಗೆ ವೇದಗಳನ್ನು ನೀಡಿದ ಮತ್ಸ್ಯಹಯಗ್ರೀವರೂಪಗಳನ್ನೇ ಶ್ರೀವಾದಿರಾಜ ಗುರುಸಾರ್ವಭೌಮರು ದಶಾವತಾರದ ಎರಡನೇ ಶ್ಲೋಕದಲ್ಲಿ ಸ್ತುತಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
Comments
Post a Comment