NAGARA CHOWTI NAGARA PANCHAMI
ನಾಗರ ಚೌತಿ ಮತ್ತು ನಾಗರ ಪಂಚಮಿ
ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಬೇಕು.. ಹೆಣ್ಣು ಮಕ್ಕಳು ಚೌತಿಯ ದಿನ ಹಾಲು ಎರೆಯಬೇಕು ಹೊರಗೆ ಕಲ್ಲು ನಾಗಪ್ಪನಿಗೆ.. ...ಪಂಚಮಿ ದಿನ ಗಂಡಸರು ಮನೆಯಲ್ಲಿ ಪೂಜೆ ಮಾಡಿ ಹಾಲೆರೆಯಬೇಕು .
ಚತುರ್ಥಿಯ ದಿನ ಹೆಣ್ಣುಮಕ್ಕಳು ಸ್ನಾನದ ನಂತರ ಹೊಸ ವಸ್ತ್ರ ಧರಿಸಿ, ಸೌಭಾಗ್ಯದ ಚಿಹ್ನೆಗಳನ್ನು ಧರಿಸಿಕೊಂಡು, ಕಲ್ಲು ನಾಗಪ್ಪನಿಗೆ ಅಥವಾ ಹುತ್ತಕ್ಕೆ ಹಾಲು ಅಭಿಷೇಕ ಮಾಡಿ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರ, ಅರಿಶಿನ-ಕುಂಕುಮ, ಜೋಳದ ಅರಳು, ನೆನೆದ ಕಡ್ಲಿ, ಹೂ-ಕೇದಿಗೆ, ಗರಿಕೆ-ಪತ್ರಿ ಏರಿಸಬೇಕು.
ತಂಬಿಟ್ಟು, ಜೋಳದರಳಿನ ಉಂಡೆ, ಎಳ್ಳುಂಡೆ ಮುಂತಾದ ಉಂಡೆಗಳನ್ನು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡಬೇಕು. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಬಂದು ನಾಗಪ್ಪನ ಪೂಜೆಯಲ್ಲಿ ಭಾಗವಹಿಸುವದು ವಿಶೇಷ...
ನಾಗ ಚೌತಿಯ ದಿನ ಹೆಣ್ಣು ಮಕ್ಕಳು ಉಪವಾಸ ಮಾಡಬೇಕು ಯಾಕೆಂದರೆ ನಾವು. ಮಾಡಿದ ಉಪವಾಸದ ಮಹತ್ವವೆಂದರೆ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಚೌತಿಯಲ್ಲಿ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಇದರಿಂದ ನಾಗದೇವತೆಗಳು ಮರಳಿ ಅಣ್ಣನಿಗೆ ಆಯುಷ್ಯ ಐಶ್ವರ್ಯ ಕೊಟ್ಟರು... ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ಗರ್ಭಿಣಿ ಸ್ತ್ರೀಯರು ನಾಗಪ್ಪನಿಗೆ ಹಾಲು , ಪೂಜೆ ಬರುವದಿಲ್ಲ ದೂರದಿಂದ ಕೈ ಮುಗಿದರೆ ಸಾಕು...
ನೆನಪಿರಲಿ ಸ್ನೇಹಿತರೆ ಮರುದಿನ ನಾಗಪಂಚಮಿ ದಿನ ಕಬ್ಬಿಣದ ಹಂಚಿನ ಮೇಲೆ ಹೋಳಿಗೆ ಚಪಾತಿ ಮೊದಲಾದವುಗಳನ್ನು ಬೇಯಿಸ ಬಾರದು. ಮತ್ತು ಎಣ್ಣೈಯಲ್ಲಿ ಕರಿಯಬಾರದು ಎಕೆಂದರೆ ನಾಗದೋಷ ಬರುತ್ತದೆ ಅಂತ ಶಾಸ್ತ್ರ ದಲ್ಲಿದೆ..
ನಾಗಪಂಚಮಿ ವ್ರತ .....
ನಾವು ನಾಗ ಪಂಚಮಿ ವ್ರತವನ್ನು ಯಾಕೆ ಆಚರಿಸಬೇಕು ಇದರ ಫಲಗಳೇನು ....ನಾಗ ಪಂಚಮಿಯ ನಾಗಪ್ಪನ ಪೂಜೆ ಮನೆಯಲ್ಲಿ ಮಾಡಬೇಕು..
ಶುದ್ಧ ಮಣ್ಣಿನಿಂದ ಐದು ಹೆಡೆಗಳುಳ್ಳ ನಾಗ ಪ್ರತಿಮೆ ಯನ್ನು ತಯಾರಿಸಬೇಕು ಈ ನಾಗ ಪ್ರತಿಮೆಗೆ ಪ್ರಾಣ ಪ್ರತಿಷ್ಠೆ , ಮಾಡಿ ಷೋಡಷೋಪಚಾರ ಗಳಿಂದ ಪೂಜಿಸಬೇಕು. ಹಳದಿ ಗೆಜ್ಜೆವಸ್ತ್ರ ಹಳದಿ ಅಕ್ಷತೆ ಹೂಗಳಿಂದ ಕರವೀರ , ಮಾಲತಿ ಜಾತೀಪುಷ್ಪ , ಚಂಪಕ ಮೊದಲಾದ ಪುಷ್ಪ ಗಳನ್ನು ಏರಿಸಬೇಕು
ನಂತರ ಉಗಿಯಲ್ಲಿ ಬೇಯಿಸಿದ ಕಡಬು ಬಕ್ಷ್ಯ ಭೋಜ್ಯ ನೈವೇದ್ಯ ಮಾಡಬೇಕು , ಗೋದಿ ಕುಟ್ಟಿದ ಪಾಯಸ ಹಾಲಿನಲ್ಲಿ ಮಾಡಿದರೆ ನೈವೇದ್ಯ ಕ್ಕೆ ಶ್ರೇಷ್ಠ . ಆ ದಿನ ನಾಗದೇವರಿಗೆ , ಅಕ್ಕಿ ತಂಬಿಟ್ಟು , ಹುರಿದ ಕಡಲೆ , ಅರಳು ಎಳ್ಳಚಿಗಳಿ ಒಣಖೊಬ್ಬರೆ ಎಲ್ಲವನ್ನೂ ನಾಗದೇವರಿಗೆ ನಿವೇದಿಸಬೇಕು. ಗಂಡಸರು ಹಾಲು ಬೆಲ್ಲದ ನೀರು ಹಾಕಬೇಕು...
ಈ ವ್ರತವನ್ನು ಮಾಡುವದರಿಂದ ಸರ್ಪಗಳು ಯಾವ ತರಹದ ಭಯವನ್ನುಂಟು ಮಾಡಲಾರವು...
ನಾಗ ಪಂಚಮಿ ವ್ರತ ಆಚರಿಸಿದರೆ ಸರ್ವನಾಗಗಳ ಅಧಿಪನಾದ ಶೇಷನು ಶ್ರೀಹರಿಯನ್ನು ಮತ್ತು ವಾಸುಕಿಯು ಸದಾಶಿವ ನನ್ನು ಕೈ ಜೋಡಿಸಿ ಪ್ರಾರ್ಥಿಸುತ್ತವೆ ಶೇಷ ವಾಸುಕಿಯರ ಪ್ರಾರ್ಥನೆ ಗೆ ಶಿವ ವಿಷ್ಣು ಪ್ರಸನ್ನರಾಗುತ್ತಾರೆ , ಯಾರಾದರೂ ನಮ್ಮ ಪೂರ್ವಜರು ಸರ್ಪಯೋನಿಯಲ್ಲಿ ಜನ್ಮ ತಳೆದಿದ್ದರೆ ಮುಕ್ತರಾಗುತ್ತಾರೆ....
ಇನ್ನೊಂದು ಕಥೆ ಪ್ರಕಾರ ಕಾಳಿ ಮರ್ದನ ನಡೆದದ್ದು ಈ ದಿನ ಅದರ ನೆನಪಿಗಾಗಿ ಮನುಜ ಮತ್ತು ಸರ್ಪ ಸಂಕುಲದ ನಡುವೆ ಸೌಹಾರ್ದ ಮೂಡಿಸುವದಕ್ಕೆ ಈ ಹಬ್ಬ ಅಂತಾನೂ ಹೇಳುತ್ತಾರೆ..ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.
“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.
ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.
ಈ ಪೃಥ್ವಿ ಶೇಷನಾಗರ ಹೆಡಿಯ ಮೇಲೆ ನಿಂತಿದೆ ಎಂಬ ಪುರಾಣ ಕಥೆ ಬರುತ್ತದೆ. ಶೇಷನಾಗ ರಾಮಾವತಾರದಲ್ಲಿ ರಾಮನ ತಮ್ಮ ಲಕ್ಷ್ಮಣನಾಗಿ, ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನ ಅಣ್ಣ ಬಲರಾಮನಾಗಿ ಅವತರಿಸಿದ್ದರು ಎಂದು ಕಥೆ ಬರುತ್ತದೆ,
ಈ ಎಲ್ಲ ಕಥೆಗಳು ನಾಗದೇವತೆಗೆ ಸಂಬಂಧ ಇದ್ದವು ಕಾರಣ ಈ ಹಬ್ಬಕ್ಕೆ ವಿಶೇಷ ಮಹತ್ವ.
Comments
Post a Comment