Dhanur Masa Mahatme

 ಧನುರ್ಮಾಸದ ಮಹತ್ವ 


ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ 
 (ಹುಗ್ಗಿ )ಮುದ್ಗಾನ್ನ  ವನ್ನು ನಿವೇದಿಸುವರು 

ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ
ನೀವೇದಯನ್  ಮೇ  ಮುದ್ಗಾನ್ನಂ ಸ ವೈ ಭಾಗವತೋತ್ತಮಃ
ಕೋದಂಡಸ್ಥೆ  ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್
ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ

ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ  ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ.

ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ
ಅಧಮಾ ಸೂರ್ಯಸಹಿತಾ ಮದ್ಯಾಹ್ನೇ ನಿಷ್ಫಲಾ ಭವೇತ್

ಧನುರ್ಮಾಸದ ಪೂಜಾ ಸಮಯ
ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ  ಆಚರಿಸುವುದು ಉತ್ತಮ ಪಕ್ಷವಾಗಿದೆ.
ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ 
ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್ದು.

ಆಯನo ದಕ್ಷಿಣಂ  ರಾತ್ರಿರುತ್ತರಂ ತು ದಿವಾ ಭವೇತ್
ದೈವಂ ತತ್ತದಹೋರಾತ್ರಕಂ ಚಾಪಮಾನಂ ವಿದುರ್ಬುಧಾಃ

ಅರುಣೋದಯಕಾಲದ ಪ್ರಾಮುಖ್ಯತೇ

ದಕ್ಷಿಣಾಯನದ ಆರು ತಿಂಗಳುಗಳಲ್ಲಿ ಎರಡೆರಡು ತಿಂಗಳಿಗೆ ಒಂದು ಯಾಮದಂತೆ ಯಾಮತ್ರಯ ಭಗವಂತನಿಗೆ ಅತ್ಯoತ ಪ್ರಿಯವಾಗಿದ್ದು  ಮೊದಲಿನ ಎರಡು ಯಾಮಗಳು ,ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ  ಆಷಾಢ ಏಕಾದಶಿಯಿoದ ಪ್ರಾರoಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ಭಗವಂತನು ಕಾರ್ತೀಕ ಮಾಸದ ಶುಕ್ಲ (ಉತ್ಥಾನ) ದ್ವಾದಶಿಯಂದು ಏಳುವನು.ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು  ನಂತರ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ .

ಕಾರ್ತೀಕಸ್ಯ ಸಿತೇ ಪಕ್ಷೇ ತದೇವ ದಿನಪಂಚಕಮ್
ವಿರೋಧಯಂತಿ ದೇವೇಶಂ ಗತ್ವಾ ಸೇಂದ್ರಾ ದಿವೌಕಸಃ

ಹೀಗೆ ಎದ್ದಿರುವ ಭಗವಂತನಿಗೆ ದೇವತೆಗಳು ಅರುಣೋದಯ ಕಾಲವಾದ ಧನುರ್ಮಾಸದಲ್ಲಿ ಹುಗ್ಗಿಯನ್ನು ನಿವೇದಿಸುವರು. ಆದ್ದರಿಂದ ಪ್ರತಿಯೊಬ್ಬನೂ ಸೂರ್ಯನು ಧನುರಾಶಿಯಲ್ಲಿರುವವರೇಗು ಒಂದು ತಿಂಗಳು ಕಾಲ ಸೂರ್ಯೋದಯ ಮೊದಲು ತೊಂಬತ್ತಾರು ನಿಮಿಷ ಮೊದಲು ದೇವರಪೂಜೆಯನ್ನು ಮಾಡಿ ಮುದ್ಗಾನ್ನ(ಹುಗ್ಗಿಯನ್ನು ಹಾಗೂ ಇತರ ಪಾಯಸಾದಿ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯ ಮಾಡಬೇಕು.ಸಂಧ್ಯಾವಂದನೆ ಮೊದಲಾದ ನಿತ್ಯಾಹ್ನಿಕವನ್ನು ಪೂಜಾ ನಂತರ ಮಾಡಿದರೂ ದೋಷವಿರುವುದಿಲ್ಲ .ಮೊದಲೂ ಭಗವಂತನಿಗೆ ಪೂಜೆ ಹಾಗೂ ಹುಗ್ಗಿಯನ್ನು ನಿವೇದಿಸಿ ನಂತರ ಆಹ್ನಿಕವನ್ನು ಮಾಡಬಹುದು .

ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇ sಲ್ಪದ್ವಾದಶಿ ದಿನೇ
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾನ್ಯಾರ್ಚಯೇತ್

ಉಷಃಕಾಲದಲ್ಲಿ ಎದ್ದು ಪೂಜೆ  ಹುಗ್ಗಿ  ನಿವೇದನೆಯನ್ನು ಮಾಡುತ್ತಿದ್ದರೆ ನಿತ್ಯ ಸಂಧ್ಯಾವಂದನಾದಿ ಲೋಪ ಬರುತ್ತದೆ ಎಂದು ಯಾರದರು ದೇವರ ಪೂಜಾದಿಗಳನ್ನು ಮಾಡದೆ ನಿತ್ಯಾಹ್ನಿಕ ದಲ್ಲೇ  ನಿರತನಾಗುವನೋ ಏಳು ಜನ್ಮ ನಿರ್ಧನನಾಗುವನು.

ಯಃ ಕರ್ಮಹಾನಿಮಾಶಂಕ್ಯ ನಾರ್ಚಯೇದುಷನೀಶ್ವರಮ್
ವಿಷ್ಣವೇ ಕಾರ್ಮುಕೇ ಪಾತ್ರಃ ಸಪ್ತ ಜನ್ಮಸು ನಿರ್ಧನಃ

ಅರುಣೋದಯ ಕಾಲದಲ್ಲಿ ಮೊದಲು ಷೋಡೋಶೋಪಾಚರ ಪೂಜೆ ,ನಂತರ  ಪಾಯಸ ಮುoತಾದ ಭಕ್ಷ್ಯ ಗಳ ಜೊತೆಗೆ ಹುಗ್ಗಿಯ ನೈವೇದ್ಯ ,ಆನಂತರ ನಿತ್ಯಾಹ್ನಿಕವನ್ನು  ಮಾಡಿ ಸೂರ್ಯೋದಯವಾದ ಮೇಲೆ ಬ್ರಾಹ್ಮಣರ ಭೋಜನವನ್ನು ಮಾಡಿಸಿ ತಾನು ಭುoಜಿಸಬೇಕು.

ಆರ್ಚಯಿತ್ವಾ ಹರಿಂ ಪಶ್ಚಾತ್  ಧನುರ್ಮಾಸೇoತ್ಯಾಮಾಕಂ
ಪಶ್ಚಾತ್ ಸಂಧ್ಯಾಮುಪಾಸೀತ ಧರ್ಮಲೋಪೋ ನ ವಿದ್ಯತೇ....

Comments

Popular posts from this blog

Kaksha Taratamya