JAYAMANGALAM NITYA SHUBHA MANGALAM
ತೊಳಸದಕ್ಕಿಯ ತಿಂಬ |ಕಿಲಬು ತಳಿಗೆಯಲುಂಬ|
ಕೊಳಗದಲಿ ಹಣಗಳನು ಅಳೆಸಿಕೊಂಬ|
ಇಲ್ಲಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸಗೊಂಬ ಕಳ್ಳದೊರೆಗೆ ||೧||
ತನ್ನ ದರುಶನ ಕೆಂದು ಮುನ್ನೂರು ಗಾವುದ ಬರಲು |
ತನ್ನ ಗುಡಿಯಪೊಕ್ಕ ಜನರನೆಲ್ಲಾ |
ಹೊನ್ನುಹಣ ಕಸಗೊಂಡು |ತನ್ನ ದರುಶನ ಕೊಡದೇ|
ಬೆನ್ನು ಹುರಿ ಹೊಯ್ಸುವ ಅನ್ಯಾಯ ಕಾರಿಗೆ ||೨||
ಗಿಡ್ಡ ಹಾರುವನಾಗಿ ಬಡ್ಡಿ ದಾನವ ಬೇಡಿ |
ದುಡ್ಡು ಕಾಸುಗಳಿಗೇ ಕೈಯನೀಡಿ|
ಅಡ್ಡ ಬಿದ್ದ ಜನರ ವಿಡ್ಡೂರಗಳ ಕಳೆದು |
ದೊಡ್ಡವರ ಮಾಳ್ಪ ಶ್ರೀ ವಿಜಯವಿಠ್ಠಲಗೇ ||೩||
Comments
Post a Comment