DASHAVATHARA VARNANE
ಹೆಳವನಕಟ್ಟೆ ಗಿರಿಯಮ್ಮನವರ ರಚನೆ.
ನಿಂದಾಸ್ತುತಿ -- ಭಗವಂತನ ದಶಾವತಾರ ವರ್ಣನೆ.
ಇಂಥಾವಗ್ಹ್ಯಾಂಗೆ ಮನಸೋತೆಬಲು ಪಂಥವಾಡಿದ ಜಗನ್ಮಾತೆ
ಆವಾಗ ನಾರುವ ಮೈಯ್ಯ ಬಿಚ್ಚಿ
ತೋರಿ ನಲಿಯುವ ಕಾಲು ಕೈಯ್ಯ
ಕೋರೆಯ ಮಸೆಯುತ ಕೊಸರಿಕೊಂಡಸುರನ
ಕರುಳನು ಬಗೆದಂಥ ಅದ್ಭುತಮಹಿಮಗೆ
ಬಡಬ್ರಾಹ್ಮಣನಾಗಿ ತಿರಿದ ತನ್ನ
ಹಡೆದ ತಾಯಿಯ ಶಿರವರಿದ
ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ
ಬಿಡದೆ ಸ್ತ್ರೀಯರ ಗೋಕುಲದಲಿ ಮೆರೆದ
ಬತ್ತಲೆ ನಿಂತಿದ್ದನೀಗ ತೇಜಿ
ಹತ್ತಿ ಮೆರೆವುದೊಂದು ಯೋಗ
ಉತ್ತಮ ಹೆಳವನಕಟ್ಟೆ ಶ್ರೀರಂಗ
ಭಕ್ತವತ್ಸಲ ಸ್ವಾಮಿ ದೇವ ಕೃಪಾಂಗ.
ಇಲ್ಲಿ ಗಿರಿಯಮ್ಮನವರು ಮೇಲ್ನೋಟಕ್ಕೆ ಶ್ರೀಹರಿಯನ್ನು ಆಡಿಕೊಂಡಂತೆ ಕಂಡರೂ
ಅಂತರ್ಯದಲ್ಲಿ ದಶಾವತಾರ ಸ್ತುತಿಯೇ ಆಗಿದೆ.
ಆವಾಗ ನಾರುವವ-- ಮತ್ಸ್ಯಾವತಾರ
ಮೈ ಬಿಚ್ಚಿ --- ಕೂರ್ಮಾವತಾರ
ಕೋರೆಯ--- ವರಾಹವತಾರ
ಅಸುರನ ಕರುಳ --- ನರಸಿಂಹಾವತಾರ
ಬಡ ಬ್ರಾಹ್ಮಣ-- ವಾಮನಾವತಾರ
ಹಡೆದ ತಾಯಿಯ--- ಪರಶುರಾಮ
ಮಡದಿ -- ರಾಮವತಾರ
ಬಿಡದೆ ಸ್ತ್ರೀಯರ -- ಕೃಷ್ಣಾವತಾರ
ಬತ್ತಲೆ ---- ಬೌದ್ದವತಾರ
ತೇಜಿ --- ಕಲ್ಕಿ
"ಹರೇ ಶ್ರೀನಿವಾಸ"
ಸಂಗ್ರಹ
ಆವಾಗ ನಾರುವವ-- ಮತ್ಸ್ಯಾವತಾರ
ಮೈ ಬಿಚ್ಚಿ --- ಕೂರ್ಮಾವತಾರ
ಕೋರೆಯ--- ವರಾಹವತಾರ
ಅಸುರನ ಕರುಳ --- ನರಸಿಂಹಾವತಾರ
ಬಡ ಬ್ರಾಹ್ಮಣ-- ವಾಮನಾವತಾರ
ಹಡೆದ ತಾಯಿಯ--- ಪರಶುರಾಮ
ಮಡದಿ -- ರಾಮವತಾರ
ಬಿಡದೆ ಸ್ತ್ರೀಯರ -- ಕೃಷ್ಣಾವತಾರ
ಬತ್ತಲೆ ---- ಬೌದ್ದವತಾರ
ತೇಜಿ --- ಕಲ್ಕಿ
"ಹರೇ ಶ್ರೀನಿವಾಸ"
ಸಂಗ್ರಹ
ದೊ.ವೆಂ.ಶ್ರೀ
Comments
Post a Comment