GOPALA DASARAYA NINNAYA PADA
ಈಪೀಡಿಸುವ ತ್ರಯತಾಪಗಳೋಡಿಸಿ |ಕೈಪಿಡಿದೆನ್ನನು ನೀ ಪಾಲಿಪುದು ಜೀಯಾ ||ಅ.ಪ ||
ಘೋರವ್ಯಾಧಿಗಳ ನೋಡಿ | ವಿಜಯರಾಯ ಭೂರಿಕರುಣವ ಮಾಡಿ |
ತೋರಿದರಿವರೇ ಉದ್ಧಾರಕರೆಂದದಿ | ನಾರಭ್ಯ ತವ ಪಾದ ಸಾರಿದೆ ಸಲಹೆಂದು ||
ಸೂರಿಜನ ಸಂಪ್ರೀಯ ಸುಗುಣೋ | ದ್ಧಾರ ದುರುಳನ ದೋಷನಿಚಯವ |
ದೂರಗೈಸೊ ದ್ಯಾಂಬುದನಿಧೇ ನಿ | ವಾರಿಸದೆ ಕರಪೀಡಿದು ಬೇಗದಿ || 1 ||
ಅಪಮೃತ್ಯುವಿನ ತರಿದೆ | ಯೆನ್ನೊಳಗಿದ್ದ | ಅಪರಾಧಗಳ ಮರದೆ |
ಚಪಲ ಚಿತ್ತನಿಗೊಲಿದ್ವಿಪುಲ ಮತಿಯನಿತ್ತು | ನಿಪುಣಾನೆಂದೆನಿಸಿದೆ ತಪಸಿಗಳಿಂದಲಿ ||
ಕೃಪಣವತ್ಸಲಾ ನಿನ್ನ ಕರುಣೆಗೆ | ಉಪಮೆಗಾಣೆನು ಸಂತತವು ಕಾ |
ಶ್ಯಪಿಯೊಳಗೆ ಬುಧರಿಂದ ಜಗದಾ | ಧಿಪನ ಕಿಂಕರನೆನಿಸಿ ಮೆರದೆ ||2||
ಎನ್ನ ಪಾಲಿಸಿದಂದದಿ | ಸಕಲ ಪ್ರ | ಪನ್ನರ ಸಲಾಹೋ ಮೋದಿ |
ಅನ್ಯರಿಗೀಪರಿ ಬಿನ್ನಪಗೈಯೇ ಜ | ಗನ್ನಾಥವಿಠಲನ ಸನ್ನುತಿಸುವ ಧೀರ ||
ನಿನ್ನ ನಂಬಿದ ಜನರಿಗೀಪರಿ | ಬನ್ನವೇ ಭಕ್ತಾನುಕಂಪಿ ಶ |
ರಣ್ಯ ಬಂದೊದಗೀಸಮಯದಿ ಆ | ಹರ್ನಿಶಿ ಧ್ಯಾನಿಸುವೆ ನಿನ್ನನೂ ||3||
Comments
Post a Comment