NINNA OLUMEYINDA NIKHILA JANARU

ಶ್ರೀ ವಿಜಯದಾಸರ ಕೃತಿ – ನಿನ್ನ ಒಲುಮೆಯಿಂದ 

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಳಿಂದ ಈ ಪರಿ ಉಂಟೆನೊ  
ನಿನ್ನದೇ ಸಕಲ ಸಂಪತ್ತು ।।

ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ  
ಪೂರ್ಣವಿಚಿತ್ರ ಸುವಸನ ।
ವರ್ಣವರ್ಣದಿಂದ ಬಾಹೋದೇನೊ ಸಂ
ಪೂರ್ಣ ಗುಣಾರ್ಣವ ದೇವಾ ।।

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ
ತಬ್ಬಿಬ್ಬುಗೊಂಡೆನೊ ಹಿಂದೆ।
ನಿಬ್ಬಾರದಿಂದಲಿ ಸರ್ವರ ಕೂಡುಂಬೊ    
ಹಬ್ಬದೂಟವ ಉಣ್ಣಿಸುವೆಯೋ ।

ಸಂಜಿತನಕ ಇದ್ದು ಸಣ್ಣ ಸೌಟಿನ ತುಂಬ  
ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ    
ಭುಂಜಿಸುವುದು ಮತ್ತೇನೋ ।।

ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ    
ತಾನೆಪ್ರಾಪ್ತಿ ನೊಡೋ ಜೀಯಾ!

ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ        
ಮೆದ್ದೆನೆಂದರೆ ಈಯದಾದೆ।        
ಈ ಧರೆಯೊಳಗೆ ಸತ್ಪಾತ್ರರ ಉಣಿಸುವ 
ಪದ್ಧತಿ ನೋಡೋ ಪುಣ್ಯಾತ್ಮ ।।

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ  
ಚಾಚಿದೆ ನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ  
ವಾಚಕ್ಕೆ ನಿಲಿಕದೋ ಹರಿಯೇ ।।

ವೈದಿಕ ಪದವೀವಗೀಬಗೆ ಲೌಕಿಕ              
ಐದಿಸುವದು ಬಲು ಖ್ಯಾತೆ ।
ಮೈದುನಗೊಲಿದ ಶ್ರೀವಿಜಯವಿಟ್ಠಲ ನಿನ್ನ
ಪಾದಸಾಕ್ಷಿಯ ಅನುಭವವೋ ।।

ನಿನ್ನ ಒಲುಮೆಯಿಂದ ..

Comments

Popular posts from this blog

Kaksha Taratamya