Posts

Showing posts from August, 2023

NAGARA CHOWTI NAGARA PANCHAMI

  ನಾಗ ರ  ಚೌತಿ ಮತ್ತು   ನಾಗರ ಪಂಚಮಿ ‌ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಬೇಕು.. ಹೆಣ್ಣು ಮಕ್ಕಳು ಚೌತಿಯ ದಿನ ಹಾಲು ಎರೆಯಬೇಕು ಹೊರಗೆ ಕಲ್ಲು ನಾಗಪ್ಪನಿಗೆ.. ...ಪಂಚಮಿ ದಿನ ಗಂಡಸರು ಮನೆಯಲ್ಲಿ ಪೂಜೆ ಮಾಡಿ ಹಾಲೆರೆಯಬೇಕು . ಚತುರ್ಥಿಯ  ದಿನ ಹೆಣ್ಣುಮಕ್ಕಳು  ಸ್ನಾನದ ನಂತರ ಹೊಸ ವಸ್ತ್ರ ಧರಿಸಿ, ಸೌಭಾಗ್ಯದ ಚಿಹ್ನೆಗಳನ್ನು ಧರಿಸಿಕೊಂಡು, ಕಲ್ಲು ನಾಗಪ್ಪನಿಗೆ  ಅಥವಾ  ಹುತ್ತಕ್ಕೆ  ಹಾಲು ಅಭಿಷೇಕ ಮಾಡಿ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರ, ಅರಿಶಿನ-ಕುಂಕುಮ, ಜೋಳದ ಅರಳು, ನೆನೆದ ಕಡ್ಲಿ, ಹೂ-ಕೇದಿಗೆ,  ಗರಿಕೆ-ಪತ್ರಿ ಏರಿಸಬೇಕು. ತಂಬಿಟ್ಟು, ಜೋಳದರಳಿನ ಉಂಡೆ, ಎಳ್ಳುಂಡೆ ಮುಂತಾದ ಉಂಡೆಗಳನ್ನು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡಬೇಕು. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಬಂದು ನಾಗಪ್ಪನ ಪೂಜೆಯಲ್ಲಿ ಭಾಗವಹಿಸುವದು ವಿಶೇಷ... ನಾಗ ಚೌತಿಯ ದಿನ  ಹೆಣ್ಣು ಮಕ್ಕಳು ಉಪವಾಸ ಮಾಡಬೇಕು  ಯಾಕೆಂದರೆ ನಾವು.  ಮಾಡಿದ ಉಪವಾಸದ ಮಹತ್ವವೆಂದರೆ  ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ  ಚೌತಿಯಲ್ಲಿ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಇದರಿಂದ ನಾಗದೇವತೆಗಳು ಮರಳಿ...