Posts

 NENESIDAVARAGHANASHANA ಶ್ರೀ ವಿಜಯದಾಸರ ಅನುಜರಾದ ಶ್ರೀ ಆನಂದದಾಸಾರ್ಯ ವಿರಚಿತ  ( ಹಯವದನವಿಟ್ಠಲ ಅಂಕಿತ)   ಶ್ರೀವಿಜಯದಾಸರ ಸಂಕ್ಷೇಪ ಚರಿತ್ರೆ   ರಾಗ ಭೌಳಿ                                ವಾರ್ಧಿಕ ಷಟ್ಪದಿ  ನೆನೆಸಿದವರಘನಾಶನಾ ॥ ಪ ॥ ನೆನೆಸಿದವರಘನಾಶ ಅನುಮಾನವಿಲ್ಲದಕೆ ವನಜನಾಭನು ಒಲಿದು ಘನವಾಗಿ ಪಾಲಿಸುವ ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ ಗುಣ ಕರ್ಮ ಕೊಂಡಾಡಿರೊ ॥ ಅ ಪ ॥ ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ ಆ ದ್ವಾಪರದಿ ನಿಕಂಪನ ಎಂಬ ನಾಮದಲಿ  ಶ್ರೀಧರನ ಸೇವಿಸುತಿದ್ದು ॥ ಕಾದಿದ್ದ ಕಲಿಯುಗದಿ ಪುರಂದರದಾಸರ ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ ಮೇದಿನೀಸುರ ಜನ್ಮದಿ ॥ 1 ॥ ವರತುಂಗಭದ್ರತೀರದ ಗ್ರಾಮ ಅಶ್ವತ್ಥ - ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ ಗುರುಸೇವೆ ಮಾಡಿ ಸತತ ॥ ವರವ ಪಡೆದಳೈ ಎರಡೊಂದು ಪುತ್ರರನು ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ ಇರುತಿರಲು ಕೆಲವು ಕಾಲ ॥ 2 ॥ ಲೋಕಜನರಂತೆ ಲೌಕಿಕದೊಳು ಸಂಚರಿಸಿ ಈ ಕಾಯಗೋಸುಗಾನೇಕ ಜನರ ಸೇವೆ ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗ...
  KALI NIGRAHA SULADI ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ  (ಗುರುವಿಜಯವಿಟ್ಠಲ ಅಂಕಿತ)  ಕಲಿನಿಗ್ರಹ ಸುಳಾದಿ  ಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನ  ತಲೆಯ ಮೇಲೆ ಕಾಲು ಇಟ್ಟು ನಡಿವೆ ಸತತ ಬಲಹೀನನೆಂದು ತಿಳಿದು ನೈಜ ಸ್ವಭಾವದಿಂದ ಕುಲಗೇಡಿ ಚೇಷ್ಟೆಗಳ ಪ್ರೇರಿಸುವಿ ಮಲಿನಯುಕ್ತನೆ ನಿನ್ನ ಕರ್ತೃತ್ವ ಎನ್ನ ಮೇಲೆ ನೆಲೆಯಾಗಿ ನಿಂದಿರದು ಎಂದೆಂದಿಗೆ ತಿಳಿದು ನೋಡಿಕೋ ಉಭಯ ಅಂಶಾಂಶದಲ್ಲಾಗೆ  ತಲಿಯ ಬಾಗಿದವನೆ ದುರುಳ ನಿನಗೆ  ಬಲವೀರ್ಯನಾದ ಎನ್ನ ಒಡಿಯನ್ನ ಬಲದಿಂದ  ಚಲಿಸದಲೇ ನಿನ್ನ ತೃಣಕೆ ಬಗೆದು ಕೆಲವು ಶಸ್ತ್ರದಿಂದ ಕೆಲವು ವಾಕ್ಯದಿಂದ ತಲೆ ಎತ್ತದಂತೆ ಮಾಡಿದ್ದದನು ಮರದೇ ಮೊಲದಂತೆ ಜರಿದು ಈಗ ಮದೋನ್ಮತ್ತವಾದ ಬಲದಿಂದ ನಿನ್ನ ಯುಗವೆಂದು ತಿಳಿದು ಮಲತ ಗರ್ವದಿಂದ ಮಾಯಾ ಮಾಡುವಿ ಸುಜನ - ಕುಲ ದೂಷಕನೆ ಬಲು ಕುಜನ ಶಿರೋಮಣಿಯೆ  ಬಲಿಗೆ ಬಲಿಯಾದ ಗುರುವಿಜಯವಿಟ್ಠಲರೇಯನ  ಬಲ ಎನಗಿರಲಾಗಿ ಎದುರೇ ನೀನು ॥ 1 ॥  ಮಟ್ಟತಾಳ  ಬಲವುಳ್ಳವನೆಂದು ಬಲು ಗರ್ವದಲಿಂದ ಬಳಲುವದು ಸಲ್ಲಾ ಲಜ್ಜೆಯನು ತೊರೆದು ಬಲಯುಕ್ತ ನೀನಾಗೆ ಅಂದಿನ ಕಾಲದಲ್ಲಿ ಮಲತ ಮಲ್ಲರ ಗಂಡನೆನಿಪರ ಕೈಯಿಂದ ತಲಿಯ ತುಳಿಸಿಕೊಂಡಿ ಚರಣ ತಳದಿಂದ ಹಳಿ ಹಳಿ ನಿನ್ನ ಪೌರುಷತನ ಸುಡಲಿ ಭಳಿರೆ ಭಳಿರೆ ಗುರುವಿಜಯವಿಟ್ಠಲರೇಯನ  ಒಲಿಮೆಯುಳ್ಳವರೆಲ್ಲ ನಿನಗಂಜುವರೇನೊ ॥ 2 ॥  ತ್ರಿವಿಡಿತಾಳ  ಬಲಹೀನ ಮನು...
SRI SHESHA DASARA ASHTAKA ಸೀತಾಪತಿಂ ಹರಿಜಾತಂ ಪ್ರಣಮ್ಯ ಮತಿಹೇತುಂ ಸುಖಾಯ ಪವನಾ- ಜ್ಞಾತಂ ಬಲಾಯ ಪುರುಹೂತಾವಾತಾರ ಜಯತೀರ್ಥಂ ಧನಾರ್ಥಮನಿಶಮ್ । ಪೋತಂ ಶ್ರೀ ಸುಧೀಂದ್ರ ಗುರುಜಾತಂ ತಥೈವ ಮಮ ತಾತಂ ಚ ಜೀವಿತಕೃತೇ ಖಾತಸ್ಯ ರೀತಿಮನುನಿತಾಂ ಕರೋಮಿ ಕೃತಿಮೇತಾಂ ತು ಶೇಷಸುಗುರೋಃ ।। ೧ ।। ಶ್ರೀಪಾರ್ಥಸೂತಪದಜಾಪಾಖ್ಯಮುಕ್ತಿಪದ ಸೋಪಾನಮಾರ್ಗದ ಗುರುಃ ಪಾಪಾತ್ಮಾನಾಂ ನಿಖಿಲತಾಪಾಪನೋದನತ ಯಾsಪಾರಸೌಖ್ಯಮಧುಹತ । ಭೂಪಾಲವರ್ಯಕೃತ ಕೋಪಾತ್ಕದಾಚಿ ದಯಮಾಪಾಶು ಚಿಪ್ಪಶಿಖರಂ ಗೋಪಲಭಕ್ತವಿಜಯೋಪಾಭಿದಸ್ಯ ಮಹಿಮಾಪೂರಮಜ್ಜಮದಾತ್ ।। ೨ ।। ದಾಸಾರ್ಯವರ್ಯ ಕರುಣಾಸಾಗರೋಪಗತ ಮೀಶಾಂಘ್ರಿಪದ್ಮ ಮಹಿಮಾ ಲೇಶಾಮೃತಾಪ್ತಿಮತಿ ಕೋಶಃ ಶುಚೀಶಇವ ಭಾಸಾಭಿನಂದ್ಯ ವಿಬುಧಾನ್ । ದೇಶಾನಟನ್ ಖಲಕುಲೇಶಾನ್ವಿಚಿತ್ಯ ರಭಸಾssಸಾಧ್ಯ ಭಕ್ತಿಭರಿತೋ ವ್ಯಾಸಾರ್ಯ ಪನ್ನವಪಾಲಾಶೇ ನನಾಮ ಪಥಗೇಶೋ ಯಥಾ ಮುರಹರನ್ ।। ೩ ।। ಕ್ರೂರಾರಿ ದುಷ್ಟಮತ ವಾರಾಶಿ ಕುಂಭಸುತಮಾರಾದ್ಯ ತದ್ವರಯುತಃ ಸಾರಂ ಸುಚಿಂತ್ರವಲಿಮಾರಾದುಪೇತ್ಯ ಕವಿವೀರಂ ಭಜನ್ ಕತಿಪಯಾನ್ । ವಾರಾನುವಾಸ ಗುರುರಾರಾಧಯನ್ಸುಜನವಾರಂ ಸುಭೋಜ್ಯಧನತೋ ದೂರಾತ್ಪಿಶಾಚ್ಯಪರಿವಾರಃ ಪ್ರಯಾತಿ ಖಲು ಘೋರೋsಪಿ ಯತ್ಸ್ಮರಣತಃ ।। ೪ ।। ಜಂಭಾರಿದಂತಿವರ ದಂಭಾಪಹಾರಿ ಕುಚಕುಂಭಾಂಚಿತೇಂ ದ್ವವರಜಾ ಸಂಭೋಗಕಾಲ ಪರಿರಂಭಾಪ್ತ ಕುಂಕುಮ ವರಾಂಭೋರುಹಂಕರುಚಿರಮ್ । ಅಂಭೋಜನಾಭಮತಿ ಸಂಭಾವನಾಯ ಜಗದಂಬಾ ಕುಮಾರ ವಚನಾತ್ ಕುಂಭೀಂದ್ರ ಕೃತ್ತಿಧರ ಶಂಭೋರ್ಗಿರಿಂ ಜನಕದಂಬಾ...
  PRANAVA MANTRA SULADI ಶ್ರೀ ವಿಜಯದಾಸಾರ್ಯ ವಿರಚಿತ  ಪ್ರಣವ ಮಂತ್ರ ಸುಳಾದಿ  (ತಾರ ಓಂಕಾರ ವ್ಯಾಹೃತಿ ಅಷ್ಟಾಕ್ಷರಾದಿ ಮಂತ್ರಗಳು , ಮಂತ್ರ ಮಾಡುವ ಕ್ರಮ, ನ್ಯಾಸ ವಿಚಾರ.)   ರಾಗ ಭೌಳಿ   ಧ್ರುವತಾಳ  ತಾರ ಮಂತ್ರವೆ ಜಪಿಸು ತವಕದಿಂದಲಿ ಭವ - ತಾರವಾಗುವದು ಲಾಲಿಸು ಚನ್ನಾಗಿ ಈರೆರಡು ಶೀರ್ಷ ಪಿಂಡೀಕೃತವಾದ ಓಂ - ಕಾರ ನಿರಂತರ ಸಾರವೆನ್ನು ಏಕಾವರ್ಣ ಶ್ರೀರಮಣ ನಾರಾಯಣನ ಪ್ರತಿಪಾದಿಸುತ್ತಿದೆ ಮೀರಿದ ದೈವವೆಂದು ಒಲಿಸಿ ಒಲಿಸೀ ತಾರತಮ್ಯವೆ ಉಂಟು ಇದನೆ ಗ್ರಹಿಸುವಲ್ಲಿ ಆರಾರ ತಕ್ಕ ಯೋಗ್ಯತ ಸಾಧನ ಭಾರತದಲ್ಲಿ ಕೇಳು ವೈದಿಕ ಲೌಕಿಕ ವ್ಯವ - ಹಾರ ಮಾತಿಗೆ ಇದೆ ಪ್ರಥಮ ವ್ಯಕ್ತಿ ಕಾರಣ ಕಾರ್ಯದಲ್ಲಿ ವ್ಯಾಪ್ತವಾಗಿದೆ ವಿ - ಸ್ತಾರ ಬೊಮ್ಮಾಂಡದೊಳು ನಿಬಿಡಿಯಾಗಿ ದ್ವೀರಷ್ಟ ಪಂಚ ಪಂಚ ಚತುರಷ್ಟಾ ಚಮುತಾಗಿ ಚಾರು ಪ್ರಕಾಶದಿಂದ ಅಭಿವ್ಯಕ್ತಿಯೊ ಆರು ಎರಡರಿಂದ ತಿಳಿಯಬೇಕು ಮೂರುತಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ ಅಂ - ತರಾತ್ಮ ಪರಮಾತ್ಮ ಜ್ಞಾನಾತ್ಮ ಹರಿಯಾ ಈ ರೀತಿಯಲ್ಲಿ ನೆನೆಸು ಒಂದೊಂದು ಸ್ಥಾನದಲ್ಲಿ ವಾರವಾರಕೆ ಬಿಡದೆ ಹೃದಯಾದಲ್ಲಿ ನಾರಾಯಣ ದೇವ ವಿಜಯವಿಟ್ಠಲರೇಯ  ಪಾರತಂತ್ರ ರಹಿತ ಸರ್ವಭೂತಸ್ಥ ಕಾಣೋ ॥ 1 ॥   ಮಟ್ಟತಾಳ  ಪ್ರತಿ ಪ್ರತಿ ಮಂತ್ರಕ್ಕೆ ಪ್ರಣವ ನುಡಿಯಬೇಕು ಅತಿಶಯವನೆ ಕೇಳು ಆನಾದಿ ಇದೆ ಸಿದ್ಧ ಯತಿಗಳಿಗೆ ಪ್ರಣವ ಮುಖ್ಯ ಸಾಧನ ಕಾಣೋ ಇತರಾಶ್ರಮ ಜನಕೆ ಯೋಗ್...
  UPAKARMA Upakarma, means “Beginning” and it is historically, the day was considered auspicious for beginning the Vedic studies.   This is on this day one has to start study of Vedas after doing samarpana of what he has studied in the earlier years.  Without doing Utsarjana and Upakarma, one will not get punya even if he does veda parayana, japa, etc. When is the day for upakarma? Rigveda   – Shravana Hunnime with Shravana nakshatra Yajurveda – Shravana Hunnime Samaveda – Shravana Masa when Hasta Nakshatra falls Rugveda Upakarma is done normally on Shravana Hunnime with Shravana Nakshatra.  But Yajurveda  Upakarma is done normally on Shravana Hunnime itself. Who are all to do Upakarma and Utsarjana – a.       All Brahmacharis, Gruhastas, Vanaprasthas to do upakarma and utsarjana. b.      All Vedaas Rugvedees, Yajurvedees, Samavedees and Atharvana Vedees to do upakarma and utsarjana.  Necessity of Upakarma –...
DASHAVATHARA VARNANE ಹೆಳವನಕಟ್ಟೆ ಗಿರಿಯಮ್ಮನವರ ರಚನೆ. ನಿಂದಾಸ್ತುತಿ --  ಭಗವಂತನ ದಶಾವತಾರ ವರ್ಣನೆ. ಇಂಥಾವಗ್ಹ್ಯಾಂಗೆ ಮನಸೋತೆ  ಬಲು ಪಂಥವಾಡಿದ ಜಗನ್ಮಾತೆ ಆವಾಗ ನಾರುವ ಮೈಯ್ಯ ಬಿಚ್ಚಿ ತೋರಿ ನಲಿಯುವ ಕಾಲು ಕೈಯ್ಯ ಕೋರೆಯ ಮಸೆಯುತ ಕೊಸರಿಕೊಂಡಸುರನ ಕರುಳನು ಬಗೆದಂಥ ಅದ್ಭುತಮಹಿಮಗೆ ಬಡಬ್ರಾಹ್ಮಣನಾಗಿ ತಿರಿದ ತನ್ನ ಹಡೆದ ತಾಯಿಯ ಶಿರವರಿದ ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ ಬಿಡದೆ ಸ್ತ್ರೀಯರ ಗೋಕುಲದಲಿ ಮೆರೆದ ಬತ್ತಲೆ ನಿಂತಿದ್ದನೀಗ ತೇಜಿ  ಹತ್ತಿ ಮೆರೆವುದೊಂದು ಯೋಗ ಉತ್ತಮ  ಹೆಳವನಕಟ್ಟೆ ಶ್ರೀರಂಗ  ಭಕ್ತವತ್ಸಲ ಸ್ವಾಮಿ ದೇವ ಕೃಪಾಂಗ. ಇಲ್ಲಿ ಗಿರಿಯಮ್ಮನವರು  ಮೇಲ್ನೋಟಕ್ಕೆ ಶ್ರೀಹರಿಯನ್ನು ಆಡಿಕೊಂಡಂತೆ ಕಂಡರೂ  ಅಂತರ್ಯದಲ್ಲಿ ದಶಾವತಾರ ಸ್ತುತಿಯೇ ಆಗಿದೆ. ಆವಾಗ ನಾರುವವ--  ಮತ್ಸ್ಯಾವತಾರ ಮೈ ಬಿಚ್ಚಿ --- ಕೂರ್ಮಾವತಾರ ಕೋರೆಯ---  ವರಾಹವತಾರ ಅಸುರನ ಕರುಳ --- ನರಸಿಂಹಾವತಾರ ಬಡ ಬ್ರಾಹ್ಮಣ-- ವಾಮನಾವತಾರ ಹಡೆದ ತಾಯಿಯ--- ಪರಶುರಾಮ ಮಡದಿ --  ರಾಮವತಾರ ಬಿಡದೆ ಸ್ತ್ರೀಯರ -- ಕೃಷ್ಣಾವತಾರ ಬತ್ತಲೆ   ----  ಬೌದ್ದವತಾರ ತೇಜಿ    ---     ಕಲ್ಕಿ  "ಹರೇ ಶ್ರೀನಿವಾಸ" ಸಂಗ್ರಹ  ದೊ.ವೆಂ.ಶ್ರೀ
TIRUVENGALESHA MAHIMA SULADI   ಶ್ರೀ ಪುರಂದರದಾಸಾರ್ಯ ವಿರಚಿತ  ತಿರುವೆಂಗಳೇಶ ಮಹಿಮಾ ಸುಳಾದಿ   ರಾಗ : ಕಾಂಬೋಧಿ  ಧೃವತಾಳ  ಅಚ್ಯುತಾನಂತ ಗೋವಿಂದ ಶ್ರೀ ಮುಕುಂದ ಸಚ್ಚಿದಾನಂದ ಸ್ವರೂಪ ಭಕ್ತ ವತ್ಸಲ ಪುರುಷೋತ್ತಮ ಪರಂಧಾಮಾ ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಭಾರ್ಗವ ರಾಘವ ಕೃಷ್ಣ ಬುದ್ಧಾವತಾರ ಕಲ್ಕಿ ನಾರಾಯಣ ಅಪ್ಪಾರಮಹಿಮ ನಾರಾಯಣ ಅನಂತ ಅವತಾರ ನಾರಾಯಾಣ ಸರ್ಪಶಯನನೆ ನಾರಾಯಣ ಸಿರಿ ಪುರಂದರವಿಠ್ಠಲ ವಿಭುವೆ ತಿರುವೆಂಗಳಪ್ಪ ಎನ್ನಪ್ಪ ಅಚ್ಯುತಾನಂತ ಗೋವಿಂದ ॥೧॥  ಮಟ್ಟತಾಳ  ಮಂಗಳ ವಕ್ಷದಲ್ಲಿ ಸಂಗ ಸುಖ ಇಪ್ಪಳವ್ವೆ ಅಂಗನೆ ಲಕುಮೆವ್ವೆ ಭಂಗರವಾದಳವ್ವೆ ಶೃಂಗರವಾದಳವ್ವೆ ಅಂಗನೆ ಲಕುಮೆವ್ವೆ ರಂಗ ಪುರಂದರವಿಠ್ಠಲಗೆ ಭಂಗರವಾದಳವ್ವೆ ಶೃಂಗರವಾದಳವ್ವೆ ॥೨॥  ತ್ರಿವಿಡಿತಾಳ  ಉಟ್ಟಿದ್ದ ದಟ್ಟಿಯು ಕಟ್ಟಿದ ಕಠಾರಿ ತೊಟ್ಟಂಬು ತೋಲಾತ್ಮ ಮೆಟ್ಟಿದ್ದ ಮೆಟ್ಟು ಕಟ್ಟಾಳು ಖಳರ ಕೆಂದೊಟ್ಟುವ ಕಡು ಧಿಟ್ಟ ಸೃಷ್ಟಿಪಾ ಪುರಂದರವಿಠ್ಠಲರೇಯಾ ॥೩॥  ಅಟ್ಟತಾಳ  ಇದೆ ದನುಜ ಮರ್ದನ ಚಕ್ರಹಸ್ತ ಇದೇ ವೇದಮಯ ಶಂಖಹಸ್ತ ಇದೇ ಅಮೃತವ ನೀಡಿದ ಹಸ್ತ ಇದೇ ತಿರುವೆಂಗಳಪ್ಪನ ಕುರುಹು ಇದೇ ಪುರಂದರವಿಠ್ಠಲನ ಮೂರುತಿ ॥೪॥  ಆದಿತಾಳ  ಕಿರೀಟ ಕುಂಡಲಧರನ ಕಂಡೆ ಸರಮಣಿಗಳ ಭೂಷಣನ್ನ ಕಂಡೆ ಸಿರಿಯಿಪ್ಪ ವಕ್ಷಸ್ಥಳನ್ನ ಕಂಡೆ ವರಪ್ರದನ ಕಂಡೆ ವರದೇಶನ ಕಂಡೆ ತಿರುವೆಂಗಳಪ್ಪನ ಚರಣವ ಕಂಡೆ...