Posts

GARUDADRI NARASIMHA SULADI

  ಶ್ರೀ ಪುರಂದರದಾಸಾರ್ಯ ವಿರಚಿತ   ಗರುಡಾದ್ರಿ ನರಸಿಂಹ ದೇವರ ಸುಳಾದಿ   ರಾಗ : ಸಾವೇರಿ   ಧೃವತಾಳ  ಅಂಜುವೇ ನಾ ನೀ ಸಿಂಗದ ಮುಖದವ  ಹುಂಕರಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ತ್ಯೆರವಾಯ ತೆರವುತ ಗದ್ಗಹಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಘುಡುಘುಡಿಸುತ ಕಿಡಿಗಳ್ಯರಗಿಸುವೆ ಒಮ್ಮೆಮ್ಮೆ ಅಂಜುವೆ ನಾ ನೀ ಕಿವಿಯನುಳುಪಿ ಮೇಲೆ ಕವಿದೆರಗುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಸಿರಿ ಮುದ್ದು ನರಸಿಂಹ  ಪುರಂದರವಿಠ್ಠಲ ನೀ ಉರಿಮಾರಿ ದೈವವೆಂದಜುವೆ ॥೧॥  ಮಟ್ಟತಾಳ  ಹಿರಣ್ಯಕಶಿಪುವಿನ್ನ ಉದರ ಬಗಿದ ಬಳಿಕ ಕರುಳು ಮಾಲಿ ತೆಗೆದು ಕೊರಳೊಳಿಟ್ಟ ಬಳಿಕ ಉರಿಯನುಗುಳುವೇತಕೆ ಸಿರಿಯ ನುಡಿಸದ್ಯಾತಕೆ ಹರ ಬೊಮ್ಮಾದಿಗಳ ಸರಕು ಮಾಡಿದಿದ್ದ್ಯಾತಕೆ ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ  ಪ್ರಹ್ಲಾದದೇವ ಬಂದರೆ ತೆಗೆದು ಮುದ್ದಾಡಿದ್ಯಾತಕೆ ॥೨॥  ತ್ರಿವಿಡಿತಾಳ  ಅಟ್ಟಹಾಸ ಕಬುಜಜಾಂಡ ಕಟ್ಟಹ ಪ್ರತಿಧ್ವನಿಯಗೊಡುತಿರೆ ಮೆಟ್ಟಿದಿಳೆ ತಲೆ ಕೆಳಗಾಗುತಲಿರೆ ಬೆಟ್ಟಗಳುರಳುರಳಿ ಬೀಳುತಿರೆ ಅಷ್ಟದಿಕ್ಕುಗಳಂ ಬೆಳಗುತಿರೆ ದಿಟ್ಟ ಮುದ್ದು ನರಸಿಂಹ ಪುರಂದರ -  ವಿಠ್ಠಲ ನಿನಗೆದಿರಾರೀ ಜಗದೊಳು ॥೩॥  ಅಟ್ಟತಾಳ  ಉರಿಮಾರಿ ಸಾಗರಗಳು ಸುರಿಯೆ ನಾಲಿಗೆಯಿಂದ ಚರಾಚರಂಗಳು ಚಾರಿವರಿವುತಲಿರೆ ಬ್ರಹ್ಮಾಂಡ ಒಂದೆ ಸಿಡಿದು ಹೋಗುತ್ತಿತ್ತು ಬ್ರಹ್ಮ ಪ್ರಳಯ ವಂದಾಗಿ ಪೋಗ...

ENU SUKRUTAVA MADIDALO

ಏನು ಸುಕೃತವ ಮಾಡಿದಳೋ ತಾ ಯಶೋದೆ ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ || ಪ ||  ಗಂಗಾಜನಕನಿಗೆ ಗಡಿಗೆ ನೀರೆರೆವಳಂತೆ | ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |  ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ | ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ || 1 ||  ನಗವನೆತ್ತಿದವನ ಮಗುವೆಂದೆತ್ತುವಳಂತೆ | ನಿಗಮಗೋಚರನ ತಾ ನಿಟ್ಟಿಪಳಂತೆ |  ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ | ಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ || 2 ||  ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |  ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ | ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ || 3 ||  ಚತುರ್ಮುಖಪಿತನ ಸುತನೆಂದೆತ್ತುವಳಂತೆ | ಶ್ರುತಿವಿನುತಗೆ ಜೋಗುಳ ಪಾಡುವಳಂತೆ |  ಶತರವಿತೇಜಗಾರತಿಯನೆತ್ತುವಳಂತೆ | ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ || 4 ||  ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ | ಪಡುಗಡಲತಡಿಯ ದ್ವಾರಕೆನಿಲಯ | ಬಿಡದೆ ನೆಲೆಸಿದ ಹಯವದನ ಮುದ್ದು | ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ || 5 || 

NENEVEANUDINA NEELANEERADA

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ || ಪ|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ||ಅಪ|| ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ – ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ – ಶ್ರುತಿ ಸಿದ್ಧನ||1|| ಗೋಕುಲದ ಗೋಪಿಯರ ವಂಚಕ ಚೋರನ – ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ – ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ – ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ – ಅವಗೊಲಿದನ||2|| ಶೈಲವನು ಅಹಿ ಶಯನ ಬೆರಳಲಿ ಆಂತನ – ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ – ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ – ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ – ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ – ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ – ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸವಿತ್ತನ – ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ – ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ – ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ – ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ – ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ – ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ – ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ – ಸುಪ...

HARI HARA SULADI

ಪುರಂದರದಾಸರ ರುದ್ರದೇವರ ಕುರಿತ ಸುಳಾದಿ ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು | ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ | ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು | ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3|| ಅಟ್ಟತಾಳ ಬಾಣಾಸುರನ ಭಕುತಿಗೊಲಿದು ಬಂದು | ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು | ಬಾಹು ಸಹಸ್ರವ ಕಡಿಯುವಾಗ | ಬೇಕು ಬೇಡೊಂದೊಮ್ಮೆ ಎಂದನೆ ಶಿವನು | ಪುರಂದರವಿಠಲ ಪರದೈವವೆಂದರಿತ ಕಾರಣ | ಒಪ್ಪಿಸಿಯೇ ಕೊಟ್ಟಾ ಶಿವನು ||4|| ತ್ರಿವುಡೆತಾಳ ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ | ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ | ವಿಷ್ಣು ಪುರಂದರವಿಠಲ ರಾಯನ ಅತ್ಯಧಿಕ ಪ್ರಿಯ...

SRI LAKSHMI HRUDAYA STOTRA PADA

LAKSHMI HRUDAYA STOTRA BY GURUJAGANATHA DASARU ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ | ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ | ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ ಫಲಗಳನೀವ ಸಾಧನ ಸುಖವಕೊಡುತಿರ್ಪ | ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩ ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ | ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ || ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ | ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ||೫|| ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭ...

MADHAVANANGHRI NITYA VADIRAJARA SULADI

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ ವಾದ ಮಾಯಾ ವಾದಿಗಳ ಗೆದ್ದ  ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ  ವೇದವೇದ್ಯ "ವಿಜಯವಿಠಲ" ತಾನು| ಆದರದಿಂದವರ ಭುಜದಿ ಹಯವಕ್ತ್ರನಾಗಿ |  ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ | ಶ್ರೀಧರನ ಮಹಿಮೆ ಸಾಧುಜನರು ಕೇಳಿ || ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ | ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ | ಸಡಗರದ ಭಕ್ಷ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು | ಕಡಗೋಲು ವೇಣು ಪಿಡಿದುಡಿಪಿಲಿನಿಂದ | ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು | ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ || ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ | ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |  ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ |  ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು | ಸಾಮಾನ್ಯ ಜನರಿಗೆ ದೊರಕುವನೇ ಕೇಳಿ || ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ- ಗ್ವಿಜಯ ಮಾಡಲು ಪುರಕೆ | ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಲರನಾಳಿದಾ | ನಿಜವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯಸಾರಧಿ ಪಾದ ರಜದ ಮಹಾ...

ENTHA PAVANA PADAVO

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ|| 1 ಬಲಿಯ ದಾನವ ಬೇಡಿ ತ್ರೈಲೋಕ್ಯವ ನಳೆದು ಏಕೆಂಘ್ರಿಯಲಿ| ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ|| 2 ಚೆಂಡು ತರುವ ನೆವದಿ ಕಾಳಿಂಗನು- ದ್ದಡ ಮಡುವ ಧುಮುಕಿ| ಚಂಡ ಕಾಳಿಂಗನ ಮಂಡೆಯೊಳಗೆ ಪಾದ- ಪುಂಡರೀಕವನಿಟ್ಟು ತಾಂಡವವಾಡಿದ|| 3 ಸಂತತ ಸೌಖ್ಯವೆಂಬ ಕಾವೇರಿಯ ಅಂತರಂಗದಿ ನೆಲೆಸಿ| ಸಂತೋಷದಿಂದ ಅನಂತನ ಮೇಲೆ ನಿ- ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ|| 4 ಒಲಿದು ಗಯಾಸುರನ ಶಿರದೊಳಿಟ್ಟು ಹಲವು ಭಕ್ತರ ಪೊರೆದ| ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ ತೊಲಗದೆ ಇರುತಿಪ್ಪ ಸುಲಭ ಹಯವದನ || 5