Ayudha Pooja ಪರಮಾತ್ಮನ ಆಯುಧಗಳಾದ ಚಕ್ರ, ಶಂಖ, ಗದಾ, ಪದ್ಮ , ಕತ್ತಿ, ಖಡ್ಗ, ಕವಚ, ಧನುಸ್ಸು, ಇವುಗಳಿಗೆ ನಿತ್ಯ ನಮ್ಮ ಪೂಜಾ ಸಮಯದಲ್ಲಿ ಪೂಜಿಸುತ್ತೇವೆ. ಚಕ್ರಾಭಿಮಾನಿನ್ಯೈ ದುರ್ಗಾಯೈನಮ:, ಶಂಖಾಭಿಮಾನಿನೈ ಶ್ರಿಯೈ ನಮ:, ಗದಾಭಿಮಾನಿನೈ ಮುಖ್ಯಪ್ರಾಣಾಯ ನಮ:, ಪದ್ಮಾಭಿಮಾನಿನೈ ಭೂಮೈ ನಮ:”. ಈ ರೀತಿ ಭಗವಂತನ ಆಯುಧಗಳಿಗಿ ಮತ್ತು ತದಂತರ್ಯಾಮಿ ದೇವತೆಗಳಿಗೆ ಪೂಜಿಸಬೇಕು. ಸಾಮಾನ್ಯವಾಗಿ ಆಯುಧಪೂಜೆ ಎಂದರೆ ವಾಹನ ಪೂಜೆ ಎಂದು ಭಾವಿಸಿ ನಮ್ಮ ವಾಹನವನ್ನು ಶುದ್ಧೀಕರಿಸಿ ಪೂಜಿಸುತ್ತೇವೆ. ಆದರೆ ನಾವು ನಿತ್ಯ ಬಳಸುವ ಹಲವಾರು ಆಯುಧಗಳು – ಚಾಕು, ಕತ್ತರಿ , ಇಳಿಗೆ ಮಣಿ, ಮೊದಲಾದವುಗಳಿಗೂ ಪೂಜಿಸಬೇಕು ಸಂಕ್ಷಿಪ್ತ ಆಯುಧಪೂಜಾ ವಿಧಾನ : ಆಚಮನ, ಪ್ರಾಣಾಯಾಮ, ಸಂಕಲ್ಪ ……. ದೇಶ ಕಾಲಗಳನ್ನುಚ್ಚರಿಸಬೇಕು. ಏವಂಗುಣವಿಶೇಷಣವಿಶಿಷ್ಟಾಯಾಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಸಿದ್ದ್ಯರ್ಥಂ, ಸಮಸ್ತ ಸನ್ಮಂಗಳಾರ್ಥಂ, ಅಪಘಾತಾದಿ ಅನಿಷ್ಟ ಪರಿಹಾರಾರ್ಥಂ, ಆಯುಧ ಆಘಾತ ಪರಿಹಾರಾರ್ಥಂ, ಸಮಸ್ತ ವಿಘ್ನ ಪರಿಹಾರಾರ್ಥಂ ವಾಹನಾಭಿಮಾನಿ ಗರುಡಾಂತರ್ಗತ ಶ್ರೀ ದುರ್ಗಾಸಮೇಕ ಶ್ರೀ ಹರಿಂ ಪೂಜಾಂ ಕರಿಷ್ಯೇ. ಆದೌ ನಿರ್ವಿಘ್ನತಾರ್ಥಂ ಸಿದ್ಧಿವಿನಾಯಕ ಪೂಜಾಂ ಕರಿಷ್ಯೇ. ಗಣಪತಿಯ ವಿಗ್ರಹವನ್ನಾಗಲಿ, ಅಥವಾ ಬಟ್ಟಲು ಅಡಿಕೆಯಲ್ಲಿ ಗಣಪತಿಯನ್ನು ಚಿಂತನೆ ಮ...
Posts
Showing posts from November, 2021
- Get link
- X
- Other Apps
By
Suparna Chincholi
-
Padma Kalpa Srushti Sulaadi ಶ್ರೀವಿಜಯದಾಸಾರ್ಯ ವಿರಚಿತ ಪದ್ಮಕಲ್ಪ ಸೃಷ್ಟಿ ಸುಳಾದಿ (ಬ್ರಹ್ಮದೇವರ 51ನೇ ವರ್ಷದ ಪ್ರಥಮ ದಿನ) ರಾಗ ಪಂತುವರಾಳಿ ಧ್ರುವತಾಳ ಹರಿ ವಿಷ್ಣು ರೂಪಾತ್ಮಕ ಚತುರವಿಂಶತಿ ತತ್ವ ಬೆರಸಿ ಸ್ಪಷ್ಟದಿಂದ ಬೊಮ್ಮಾಂಡವ ವಿರಚಿಸಿದನು ಉದಯಕಾಲದೊಳೈವತ್ತು ಕೋಟಿ ಪರಿಮಿತ ಯೋಜನ ವಲಯಾಕಾರ ನಿರಿಕ್ಷಿಸು ಈ ಪ್ರಕಾರ ದಳವನ್ನು ತಿಳಿದು ಮುಂ - ದರಿದು ನೋಳ್ಪದು ಇದಕೆ ನೂರು ಕೋಟಿ ಧರಣಿ ಆವರಣವು ಅಲ್ಲಿಂದ ಮೇಲು ಭಾಗ ಇರುತಿಪ್ಪವು ಕೇಳಿ ಉದಕಾಗ್ನಿ ಮರುತಾಕಾಶ ತರುವಾಯ ಮಹನಹಂಕಾರವಿದರೊಳು ಕಾರಣವುಂಟು ಮರಳೆ ಮಹತತ್ವ ಅವ್ಯಕ್ತದ ಸಮೇತ ಸ್ಥಿರವಾಗಿ ಯಿಪ್ಪದು ಬೊಮ್ಮಾಂಡಕೆ ಸುತ್ತಲು ಎರಡೈದಾವರಣಾ ಒಂಭತ್ತು ಹತ್ತು ಯೆನಿಸುವದು ಸಿರಿ ಬೊಮ್ಮಾದಿಗಳು ತಾತ್ವಿಕರಾಗಿ ಇರುವರು ಹಿರಿದಾಗಿ ಒಂದೊಂದಕ್ಕೆ ದಶಮಡಿ ಗುಣಿತದಿಂದ ಧರಣಿಯ ಬಿಟ್ಟು ಮೇಲಿಂದತ್ತ ಯೆಣಿಸುವದು ಪರಮ ಭಕುತಿಯಿಂದ ಹರಿ ವ್ಯಾಪಾರವ ಇರಳು ಹಗಲು ತುತಿಸಿ ಧನ್ಯನಾಗೊ ಸುರರು ಅಂಶಗಳಿಂದ ತುಂಬಿಹ್ಯರು ಕಾರ್ಯ ಧಾರರಾಗಿ ತಮ್ಮ ತಮ್ಮ ಉದ್ಯೋಗದಿ ಹರಿಯೆ ಬಾಹಿರ ಸರ್ಗ ಮಾಡಿ ಆಮ್ಯಾಲೆ ವಿ - ಸ್ತರಿಸಿದ ವೊಳಗಿನ ಬೊಮ್ಮಾಂಡವ ವಿರಿಂಚಿಯ ಗರ್ಭದಲಿ ಯಿಟ್ಟು ವಿನೋದದಿಂದ ಸಿರಿ ಕೂಡ ಬೊಮ್ಮಾಂಡವ ಪ್ರವೇಶಿಸೆ ಸುರರ ಸಾವಿರ ವರುಷ ಮಲಗಿದ್ದ ಪರಮಾತ್ಮ ಹರಿ ಪ್ರೀತನಾಗಿ ನಾಭಿಕಮಲದಿಂದ ಸರಸಿಜಸಂಭವನ ಪೆತ್ತ ಪ್ರೇಮದಿಂದ ಹಿರಣ್...
- Get link
- X
- Other Apps
By
Suparna Chincholi
-
Saadhana Sulaadi ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ (ಸಕಲ ಸಾಧನದೊಳಗೆ ಹರಿನಾಮವೆ ಮುಖ್ಯ , ಅನ್ಯವಾವುದಿಲ್ಲ) ರಾಗ ರೇವತಿ ಧ್ರುವತಾಳ ಶರಣಾಗತ ವಜ್ರಪಂಜರ ಜರಾಮರಣ ವಿರಹಿತ ವಿಶ್ವಕಾಯ ಕುಂಜರಪತಿ ಪ್ರೀಯ ಸರಸ ಸದ್ಗುಣ ಸಾಂದ್ರ ಶರಣು ಯದುಕುಲೇಂದ್ರ ನಿರಯ ವಿದೂರ ನಿರ್ಜರಗಣ ಮನೋಹರ ಪರಮಾತ್ಮ ಮೂಲಪುರುಷ ಅಪರಿಚ್ಛಿನ್ನ ಮೂರುತಿ ಮುರವೈರಿ ಮುಕುಂದ ಸರಸಿಜನಯನ ನಿರ್ವಿಕಾರ ನಿರ್ಭಯ ನಿರುಪಮ ನಿರಂಜನ ಕರುಣಾಶರಧಿಯೆ ಶ್ರೀಧರ ಶ್ರೀನಿವಾಸಾ ಸುರರ ಮಸ್ತಕ ಮಣಿ ಪರತತ್ವ ಅಣೋರಣಿ ತುರಗವದನ ದೇವ ವಿಜಯವಿಠ್ಠಲರೇಯಾ ಸರಿಗಾಣೆ ನಿನಗೆ ಎನಗೆ ಕರುಣಾ ಮಾಡು ॥ 1 ॥ ಮಟ್ಟತಾಳ ಸಾಧನವೆಂಬೋದು ಆವದು ಆವದು ಹಾದಿ ಒಂದಾದರು ಕಾಣೆನೊ ಕಾಣೆನೊ ಕ್ರೋಧ ಮದಗಳಿಂದ ಕಾಲವ ಪೋಗಾಡಿ ಈ ದೇಹವೇ ವ್ಯರ್ಥವಾಗಿ ದಿನವ ಕಳೆದೆ ಸಾಧುಗಳ ಸಂಗ ಕ್ಷಣವಾದರು ಮಾಡಿ ಪಾಥೆ ಬಿಗಿಯಲಿಲ್ಲ ಹರಿ ನಿನ್ನ ನಗರಿಗೆ ಬೋಧಮೂರುತಿ ನಮ್ಮ ವಿಜಯವಿಟ್ಠಲ ನಿನ್ನ - ಪಾದವ ನಂಬದಲೆ ಪತಿತನು ನಾನಾದೆ ॥ 2 ॥ ತ್ರಿವಿಡಿತಾಳ ತಿಳಿದು ತಿಳಿದು ಎನ್ನ ಮನಸು ಚಂಚಲವಾಗಿ ಸುಳಿಯೆಂಬೊ ಭವದೊಳು ಶಿಲ್ಕಿ ಸುತ್ತುತಲಿದೆ ಹೊಳಿಯ ತುಂಬಿದ ವಾರ್ತಿ ದೂರದಿಂದಲಿ ಕೇಳಿ ಶಿಲಿಯ ಮೇಲೆ ದಾಟಿ ಪೋಗುವೆನೆಂದು ಯೋಚಿಸಿ ತಲೆಯಲ್ಲಿ ಧರಿಸಿ ಆ ಹೊಳಿಯ ತೀರಕೆ ಬಂದು ಜಲದೊಳು ಶಿಲೆ ಇಟ್ಟು ಬೆರಗಾಗಿ ನಿಂತಂತೆ ಹ...
- Get link
- X
- Other Apps
By
Suparna Chincholi
-
Maanasa Pooje ವಿಜಯದಾಸರ ಮಾನಸ ಪೂಜೆ ಕೃತಿ : ಮಾನಸ ಪೂಜೆ ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು | ಪ | ಜ್ಞಾನ ಭಕುತಿಯವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ |ಅ.ಪ| ಕಾಮ ಕ್ರೋಧವ ಹಳಿದು ವಿಷದ ಸ್ತೋಮಗಳನು ತೊರೆದು ರಜೋ ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿ ಶ್ರೀಮದಾನಂದತೀರ್ಥರ ಕೋಮಲಾಂಘ್ರಿ ಕಮಲದಲಿ ಈ ಮನಸ್ಸು ಇಟ್ಟು ನಿಷ್ಕಾಮದಲಿ ಬಗೆಯ ತಿಳಿದು ! ೧ | ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿರಿವಿ ಅಂತ ರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ | 2 | ನೀಲ ರತುನದಂತೆ ಹೊಳೆವ ಪಾಲಸಾಗರ ತನುಜೆ ಅಲ ಮೇಲು ಮಂಗಲರಮಣನಾದ ಮೇಲುಗಿರಿಯ ತಿಮ್ಮನ | ಲಾಲಣಿಂದ ತುತಿಸಿ ತವಕ ಬೀಳದಲೆ ಪೂಜೆ ವಿಧಾಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ | 3 | ವೇದ ಮಂತ್ರಗಳನು ಪೇಳಿ. ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಾದ ಬಳಿಕ ಮಾಧವಂಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯ ಹಾದಿಯನು ತಪ್ಪದೆ | 4 | ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿ ಮಾಡದೆ | ನಾಶರಹಿತನಾದ ಹರಿಯ ಆ ಶಿರಸಾವಿಡಿದು ಪಾದ ಲೇಸಿನಿಂದ ಭಜನೆಗೈದು...
- Get link
- X
- Other Apps
By
Suparna Chincholi
-
Nishte Indali Mana Mutti Bhajisu ಶ್ರೀಶ್ಯಾಮಸುಂದರವಿಠಲದಾಸಾರ್ಯ ವಿರಚಿತ ಶ್ರೀವಿಜಯದಾಸರ ಸ್ತೋತ್ರ ಸುಳಾದಿ ರಾಗ ಹಂಸಧ್ವನಿ ಧ್ರುವತಾಳ ನಿಷ್ಠೆಯಿಂದಲಿ ಮನಮುಟ್ಟಿ ಭಜಿಸು ವಿಜಯ - ವಿಟ್ಠಲದಾಸರ ಮನವೇ ನಿತ್ಯ ಎಷ್ಟು ಪೇಳಲಿ ಇವರ ಉತ್ಕೃಷ್ಟ ಮಹಿಮೆ ಕೃಪಾ - ದೃಷ್ಟಿಯಿಂದಲಿ ನೋಡಿದಾಕ್ಷಣದಿ ಭ್ರಷ್ಟ ಮನಸಿನಿಂದ ಬಿಟ್ಟು ಧರ್ಮಾಚರಣೆ ದುಷ್ಟ ಕೃತ್ಯವಗೈದ ದೋಷದಿಂದ ತಟ್ಟಿದ ದುರಿತೌಘ ಮೊಟ್ಟೆಗಳೆಲ್ಲವು ಸುಟ್ಟು ಭಸ್ಮೀಭೂತವಾದ ಬಳಿಕ ಪುಟ್ಟಿ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ ಮೆಟ್ಟುವರೋ ಕೈವಲ್ಯ ಪಥವಾ ಸೃಷ್ಟಿ ಸಂಹಾರ ಕರ್ತರಿದ್ದಲ್ಲಿಗೆ ಪೋಗಿ ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು ಥಟ್ಟನೆ ವೈಕುಂಠ ಪಟ್ಟಣಕ್ಕೆ ತೆರಳಿ ಪಟ್ಟದರಸಿಯಾದ ಲಕುಮಿ ಸಹಿತಾ ಸೃಷ್ಟಾಂಡಭಾರ ಶಿರದಿ ಇಟ್ಟಂಥ ಫಣಿಪತಿಯ ಪಟ್ಟೆ ಪರ್ಯಂಕದಲ್ಲಿ ಪವಡಿಸಿಪ್ಪಾ ಧಿಟ್ಟಮೂರುತಿ ಶ್ಯಾಮಸುಂದರವಿಟ್ಠಲಗೆ ಪೆಟ್ಟು ಹಾಕಿದ ಪರಮ ಘಟ್ಟಿಗರಿವರು ॥ 1 ॥ ಮಟ್ಟತಾಳ ಎರಡನೆ ಯುಗದಲ್ಲಿ ಸುರಲೀಲನು ಎಂಬ ತರುಚರ ರೂಪದಲಿ ತರಣಿ ಕುಲೋದ್ಭವನಾ ಚರಣವ ಸೇವಿಸಿ ಕರುಣ ಸಂಪಾದಿಸಿದಾ ಮರಳಿ ನಿಕಂಪ ನಾಮದಲಿ ದ್ವಾ - ಪರದಲಿ ಪುಟ್ಟಿ ಯಾದವನೆನಿಸಿದಾ ಅರುಹ...
- Get link
- X
- Other Apps
By
Suparna Chincholi
-
Nambide Ninnaya Paada ಶ್ರೀವಿಜಯದಾಸರ ಕೃತಿ ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ ನಂಬಿದೆ ನಿನ್ನಯ ಪಾದ ॥ ಪ ॥ ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ॥ ಅ ಪ ॥ ( ಶ್ರೀಗುರುವಿಜಯವಿಟ್ಠಲ ಎಂಬಲ್ಲಿ ' ಶ್ರೀ ' ಎಂದರೆ ಲಕ್ಷ್ಮೀದೇವಿಗೆ ' ಗುರು ' ಜ್ಞಾನಸ್ಫೂರ್ತಿದಾಯಕನಾದ, ವಿಜಯವಿಟ್ಠಲ ಎಂದು ಅರ್ಥ. ' ಶ್ರೀಯೋऽಪಿ ಚ ಜ್ಞಾನ ಸ್ಫೂರ್ತಿಸ್ಸದಾ ತಸ್ಮೈ ಹರಯೇ ಗುರುವೇ ನಮಃ' ಎಂಬ ಪ್ರಮಾಣವನ್ನು ಗಮನಿಸಿ ಶ್ರೀವಿಜಯದಾಸಾರ್ಯಕೃತವಿದೆಂದೇ ತಿಳಿದರೆ ಸರಿ. ಚಿಪ್ಪಗಿರಿಯ ಮೂಲಪ್ರತಿಯಲ್ಲಿ ಈ ಪದ ಶ್ರೀವಿಜಯದಾಸಾರ್ಯರ ಪದಗಳ ಜೊತೆಯಲ್ಲೇ ಇದೆ. ಗುರುವಿಜಯರಾಯರ ಅಂದರೆ ಶ್ರೀಮೊದಲಕಲ್ಲು ಶೇಷದಾಸರ ಕೃತಿಸಂಗ್ರಹದ ಮೂಲಪ್ರತಿಯಲ್ಲಿ ಈ ಪದವಿಲ್ಲ.) ಆಡಂಬರ ತೊಲಗಿಸಿ = ಡಾಂಭಿಕ ನಡವಳಿಕೆಗಳನ್ನು ಬಿಡಿಸಿ; ಡಿಂಬದೊಳಗೆ = ದೇಹದಲ್ಲಿ (ಈ ಸಾಧನದೇಹದಲ್ಲಿಯೇ ಶ್ರೀಹರಿಯ ಅಪರೋಕ್ಷವಾಗುತ್ತದೆ - ಸಾಧನಪೂರ್ತಿಯ ನಂತರ, ಶ್ರೀಭಾರತೀಶನ ಅನುಗ್ರಹದಿಂದ); ಬಿಂಬ ಪೊಳೆವಂತೆ = ಬಿಂಬರೂಪಿ ಶ್ರೀಹರಿಯು ಪ್ರಕಾಶಿಸುವಂತೆ (ಪ್ರತ್ಯಕ್ಷತೋರುವಂತೆ). ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತ್ರ । ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥ ...
- Get link
- X
- Other Apps
By
Suparna Chincholi
-
Sakala Paapa Prayaschitha Sulaadi ರಾಗ ಕಾಂಬೋಧಿ ಝಂಪಿತಾಳ ಮಂಜು ಕಿವಿ ಕಣ್ಣು ಕವಿದಾವು ಊರಾ ಹಂಜಾ ವಾರ್ತಿಯ ತೊಲಗದು ಮುಂಜರಗು ಹೆಂಗಳೆ ಬೀಸಲು ಮುಂಜೋಣಿ ನೋಟವು ತಪ್ಪದು ಸಂಜೆಯತನಕ ತಿನಲು ಹೀನರ ಎಂಜಲಾಪೇಕ್ಷ ತಗ್ಗದು ತಗ್ಗದು ಖಂಜಾತನವು ಬಂದು ಪ್ರಾಪ್ತವಾದೆಡೆ ಅಂಜಸಾ ಸ್ಪರ್ಶಾ ಬಯಸುವೆ ಮಂಜು ಕಿವಿ ಕಣ್ಣು ಕವಿದಾವು ಅಂಜಿಕೆಯಿಲ್ಲ ಹಾಳು ಹರಟೆಗೆ ಅಂಜುಳಿ ಮುಗಿದಾಡುವೆ ಬಂಜೆ ಮನ ಇನ್ನು ದಣಿಯದು ರಂಜಕ ಮುಟ್ಟಿಸಿದಂತೆ ಭವ - ಪಂಜರದೊಳಗಾವಿಷ್ಟಾ ರಂಜಣಿಗಿಯಲ್ಲಿ ಮಹಿಷಿ ಮೊಗವೆದ್ದಿ ಗಂಜಿಮುಸರಿ ತೊಳೆದ ನೀರು ಎಂಜಲಾ ದುರ್ವಾಸನೆ ಹೇಯಾ ಗುಂಜಿಕೊಂಡು ಕುಡಿದಂತೆ ನಂಜಿ ನಂಜಿ ಇರದೆ ವಿಷಯ ಪುಂಜ ಸಮಗ್ರ ಸೇವಿಪೆ ರಂಜಿಸುವ ಸುಕೃತ ಫಲ ಗುಲ - ಗಂಜೆ ತೂಕ ಮಾಡಲಿಲ್ಲ ಕಂಜನಾಭ ನಮ್ಮ ವಿಜಯವಿಟ್ಠಲ ನಿ - ರಂಜನ ನೀನೆ ಗತಿಯೊ ॥ 1 ॥ ಮಟ್ಟತಾಳ ಜೋಲು ಬಿದ್ದವು ಹುಬ್ಬು ಕಾಲು ಹಸ್ತದ ಚರ್ಮ ಜೋಲುತದೆ ಸಂಧಿ ಕೀಲುಗಳು ಸಡಲಿ ಕಾಲು ಕೋಲಾಯಿತು ನಾಲಿಗೆ ತೊದಲು ಜರೆ - ಕಾಲ ಸುಕ್ಕಿದ ಗಲ್ಲ ಬೀಳುವಂತೆ ತಲೆ ಓಲ್ಯಾಡುವ ನಡುಗು ಬಾಲತನದ ಬುದ್ಧಿ ಲೋಲುಪ ಭವದ ಲೀಲೆ ಹಗಲು ಇರಳು ಜೋಲೆಯೊಳಗೆ ಬಿದ್ದು ವ್ಯಾಳ್ಯೆ ತಿಳಿಯದಲೆ ಮೂಲ ವಿಚಾರಿಸದೆ ಜಾಲ ದುಷ್ಕರ್ಮ ವಿ - ಶಾಲ ಮಾಡುವೆ ಇನಿತು ಏಳುವಾ ಬಗಿ ಹಾಳಾದ ಕಾಲಕ್ಕೂ ಆಳುತನದಿಂದ ಮೂಲೋಕವ ಬಿಡದೆ ಆಳಬೇಕೆಂಬ ಆಲೋಚನೆ ಮನ - ಏಳಲುವಾಗೆದಯ್ಯ ಪೇಳಿಕೊಂಬುವದೇನು ಪಾಲಸಾಗರ...