Nagara Panchami Vishesha ನಾಗರ ಪಂಚಮಿ 🌺🌺🌺🌺🌺🌺 ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ. ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಂದರ್ಥದಲ್ಲಿ ಪ್ರಕೃತಿಯ ಆರಾಧನೆ. ನಾಗಾರಾಧನೆ ಇದೊಂದು ಪ್ರಾಚೀನ ಆರಾಧನೆ . ವೇದದ ಸೊಲ್ಲುಗಳು ನಾಗಪೂಜೆಯ ಪ್ರಾಚೀನತೆಯನ್ನು ತಿಳಿಯ ಪಡಿಸುತ್ತವೆ . ನಾಗ ದೇವರು ಅಗಣಿತ ಮಹಿಮೆಯ ಶಕ್ತಿಯೆಂದು ಸರ್ಪ ಸೂಕ್ತಗಳ ವರ್ಣನೆಯಿದೆ. ' "ಅನಂತಶ್ಚಾಸ್ಮಿ ನಾಗಾನಾಂ ” – ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದ ಈ ಮಾತು ಸದಾ ಸ್ಮರಣೀಯವಾದುದು . ನಮ್ಮ ಭಾರತದ ಹರಪ್ಪ - ಮೊಹೆಂಜೊದಾರೋಗಳಲ್ಲಿ ಲಭ್ಯವಾದ ನಾಗ ಮುದ್ರೆಗಳು , ಗೋಕರ್ಣದ...
Posts
- Get link
- X
- Other Apps
By
Suparna Chincholi
-
Sri Garuda Devara Stotra Sulaadi ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ ಶ್ರೀ ಗರುಡದೇವರ ಸ್ತೋತ್ರ ಸುಳಾದಿ ರಾಗ ಮೋಹನ ಧ್ರುವತಾಳ ಕನಕಗರ್ಭನ ಸುತ ಕಾಲನಾಮಕನೀತ ಕಾನಕಾಸು ಪಕ್ಷ ಸರ್ವ ಪಕ್ಷೀಶನೆ ವಿನುತ ಕಶ್ಯಪ ಋಷಿ ತನುಭವನೆನಿಸಿದ ಫಣಿ ಭೂಷಣಿ ಫಣಿ ಸಮಕಕ್ಷದಿ ಸೇರಿದ ಅನುಜಹಿ ಮೂರುತಿ ಪೊಂಬಣ್ಣನೆ ಮುನಿಗಜಕೂರ್ಮರ ನುಂಗಿ ತೇಗಿದ ಧೀರ ಮುನಿವಾಲಖಿಲ್ಯರ ವರವ ಪಡೆದ ವನಧಿಯೆಡೆಗೆ ಮಂದರ ಗಿರಿ ತಂದ ವಿರೋಚನ ಪುತ್ರ ಬಲಿ ಒಯ್ದ ಮುಕುಟ ತಂದೆ ವನದ ಶ್ಯಂದನನೊಡ ಸೆಣಸ್ಯಾಡಿಯಮೃತ - ವನು ತಂದ ಪಿತೃ ಗಣ ನಾಗಾನಂದ ಘನ ನಿಭ ಅಭಿನವ ಪ್ರಾಣೇಶವಿಟ್ಠಲನ ಅನುರಾಗವನು ಪಡೆದ ವೀಪ ಗರುಡದೇವ ॥ 1 ॥ ಮಟ್ಟತಾಳ ಸೌಪರ್ಣಿಪತಿ ರುಗ್ಮವರ್ಣಕಾಯ ಕೂಪರಾದ ಮಧ್ಯ ನಾವಿಕರನು ಮೆದ್ದ ಶ್ರೀಪತಿಯನು ಪೊತ್ತು ಕರದಿಹ ಪದ ನಖದಿ ಭೂಪನ ಪ್ರತಿಬಿಂಬ ನೋಡಿ ನಲಿವ ದೇವ ಗೋಪತಿ ಅಭಿನವ ಪ್ರಾಣೇಶವಿಟ್ಠಲನ ರೂಪ ರಾಜ್ಯವ ತೋರು ಮಾಪತಿಯ ವಾಹನ ॥ 2 ॥ ತ್ರಿವಿಡಿತಾಳ ಧುರಲಂಕಾಪುರದಲ್ಲಿ ಮರ್ಕಟವೀರರ ಹರಿಜಿತು ಸರ್ಪಾಸ್ತ್ರದಿಂದ ಬಂಧಿಸೆ ಹರಿ ರಾಮರಾದೇಶವರಿತು ಧಾವಿಸಿ ಬಂದು ಉರಗಾಸ್ತ್ರ ಬಂಧನ ಪರಿಹರಿಸಿ ತರುಚರ ಗಢಣಕ್ಕೆ ಹರುಷವ ಬೀರಿದೆ ಶಿರಿಯರಸನ ಆಜ್ಞೆ ಪೂರೈಸಿದೆ ಶರಧರ ಅಭಿನವ ಪ್ರಾಣೇಶವಿಟ್ಠಲನ ಕರುಣದಿಂ...
- Get link
- X
- Other Apps
By
Suparna Chincholi
-
Sampattu Shukravarada Haadu 🌺🌺🌺🌺🌺🌺 ಸಂಪತ್ತುಶುಕ್ರವಾರದ_ಗೌರಿಹಾಡು 🌺🌺🌺🌺🌺🌺 ಹರನ ಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತೆಯ ಕಥೆಗೆ ವರವ ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ ಇಕ್ಷುಚಾಪದವನ ಪಡೆದ ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ- ಕಟಾಕ್ಷದಿ ನೋಡಬೇಕೆನ್ನ ಶ್ರಾವಣಮಾಸದಿ ಮೊದಲ ಶುಕ್ರವಾರ ಮಾಧವನರಸಿ ಮಾಲಕ್ಷ್ಮೀ ದೇವೇರ ಮಹಿಮೆ ಕೊಂಡಾಡುವೋದೀ ಕಥೆ ಕಿವಿಗೊಟ್ಟು ಕೇಳೋದು ಜನರು ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ ಹಸುಗೂಸುಗಳು ಮನೆತುಂಬಾ ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು ಮೊಸರು ಅನ್ನವು ಮೊದಲಿಲ್ಲ ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು ವ್ರತನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ ಸತಿ ದಯದಿ ನೋಡಿದಳು ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ ಮುಂದೆ ತೋರಣ ಕಟ್ಟುತಿರಲು ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ ಚಟ್ಟಿಗೆ ಬರೆವುದನು ತಾ ಕಂಡು ಇದು ಏನು ನೋವಿ ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ ದೇವರ ಪಟ್ಟದರಸಿ ಶ್ರಾವಣಮಾಸ ಸಂಪತ್ತು ಶುಕ್ರವಾರ ನಾವು ಪೂಜೆಯ ಮಾಡಬೇಕು ಎನಗೊಂದು...
- Get link
- X
- Other Apps
By
Suparna Chincholi
-
Ibharampura Apparavaru - Short Summary ಶ್ರಾವಣ ಶುದ್ಧ ತೃತೀಯಾ ಶ್ರೀಮದ್ ಅಪ್ಪಾವರ ಆರಾಧನ ಮಹೋತ್ಸವ , ಇಭರಾಮಪುರ श्रीरामचरणद्वन्द्ववर्धिचंद्रो दयोपमः | श्रीकृष्णपूजानिरतः कृष्णोमाम्सर्वदावतु || ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ, ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು) ಶ್ರೀ ಯೋಗಿ ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ , ಶ್ರೀ ಇಭರಾಮಪುರ ಅಪ್ಪಾವರ ಆರಾಧನೆ ಮಹೋತ್ಸವ. ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ : ಜನನ : 1789 ವಿಜಯ ದಶಮಿ ತಂದೆ : ಶ್ರೀ ಅಹೋಬಲಾಚಾರ್ಯ ತಾಯಿ : ಕೃಷ್ಣ ಬಾಯಿ ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ ) ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು ಸಮಕಾಲೀನ ಅಪರೋಕ್ಷ ಜ್ಞಾನಿಗಳು ...
- Get link
- X
- Other Apps
By
Suparna Chincholi
-
Prarthana Sulaadi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ (ಗುರುವಿಜಯವಿಟ್ಠಲ ಅಂಕಿತ) ಅಪರೋಕ್ಷ ವಿಷಯ ಪ್ರಾರ್ಥನಾ ಸುಳಾದಿ (ಭಾರತ ಕಥಾ ದೃಷ್ಟಾಂತ ಐತಿಹಾಸಿಕ ಪೂರ್ವಕ, ಸುರರ ಶಾಪವಿಮೋಚನ ಗೈದು ಎನ್ನಗಲಿದ ನೀನು ಎನ್ನಲ್ಲಿ ಕೃಪೆ ಮಾಡಿ ಪೊಳೆದು ಅನುಗ್ರಹಿಸು ಎಂದು ಅಪರೋಕ್ಷ ವಿಷಯ ಪ್ರಾರ್ಥನಾ.) ರಾಗ ಆರಭಿ ಧ್ರುವತಾಳ ತಂದೆ ನಿನ್ನಯ ಪಾದ ಸಂದರುಶನದಿಂದಾ - ನಂದವಾಯಿತು ಎನಗೆ ಅಮರೇಂದ್ರನೆ ವೃಂದಾರಕರಂದು ಇತ್ತ ತ್ರಿವಿಧ ಶಾಪದಿ ಈ ವ - ಸುಂಧರೆ ಎಂಬೊ ಮಹಾ ಕಾರಾಗೃಹ ಬಂಧನದಲಿ ಸಿಲ್ಕಿ ದೈತ್ಯರ ವಶನಾಗಿ ಅಂಧಕಾರವೆಂಬೊ ಅಜ್ಞಾನದಿ ವೃಂದ ದುಃಖಗಳುಂಡು ಬಂಧು ಬಳಗ ಮಿತ್ರ - ರಿಂದ ಬಾಹಿರನಾಗಿ ಸಕಲ ದೋಷ - ವೃಂದಗಳಿಗೆ ನಾನು ಮಂದಿರ ಸ್ಥಾನನಾಗಿ ನಿಂದಿತನಾದೆ ನೈಜ ಜನರಿಂದ ಮಂದಹಾಸದಿ ಮಾತ ನಡಿಸಿಕೊಳ್ಳದೆ ಮುಖ್ಯ ಬಂಧುನಾದ ಹರಿಗೆ ವಿಮುಖನಾಗಿ ಅಂಧಕನಾಗಿ ಈ ಭೂ ಪ್ರದೇಶವೆಂಬೊ ಅಂಧಂತಮಸ್ಸಿನಲ್ಲಿ ನೊಂದು ದುಃಖ - ದಿಂದ ದಾಂಟುವುದಕ್ಕೆ ಇನ್ನು ಸಂದೇಹ ಉಂಟೆ ಕಂದು ಕಂಧಾರನ್ನ ಪ್ರೀತ್ಯಾಸ್ಪದನೆ ಇಂದ್ರನಾಮಕ ಗುರುವಿಜಯವಿಟ್ಠಲನ್ನ ತಂದು ತೋರಿಸು ಎನಗೆ ತಡ ಮಾಡದೆ ॥ 1 ॥ ಮಟ್ಟತಾಳ ಅತಿಶಯವಾದಂಥ ಹಿತದಿಂದಲಿ ನೀನು ದ್ವಿತಿಯ ರೂಪವಾದ ಯತಿ ರೂಪದಿ ಬಂದು ಆತ್ಮಜನೆ ನೀನು ಅಖಿಳ ಸೌಖ್ಯಗಳಿಂದ ಕ್ಷಿತಿಯಲಿ ಸುಖವೈದು ಎಂತೆಂತು ನುಡಿದು ಹಿತ ಮಾಡಿದಿ ನಿ...
- Get link
- X
- Other Apps
By
Suparna Chincholi
-
Sadhana Sulaadi ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ (ಸಂಸಾರ ಅಸಾರವೆಂದು ತಿಳಿದು ಧೃಢವಾಗಿ ಹರಿಪಾದ ನಂಬಿ , ಮದ್ದಾನೆ ಕರ್ದಮದೊಳಿದ್ದಂತೆ ಸಂಸಾರದಲ್ಲಿ ನಿರ್ಲಿಪ್ತನಾಗಿರುವಿಕೆ.) ರಾಗ ಸಾರಂಗ ಧ್ರುವತಾಳ ಇಂತೀ ಸಂಸಾರದ ಭ್ರಾಂತಿಗೊಳಗಾಗಿ ದು - ಶ್ಚಿಂತಿಯಲ್ಲಿ ನೀ ಬಳಲದಿರು ಸಂತತದಲ್ಲಿ ಸಂತಾಪದಲ್ಲಿ ಕುದಿದು ಕಿಂತು ಕಳೆಯದೆ ಭವದ ಪಂಥಿದೊಳು ಹೊರಳಿ ಅಂತನು ಕಾಣದೆ ಸಂತತಿ ಎನ್ನದ್ಯೆನ್ನದು ನೀನು ನಾನೆಂಬೊ ಪಂಥದಲ್ಲಿ ತಿರುಗಿ ಮುಂತೆ ನೆನಿಯದೆ ಪಾಂಥದರ ವಂಟಿಗೆಯಲ್ಲಿ ನಿಂತ ಜನರ ಕೂಟ - ದಂತೆಲವೊ ಜೀವ ನೀನೆಂತು ಮರುಳೊ ಕಂಥೆ ಪಟಕ್ಕೆ ಸುತ್ತ ತಂತಿ ಜೋಡಿಸಿದ ಪರಿ - ತಂತ್ರವಿದು ನೆಚ್ಚದಿರು ಕಂಥೆ ಮಾಯಾ ಶಾಂತ ಪಾರಾಯಣ ವಿಜಯವಿಟ್ಠಲ ಜಗ - ದಂತರಯಾಮಿಯ ಮಂತ್ರವನ್ನು ಪಠಿಸೊ ॥ 1 ॥ ಮಟ್ಟತಾಳ ಹೊಳೆಯ ಹರಿಯಿಂದ ಮಳಲು ಹರಿದು ಬಂದು ಕೆಲವು ದಿನ ನೆಲೆಯಾಗಲು ಮತ್ತೆ ಜಲವತ್ತಡಿಯಿಂದಾಗಲಿ ಪೋಗಿ ಮಳಲು ಬಲು ಪರಿಯಾದಂತೆ ತಿಳಿವದು ನಿನ್ನಯ ಕುಲದ ಉತ್ಪತ್ತಿಯು ಘಳಿಗೆಯೊಳಗೆ ಮೂ - ದಲಿಸಿ ನುಡಿವರೂ ಮುಳವು ಮಾಡಿಕೊಳದೆ ಹುಳಕು ಯೋಚನೆ ತೊರೆದು ಕೆಲಕಾಲ ವಿರಾಮ ವಿಜಯವಿಟ್ಠಲನ್ನ ಒಳಗೆ ಮಾಡಿಕೊಂಡು ಸುಳಿದಾಡು ವಿಹಿತದಲ್ಲಿ ॥ 2 ॥ ರೂಪಕತಾಳ ಸುಖವಿಲ್ಲ ಸುಖವಿಲ್ಲ ಸಂಸಾರಾಖ್ಯದಲ್ಲಿ ದುಃಖವೆ ದುಃಖವೆ ಪ್ರಾಪ್ತಿ ಸಕಲ ಕಾಲದಲೀ ತ್ವಕುವೇಂ...
- Get link
- X
- Other Apps
By
Suparna Chincholi
-
Suvvali ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನ ಸುವ್ವಿll ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll ಶ್ರೀ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ ll ಹರುಷದಿಂದ ಭಾರತೀಶರನು ಭಜಿಸುವೆ ll 1 ll ಅಮರವರ್ಯರೆಲ್ಲ ಕ್ಷೀರಾಬ್ದಿಯಲ್ಲಿ ಮನೆಯಮಾಡಿ ll ಕಮಲೆಯೊಡನೆ ರಮಿಸುವ ಘನನ ಕಂಡರೋ ll2ll ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ ll ರಕ್ಷಿಸೆಂದು ಪೊಗಳಿದರೆ ಕುಕ್ಷಿಲೋಲನ ll3ll ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು ll ದಾನ ಮಾಡಿದೆಯೋ ವೇದಾದಿ ವೇದವ ll4ll ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪ ll ದಿಂದ ಹೋಗಿ ಅಮೃತ ವನ್ನೇ ತಂದು ನೀಡಿದೆ ll5ll ವರಾಹನಾಗಿ ಹಿರಣ್ಯಾಕ್ಷನ ವಧೆಯಮಾಡಿ ಗೆಲಿದು ಬಂದೆ ll ಧರಣಿಯೆತ್ತಿ ನಮ್ಮ ಸಲಹಿದಾತನಲ್ಲವೇ ll6ll ಮಗನ ಹಗೆಯ ಬಗೆದು ದೈತ್ಯ ಮತ್ಸರವ ಮಾಡುತಿರಲು ll ನರಮೃಗ ರೂಪನಾಗಿ ಮಗನ ಸಲಹಿದೆ ll7ll ಇಂದ್ರಲೋಕವೆಲ್ಲ ಬಲೀಂದ್ರನಪಹರಿಸುತಲಿರಲು ಉಪೇಂದ್ರನಾಗಿ ತಂದ ಮಧುಸೂದನನಲ್ಲವೇ ll8ll ಎರಡು ಹತ್ತು ಒಂದು ಬಾರಿ ಧರಣಿ ನಾಯಕರ ಗೆಲಿದೆ ll ಪರಶುರಾಮನಾಗಿ ನೀ ಪ್ರಕಟವಾದೆಲೊ ll9ll ಈಗ ಮತ್ತೆ ಕುಂಭಕರ್ಣ ರಾವಣಾದಿ ಅಸುರರೆಲ್ಲ ll ಆಗ ಭೋಗದಿಂದ ಮತ್ತ ರಾಗುತ್ತಿದ್ದರು ll10ll ಅಂದು ಮಥುರಾಪಟ್ಟಣ ಹೊಕ್ಕು ಮಾವ ಕಂಸನ ಕೊಂದ ll ತಂದೆತಾಯೆರ ಬಂಧನವ ಬಿಡಿಸಿದೆ ll11ll ತ್ರಿಪುರರ ಸತಿಯರ ಅಪಹರಿಸಿ ವೃತಗಳನ್ನು ll ನಿಪುಣನಾಗಿ ಬಂದು ಗೆಲಿದ ಚಪಲನಲ್ಲವೇ ll12ll ಕಲ್ಕ್ಯಾವತಾ...