Chaturmasya Mahiti
ಚಾತುರ್ಮಾಸ ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ. ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ. ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿ...