HARI HARA SULADI
ಪುರಂದರದಾಸರ ರುದ್ರದೇವರ ಕುರಿತ ಸುಳಾದಿ ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು | ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ | ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು | ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3|| ಅಟ್ಟತಾಳ ಬಾಣಾಸುರನ ಭಕುತಿಗೊಲಿದು ಬಂದು | ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು | ಬಾಹು ಸಹಸ್ರವ ಕಡಿಯುವಾಗ | ಬೇಕು ಬೇಡೊಂದೊಮ್ಮೆ ಎಂದನೆ ಶಿವನು | ಪುರಂದರವಿಠಲ ಪರದೈವವೆಂದರಿತ ಕಾರಣ | ಒಪ್ಪಿಸಿಯೇ ಕೊಟ್ಟಾ ಶಿವನು ||4|| ತ್ರಿವುಡೆತಾಳ ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ | ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ | ವಿಷ್ಣು ಪುರಂದರವಿಠಲ ರಾಯನ ಅತ್ಯಧಿಕ ಪ್ರಿಯ...