Adhika Masa Mahatme
ಅಧಿಕಮಾಸದ ಮಹತ್ತ್ವ ಅಧಿಕಮಾಸ ಎಂದರೇನು ? ಯಸ್ಮಿನ್ ಮಾಸಿ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ಚ | ಮಲಮಾಸಃ ಸ ವಿಜ್ಞೇಯಃ ಮಾಸಃ ಸ್ಯಾತ್ತು ತ್ರಯೋದಶಃ || - ಕಾಠಕಗೃಹ್ಯಸೂತ್ರ ಚಾಂದ್ರೋ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕಿರ್ತಿತಃ || - ಬ್ರಹ್ಮಸಿದ್ಧಾಂತ( ಸ್ಮೃತಿ ಮುಕ್ತಾವಳಿ ) ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು . ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ . ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ . ********* ಮಲ(ಅಧಿಕ)ಮಾಸದ ಅರ್ಥ ಮಲಪಕರ್ಷಣೋ ಮಾಸೋ ಮಲಮಾಸಸ್ತತೋ ಬುಧೈಃ | ನಿರ್ಧಾರಿತೋ ವಸಿಷ್ಠಾಧೈಃ ಪುರಾಣೈರ್ವೇದಚಿಂತಕೈಃ || ಮಲಂ ತು.ಪಾತಕಂ ನಾಮ ಸ್ನಾನದಾನಾದಿದ...