Posts

Showing posts from February, 2023

HARI HARA SULADI

ಪುರಂದರದಾಸರ ರುದ್ರದೇವರ ಕುರಿತ ಸುಳಾದಿ ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು | ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ | ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು | ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3|| ಅಟ್ಟತಾಳ ಬಾಣಾಸುರನ ಭಕುತಿಗೊಲಿದು ಬಂದು | ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು | ಬಾಹು ಸಹಸ್ರವ ಕಡಿಯುವಾಗ | ಬೇಕು ಬೇಡೊಂದೊಮ್ಮೆ ಎಂದನೆ ಶಿವನು | ಪುರಂದರವಿಠಲ ಪರದೈವವೆಂದರಿತ ಕಾರಣ | ಒಪ್ಪಿಸಿಯೇ ಕೊಟ್ಟಾ ಶಿವನು ||4|| ತ್ರಿವುಡೆತಾಳ ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ | ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ | ವಿಷ್ಣು ಪುರಂದರವಿಠಲ ರಾಯನ ಅತ್ಯಧಿಕ ಪ್ರಿಯ...

SRI LAKSHMI HRUDAYA STOTRA PADA

LAKSHMI HRUDAYA STOTRA BY GURUJAGANATHA DASARU ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ | ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ | ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ ಫಲಗಳನೀವ ಸಾಧನ ಸುಖವಕೊಡುತಿರ್ಪ | ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩ ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ | ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ || ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ | ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ||೫|| ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭ...

MADHAVANANGHRI NITYA VADIRAJARA SULADI

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ ವಾದ ಮಾಯಾ ವಾದಿಗಳ ಗೆದ್ದ  ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ  ವೇದವೇದ್ಯ "ವಿಜಯವಿಠಲ" ತಾನು| ಆದರದಿಂದವರ ಭುಜದಿ ಹಯವಕ್ತ್ರನಾಗಿ |  ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ | ಶ್ರೀಧರನ ಮಹಿಮೆ ಸಾಧುಜನರು ಕೇಳಿ || ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ | ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ | ಸಡಗರದ ಭಕ್ಷ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು | ಕಡಗೋಲು ವೇಣು ಪಿಡಿದುಡಿಪಿಲಿನಿಂದ | ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು | ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ || ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ | ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |  ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ |  ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು | ಸಾಮಾನ್ಯ ಜನರಿಗೆ ದೊರಕುವನೇ ಕೇಳಿ || ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ- ಗ್ವಿಜಯ ಮಾಡಲು ಪುರಕೆ | ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಲರನಾಳಿದಾ | ನಿಜವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯಸಾರಧಿ ಪಾದ ರಜದ ಮಹಾ...

ENTHA PAVANA PADAVO

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ|| 1 ಬಲಿಯ ದಾನವ ಬೇಡಿ ತ್ರೈಲೋಕ್ಯವ ನಳೆದು ಏಕೆಂಘ್ರಿಯಲಿ| ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ|| 2 ಚೆಂಡು ತರುವ ನೆವದಿ ಕಾಳಿಂಗನು- ದ್ದಡ ಮಡುವ ಧುಮುಕಿ| ಚಂಡ ಕಾಳಿಂಗನ ಮಂಡೆಯೊಳಗೆ ಪಾದ- ಪುಂಡರೀಕವನಿಟ್ಟು ತಾಂಡವವಾಡಿದ|| 3 ಸಂತತ ಸೌಖ್ಯವೆಂಬ ಕಾವೇರಿಯ ಅಂತರಂಗದಿ ನೆಲೆಸಿ| ಸಂತೋಷದಿಂದ ಅನಂತನ ಮೇಲೆ ನಿ- ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ|| 4 ಒಲಿದು ಗಯಾಸುರನ ಶಿರದೊಳಿಟ್ಟು ಹಲವು ಭಕ್ತರ ಪೊರೆದ| ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ ತೊಲಗದೆ ಇರುತಿಪ್ಪ ಸುಲಭ ಹಯವದನ || 5

PATIYA PADAKKE ERAGI SUDHAMA CHARITRE

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |  ಸುತಗೆ ವಂದನೆಯ ಮಾಡಿದಳು || ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- | ದ್ಗತಿಯಾಗಲೆನುತ ಪೇಳಿದಳು || ೧ || ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ | ಹೊದಿಯಲಿಕ್ಕಿಲ್ಲ ಆಶನವಿಲ್ಲ || ಗದಗದ ನಡುಗುತ ಮಧುರ ಮಾತಾಡುತ | ಸದನದೊಳಿರುತಿದ್ದನಾಗ || ೨ || ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |  ನಾಥನ ಧ್ಯಾನ ಮಾಡುತಲಿ || ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ ತರುವನು ಮುಷ್ಟಿ ತುಂಬ || ೩ || ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು |  ಹಿತದಿಂದ ಪಾಕ ಮಾಡುವಳು || ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ |  ಮತಿವಂತಿ ಉಳಿದದ್ದುಂಬುವಳು || ೪ || ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು |  ಪತಿಕೂಡೆ ಮಾತನಾಡಿದಳು || ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- | ದ್ಗತಿಯೇನೆನುತ ಪೇಳಿದಳು || ೫ || ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ |  ಒಡನೆ ಆಡಿದ ಗೆಳೆಯರಿಲ್ಲೆ || ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ |  ಹಿರಿಯರು ದಾರಿಲ್ಲೆ ನಿಮಗೆ || ೬ || ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ |  ಉತ್ತಮ ಗುರುಗೋಳಿಲ್ಲೆನು ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ  ಮತ್ತೆ ಕೇಳಿದಳು ಕ್ಲೇಶದಲಿ || ೭ || ಮಡದಿ ಮಾತನು ಕೇಳಿ ಮನದಲಿ ಯೋಚಿಸಿ | ಹುಡುಗನಾಗಿರಲಿಕ್ಕೆ ಹೋಗಿ || ಗುರುಕುಲ ವಾಸದಲಿ ಹರಿ ...

HAYAGREEVA DEVARA CHINTANE

  HAYAGREEVA DEVARA CHINTANE 🌷ಶ್ರೀ ಹಯಗ್ರಿವ ಚಿಂತನ🌷 ( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ ) ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ | ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ || ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ ! ಹಯಗ್ರೀವಾಸುರ ಮದಭರಿತ ಆನೆಯಂತೆ  ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ .  ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು . -ಶ್ರೀದಶಾವತಾರಸ್ತುತಿ -2 ವಿವರಣೆ :- ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ . ಅಥೋ ವಿಧಾತುರ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ | ನಿಹತ್ಯ ತಂ ಮತ್ಸ್ಯವಪು ರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ||  ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ | ವೈವಸ್ವತಾಯೋತ್ತಮಸಂವಿದಾತ್ಮ ವಿಷ್ಣೋಃ ಸ್ವರೂಪಪ್ರತಿ...
  SRI KRISHNA AVATARA SULADI ಶ್ರೀವಿಜಯದಾಸಾರ್ಯ ವಿರಚಿತ   ಶ್ರೀಕೃಷ್ಣಾವತಾರ ಮಹಿಮೆ ಸುಳಾದಿ   ರಾಗ ರೀತಿಗೌಳ   ಧ್ರುವತಾಳ  ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ - ಕ್ಷಿತನ ಪ್ರಾಣವನ್ನು ಉಳಹಿದ ದೈವವೆ ರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ - ಸತಿಯರ ಭೋಗಿಸಿ ಸುತರ ಪಡೆದದೇನೋ ಚತುರ ಮೊಗಾದಿಗಳ ಪೆತ್ತ ಪರಮಪುರುಷ ಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾ ಗತಿಯಾಗಬೇಕೆಂದು ಸುತನಗೋಸುಗ ಪೋಗಿ ಕೃತವಿರೋಧಿಯ ವಲಿಸಿ ವರವ ಕೈಕೊಂಡದ್ದೇನೊ ನುತಿಸಿದ ಜನರಿಗೆ ಅನುದಿನ ತಪ್ಪದಲೇ ಹಿತವಾಗಿರುತಿಪ್ಪ ಭಕ್ತವತ್ಸಲದೇವ ಶಿತವಾಹನಗೊಲಿದು ರಣದೊಳು ಸುಧನ್ವನ್ನ ಹತಮಾಡಿಸಿದ್ದು ಆವದೋ ಕರುಣತನವೋ ತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದು ಕೃತಭುಜರೊಂದಾಗಿ ಗಣಣೆ ಕಾಣದೆ ಎಣಿಸಿ ಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆ ಅಮಿತಭೋಜನನೆಂದು ಕರಿಸಿಕೊಂಬುವದೇನೋ ಪತಿತಪಾವನ ರಂಗಾ ವಿಜಯವಿಟ್ಠಲ ನಿನ್ನ ಕೃತಕಾರ್ಯಂಗಳಿಗೆ ನಾನೇನೆಂಬೆ ತಲೆದೂಗಿ ॥ 1 ॥   ಮಟ್ಟತಾಳ  ಬಲು ರವಿ ಪ್ರಕಾಶನೆಂದು ನಿನ್ನನ್ನು ಕಲಕಾಲಾ ಬಿಡದೆ ಪೊಗಳುವ ಬಗೆ ನೋಡು ಇಳಿಯೊಳಗೆ ಯಿದ್ದ ಮನುಜರ ಕಣ್ಣಿಗೆ ಬೆಳಗು ತೋರಿ ಪ್ರೀತಿ ಮಾಡಿದ ಪರಿಯೇನೋ ಹಲವು ಬಗೆಯಿಂದ ಶುದ್ದಾತ್ಮನೆಂದು ವಲಿಸಿ ವೇದಂಗಳು ಬೆರಗಾಗುತಲಿರೇ ಗಲಭೆ ಮಾಡದೆ ಪೋಗಿ ಗೊಲ್ಲತಿಯರ ಮನೆ ಒಳಪೊಕ್ಕು ಪಾಲು ಮೊಸರು ಬೆಣ್ಣೆಯ ಕದ್ದೆ ಜಲಜಜಾಂಡದಕಿಂತ...
  SADHANA SULADI BY SRI VIJAYA DASARU ಶ್ರೀ ವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ  (ದೇಹ ಅನಿತ್ಯ, ಅಸ್ಥಿರ. ಸಂಸಾರ ಅಸಾರವಾದುದು. ಆದ್ದರಿಂದ ಸಂಸಾರದಲ್ಲಿ ಮುಳುಗದೆ ವೈರಾಗ್ಯ ಪೊಂದು. ನಿರಂತರ ಪರೇಶನನ್ನು ಭಜಿಸು.)   ರಾಗ ಬೇಹಾಗ್   ಧ್ರುವತಾಳ  ಈಗಲೊ ಇನ್ನಾಗಲೊ ಈ ಗಾತ್ರ ಸ್ಥಿರವಲ್ಲ ಭೋಗದಾಶೆಯ ಬಿಡು ಜಾಗು ಮಾಡದಲೆ ಭಾಗವತರ ಸಂಯೋಗದಿಂದಲಿ ವೀ - ರಾಗ ನೀನಾಗು ಬಲು ಜಾಗರತನದಲಿ ಭಾಗದೆಯರ ಗೆಲ್ಲು ತ್ಯಾಗಿಯಾಗು ಸರ್ವದಲಿ ಬಾಗಿ ಜ್ಞಾನಿಗಳಿಗೆರಗು ದಾಸನೆನಿಸೀ ತಾಗುಣದಲಿ ಬ್ಯಾಸಿಗೆ ಬಿಸಲೊಳಗೆ ಪೋಗುವನು ಮನುಜ ತಂಪಾಗುವನೆಂದು ಒಂದು - ನಾಗನ ಫಣದ ಕೆಳಗೆ ಕುಳಿತಂತೆ ಆಗುವದು ಭವಸಾಗರದ ಸುಖವೊ ಹೀಗೆಂದು ತಿಳಿ ಜನ್ಮರೋಗ ಹಿಂದುಗಳಿಯೋ ನೀಗು ಸತ್ಕರ್ಮವು ಚನ್ನಾಗಿ ಸಾಧನ ಬಯಸಿ ಭಾಗೀರಥಿ ಜನಕ ವಿಜಯವಿಟ್ಠಲನ್ನ ಲೇ - ಸಾಗಿ ಕಾಣುವದು ಇಂಪಾಗಿ ಸಂಚರಿಸುತ್ತ ॥ 1 ॥   ಮಟ್ಟತಾಳ  ನಾಚಿಕಿಲ್ಲದ ಮನವೆ ಯೋಚಿಸಿ ನೀ ನೋಡು ಪ್ರಾಚೀನಕರ್ಮ ಆಚರಿಸದೆ ಬಿಡದು ವಾಚದಲ್ಲಿ ಕೇಳು ನೀಚಮಾರ್ಗವೆ ಕಳಿಯೊ ಈ ಚರಾಚರದಲ್ಲಿ ಯೋಚನೆ ಪರನಾಗಿ ಪಾಚಿ ತೆರನಾದ ಪೋಚೆ ಸಂಸಾರದಾ - ಲೋಚನೆ ತೊರೆವದು ಸೂಚಿಸುವೆನು ನಿನಗೆ ಕೀಚಕಾರಿ ಪ್ರೀಯ ವಿಜಯವಿಟ್ಠಲ ಭವ ಮೋಚಕನೆಂದು ಶ್ರೀಚರಣವ ನೆನಿಸೊ ॥ 2 ॥   ತ್ರಿವಿಡಿತಾಳ  ಚಂಚಲ ಮನವೆ ನಿನಗೆಷ್ಟು ಪೇಳಿದರೇನು ವಂಚನೆ ಬಿಡದಲೆ ಚರಿಸುತಿಪ್ಪೆ ಹಂ...
  VRUSHABA DEVARA SULADI ಶ್ರೀವಿಜಯದಾಸಾರ್ಯ ವಿರಚಿತ   ಶ್ರೀ ಋಷಭ ದೇವರ ಸುಳಾದಿ  (ಮೇರುದೇವಿಯಲ್ಲವತರಿಸಿದ ಸೌಭರಿಮುನಿವಂದ್ಯ , ಮೇಧಾದಿ ನಿಯಾಮಕ , ವಿಷಯದ ಮಡುವಿನಲ್ಲಿ ವಿಷದಂತನ ಕಸುವಡಗಿಸಿದ, ಋಷಿ ವೇಷಧಾರಿಯಾದ ಋಷಭದೇವನೇ ಸದಾ ಎನ್ನ ಹೃದಯದಲ್ಲಿ ಸುಳಿದು , ದುರಿತವನ್ನು ತರಿದು, ಸಂಸಾರ ಸಾಗರದಿಂದ ದಾಟಿಸು.)   ರಾಗ ವಲಚಿ   ಧ್ರುವತಾಳ  ಸೌಭಾಗ್ಯವಂತ ಜಯತು ಸೌಂದರ್ಯಸಾರ ಜಯತು ಭೂಭಾರಹರಣ ಜಯತು ಭೂಮಾ ಜಯತು ಶ್ರೀಭೂರಮಣ ಜಯತು ಶೃಂಗಾರ ಪುರುಷ ಜಯತು ಶೋಭನಮೂರ್ತಿ ಜಯತು ಸೌಖ್ಯ ಜಯತು ಲೋಭ ವಿರಹಿತ ಜಯತು ಲೋಕೇಶ ಜನಕ ಜಯತು ಲಾಭ ಪ್ರದಾತ ಜಯತು ಲಘುವೆ ಜಯತು ವೈಭೋಗಾನಂದ ಜಯತು ವೈಕುಂಠವಾಸ ಜಯತು ಭೂ ಭೂಜ ರತ್ನ ಜಯತು ಭೂಷಾ ಜಯತು ನಾಭಿ ಕಮಲಾ ಜಯತು ನಾಗಾರಿ ಗಮನಾ ಜಯತು ಗೋ ಭೀತಿನಾಶ ಜಯತು ಗೋತ್ರಜ ಜಯತು ಶ್ರೀಭಾಗ ಚರಣ ಜಯತು ತ್ರಿದಶ ವಂದಿತ ಜಯತು ವೈಭವಕೀರ್ತಿ ಜಯತು ವೈದ್ಯ ಜಯತು ನಾಭಿನಂದನ ಜಯತು ನಾನಾವತಾರ ಜಯತು ಸ್ವಭಾವ ಲೀಲಾ ಜಯತು ಸ್ವಾಮೀ ಜಯತು ಸಾಭಿಮಾನನೆ ಜಯತು ಸಮಸ್ತ ಫಲದಾ ಜಯತು ಸಾಭೀಮ ದೈವ ಜಯತು ಸಮಸ್ತ ಸಾಧು ಜಯತು ಸುಭಾಷ್ಯಪಾಲ ಜಯತು ಸುಖಸಾಂದ್ರ ಜಯತು ಕುಭಾವ ವೈರಿ ಜಯತು ಕುಶಲಾ ಜಯತು ಸೌಭರಿಮುನಿ ವಂದ್ಯ ವಿಜಯವಿಟ್ಠಲ ಋಷಭ ಈ ಭೋಗದಲ್ಲಿ ನಿಂದು ವಿಜ್ಞಾನವನ್ನೆ ಕೊಡು ॥ 1 ॥   ಮಟ್ಟತಾಳ  ಋಷಭ ಋಷಭ ಮಹಾ ಋಷಿಜನ ಮನೋಹರ ವೃಷಭವಾಹನ ಪ್ರೀಯ ಹೃಷಿ...
  MUKTARA PRAKARANA SULADI ಶ್ರೀ ವಿಜಯದಾಸಾರ್ಯ ವಿರಚಿತ   ಮುಕ್ತರ ಪ್ರಕರಣ ಸುಳಾದಿ   ರಾಗ ಆನಂದಭೈರವಿ   ಧ್ರುವತಾಳ  ಮುಕುತಿಯಾದವರ ಪ್ರಕರಣವ ತಿಳಿಯಬೇಕು ಭಕುತಿಯಿಂದಲಿ ಭಾವ ಶುದ್ದನಾಗಿ ಮುಕುತರೊಳಗೆ ತಾರತಮ್ಯವೇ ವುಂಟು ಆ - ಸಕುತರಾಗಿಪ್ಪರು ಹರಿ ಪದದಿ ಕಕುಲಾತಿ ಮೊದಲಾದ ದೋಷ ರೂಪಗಳಿಲ್ಲ ಅಕಟಕಟ ಯಿವರೀಗ ವಿಲಿಂಗರು ಸಕಲರೊಳಗೆ ಬ್ರಹ್ಮ ಉತ್ತಮ ದೇವತಿ ಅಕಳಂಕನಯ್ಯ ಸಂಸಾರದಲ್ಲಿ ಪ್ರಕಟ ಜ್ಞಾನವೇ ಸರಿ ವ್ಯಕ್ತವಾಗುವದು ಬಾ - ಧಕವಿಲ್ಲ ಋಜುಗಣಸ್ಥ ಜನರಿಗೆ ಮುಕುತಿಲಿ ಈಶಾದನ್ಯತ್ರ ಜಗದ್ವಿಷಯ ಜ್ಞಾನ ಶಕಲಯಿಲ್ಲದೆ ಅನಾಲೋಚನೆಯಲ್ಲಿ ಲಕುಮಿಗೆ ಸಾಮ್ಯ ಬಂತು ಎನದೀರಿ ಸದಾವಕ್ಕು ಉಕುತಿಯ ಲಾಲಿಸುವದು ಬೊಮ್ಮಗಿಂದಲಿ ಶ್ರೀ - ಲಕುಮಿಯ ಜ್ಞಾನ ಈಶ ಸರ್ವ ಪದಾರ್ಥದಲ್ಲ್ಯ - ಧಿಕವಾಗಿಪ್ಪದು ಈಶಕೋಟಿ ಗಣನೆ ವಿಕಸಿತವಾದ ಶ್ರೀಹರಿಯ ಜ್ಞಾನಕ್ಕೆ ಎ - ಣಿಕೆ ವುಂಟೆ ಆವಾವ ಕಾಲಕ್ಕು ಗುಣಿಸಿದರು ಮುಕುತರು ತಮ್ಮ ತಮ್ಮ ಯೋಗ್ಯತೆ ಉಳ್ಳನಿತು ಸುಖಸಾಂದ್ರರಾಗಿ ಗರುಡ ಶೇಷಾದ್ಯರು ಗುಣ - ನಿಕರದಲ್ಲಿ ನಿತ್ಯ ಸರ್ವವು ವಶಕರವು ರಕ್ಕಸಾರಿಯ ಇಚ್ಛಾವರ್ಕ ಒಂದುಂಟು ಇವರಿಗೆ ತ್ವಕು ಮೊದಲಾದಿಂದ್ರಿಯಗಳು ಸ್ವರೂಪಭೂತವೆನ್ನಿ ರುಕುಮಾಭರಣ ವಸನ ದಿವ್ಯ ತೇಜೋಮಯರು ಅಖಿಲ ಜೀವರು ವೈಕುಂಠ ಆರಂಭಿಸಿ ತಕತಕ್ಕ ಸ್ಥಾನದಲ್ಲಿ ಇಪ್ಪರು ಮೇರುವಿಡಿದು ಮುಕುತಾರ್ಥ ಅಂಶರಹಿತವಾದ ಮುಕ್ತರು ತಾ - ತ್ವಿಕರಾತಾತ್ವಿಕರಂತೆ ಸಮರ್ಥರಲ್ಲ ನ...
NINDA VYANGA STOTRA SULADI   ಶ್ರೀ ಪುರಂದರದಾಸಾರ್ಯ ವಿರಚಿತ   ನಿಂದಾ - ವ್ಯಂಗ್ಯ ಸ್ತೋತ್ರ ಸುಳಾದಿ   ಧೃವತಾಳ  ಗೋಪಿ ದೇವಿಯಂತೆ ಒರಳಿಗೆ ಕಟ್ಟಾದೆ ಬರಿದೆ ದೈನ್ಯವ ಬಡುವೆನಾ ಭೃಗುಮುನಿಯಂತೆ ನಿನ್ನೆದೆ ಮೇಲೊದಿಯಾದೆ ಬರಿದೆ ದೈನ್ಯವಾ ಬಡುವೆನಾ ಭೀಷ್ಮನಂತೆ ನಿನ್ನ ಹಣಿಯ ಒಡಿಯದಲೆ ಬರಿದೆ ದೈನ್ಯವಾ ಬಡುವೆನಾ ಕೊಂಕಣಿಗಾರ ಯಮ್ಮಿಗೆ ಕೊಡತೆ ಮದ್ದಂಬಂತೆ ನಿನಗವರೇ ಮದ್ದೋ ಶ್ರೀಪುರಂದರವಿಠ್ಠಲ ॥೧॥  ಮಟ್ಟತಾಳ  ಕಾಳಿಂಗನಂತೆ ನಿನ್ನ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನನು ಬಾಗಿಲ ಕಾಯಿಸಬೇಕು ಕುಬುಜೆಯಂತೆ ನಿನ್ನ ಪಿಡಿದು ಎಳಿಯಬೇಕು ಇವರ ನಿನಗೆ ಬೇಕೊ ಪುರಂದರವಿಠ್ಠಲ ॥೨॥  ತ್ರಿವಿಡಿತಾಳ  ಅರ್ಜುನನಂತೆ ನಿನ್ನ ಕೈಲಿ ಹಗ್ಗವ ಕೊಟ್ಟು ಬಂಡಿಯ ಕುದುರೆಗಳನು ಹೊಡಿಸಬೇಕು ಧರ್ಮತನಯನಂತೆ ಬಾ ಹೋಗು ಎನಬೇಕು ಶಬರಿ ಕೊಟ್ಟದ್ದೇ ನಿನಗೆ ಕೊಡಲಿ ಬೇಕು ನಿನಗಂಜದಿರಬೇಕು ಪುರಂದರವಿಠ್ಠಲ ॥೩॥  ಅಟ್ಟತಾಳ  ಇಂದ್ರನಂತೆ ಮಳೆಗರೆದು ಗೋಕುಲದಲ್ಲಿ ನಿಂದಿರಾಸಬೇಕು ಏಳು ದಿನ ಕುಂದದೆ ಬೆಟ್ಟವ ಪೊರೆಸಿ ದಣಿಸಬೇಕು ವೃಂದಾರಕರಂತೆ ಅಂಜದಲೇ ಸಂದೇಹ ಮಾಡಬಾರದೆಲೋ ಈ ಮಾತಿಗೆ ಸಿಂಧುಶಯನವಾಸ ಪುರಂದರವಿಠ್ಠಲ ॥೪॥  ಏಕತಾಳ  ಬಲಿಯಂತೆ ಮುಕುಟವ ಕಿತ್ತಿಕೊಂಡೋಡಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ನಿನಗಂಜದಿರಬೇಕು ಪುರಂದರವಿಠ್ಠಲ ॥೫॥   ಜತೆ  ಅಂಜುವರಿಗೆ ಅರಳಿಮರ...
SRI GOPALADASA VIRACHITA UPASANA SULADI ಶ್ರೀ ಗೋಪಾಲದಾಸಾರ್ಯ ವಿರಚಿತ ಉಪಾಸನಾ ಸುಳಾದಿ  (ಚಲ ಅಚಲಗಳಲ್ಲಿ ಸರ್ವಕ್ರಿಯಾದಲ್ಲಿ ಅದ್ವೈತತ್ರಯನಾದ ಶ್ರೀಹರಿಕರ್ತೃ ನಿಯಾಮಕನೆಂದರಿತು, ಸಕಲರೂಪ ಬಿಂಬನಲ್ಲಿ ಐಕ್ಯ ಚಿಂತಿಸಿ ಧ್ಯಾನೋಪಾಸನ ಕ್ರಮ. )   ಧ್ರುವತಾಳ  ಧ್ಯಾನ ಮಾಡು ಮನವೆ ದೈನ್ಯ ವೃತ್ತಿಯಲಿನ್ನು ಜ್ಞಾನವಂತನಾಗಿ ಗೆದ್ದು ವಿಷಯಾ ಹಾನಿ ಲಾಭಗಳಿಗೆ ಹರುಷ ಕ್ಲೇಶವು ಬಡದೆ ಜಾಣತನದಿ ಚಿಂತಿಸು ಜಗದೀಶನ್ನ ನಾನು ಎಂಬೊದು ಬಿಟ್ಟು ನಿತ್ಯದಲ್ಲಿ ಇನ್ನು ಜ್ಞಾನಪೂರ್ಣ ಶ್ರೀಹರಿಯ ಧೇನಿಸಿನ್ನು ಯೋನಿ ಯಂಭತ್ತು ನಾಲ್ಕು ಲಕ್ಷ ಬಂದ ಕಾಲಕ್ಕೂ ನೀನು ಪಕ್ವ ಬಾರದಾ ಗತಿಯು ಇಲ್ಲಾ ಕಾಣೆ ನಿನಗೆ ಮುಖ್ಯ ಸಾಧನ ಸಂಪತ್ತು ಮಾನವ ಯೋನಿಯಲ್ಲೆ ಘಳಿಸಬೇಕು ಕ್ಷೋಣಿಯೊಳಗೆ ಈ ಜನ್ಮ ಬಪ್ಪದೆ ದುರ್ಘಟ ಶ್ರೀನಾಥನ ಕಾರುಣ್ಯವೆಂದು ತಿಳಿಯೋ ಶ್ವಾನ ಸೂಕರ ನಾನಾ ಯೋನಿ ಬಂದ ಕಾಲಕ್ಕೂ ಮಾನಿಸನಾಗೆ ಚಿಂತಿಸಲಿ ಬೇಕು ಜ್ಞಾನ ಅಲ್ಲಿ ದೊರೆಯದು ಕುಚ್ಛಿತ ಯೋನಿಯಲ್ಲಿ ನಾನಾ ಭವಣೆ ಯುಂಟು ನಾ ಏನೆಂಬೆ ನಾನಾಕು ಜೀವರಿನ್ನು ನಾಲ್ಕು ಬಗೆಯ ಕರ್ಮ ತಾವು ಮಾಡುತಿಹರೋ ದೇಹಧಾರಿಗಳಾಗಿ ಕಾಣಿಸುವರು ಎಲ್ಲಾ ಜಗದವೊಳಗೆ ಇನ್ನು ಜ್ಞಾನ ಮಾತ್ರ ನೀ ಪಿಡಿದು ಕುಳಿತುಕೋ ಗೇಣು ಮೊಳವು ಅಣುರೇಣು ಸ್ಥಳದ ಪರಿ ನಾನಾ ದೇಹಧಾರಿಗಳಿಂದ ಆಗುವ ಕರ್ಮ ಕಾಣೋ ನಿನ್ನಲ್ಲಿ ಇದ್ದು ಸ್ವಾಮಿ ಮಾಡಿಪನೆಂದು ಖೂನ ಪಿಡಿದು ಕುಣಿ ಕುಣಿದಾಡೋ  ನಾನು ಅಸ್ವತಂತ್ರ ನನ್ನಂತೆ ...
  DHREYOLAGE NAMMA GURURAGHAVENDRA RINNU ಶ್ರೀ ಗೋಪಾಲದಾಸರು ರಚಿಸಿದ  ಶ್ರೀ *ಗುರುರಾಘವೇಂದ್ರರ ಮಹಾತ್ಮ್ಯ ಸ್ತೋತ್ರ ಸುಳಾದಿ  ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು | ಇರುತಿಪ್ಪ ವಿವರ ಅರಿದಷ್ಟು ವರಣಿಸುವೆ | ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ | ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ | ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ | ಪರಿಶುದ್ಧನಾದನೆಂದು ಅರಿತು ಈ ಸ್ಥಳದಲ್ಲಿ | ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ | ಪರಲೋಕ ಸಾಧನ ಪರಿಪೂರ್ತಿ ಮಾಡಿಕೊಂಡು | ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ | ಧರಿಯ ಮ್ಯಾಲಿದ್ದ ಜನರ ಪೊರಿಯಬೇಕೆಂದೆನುತ | ಹರಿ ನೋಡಿದನು ಇವರ ಪರಮ ದಯಾಳು ತಾನವನ್ನು ತಾನು | ಗುರುವಂತರ್ಯಾಮಿಯಾಗಿ ವರವಾನೀಯಲಿ ಜಗಕೆ | ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು | ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ ನಾರಾಯಣ ತಾನೆ | ವರ ಸನ್ನಿಧಾನನಾಗಿ |-ವರಿಗೆ ಫಲ ತಂದೀವ ಇಹಪರದಲ್ಲಿನ್ನು | ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ | ಶರಣರ ಪೊರೆವ ಚರಿಯಾ ಪರಿಪರಿ ಉಂಟೋ ||1|| ಮಟ್ಟತಾಳ ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ | ಎರಡೆರಡು ನಾಲ್ಕು ಹರಿಯ ಮೂರುತಿಗಳು | ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು | ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ | ತರುವಾಯದಲಿನ್ನು ತರತಮ್ಯನುಸಾರ | ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |...
RAYARA HASTODAKA SULADI ಶ್ರೀ ರಾಯರ ಹಸ್ತೋದಕ ಸುಳಾದಿ (ಶ್ರೀ ಗುರುಜಗನ್ನಾಥದಾಸರ ರಚನೆ)  ರಾಗ ಅಭೋಗಿ   ಧ್ರುವತಾಳ  ಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆ ಪರಮ ಭಕುತಿಯಿಂದ ಅರುಪಿಸೋ ಬಗೆಯನು ಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆ ಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನು ವರ ಯತಿಗಳನ್ನೋದಕ ಗಿರಿ ಸಾಗರ ಸಮವು ಮರಳಿ ನೀಡೋದು ಜಲ ನಿರುತದಲ್ಲಿ ವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲ ವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದು ವರ ವನಸ್ಥನಿಗಿಡೆ ವರ ಶತವೆನಿಸುವೋದು ಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯ ಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯ ಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನು ಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದು ವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮ   ಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು ॥ 1॥  ಮಟ್ಟತಾಳ  ಅನ್ನ ಸಾಮಗ್ರದಲ್ಲಿ ಇಂದು ಕೇಶವ ಎನ್ನಿ ಮುನ್ನೆ ಭಾರತಿ ಪರಮಾನ್ನ ನಾರಾಯಣ ಇನ್ನು ಭಕ್ಷಕೆ ಸೂರ್ಯರನ್ನ ಮಾಧವ, ಘೃತಕೆ ಚೆನ್ನೆ ಲಕ್ಷುಮಿ ಗೋವಿಂದನು ಎನ್ನಿ ಮುನ್ನ ಕ್ಷೀರಕೆ ವಾಣಿ ಅನ್ನಿ ವಿಷ್ಣುದೇವ ಘನ್ನ ಮಂಡಿಗೆ ಬ್ರಹ್ಮ ಇನ್ನು ಮಧುಘಾತಿ ಬೆಣ್ಣೆಯಲ್ಲಿ ವಾಯು ಚೆನ್ನ ತ್ರಿವಿಕ್ರಮ  ಮುನ್ನ ದಧೀಯಲ್ಲಿ ಸೋಮ ವರುಣ ವಾಮ - ನನ್ನ ತಿಳಿ, ಸೂಪ ಚೆನ್ನ ವೀಪ ಶ್ರೀಧರ  ಮುನ್ನೆ ಶಾಖ ಪತ್ರ ಸ್ವನ್ನಗದಿರ ಮಿತ್ರ ಚೆನ್ನ ಹೃಷೀಕೇಶ,...
HENDIRANALUVALI KANNIKE  ಶ್ರೀ ಪುರಂದರದಾಸರ ಕೃತಿ ಹೆಂಡಿರನಾಳುವಳೀ ಕನ್ನಿಕೆ -  ಗಂಡನಿಲ್ಲದ ಹೆಂಗಸೀ ಕನ್ನಿಕೆ॥ಪ॥ ಮೇರುಮಂದರವ ಕಡಗೋಲನೇ ಮಾಡಿ ಉರಗ ವಾಸುಕಿಯನ್ನೆ ನೇಣ ಮಾಡಿ ಕ್ಷೀರಾಂಬುಧಿ ಸುರರಸುರರು ಮಥಿಸಲು ಕೂರ್ಮ ರೂಪವ ಧರಿಸಿದ ಕನ್ನಿಕೆ॥೧॥ ಶಿಶುರೂಪವ ತಾಳಿ ಆಲದೆಲೆಯ ಮೇಲೆ ಅಸಮಯ ಜಲದೊಳ್ ಮಲಗಿಕೊಂಡು ವಶವಾಗದ ಮುನ್ನಾ ಹೂವಿನ್ಹೊಕ್ಕಳಲ್ಲಿ ಬಸುರಿಂದ ಬೊಮ್ಮನ ಪಡದಾ ಕನ್ನಿಕೆ॥೨॥ ಪಟ್ಟಾವಳಿಯನುಟ್ಟು ಬೊಟ್ಟ ಕುಪ್ಪುಸ ತೊಟ್ಟು ಬೊಟ್ಟ ಕೈಯ ಪಿಡಿದುಕೊಂಡು ದಿಟ್ಟ ಸ್ತ್ರೀರೂಪವ ತಾಳಿ ದೈತ್ಯರನೆಲ್ಲ  ಅಟ್ಟಹಾಸದಿ ಮೋಹಿಸಿದ ಕನ್ನಿಕೆ॥೩॥ ಅಂಥ ಇಂಥವನೆಂದು ಕೇಳುತ್ತ ಇರಲಾಗಿ ಸಂತತ ಸುರರಿಗೆ ಅಮೃತವನ್ನು ಮುಕ್ತಿಯೊಳಗೆ ಅಳವಡಿಸದೆ ಬಡಿಸಿದ ಎಂಥಾ ಸೊಬಗಿನ ಮೋಹದ ಕನ್ನಿಕೆ॥೪॥ ಬೇಗೆಗಣ್ಣನಿಗೆ ಬಿಸಿಕೈಯನಿಡಲು ಬರೆ ಭೋಗದಾಸೆಯ ತೋರಿ ಬೂದಿ ಮಾಡ್ದಾ ಭಾಗೀರಥಿಯ ಪಿತ ಪುರಂದರವಿಠಲ ಭೋಗಿ ಬೇಲೂರ ಚನ್ನಿಗ ಕನ್ನಿಕೆ॥೫॥
INDUMUKHIYE NINNA SANDURUSHANA  ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ   (ಗುರುವಿಜಯವಿಟ್ಠಲ ಅಂಕಿತ)   ಶ್ರೀ ರಮಾದೇವಿ ಸ್ತೋತ್ರ ಸುಳಾದಿ  ಇಂದುಮುಖಿಯೆ ನಿನ್ನ ಸಂದರುಶನದಿಂದಾ - ನಂದವಾಯಿತು ಅರವಿಂದನಯನೆ ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ ಸುಂದರವಾದ ರೂಪದಿಂದ ಬಂದು ಮಂದಹಾಸದಿಂದ ಮಾತನಾಡಿದರಿಂದ ಬೆಂದು ಪೋದವೆನ್ನ ತ್ರಿವಿಧ ತಾಪ ಇಂದಿರೇ ಈ ರೂಪದಿಂದ ತೋರಿದಳು ಬಂಧುನೆನಿಪ ಲೋಕ ಗುರು ಸತಿಯೊ ಕಂದು ಕಂಧರನಾದ ದೇವನ್ನ ರಾಣಿಯೊ ಇಂದ್ರಾಣಿ ಮೊದಲಾದ ಜನರೋರ್ವಳೊ ಮಂದಾಕಿನಿಯೊ ಇದರೊಳೊಂದರಿಯೇ ಕರುಣ - ಸಿಂಧುವೆ ನಿನ್ನ ಪದಕೆ ನಮೊ ನಮೊ ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು ಪೊಂದಿಪ್ಪ ಕಾರಣದಿಂದ ನಿನ್ನ ಅಂದವಾದ ರೂಪ ಕ್ರೀಯಗಳನ್ನು ತಿಳಿದು ವಂದಿಸಿ ವರಗಳು ಬೇಡಲಿಲ್ಲ ಇಂದಿರೆ ರಮಣನ ಬಂಧಕ ಶಕುತಿಯು ಮಂದನಾದವ ನಾನು ಮೀರುವೆನೇ ಕಂದನ ಅಪರಾಧವೆಣಿಸದಲೇ ನೀನು ಅಂದ ವಚನವನ್ನೆ ಸತ್ಯ ಮಾಡಿ ಬಂಧುನೆನಿಸಿಕೊಂಬ ಗುರುವಿಜಯವಿಟ್ಠಲನ್ನ  ಎಂದೆಂದಗಲದಿಪ್ಪ ವರವ ನೀಡು ॥ 1 ॥   ಮಟ್ಟತಾಳ  ಸಾನುರಾಗದಿ ಎನ್ನ ಸಾಮೀಪ್ಯವ ನೈದಿ ಪಾಣಿದ್ವಯದಲ್ಲಿ ವೇಣು ಸ್ಪರಿಶ ಮಾಡಿ ಏನು ಬೇಡುವೆ ಬೇಡು ನೀಡುವೆನೆಂತೆಂದು ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ ಮಾನುಷನ್ನ ಜನಿತ ಅಜ್ಞಾನದಿಂದ ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ ಪೂರ್ಣ ಮಾಡು ಯೆಂದು ವರಗ...
TATWABHIMANI DEVATEGALA SULADI ತತ್ವಾಭಿಮಾನಿ ದೇವತೆಗಳ ಸುಳಾದಿ  ಧ್ರುವತಾಳ: ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ನಿಮಗೆ ಹಸ್ತವ ಮುಗಿದು ಕೊಂಡಾಡುವೆ ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು ಅಮರ ನಿಮ್ನಗ ಮಜ್ಜನ ಗೋಸುಗ ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ ರಮೆಯರಸನ್ನ ನೋಳ್ಪಸಾಧನ ತೋರಿ ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ ಶ್ರಮ ಸಾದ್ಯವಾಗದಂತೆ ಪೈಣವಿತ್ತು ತಮೊರಜೊಗುಣದವರ ಬಾಧಿಯ ತಪ್ಪಿಸಿ ಉತ್ತಮ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ ಕುಮತ ಪೊಂದಿದ ನಿತ್ಯ ಕುಮತಿಜನರ ಸಂಗ ನಿಮಿಷವಾದರೂ ಕೊಡದೆ ಪಾಲಿಸಬೇಕು ಯಮನೇಮ ಮಿಗಿಲಾದ ಸತ್ಕರ್ಮಾಚಾರದಿಂದ ಸಮಚಿತ್ತ ಭೇದದಿಂದ ಇರಲಿ ಎನಗೆ ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ ಭ್ರಮಣವಲ್ಲದೆ ಲೇಸುಲೇಸ ಕಾಣೆ ರಮೆಯರಸ ನಮ್ಮ ವಿಜಯವಿಠ್ಠಲನಂಘ್ರಿ ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡಿ ||೧||  ಮಟ್ಟತಾಳ:  ತನುವೆನ್ನದೆಂಬೆನೆ ತನುವೆನ್ನದಲ್ಲ ಮನವೆನ್ನದೆಂಬೆನೆ ಮನವೆನ್ನದಲ್ಲ ಧನವೆನ್ನದೆಂಬೆನೆ ಧನವೆನ್ನದಲ್ಲ ಜನವೆನ್ನದೆಂಬೆನೆ ಜನವೆನ್ನದಲ್ಲ ತನು ಮನ ಧನ ಜನವು ಅನುದಿನದಲ್ಲಿ ನೋಡೆ ವನಜಭವಾದಿಗಳೇ ಎಣಿಸಿ ಪೇಳುವುದೇನು ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾತಿನ ಉಪಚಾರವ್ಯಾತಕೆ ಘನ್ನಮೂರುತಿ ನಮ್ಮ ವಿಜಯವಿಠ್ಠಲನ್ನ ಪ್ರೇರಣೆಯಿಂದಲಿ ನಿಮ್ಮ ಸಕಲ ಚೇಷ್ಟಪ್ರದವೋ ||೨||  ತ್ರಿವಿ...
  DURITAVANA KHUTARI DURJANA KULAVYRI ಶ್ರೀ ಜಗನ್ನಾಥದಾಸಾರ್ಯ ವಿರಚಿತ  ಶ್ರೀ ಲಕ್ಷ್ಮೀನೃಸಿಂಹ ಸುಳಾದಿ   ರಾಗ : ದೇಶ್   ಧ್ರುವತಾಳ  ದುರಿತವನ ಕುಠಾರಿ ದುರ್ಜನ ಕುಲವೈರಿ ಶರಣಾಗತ ವಜ್ರ ಪಂಜರ ಕುಂಜರ- ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ ಪರಮ ಕರುಣಾಸಿಂಧು ಭಕುತ ಬಂಧು ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ ಹರಿಯೆ ಕ್ಷರಾಕ್ಷರ ಪುರುಷೋತ್ತಮ ಉರುಗಾಯ ವೈಕುಂಠವರ ಮಂದಿರ ಚಂದಿರ ತರಣಿಕೋಟಿ ಸಂಕಾಶ ವಿಮಲಕೇಶ ಧುರದೊಳಗರ್ಜುನನ ತುರಗ ನಡೆಸಿದ ಸಂ- ಗರ ಭಯಂಕರ ಲೋಕೈಕ ವೀರ ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ  ಮೊರೆಹೊಕ್ಕ ದಾಸಗೆ ಬಂದ ಭಯವ ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ  ಸರುವರಂತರ್ಯಾಮಿ ಲೋಕೈಕಸ್ವಾಮಿ ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ ಅರಿದೆನೊ ನೀನೆಮ್ಮ ಪೊರೆವುದೀಗ ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ- ಪರಿಪಾಲಕನೆಂಬ ಬಿರುದು ನಿನ್ನದಲ್ಲವೆ॥೧॥  ಮಟ್ಟತಾಳ  ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ ಸದನನಾಗಿ ಇರ್ಪೆ ನಿನ್ನ ದಾಸರಿಗಾಗಿ ಮಧುಸೂದನ ಜಗನ್ನಾಥವಿಠ್ಠಲರೇಯ  ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ॥೨॥  ರೂಪಕತಾಳ  ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ ಪ್ರೇರಣ ಸಾಕ್ಷಿ ಕಾರಣಕಾರ್ಯ ದೋಷ ವಿ- ದೂರ ಸದ್ಗುಣ ಸಾಂದ್ರ ಸಜ್ಜನಾಂಬುಧಿ ಚಂದ್ರ ಭಾರಕರ್ತ ಜಗಕೆ ನೀನಿರೆ ಎಮ್ಮ ಮ- ನೋರಥ ಸಲಿಸುವುದೇನಸಾಧ್...
DHANVANTARI SULADI  ಧನ್ವಂತರೀ ಸ್ತೋತ್ರ ಸುಳಾದಿ ಧ್ರುವತಾಳ: ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವುದು | ಕಾಯಾ ನಿರ್ಮಲಿನಾ ಕಾರಣವಾಹುದೋ | ಮಾಯಾ ಹಿಂದಾಗುವುದು ನಾನಾರೋಗದ ಬೀಜ | ಬೇಯಿಸಿ ಕಳೆವುದು ವೇಗದಿಂದ | ನಾಯಿಮೊದಲಾದ ಕುತ್ಸಿತದೇಹನಿ ಕಾಯವ ತೆತ್ತು ದುಷ್ಕರ್ಮದಿಂದ | ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ | ಹೇಯ ಸಾಗರದೊಳು ಬಿದ್ದು ಬಳಲೀ | ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ | ಬಾಯಿಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕಕರ್ತ | ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ | ನೋಯಗೊಡದೆ ನಮ್ಮನ್ನು ಪಾಪಿಪಾ ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ | ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ | ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಠ್ಠಲ ರೇಯಾ ಪ್ರಿಯನು ಕಾಣೊ ನಮಗೆ ಅನಾದಿರೋಗ ಕಳೆವಾ ||೧||  ಮಟ್ಟತಾಳ:  ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ |  ಜ್ಞಾನದಿಂದ ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ | ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ | ಚನ್ನ ಮೂರುತಿ ಸುಪ್ರಸನ್ನ ವಿಜಯ ವಿಠ್ಠಲ ನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ||೨||  ತ್ರಿವಿಡಿತಾಳ:  ಶಶಿಕುಲೋದ್ಭವ ಧೀರ್ಘತಮನಂದನ ದೇವಾ |  ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ...
PONDI BHAJISO SATATA ONDE MANADI ಶ್ರೀ ಶ್ಯಾಮಸುಂದರವಿಠಲ ದಾಸಾರ್ಯ ವಿರಚಿತ  ಶ್ರೀ ಜಗನ್ನಾಥದಾಸರ ಸ್ತೋತ್ರ ಸುಳಾದಿ   ರಾಗ ಹಂಸಧ್ವನಿ ಧ್ರುವತಾಳ  ಪೊಂದಿ ಭಜಿಸು ಸತತ ವೊಂದೇ ಮನದಿ ಸ್ಥಂಭ - ಮಂದಿರ ಮಾನವಿ ದಾಸಾರ್ಯರಾ ಮಂದಮಾನವ ಕೇಳೋ ವಂದಿಸಿ ಸೇವಿಪರ ಬಂಧನ ಪರಿಹರಿಸಿ ಮನದಭೀಷ್ಟಾ ತಂದು ಕೊಡುವದಕ್ಕೆ ಮಂದಾರ ಕುಜದಂತೆ ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೋ ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ ಬೆಂದು ಪೋಪವು ದೋಷವೃಂದವೆಲ್ಲಾ ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ ತಂದೆ ಸಲಹುವಂತೆ ರಕ್ಷಿಸುವರೋ ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು -  ರಂದರ ಗುರು ಸ್ವಾದಿರಾಜರ ಪ್ರೀತ ಸಿಂಧೂರವರದ ಶ್ಯಾಮಸುಂದರ ನಾಜ್ಞದಿ ಇಂದುವಿನಂತೆ ಮೂಡಿ ಪುನಃ ಜಗದಿ ॥ 1 ॥   ಮಟ್ಟತಾಳ  ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ  ಮರುತಾಗಮ ಘಳಿಸಿ  ತುರುರಕ್ಷಕ ದಾಸ - ವರ್ಯರ ಕರುಣದಲಿ ಶರಧಿಜ ಭಾಗದಲಿ ಧರಣಿಪ ವಿಠಲೆಂಬೋ ಸುರುಚರದಂಕಿತವ  ದೊರಕಿಸಿ ಪ್ರಾಕೃತದಿ  ಕರುಣಾಕರ ಶ್ಯಾಮಸುಂದರನ ವರ್ಣಿಸಿದಾ  ಪರಮ ಭಾಗವತರ ನೆರೆನಂಬು ನಿರುತಾ  ॥ 2 ॥   ತ್ರಿವಿಡಿತಾಳ  ಇವರ ಸಂದರುಶನ ಭವಬಂಧ ಮೋಚನ ಇವರ ಚರಣ ಧ್ಯಾನ ಗಂಗಾ ಸ್ನಾನ ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ ಇವರ ಕವನ ಸ್ತವನ ಶ್ರವಣದಿಂದ ಪವನ ಸಚ್ಛಾಸ್ತ್ರದ  ಪ್ರವಚನ ಫಲವಕ್ಕು ಇವರಿದ್ದ ಸ್ಥಳ ...
HARI DINADALI ONDA NARARIGE  💥 ಹರಿ ದಿನದಲಿ ಉಂಡ ನರರಿಗೆ💥 ಹರಿ ದಿನದಲಿ ಉಂಡ ನರರಿಗೆ ಘೋರ  ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ || ಗೋವ ಕೊಂದ ಪಾಪ ಸಾವಿರ ವಿಪ್ರರ  ಜೀವಹತ್ಯೆ ಮಾಡಿದ ಪಾಪವು  ಭಾವಜನಯ್ಯನ ದಿನದಲುಂಡವರಿಗೆ  ಕೀವಿನೊಳಗೆ ಹಾಕಿ ಕುದಿಸುವ ಯಮನು ||೧|| ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ  ಅಂದಿನ ಅನ್ನವು ನಾಯಿಯ ಮಾಂಸವು  ಮಂದರ ಧರನ ದಿನದಲುಂಡವರನು  ಹಂದಿಯ ಸುಡುವಂತೆ ಸುಡಿಸುವ ಯಮನು ||೨|| ಅನ್ನ ಉದಕ ತಾಂಬೂಲ ದರ್ಪಣಗಳು  ಚಿನ್ನ ವಸ್ತ್ರಗಳೆಲ್ಲ ವರ್ಜಿತವು  ತನ್ನ ಸತಿಯ ಸಂಗ ಮಾಡುವ ಮನುಜನ  ಬೆನ್ನಲಿ ಕರುಳ ತೆಗೆಸುವ ಯಮನು ||೩|| ಜಾವದ ಜಾಗರ ಕ್ರತು ನಾಲ್ಕು ಸಾವಿರ  ಜಾವನಾಲ್ಕರ ಫಲಕೆ ಮಿತಿಯಿಲ್ಲವು  ದೇವದೇವನ ದಿನದಿ ನಿದ್ರೆಯಗೈದರೆ ಹುರಿ- ಗಾವಲಿನೊಳು ಹಾಕಿ ಹುರಿಸುವ ಯಮನು ||೪|| ಇಂತು ಏಕಾದಶೀ ಉಪವಾಸ ಜಾಗರ  ಸಂತತ ಕ್ಷೀರಾಬ್ಧಿಶಯನನ ಪೂಜೆ  ಸಂತೋಷದಿಂದಲಿ ಮಾಡಿದ ಜನರಿಗ ನಂತ ಫಲವನೀವ ಪುರಂದರವಿಠಲ ||೫|| 
NINNA OLUMEYINDA NIKHILA JANARU ಶ್ರೀ   ವಿಜಯದಾಸರ ಕೃತಿ – ನಿನ್ನ ಒಲುಮೆಯಿಂದ  ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ ಮಹರಾಯ । ಎನ್ನ ಪುಣ್ಯಗಳಿಂದ ಈ ಪರಿ ಉಂಟೆನೊ   ನಿನ್ನದೇ ಸಕಲ ಸಂಪತ್ತು ।। ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ   ಪೂರ್ಣವಿಚಿತ್ರ ಸುವಸನ । ವರ್ಣವರ್ಣದಿಂದ ಬಾಹೋದೇನೊ ಸಂ ಪೂರ್ಣ ಗುಣಾರ್ಣವ ದೇವಾ ।। ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ ತಬ್ಬಿಬ್ಬುಗೊಂಡೆನೊ ಹಿಂದೆ। ನಿಬ್ಬಾರದಿಂದಲಿ ಸರ್ವರ ಕೂಡುಂಬೊ     ಹಬ್ಬದೂಟವ ಉಣ್ಣಿಸುವೆಯೋ । ಸಂಜಿತನಕ ಇದ್ದು ಸಣ್ಣ ಸೌಟಿನ ತುಂಬ   ಗಂಜಿ ಕಾಣದೆ ಬಳಲಿದೆನೋ । ವ್ಯಂಜನ ಮೊದಲಾದ ನಾನ ರಸಂಗಳ     ಭುಂಜಿಸುವುದು ಮತ್ತೇನೋ ।। ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು ಮ್ಮನೆ ಚಾಲವರಿದು ಬಳಲಿದೆನೋ । ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ     ತಾನೆಪ್ರಾಪ್ತಿ ನೊಡೋ ಜೀಯಾ! ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ         ಮೆದ್ದೆನೆಂದರೆ ಈಯದಾದೆ।         ಈ ಧರೆಯೊಳಗೆ ಸತ್ಪಾತ್ರರ ಉಣಿಸುವ  ಪದ್ಧತಿ ನೋಡೋ ಪುಣ್ಯಾತ್ಮ ।। ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ   ಚಾಚಿದೆ ನೋಸಲ ಹಸ್ತಗಳ । ಯೋಚಿಸಿ ನೋಡಲು ಸೋಜಿಗವಾಗಿದೆ   ವಾಚಕ್ಕೆ ನಿಲಿಕದೋ ಹರಿ...
EKADASHI VRATA MAHIMA PADA ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ || ಪ || ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು || 1 || ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ || 2 || ಸಂಧ್ಯಾವಂದನೆ ದಿವ್ಯ ಮಂಗಳಾರುತಿ ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ || 3 || ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ |  ಯನ ಮಾಡುತ ಹರಿಯ ಮಹಿಮಯನ್ನು ಆನನ ಕೂಗುತ ಹಾಡುತ ಪಾಡುತ |ಧ್ಯಾನವ ಗೈವುತಲಿ | ಮಾನಸ ಪೂಜೆಯೊಳಗೆ ರಚಿಸಿ ಮೇಲೆ ಕಾಣಬಾರದಂತೆ ಪ್ರಜೆದೊಳಗೆ ತೋರಿ | ನಾನೆಂಬೊ ಅ...
GOPALA DASARAYA NINNAYA PADA ಗೋಪಾಲ ದಾಸರಾಯ | ನಿನ್ನಯ ಪಾದ | ನಾ ಪೊಂದಿದೇನು ನಿಶ್ಚಯಾ ||ಪ|| ಈಪೀಡಿಸುವ ತ್ರಯತಾಪಗಳೋಡಿಸಿ |ಕೈಪಿಡಿದೆನ್ನನು ನೀ ಪಾಲಿಪುದು ಜೀಯಾ ||ಅ.ಪ || ಘೋರವ್ಯಾಧಿಗಳ ನೋಡಿ | ವಿಜಯರಾಯ ಭೂರಿಕರುಣವ ಮಾಡಿ | ತೋರಿದರಿವರೇ ಉದ್ಧಾರಕರೆಂದದಿ | ನಾರಭ್ಯ ತವ ಪಾದ ಸಾರಿದೆ ಸಲಹೆಂದು || ಸೂರಿಜನ ಸಂಪ್ರೀಯ ಸುಗುಣೋ | ದ್ಧಾರ ದುರುಳನ ದೋಷನಿಚಯವ | ದೂರಗೈಸೊ ದ್ಯಾಂಬುದನಿಧೇ ನಿ | ವಾರಿಸದೆ ಕರಪೀಡಿದು ಬೇಗದಿ || 1 || ಅಪಮೃತ್ಯುವಿನ ತರಿದೆ | ಯೆನ್ನೊಳಗಿದ್ದ | ಅಪರಾಧಗಳ ಮರದೆ | ಚಪಲ ಚಿತ್ತನಿಗೊಲಿದ್ವಿಪುಲ ಮತಿಯನಿತ್ತು | ನಿಪುಣಾನೆಂದೆನಿಸಿದೆ ತಪಸಿಗಳಿಂದಲಿ || ಕೃಪಣವತ್ಸಲಾ ನಿನ್ನ ಕರುಣೆಗೆ | ಉಪಮೆಗಾಣೆನು ಸಂತತವು ಕಾ | ಶ್ಯಪಿಯೊಳಗೆ ಬುಧರಿಂದ ಜಗದಾ | ಧಿಪನ ಕಿಂಕರನೆನಿಸಿ ಮೆರದೆ ||2|| ಎನ್ನ ಪಾಲಿಸಿದಂದದಿ | ಸಕಲ ಪ್ರ | ಪನ್ನರ ಸಲಾಹೋ ಮೋದಿ | ಅನ್ಯರಿಗೀಪರಿ ಬಿನ್ನಪಗೈಯೇ ಜ | ಗನ್ನಾಥವಿಠಲ ನ ಸನ್ನುತಿಸುವ ಧೀರ || ನಿನ್ನ ನಂಬಿದ ಜನರಿಗೀಪರಿ | ಬನ್ನವೇ ಭಕ್ತಾನುಕಂಪಿ ಶ | ರಣ್ಯ ಬಂದೊದಗೀಸಮಯದಿ ಆ | ಹರ್ನಿಶಿ ಧ್ಯಾನಿಸುವೆ ನಿನ್ನನೂ ||3||
  JAYAMANGALAM NITYA SHUBHA MANGALAM ತೊಳಸದಕ್ಕಿಯ ತಿಂಬ |ಕಿಲಬು ತಳಿಗೆಯಲುಂಬ| ಕೊಳಗದಲಿ ಹಣಗಳನು ಅಳೆಸಿಕೊಂಬ| ಇಲ್ಲಕಾಸು ಎಂದು ಸುಳ್ಳು ಮಾತಾಡಿದರೆ  ಎಲ್ಲವನು ಕಸಗೊಂಬ ಕಳ್ಳದೊರೆಗೆ  ||೧|| ತನ್ನ ದರುಶನ ಕೆಂದು ಮುನ್ನೂರು ಗಾವುದ ಬರಲು | ತನ್ನ ಗುಡಿಯಪೊಕ್ಕ ಜನರನೆಲ್ಲಾ | ಹೊನ್ನುಹಣ ಕಸಗೊಂಡು |ತನ್ನ ದರುಶನ ಕೊಡದೇ| ಬೆನ್ನು ಹುರಿ ಹೊಯ್ಸುವ ಅನ್ಯಾಯ ಕಾರಿಗೆ  ||೨||  ಗಿಡ್ಡ ಹಾರುವನಾಗಿ ಬಡ್ಡಿ ದಾನವ ಬೇಡಿ | ದುಡ್ಡು ಕಾಸುಗಳಿಗೇ ಕೈಯನೀಡಿ| ಅಡ್ಡ ಬಿದ್ದ ಜನರ ವಿಡ್ಡೂರಗಳ ಕಳೆದು | ದೊಡ್ಡವರ ಮಾಳ್ಪ ಶ್ರೀ ವಿಜಯವಿಠ್ಠಲಗೇ    ||೩||
SRI PANDURANGA MAHIMA SULADI ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಪಾಂಡುರಂಗ ಮಹಿಮಾ ಸುಳಾದಿ   ರಾಗ ಅಭೋಗಿ   ಧ್ರುವತಾಳ  ಸುಂದರಮಯವಾದ ದ್ವಂದ್ವ ಚರಣವನ್ನು  ಇಂದು ಕಂಡೆನು ಬಂದು  ಅಂದು ಕಾಳಿಂದಿಯಾ ಧುಮುಕಿ ನಾ -  ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು  ದುಂದುಭಿ ರಭಸಾ ಮೊರಿಯೆ ಗಗನ -  ದಿಂದಲೆ ಪೂಮಳೆ ಬಿಡದೆ ಸುರಿಯೆ । ವೃಂದಾರಕವೃಂದ ಚಂದಾಗಿ ಸರಸಿಜ  ನಂದನ ಸಹಿತ ವಂದನೆ ಗೈವುತಿರೆ  ನಂದನಂದನ ಗೋಪಿಯ ಕಂದ  ಅಂದಂದಾಡಿದ ಗೋವಿಂದ ವಿಜಯವಿಟ್ಠಲಾ  ನಿಂದು ನಲುವಿಂದಾ ಮೆರೆವನು ಇಲ್ಲಿ  ಇಂದಿರೆಯರಸನ ನಂದ ಮೂರುತಿಯಾ ॥ 1 ॥   ಮಟ್ಟತಾಳ  ಇದೆ ವೈಕುಂಠಾ ಇದೆ ಶ್ವೇತದ್ವೀಪಾ ಇದೆ ಅನಂತಾಸನ ಇದೆ ಗೋಕುಲವು ಇದೆ ವೃಂದಾವನ ಇದೆ ದ್ವಾರಾವತಿ  ಇದೆ ನಮ್ಮಾ ಯದುಪತಿ ಇಪ್ಪಾನಗರಾ । ಇದೆ ನಮ್ಮ ತಿರುಮಲಾ ವಿಜಯವಿಟ್ಠಲ ನಿಪ್ಪಾ ಸಂಭ್ರಮವೋ ॥  2 ॥   ತ್ರಿವಿಡಿತಾಳ  ಧನ್ಯ ನಾನಾದೆನೋ ದಾನ್ನವಾರಿಯಾ ಕಂಡು  ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ  ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ  ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ  ಅನ್ನ್ಯಾ ದೇವರಿಗೆ ಶಿರವಾಗಿ ಶಿರವಾಗಿ ಶ -  ರಣು ಶರಣೆನ್ನಿರೋ ಆವಾವ ಕಾಲದಲ್ಲಿ  ರನ್ನ ಕೈ ಸೇರಲು ಗಾಜುಮಣಿ ಬಯಸುವೆನೆ  ತ...
  SRI TULASI MAHIMA STOTRA PADA ಶ್ರೀ ವಿಜಯದಾಸಾರ್ಯ ವಿರಚಿತ   ಶ್ರೀ ತುಳಸೀ ಮಹಿಮಾ ಸ್ತೋತ್ರ   ರಾಗ ಭೌಳಿ  ಶ್ರೀ ತುಳಸಿಯ ಸೇವಿಸಿ ॥ ಪ ॥ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ॥ ಅ.ಪ ॥ ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ  ಪದುಮನಾಭನು ತಾನು ಉದುಭವಿಸಿ ಬರಲಂದು  ಉದುರಿದುವು ಕಣ್ಣಿಂದ ಉದಕ ಉತ್ಸಹದಿಂದ ಲದೆ ತುಳಸಿ ನಾಮನಾಗೆ ॥ ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು  ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ - ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು  ವೃಂದಾವನ ರಚಿಸಿದರೈಯ ॥ 1 ॥ ಮೂಲದಲಿ ಸರ್ವ ತೀರ್ಥಗಳುಂಟು ತನ್ಮಧ್ಯೆ  ಕಾಲ ಮೀರದೆ ಸರ್ವ ನದನದಿಗಳಮರಗಣ  ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ್ಪುದು ॥ ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು  ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ -  ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ ಕಾಲನಾಳಿಗೆ ಶೂಲನೊ ॥ 2 ॥ ಉದಯದೊಳಗೆದ್ದು ನೀರೆರೆದು ಮಜ್ಜನಗೈದು  ತುದಿ ಬೆರಳಿನಿಂದ ಮೃತ್ತಿಕೆಯ ಫಣೆಯೊಳಗಿಟ್ಟು  ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ ತದನಂತರದಲಿ ಭಜನೆ ॥ ವದನದೊಳು ಗೈಯೆ ಧರೆಯೊಳಗಿದ್ದ ಸರ್ವನದ -  ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ ...
SRI GOPALA DASARA CHARITRE PADA ಶ್ರೀ  ಗೋಪಾಲ  ದಾಸರ ಚರಿತ್ರೆ ಪದ ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ । ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥  ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ । ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥  ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ । ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥  ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ । ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥  ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು । ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥  ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ । ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥  ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ । ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥  ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ । ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥  ಆಡುತಿರಲದು ಕಂಡು ಮಕ್ಕಳು ಓಡಿ ಪೇಳ್ದರು ಜನನಿಗೆ । ನೋಡಬಂದರು ಜನನಿ ಜನರು ಕೊಂಡಾಡಿದರು ಈ ಮಹಿಮಿಗೆ ॥ 8 ॥  ವೃಕ್ಷವೇರಲು ಸರ್ಪ ಚಿಂತಿಸಿ ರಕ್ಷಕತ್ವವು ಇವರನೆ । ಲಕ್ಷ್ಮಿರಮಣನೆ ರಕ್ಷಿಸುವನೆಂದೀಕ್ಷಿಸಿ ಉತ್ತನೂರಿಗೆ ॥...